Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್! - Vistara News

ಸಿನಿಮಾ

Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!

ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ (Actor Kishore ) ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʻಕೆಜಿಎಫ್‌ ʼಸಿನಿಮಾವನ್ನು ನೋಡಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

VISTARANEWS.COM


on

Actor Kishore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ʻಕಾಂತಾರʼ ಹಾಗೂ ʻಕೆಜಿಎಫ್‌ʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡು, ಹಿಟ್‌ ಕಂಡ ಸಿನಿಮಾಗಳಿವು. ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ (Actor Kishore ) ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʻಕೆಜಿಎಫ್‌ ʼಸಿನಿಮಾವನ್ನು ನೋಡಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನವವೊಂದರಲ್ಲಿ ಕಿಶೋರ್‌ ಮಾತನಾಡಿ ʻʻಯಶ್‌ ಅಭಿನಯದ ಕೆಜಿಎಫ್‌ ಸಿನಿಮಾವನ್ನು ನೋಡಿಲ್ಲ . ನನಗೆ ಗಂಭೀರವಾದ ವಿಷಯಗಳನ್ನು ಆಧರಿಸಿದ ಚಿತ್ರಗಳನ್ನು ಹೊಂದಿರುವ ಸಿನಿಮಾಗಳಂದರೆ ಇಷ್ಟ. ನನಗೆ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಾನು ಕೆಜಿಎಫ್ 2 ಸಿನಿಮಾ ವೀಕ್ಷಿಸಿಲ್ಲ. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ. ಇದು ವೈಯಕ್ತಿಕ ಆಯ್ಕೆಯಾಗಿದೆ. ನಾನು ಯಶಸ್ವಿಯಾಗದ ಸಣ್ಣ ಚಲನಚಿತ್ರವನ್ನು ನೋಡುತ್ತೇನೆ ʼʼಎಂದು ಹೇಳಿದ್ದಾರೆ.

ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ ಬಹುಭಾಷಾ ನಟರೂ ಹೌದು. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ʻರೆಡ್ ಕಾಲರ್ʼ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ನಟ ಪ್ರವೇಶಿಸಲಿದ್ದಾರೆ. “ನಾನು ಇದನ್ನು ಬಾಲಿವುಡ್‌ನ ಚೊಚ್ಚಲ ಚಿತ್ರವೆಂದು ನೋಡುವುದಿಲ್ಲ. ಇದು ನಾವು ಹಿಂದಿಯಲ್ಲಿ ನಿರ್ಮಿಸುತ್ತಿರುವ ಚಿತ್ರʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌

Actor Kishore

ಕಿಶೋರ್‌ ಟ್ವೀಟರ್‌ ಸಸ್ಪೆಂಡ್!
ನಟ ತನ್ನ ಟ್ವಿಟರ್ ಖಾತೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಿಶೋರ್‌ ಅವರ ಪೋಸ್ಟ್‌ಗಳಿಂದಲೇ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂಬ ಉಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಕಿಶೋರ್ ಸೋಷಿಯಲ್‌ ಮೀಡಿಯಾ ಮೂಲಕ ಸ್ಷಷ್ಟನೆ ನೀಡಿದ್ದಾರೆ.

ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು 2022ರಂದು ಹ್ಯಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಕಿಶೋರ್ ಅವರು ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅಭಿನಯಸಿದ್ದಾರೆ.

ಇದನ್ನೂ ಓದಿ | ʼವಿಶ್ವ ಗುರುವಾಗುವʼ ಎನ್ನುವುದು ʼಮನೋವಿಕೃತಿʼ: ʼವಿಶ್ವ ಮಾನವರಾಗುವʼ ಎಂದ ಚಿತ್ರನಟ ಕಿಶೋರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

Madhu Chopra: ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

VISTARANEWS.COM


on

Madhu Chopra on Priyanka Chopra-Nick Jonas' age gap
Koo

ಬೆಂಗಳೂರು: ಪ್ರಿಯಾಂಕಾ (Priyanka Chopra) ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1ರಂದು ಮದುವೆಯಾದರು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ (Madhu Chopra) ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ತಮ್ಮ ಮಗಳು ಮತ್ತು ನಿಕ್ ಜೋನಾಸ್ ಅವರ ಸಂಬಂಧವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಗಳು ಮತ್ತು ಅಳಿಯನಿಗೆ ಇರುವ 10 ವರ್ಷ ವಯಸ್ಸಿನ ಅಂತರ ಬಗ್ಗೆ ಮಾತನಾಡಿದ್ದಾರೆ.

ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

ಇದನ್ನೂ ಓದಿ: Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೊಗಳು ವೈರಲ್​ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ಬಳಿಕ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್‌ ಮಾಡಿದರು.

ಕೆಲವು ದಿನಗಳ ಹಿಂದೆ ಪ್ರಿಯಾಂಕ ಚೋಪ್ರಾ (Priyanka Chopra) ತಮ್ಮ ಸಹೋದರ ಸಿದ್ಧಾರ್ಥ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.ಸಿದ್ಧಾರ್ಥ ಹಾಗೂ ನೀಲಂ ಎಂಗೇಜ್ ಮೆಂಟ್ ನಲ್ಲಿ ಕುಟುಂಬದ ಸದಸ್ಯರು ಹಾಗೂ ಒಂದಷ್ಟು ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ಸಿದ್ದಾರ್ಥ ಹಾಗೂ ನೀಲಂ ಜೋಡಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ದಂಪತಿಗಳ ಜೊತೆ ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರ್ ಚೋಪ್ರಾ, ಆತ್ಮೀಯ ಸ್ನೇಹಿತೆ ತಮನ್ನಾ ದತ್ ಪಾಲ್ಗೊಂಡಿದ್ದರು. ಇನ್ನು ಸಾಂಪ್ರಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಿಯಾಂಕ ಕುಟುಂಬದ ಫೋಟೊ ಸಖತ್ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

Continue Reading

ಸಿನಿಮಾ

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Rashmika Mandanna: ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

VISTARANEWS.COM


on

Rashmika Mandanna shares why she doesn’t speak English
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ ʻʻನೀವು ಇಂಗ್ಲಿಷ್‌ನಲ್ಲಿ ಮಾತನಾಡಲು ವಿನಂತಿ. ಇಂದು ನೀವು ಈವೆಂಟ್‌ನಲ್ಲಿ ತುಂಬ ಸುಂದರವಾಗಿ ಕಾಣುತ್ತೀದ್ದೀರಿ. ನಿಮ್ಮನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು, ಆದರೆ ನಾವು ನಿಮ್ಮನ್ನು ನೋಡಿ ಆನಂದಿಸುವಷ್ಟು ನಿಮ್ಮ ಮಾತುಗಳನ್ನು ಕೇಳಿಯೂ ಖುಷಿ ಪಡುತ್ತೇವೆ. ಆದರೆ, ನೀವು ತೆಲುಗಿನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದೀರಿ, ಅದು ನಮಗೆ ಅರ್ಥವಾಗಲಿಲ್ಲ. ಒಂದು ವೇಳೆ ನಾರ್ಥ್‌ ಸೈಡ್‌ ನಿಮಗೆ ಅಭಿಮಾನಿಗಳಿದ್ದರೆ, ಅವರೂ ನಿಮ್ಮ ಮಾತನ್ನು ಕೇಳಲು ಇಷ್ಟಪಡುತ್ತಾರೆ ಎಂದು ನೀವು ಭಾವಿಸುವುದಿಲ್ಲವೇ? ನೀವು ಇಂಗ್ಲಿಷ್‌ನಲ್ಲಿ ಮಾತನಾಡಿದರೆ, ಹೆಚ್ಚಿನ ಜನರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ನಾರ್ಥ್‌ ಮತ್ರವಲ್ಲ ಕನ್ನಡ, ತಮಿಳು ಅಥವಾ ಮಲಯಾಳಂ ಮಾತನಾಡುವವರೂ ಸಹ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಇಂಗ್ಲೀಷ್‌ನಲ್ಲಿ ಮಾತನಾಡಿ ಎಂಬುದೇ ನಮ್ಮ ವಿನಂತಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

ಈ ಪೋಸ್ಟ್‌ಗೆ ರಶ್ಮಿಕಾ ಎಕ್ಸ್‌ ಮೂಲಕ ಹೀಗೆ ಬರೆದುಕೊಂಡಿದ್ದಾರೆ ʻʻನಾನು ಇಂಗ್ಲಿಷ್‌ನಲ್ಲಿ ಮಾತನಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನೀವು ಎಲ್ಲಿಂದಲೇ ಬಂದಿದ್ದರೂ ಸಹ ಅರ್ಥ ಮಾಡಿಸಲು ಪ್ರಯತ್ನಿಸುತ್ತೇನೆ. ಆದರೆ ಅನೇಕ ಜನರು ಅವರ ಭಾಷೆಗಳಲ್ಲಿ ಮಾತನಾಡಬೇಕೆಂದು ಬಯಸುತ್ತಾರೆ. ಆಗ ನಾನು ಭಾಷೆಯ ಬಗ್ಗೆ ಅಗೌರವ ತೋರುತ್ತೇನೆ ಅಥವಾ ನನಗೆ ಭಾಷೆ ತಿಳಿದಿಲ್ಲ ಎಂದು ಭಾವಿಸುತ್ತಾರೆ. ಹೀಗಾಗಿ ನನ್ನ ನನ್ನ ಕೈಲಾದಷ್ಟು ಪ್ರಯತ್ನಿಸುವೆʼʼಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ. ಹಿಂದಿಯಲ್ಲಿ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಛಾವಾದಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ, ಅವರು ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್, ಧನುಷ್ ಜೊತೆ ಕುಬೇರ, ದಿ ಗರ್ಲ್‌ಫ್ರೆಂಡ್ ಮತ್ತು ರೇನ್‌ಬೋ ಚಿತ್ರಗಳಲ್ಲಿ ನಟಿಸಲಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading

ಸ್ಯಾಂಡಲ್ ವುಡ್

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

Ambareesh Birthday: ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ. ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು.

VISTARANEWS.COM


on

Ambareesh Birthday during Sumalatha Ambareesh Talks About Abhishek Ambareesh And Aviva
Koo

ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಜನ್ಮ ದಿನ (Ambareesh Birthday). ಅಂಬಿ ನಮ್ಮನ್ನಗಲಿ ಐದು ವರ್ಷಗಳು ಕಳೆದರೂ ಬದುಕಿದ್ದಾಗ ಅವರು ಅದೆಷ್ಟು ಅಭಿಮಾನಿ ಬಳಗ ಹೊಂದಿದ್ದರೋ ಅಷ್ಟೇ ಫ್ಯಾನ್‌ ಬೇಸ್‌ ಇವತ್ತಿಗೂ ಅವರಿಗಿದೆ. ಇಂದು ಅವರ 72 ನೇ ಜನ್ಮ ದಿನವಾದ ಇಂದು ಪತ್ನಿ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು. ಈ ಸಮಯದಲ್ಲಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅಪ್ಪ ಆಗುತ್ತಿದ್ದಾರೆಯೇ? ನೀವು ಅಜ್ಜಿ ಆಗುತ್ತಿದ್ದೀರಿಯೇ? (Abhishek Ambareesh And Aviva) ಎಂಬ ಪ್ರಶ್ನೆ ಬಂತು. ಆಗ ಸಮಲತಾ ಅವರು ʻʻಸದ್ಯಕ್ಕೆ ಇಲ್ಲ. ಸಿಹಿ ಸುದ್ದಿ ಇದ್ದಾಗ ಖಂಡಿತ ಹೇಳುತ್ತೇನೆʼʼಎಂದರು.

ಈ ವೇಳೆ ಸುಮಲತಾ ಮಾತನಾಡಿ ʻʻಅಂಬಿ ಅಗಲಿ ಆರು ವರ್ಷ ಆಗಿದೆ. ಆದರೆ ಅಂಬಿ ಇದ್ದಾಗ ಎಷ್ಟು ಪ್ರೀತಿ ತೋರಿಸುತ್ತಿದ್ದರೋ ಅಷ್ಟೇ ಪ್ರೀತಿ ಈಗಲೂ ಅಭಿಮಾನಿಗಳು ತೋರಿಸುತ್ತಿದ್ದಾರೆ. ಅಂಬರೀಶ್ ಮಾಡಿದ ಸಮಾಜಮುಖಿ ಕೆಲಸಗಳನ್ನ ನೆನಪಲ್ಲಿಟ್ಕೊಂಡಿದ್ದಾರೆ ಜನ. ಕಳೆದ ವರ್ಷ ಅಂಬರೀಶ್ ಫೌಂಡೇಶನ್ ಶುರು ಮಾಡಿದ್ವಿ. ಫೌಂಡೇಶನ್ ವತಿಯಿಂದ ಸಾಧಕರನ್ನ ಗುರ್ತಿಸಿ ಸನ್ಮಾನಿಸುವ ಕೆಲಸ ಆಗ್ತಿದೆ. ಸಮಾಜಮುಖಿ ಕೆಲಸ ಮಾಡಿದವರಿಗೆ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅಂಬರೀಶ್ ಫೌಂಡೇಶನ್ ವತಿಯಿಂದ ಸನ್ಮಾನ ಆಗುತ್ತಿದೆ. ಮಂಡ್ಯದಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಹೋದ ಕಡೆಯಲೆಲ್ಲ ಅಂಬರೀಶ್ ಅವರ ಬಗ್ಗೆ ನಮಗೆ ಗೊತ್ತಿಲ್ಲದ ಕೆಲಸಗಳ ಬಗ್ಗೆ ಹೇಳ್ತಾರೆʼʼಎಂದರು.

ಇದನ್ನೂ ಓದಿ: Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಜತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ಅಂಬರೀಶ್‌ರನ್ನು ನೆನೆದ ಡಿ ಬಾಸ್‌

ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ.

ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿರವರ ಹುಟ್ಟುಹಬ್ಬದ (Birthday) ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್‌ ಅಂಬರೀಶ್‌ಗೆ ಶುಭಕೋರಿದ್ದಾರೆ.

Continue Reading

ಒಟಿಟಿ

TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

TOP 5 Movies: ಫಾಸ್ಟ್ ಎಕ್ಸ್., ಜವಾನ್‌, ಲೀಯೋ ಹೀಗೆ ಹಲವು ಸಿನಿಮಾಗಳು ಲಿಸ್ಟ್‌ನಲ್ಲಿವೆ. . ಇದೀಗ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಿದೆ (TOP 5 Movies). 2023ರ ಈ 5 ಕ್ಲಾಸಿಕ್ ಚಲನಚಿತ್ರಗಳ ಪಟ್ಟಿ ಇದು.

VISTARANEWS.COM


on

TOP 5 Movies big budget Movie in OTT
Koo

ಬೆಂಗಳೂರು: 2023ರ ವರ್ಷ ಅನೇಕ ಹಿಟ್‌ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದೆ. ಇದೀಗ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಿದೆ (TOP 5 Movies). 2023ರ ಈ 5 ಕ್ಲಾಸಿಕ್ ಚಲನಚಿತ್ರಗಳ ಪಟ್ಟಿ ಇದು.

ಅಕ್ವಮ್ಯಾನ್ ಮತ್ತು ಲಾಸ್ಟ್ ಕಿಂಗ್ಡಂ (Aquaman & The Lost Kingdom)

ಅಕ್ವಾಮನ್ ಮತ್ತು ಲಾಸ್ಟ್ ಕಿಂಗ್‌ಡಮ್ ಮುಖ್ಯ ಪಾತ್ರದಲ್ಲಿ ಜೇಸನ್ ಮೊಮೊವಾ ನಟಿಸಿದ್ದಾರೆ. ಚಿತ್ರ 2023ರ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಲನಚಿತ್ರ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಪಲ್ ಟಿವಿಯಲ್ಲಿ ಲಭ್ಯವಿದೆ. ಆರ್ಥರ್ ಕರಿಯಾಗಿ ಜೇಸನ್ ಮೊಮೊವಾ, ಮೇರಾ ಆಗಿ ಅಂಬರ್ ಹರ್ಡ್, ಓರ್ಮ್ ಮಾರಿಯಸ್ ಆಗಿ ಪ್ಯಾಟ್ರಿಕ್ ವಿಲ್ಸನ್, ಬ್ಲ್ಯಾಕ್ ಮಾಂಟಾ ಆಗಿ ಯಾಹ್ಯಾ ಅಬ್ದುಲ್-ಮಟೀನ್ II, ನೆರಿಯಸ್ ಆಗಿ ಡಾಲ್ಫ್ ಲುಂಡ್‌ಗ್ರೆನ್, ಮಾರ್ಟಿನ್ ಶಾರ್ಟ್, ನಿಕೋಲ್ ಕಿಡ್‌ಮನ್ ಅಟ್ಲಾನ್ನಾ ಮುಂತಾದವರು ಇದ್ದಾರೆ. ಇದನ್ನು ಡಿಸಿ ಸ್ಟುಡಿಯೋಸ್, ಡೊಮೈನ್ ಎಂಟರ್‌ಟೈನ್‌ಮೆಂಟ್, ದಿ ಸಫ್ರಾನ್ ಕಂಪನಿ ಮತ್ತು ಡೊಮೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಪೀಟರ್ ಸಫ್ರಾನ್, ರಾಬ್ ಕೋವನ್, ಪೀಟರ್ ಸಫ್ರಾನ್ ಮತ್ತು ರಾಬ್ ಕೋವನ್ ನಿರ್ಮಿಸಿದ್ದಾರೆ.

ಫಾಸ್ಟ್ ಎಕ್ಸ್

ರೋಮಾಂಚಕ ಅಮೆರಿಕನ್ ಆಕ್ಷನ್ ಚಿತ್ರದಲ್ಲಿ ನಿರ್ದೇಶಕ ಲೂಯಿಸ್ ಲೆಟೆರ್ರಿಯರ್ ನಿರ್ಮಾಪಕರಾದ ನೀಲ್ ಎಚ್. ಮೊರಿಟ್ಜ್, ವಿನ್ ಡೀಸೆಲ್, ಜೆಫ್ ಕಿರ್ಸ್ ಚೆನ್ ಬೌಮ್, ಸಮಂತಾ ವಿನ್ಸೆಂಟ್ ಮತ್ತು ಜಸ್ಟಿನ್ ಲಿನ್ ಒಳಗೊಂಡಿದ್ದು ಬೃಹತ್ ಬಜೆಟ್ ಸಿನಿಮಾ ಫಾಸ್ಟ್‌ ಏಕ್ಸ್‌. ವಿನ್ ಡೀಸೆಲ್ ಡೊಮಿನಿಕ್ ಟೊರೆಟ್ಟೊ ಆಗಿ ನಟಿಸಿರುವ ಈ ಚಲನಚಿತ್ರವು ಪ್ರಭಾವಿ ನಟ ನಟಿಯರನ್ನು ಹೊಂದಿದೆ. ಅದರಲ್ಲಿ ಮಿಷೆಲ್ ರೊಡ್ರಿಗಸ್, ಟೈರೀಸ್ ಗಿಬ್ಸನ್, ಕ್ರಿಸ್ “ಲುಡಾಕ್ರಿಸ್” ಬ್ರಿಡ್ಜಸ್ ಮತ್ತಿತರರನ್ನು ಒಳಗೊಂಡಿದೆ. ಈದಿ ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

ಇದನ್ನೂ ಓದಿ: Pushpa 2: ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌: ಅಲ್ಲು ಜತೆ ಹೆಜ್ಜೆ ಹಾಕಿದ ರಶ್ಮಿಕಾ!

ಇಂಡಿಯಾನಾ ಜೋನ್ಸ್ ಅಂಡ್ ಡಯಲ್ ಆಫ್ ಡೆಸ್ಟಿನಿ

ಜೇಮ್ಸ್ ಮಾರಿಗೋಲ್ಡ್ ನಿರ್ದೇಶನ ಮತ್ತು ಕ್ಯಾಥ್ಲೀನ್ ಕೆನಡಿ, ಫ್ರಾಂಕ್ ಮಾರ್ಷಲ್ ಮತ್ತು ಸಿಮೋನ್ ಎಮ್ಯಾನ್ಯುಯೆಲ್ ನಿರ್ಮಾಣದ ಅದ್ಭುತ ಅಮೆರಿಕನ್ ಸಾಹಸಿ ಚಿತ್ರ. ಬಿಗ್‌ ಬಜೆಟ್ ಸಿನಿಮಾ ಇದು. ಹ್ಯಾರಿಸನ್ ಫೋರ್ಡ್, ಜಾನ್ ರಿಸ್-ಡೇವಿಸ್ ಮತ್ತು ಕರೆನ್ ಅಲೆನ್ ಅವರನ್ನು ಪ್ರಮುಖ ಪಾತ್ರಗಳಲ್ಲಿ ಹೊಂದಿದೆ. ಹೊಸಬರಾದ ಫೋಬಿ ವಾಲರ್-ಬ್ರಿಡ್ಜ್, ಅಂಟೋನಿಯೊ ಬಂದೆರಾಸ್, ಟೋಬಿ ಜೋನ್ಸ್, ಬಾಯ್ಸ್ ಹೋಲ್ಡ್ ಬ್ರೂಕ್, ಎಥನ್ನ್ ಇಸಿಡೋರ್ ಮತ್ತು ಮ್ಯಾಡ್ಸ್ ಮಿಕೆಲ್ಸೆನ್ ನಟಿಸಿದ್ದಾರೆ.

ಜವಾನ್‌

2023ನೇ ವರ್ಷವು ಶಾರೂಖ್‌ ಖಾನ್‌ಗೆ ಪ್ರಮುಖ ವರ್ಷವಾಗಿದೆ. ಪಠಾನ್‌ ಮತ್ತು ಜವಾನ್‌ ಎಂಬ ಎರಡು ಚಿತ್ರಗಳು ಇವರಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತ್ತು. ಇವೆರಡರಲ್ಲಿ ಜವಾನ್‌ ಚಿತ್ರವು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್‌ ಖಾನ್‌ಗೆ ವಿಶೇಷ ಮಾಸ್‌ ಲುಕ್‌ ನೀಡಲಾಗಿತ್ತು. ಜವಾನ್‌ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂದಾಜು 1150 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿತ್ತು. ಕೇವಲ ಹಿಂದಿ ಅವತರಣಿಕೆಯಲ್ಲೇ 590 ಕೋಟಿ ರೂಪಾಯಿ ಗಳಿಸಿತ್ತು. ತಮಿಳು ಮತ್ತು ತೆಲುಗು ಸಿನಿ ಮಾರುಕಟ್ಟೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು.ಶಾರುಖ್ ಖಾನ್ ಪತ್ನಿ ಗೌರಿ ಖಾನ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಜವಾನ್‌ ಸಿನಿಮಾ ಇವತ್ತಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ, ಸೆಪ್ಟೆಂಬರ್‌ 7ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಕೂಡ ಸ್ಟ್ರೀಮಿಂಗ್‌ ಆಗುತ್ತಿದೆ.

ಲಿಯೋ ಸಿನಿಮಾ

ದಳಪತಿ ವಿಜಯ್ ನಟನೆಯ ‘ಲಿಯೋ: ಬ್ಲಡಿ ಸ್ವೀಟ್’ ಗಲ್ಲಾಪೆಟ್ಟಿಗೆಯನ್ನು ಯಶಸ್ಸು ಕಂಡಿತ್ತು. ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಮುರಿದಿತ್ತು. ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ, ಸಂಜಯ್ ದತ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಲಿಯೋ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Continue Reading
Advertisement
mantralaya 1
ಕರ್ನಾಟಕ17 seconds ago

Mantralaya: ಬೇಸಿಗೆ ರಜೆ ಎಫೆಕ್ಟ್;‌ ಮಂತ್ರಾಲಯದಲ್ಲಿ ಈ ಬಾರಿಯ ಕಾಣಿಕೆ ಸಂಗ್ರಹ ನೋಡಿ

Gold Smuggling
ದೇಶ11 mins ago

Gold Smuggling: ಶಶಿ ತರೂರ್‌ ಪಿಎ ಅರೆಸ್ಟ್‌- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ನಾಯಕನಿಗೆ ತೀವ್ರ ಮುಜುಗರ

Firecracker Explosion
ದೇಶ13 mins ago

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Raitha Siri Yojana
ಪ್ರಮುಖ ಸುದ್ದಿ39 mins ago

Raitha Siri Yojana: ಸಿರಿ ಧಾನ್ಯ ಬೆಳೆಯುವವರಿಗೆ ಸಿಹಿ ಸುದ್ದಿ; ನಿಮ್ಮ ಖಾತೆಗೇ ಬರುತ್ತೆ 10 ಸಾವಿರ ರೂ.

Nosebleeds In Summer
ಆರೋಗ್ಯ1 hour ago

Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

Karnataka Weather
ಕರ್ನಾಟಕ2 hours ago

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Hair Growth Tips
ಆರೋಗ್ಯ2 hours ago

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರು ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ!

Girlfriend
ದೇಶ8 hours ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ9 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌