Site icon Vistara News

Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌

Kantara Movie

ಬೆಂಗಳೂರು: ‘ಕಾಂತಾರ’ (Kantara Movie ) ಸಿನಿಮಾ ಮೂಲಕ ಹೆಸರು ಗಳಿಸಿರುವ ಕನ್ನಡದ ನಟ, ಕಿಶೋರ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಹಾಕಿರುವ ಒಂದು ಪೋಸ್ಟ್. ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವೈರಲ್‌ ವಿಡಿಯೊಗೆ ನಮ್ಮಲ್ಲಿ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು ಎಂದು ಪ್ರತಿಪಾದಿಸಿರುವ ನಟ ಕಿಶೋರ್ ಕೊಲ್ಲುವ ಶಕ್ತಿ ಹೊಂದಿರುವ ದೈವ ಮನಸ್ಸನ್ನು ಪರಿವರ್ತಿಸುವ ಶಕ್ತಿಯನ್ನು ಏಕೆ ಹೊಂದಿಲ್ಲ ಪೋಸ್ಟ್‌ ಹಾಕಿಕೊಂಡಿದ್ದಾರೆ.

ಪೋಸ್ಟ್‌ ಹಂಚಿಕೊಂಡ ಕಿಶೋರ್ ಕುಮಾರ್ ʻʻಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ??ʼʼʻʻಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವೈರಲ್ ವಿಡಿಯೊ ವಾಟ್ಸ್ ಆ್ಯಪ್‌ನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ತರಹದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ…ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಆಸ್ಕರ್‌ ಕಣದತ್ತ ಕಾಂತಾರ : ಕಾಂತಾರ-2 ಬಗ್ಗೆ ವಿಜಯ್ ಕಿರಗಂದೂರು ಹೇಳಿದ್ದೇನು?

ಕನ್ನಡ ನಟ ಕಿಶೋರ್ ಅವರ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿದೆ. ಕಿಶೋರ್ ಕುಮಾರ್ ಟ್ವೀಟ್‌ಗಳಿಂದಲೇ ಅವರ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂಬ ಊಹಾಪೋಹಗಳೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.  

ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

Exit mobile version