Site icon Vistara News

Kantara Movie | ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಕಾಂತಾರ ನಿರ್ದೇಶಕ ರಿಷಬ್‌ ಶೆಟ್ಟಿ

kantara movie

ಚೆನ್ನೈ : ಕರ್ನಾಟಕದ ಕರಾವಳಿಯ ಸಾಂಸ್ಕೃತಿಕ ವೈಭವ ಜಗದಗಲ ಪಸರಿಸುವಂತೆ ಮಾಡಿರುವ ಕಾಂತಾರ ಸಿನಿಮಾದ (Kantara Movie) ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಶುಕ್ರವಾರ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್‌, ರಜನಿ ನಿವಾಸದಲ್ಲಿ ಅವರಿಬ್ಬರ ಭೇಟಿಯ ಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ಗುರು ಹಾಗೂ ಆತನ ಶಿಷ್ಯನ ಭೇಟಿ ಹಾಗೂ ಒಳನೋಟದ ಚರ್ಚೆ ಎಂಬುದಾಗಿ ಹೊಂಬಾಳೆ ಫಿಲ್ಸ್ಮ್‌ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಟ್ವೀಟ್‌ನಲ್ಲಿ ಒಟ್ಟಾರೆ ನಾಲ್ಕು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಎರಡು ದಿನಗಳ ಹಿಂದೆ ರಜನಿಕಾಂತ್‌ ಅವರು ಕಾಂತಾರ ಸಿನಿಮಾವನ್ನು ಹೊಗಳಿ ಟ್ವೀಟ್‌ ಮಾಡಿದ್ದರು. ʻʻತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವುದು ಹೆಚ್ಚು ಇರುತ್ತದೆ. ಇಂತಹ ಒಳ್ಳೆಯ ಸಿನಿಮಾವನ್ನು ನೀಡಿದ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್‌ಗೆ ಧನ್ಯವಾದಗಳು. ಒಬ್ಬ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಟರಾಗಿ ಅದ್ಭುತ ನಿರ್ವಹಣೆ ತೋರಿದ ರಿಷಬ್ ಅವರಿಗೆ ಹ್ಯಾಟ್ಸ್‌ ಆಫ್‌. ಕಾಂತಾರದಂತಹ ಮಾಸ್ಟರ್ ಪೀಸ್ ಚಿತ್ರಕ್ಕಾಗಿ ದುಡಿದ ಎಲ್ಲಾ ಸಿನಿಮಾದ ತಾರೆಯರಿಗೆ ಹಾಗೂ ತಂತ್ರಜ್ಞರಿಗೂ ಅಭಿನಂದನೆಗಳುʼʼ ಎಂದು ರಜನಿಕಾಂತ್‌ ನಟ ರಜನಿಕಾಂತ್‌ ಟ್ವೀಟ್‌ ಮೂಲಕ ಬರೆದಿದ್ದರು.

ಇದನ್ನೂ ಓದಿ | Kantara Movie | 200 ಕೋಟಿ ಭರ್ಜರಿ ಕಲೆಕ್ಷನ್‌ನತ್ತ ಕಾಂತಾರ!

Exit mobile version