Site icon Vistara News

Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!

Actor Kishore

ಬೆಂಗಳೂರು : ʻಕಾಂತಾರʼ ಹಾಗೂ ʻಕೆಜಿಎಫ್‌ʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡು, ಹಿಟ್‌ ಕಂಡ ಸಿನಿಮಾಗಳಿವು. ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ (Actor Kishore ) ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʻಕೆಜಿಎಫ್‌ ʼಸಿನಿಮಾವನ್ನು ನೋಡಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನವವೊಂದರಲ್ಲಿ ಕಿಶೋರ್‌ ಮಾತನಾಡಿ ʻʻಯಶ್‌ ಅಭಿನಯದ ಕೆಜಿಎಫ್‌ ಸಿನಿಮಾವನ್ನು ನೋಡಿಲ್ಲ . ನನಗೆ ಗಂಭೀರವಾದ ವಿಷಯಗಳನ್ನು ಆಧರಿಸಿದ ಚಿತ್ರಗಳನ್ನು ಹೊಂದಿರುವ ಸಿನಿಮಾಗಳಂದರೆ ಇಷ್ಟ. ನನಗೆ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಾನು ಕೆಜಿಎಫ್ 2 ಸಿನಿಮಾ ವೀಕ್ಷಿಸಿಲ್ಲ. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ. ಇದು ವೈಯಕ್ತಿಕ ಆಯ್ಕೆಯಾಗಿದೆ. ನಾನು ಯಶಸ್ವಿಯಾಗದ ಸಣ್ಣ ಚಲನಚಿತ್ರವನ್ನು ನೋಡುತ್ತೇನೆ ʼʼಎಂದು ಹೇಳಿದ್ದಾರೆ.

ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ ಬಹುಭಾಷಾ ನಟರೂ ಹೌದು. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ʻರೆಡ್ ಕಾಲರ್ʼ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ನಟ ಪ್ರವೇಶಿಸಲಿದ್ದಾರೆ. “ನಾನು ಇದನ್ನು ಬಾಲಿವುಡ್‌ನ ಚೊಚ್ಚಲ ಚಿತ್ರವೆಂದು ನೋಡುವುದಿಲ್ಲ. ಇದು ನಾವು ಹಿಂದಿಯಲ್ಲಿ ನಿರ್ಮಿಸುತ್ತಿರುವ ಚಿತ್ರʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌

ಕಿಶೋರ್‌ ಟ್ವೀಟರ್‌ ಸಸ್ಪೆಂಡ್!
ನಟ ತನ್ನ ಟ್ವಿಟರ್ ಖಾತೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಿಶೋರ್‌ ಅವರ ಪೋಸ್ಟ್‌ಗಳಿಂದಲೇ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂಬ ಉಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಕಿಶೋರ್ ಸೋಷಿಯಲ್‌ ಮೀಡಿಯಾ ಮೂಲಕ ಸ್ಷಷ್ಟನೆ ನೀಡಿದ್ದಾರೆ.

ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು 2022ರಂದು ಹ್ಯಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಕಿಶೋರ್ ಅವರು ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅಭಿನಯಸಿದ್ದಾರೆ.

ಇದನ್ನೂ ಓದಿ | ʼವಿಶ್ವ ಗುರುವಾಗುವʼ ಎನ್ನುವುದು ʼಮನೋವಿಕೃತಿʼ: ʼವಿಶ್ವ ಮಾನವರಾಗುವʼ ಎಂದ ಚಿತ್ರನಟ ಕಿಶೋರ್‌

Exit mobile version