Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌ - Vistara News

ಸಿನಿಮಾ

Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌

ಕಾಂತಾರದ (Kantara Movie ) ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವೈರಲ್‌ ವಿಡಿಯೊ ಕುರಿತು ಕನ್ನಡದ ನಟ, ಕಿಶೋರ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಕಾಂತಾರ’ (Kantara Movie ) ಸಿನಿಮಾ ಮೂಲಕ ಹೆಸರು ಗಳಿಸಿರುವ ಕನ್ನಡದ ನಟ, ಕಿಶೋರ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಹಾಕಿರುವ ಒಂದು ಪೋಸ್ಟ್. ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವೈರಲ್‌ ವಿಡಿಯೊಗೆ ನಮ್ಮಲ್ಲಿ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು ಎಂದು ಪ್ರತಿಪಾದಿಸಿರುವ ನಟ ಕಿಶೋರ್ ಕೊಲ್ಲುವ ಶಕ್ತಿ ಹೊಂದಿರುವ ದೈವ ಮನಸ್ಸನ್ನು ಪರಿವರ್ತಿಸುವ ಶಕ್ತಿಯನ್ನು ಏಕೆ ಹೊಂದಿಲ್ಲ ಪೋಸ್ಟ್‌ ಹಾಕಿಕೊಂಡಿದ್ದಾರೆ.

ಪೋಸ್ಟ್‌ ಹಂಚಿಕೊಂಡ ಕಿಶೋರ್ ಕುಮಾರ್ ʻʻಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ??ʼʼʻʻಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವೈರಲ್ ವಿಡಿಯೊ ವಾಟ್ಸ್ ಆ್ಯಪ್‌ನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ತರಹದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ…ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಆಸ್ಕರ್‌ ಕಣದತ್ತ ಕಾಂತಾರ : ಕಾಂತಾರ-2 ಬಗ್ಗೆ ವಿಜಯ್ ಕಿರಗಂದೂರು ಹೇಳಿದ್ದೇನು?

ಕನ್ನಡ ನಟ ಕಿಶೋರ್ ಅವರ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿದೆ. ಕಿಶೋರ್ ಕುಮಾರ್ ಟ್ವೀಟ್‌ಗಳಿಂದಲೇ ಅವರ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂಬ ಊಹಾಪೋಹಗಳೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.  

ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kiccha Sudeep: ಇಬ್ಬರಿಗೆ ಮಾತ್ರ ʻಬಾಸ್‌ʼ ಎಂದು ಕರೆಯುವೆ ಎಂದ ಕಿಚ್ಚ; ಯಾರವರು?

Kiccha Sudeep: ಬಿಲ್ಲಾ ರಂಗ ಭಾಷಾ’ಗಾಗಿ ರೆಡಿಯಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕಿಚ್ಚ ಅವರು ತಾವು ಬಾಸ್‌ ಎಂದು ಯಾರಿಗೆ ಕರೆಯುತ್ತೇನೆ ಎಂದು ಹೇಳಿಕೊಂಡಿರುವ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ.

VISTARANEWS.COM


on

Kiccha Sudeep Call Boss To Only Two Persons
Koo

ಬೆಂಗಳೂರು: ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ʻಮ್ಯಾಕ್ಸ್ʼ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬಿಲ್ಲಾ ರಂಗ ಭಾಷಾ’ಗಾಗಿ ರೆಡಿಯಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕಿಚ್ಚ ಅವರು ತಾವು ಬಾಸ್‌ ಎಂದು ಯಾರಿಗೆ ಕರೆಯುತ್ತೇನೆ ಎಂದು ಹೇಳಿಕೊಂಡಿರುವ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ.

ʻಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಅವರು ಕಿಚ್ಚ ಸುದೀಪ್‌ ಅವರಿಗೆ ಸಂದರ್ಶನ ಮಾಡಿದ್ದರು. ಈ ವೇಳೆ ನಿಮ್ಮ ನೆಚ್ಚಿನ ನಾಯಕ ಯಾರೆಂದು ? ಪ್ರಶ್ನೆ ಇಟ್ಟರು. ಆಗ ಸುದೀಪ್‌ ಮಾತನಾಡಿ ʻʻನನಗೆ ವಿಷ್ಣುವರ್ಧನ್‌ ಅವರು ತುಂಬ ಇಷ್ಟ. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ.  ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್. ಹಾಗೇ ನನ್ನ ತಂದೆ ಕೂಡ. ಇವರಿಬ್ಬರಿಗೆ ನಾನು ಬಾಸ್‌ ಎಂದು ಕರೆಯುವುದುʼʼಎಂದಿದ್ದಾರೆ.\

ಇದನ್ನೂ ಓದಿ: Kiccha Sudeep: ಮುಂದಿನ ಸಿನಿಮಾಗಾಗಿ ಭಾರಿ ವರ್ಕೌಟ್‌ ಮಾಡ್ತಾ ಇದ್ದಾರೆ ಕಿಚ್ಚ!

ಇನ್ನು ಸುದೀಪ್‌ ಅವರು ಮುಂದಿನ ಸಿನಿಮಾದ ಒಂದು ಪಾತ್ರದಲ್ಲಿ ಭಾರಿ ಕಟ್ಟುಮಸ್ತಾದ ದೇಹವನ್ನು ಹೊಂದಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ . ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುವ ಮುನ್ನವೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ. ಈ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ‘ದ್ರೋಣಾಚಾರ್ಯ’ ಸಿನಿಮಾವನ್ನು ಅನುಪ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು, ಆದರೆ ಅದರ ಬದಲಿಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಪ್ರಾರಂಭ ಮಾಡಿದ್ದಾರೆ.

ಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಟಾಲಿವುಡ್

Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!

Kalki 2898 AD: ಪ್ರಭಾಸ್ ಅಭಿನಯದ ಈ ಚಿತ್ರವು ಈಗ ಆಮೀರ್ ಖಾನ್ ಅವರ ‘ಪಿಕೆ’ ಮತ್ತು ಸನ್ನಿ ಡಿಯೋಲ್ ಅವರ ಬ್ಲಾಕ್ಬಸ್ಟರ್, ‘ಗದರ್ 2’ ಸಿನಿಮಾ ಕಲೆಕ್ಷನ್‌ನ್ನು ಮೀರಿಸಿದೆ. 10 ನೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದೆ.

VISTARANEWS.COM


on

Kalki 2898 AD box office thrashes 'PK' record
Koo

ಬೆಂಗಳೂರು: ʻಕಲ್ಕಿ 2898 AD‘ ತನ್ನ ಎರಡನೇ ವಾರಾಂತ್ಯದಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಲೆಕ್ಷನ್‌ ಮಾಡಿದೆ. ಎರಡನೇ ಶುಕ್ರವಾರ-ಭಾನುವಾರದ ನಡುವೆ ಸುಮಾರು 230 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕೇವಲ 11 ದಿನಕ್ಕೆ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ ಸ್ಯಾಕ್‌ನಿಲ್ಕ್ ಪ್ರಕಾರ, ಚಿತ್ರವು ತನ್ನ ಎರಡನೇ ಭಾನುವಾರದಂದು 500 ಕೋಟಿ ಮೈಲಿಗಲ್ಲನ್ನು ದಾಟಿದೆ.

ಪ್ರಭಾಸ್ ಅಭಿನಯದ ಈ ಚಿತ್ರವು ಈಗ ಆಮೀರ್ ಖಾನ್ ಅವರ ‘ಪಿಕೆ’ ಮತ್ತು ಸನ್ನಿ ಡಿಯೋಲ್ ಅವರ ಬ್ಲಾಕ್ಬಸ್ಟರ್, ‘ಗದರ್ 2’ ಸಿನಿಮಾ ಕಲೆಕ್ಷನ್‌ನ್ನು ಮೀರಿಸಿದೆ. 10 ನೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದೆ.

  • ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿ ಇದು.
  • ದಂಗಲ್ (2016): 2070.3 ಕೋಟಿ ರೂ
  • ಬಾಹುಬಲಿ 2 (2017): 1788.06 ಕೋಟಿ ರೂ
  • RRR (2022): 1230 ಕೋಟಿ ರೂ
  • ಕೆಜಿಎಫ್ 2 (2022): 1215 ಕೋಟಿ ರೂ
  • ಜವಾನ್ (2023): 1160 ಕೋಟಿ ರೂ
  • ಪಠಾಣ್ (2023): 1055 ಕೋಟಿ ರೂ
  • ಬಜರಂಗಿ ಭಾಯಿಜಾನ್ (2015): 922.03 ಕೋಟಿ ರೂ
  • ಅನಿಮಲ್‌ (2023): 915 ಕೋಟಿ ರೂ
  • ಸೀಕ್ರೆಟ್ ಸೂಪರ್‌ಸ್ಟಾರ್ (2017): 912.75 ಕೋಟಿ ರೂ
  • ಕಲ್ಕಿ 2898 AD (2024): ರೂ 832.2 ಕೋಟಿ
  • ಪಿಕೆ (2014): 792 ಕೋಟಿ ರೂ
  • 2.0 (2018): ರೂ 744.78 ಕೋಟಿ
  • ಗದರ್ 2 (2023): 686 ಕೋಟಿ ರೂ

ಕಲ್ಕಿ 2898 AD ತನ್ನ ಮೊದಲ ವಾರದಲ್ಲಿ ಒಟ್ಟು ರೂ 414.85 ಕೋಟಿ ಗಳಿಸಿತು. ಕಲ್ಕಿ ವಿಶ್ವ ಬಾಕ್ಸ್ ಆಫೀಸ್​ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.

ತೆಲುಗು ಪ್ರದರ್ಶನಗಳಲ್ಲಿ 242.85 ಕೋಟಿ ರೂಪಾಯಿಗಳನ್ನು ಮತ್ತು ಹಿಂದಿ ಪ್ರದರ್ಶನಗಳಲ್ಲಿ 211.9 ಕೋಟಿ ರೂಪಾಯಿಗಳನ್ನು ಗಳಿಸಿದೆ. ಚಿತ್ರದ ತಮಿಳು ಶೋಗಳು 30.1 ಕೋಟಿ, ಮಲಯಾಳಂ ಶೋ 18.2 ಕೋಟಿ ಮತ್ತು ಕನ್ನಡ ಪ್ರದರ್ಶನಗಳು ರೂ 3.95 ಕೋಟಿ ರೂ. ಆಗಿದೆ.

ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Continue Reading

ಸ್ಯಾಂಡಲ್ ವುಡ್

Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ

Shiva Rajkumar: ಕಳೆದ 15 ದಿನದ ಹಿಂದಷ್ಟೇ ಹೊಸ ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾಕ್ಸ್‌ ವಾಹನ ಖರೀದಿ ಮಾಡಿದ್ದ ಕುಟುಂಬ, ವಾಹನಕ್ಕೆ ಪೂಜೆ ಮಾಡಿಸಲು ಮನೆ ದೇವರು ಯಲ್ಲಮ್ಮ ದೇವಾಲಯಕ್ಕೆ ತೆರಳಿದ್ದರು. ನಾಗೇಶ್‌ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಮ್ಮ ದೇವಾಲಯಕ್ಕೆ ಸೋಮವಾರ ರಾತ್ರಿ ತೆರಳಿದ್ದರು. ವಾಹನಕ್ಕೆ ಪೂಜೆ ಮಾಡಿಸಿಕೊಂಡು ಮರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು.

VISTARANEWS.COM


on

Haveri accident Shivanna couple helped the money to families
Koo

ಬೆಂಗಳೂರು: ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾಡಗಿಯಲ್ಲಿ ಮುಂಜಾನೆ 13 ಮಂದಿಯನ್ನು ಟಿಟಿ ವಾಹನ ಬಲಿ ತೆಗೆದುಕೊಂಡಿತ್ತು. ಟಿಟಿ ವಾಹನವನ್ನು 15 ದಿನಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ತಿಳಿದುಬಂದಿತ್ತು. ವಾಹನದ ಪೂಜೆಗಾಗಿ (Vehicle Puja) ಕುಟುಂಬ ತೆರಳಿದ್ದು, ಪೂಜೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು. ಇದೀಗ ಮೃತಪಟ್ಟ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಹಣ ಸಹಾಯ ಮಾಡಿದ್ದಾರೆ ಶಿವರಾಜ್‌ಕುಮಾರ್‌-ಗೀತಾ (Shiva Rajkumar) ದಂಪತಿ .ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆದಿತ್ತು.

ಕೆಲ ದಿನಗಳ ಹಿಂದೆ ಎಮ್ಮೆಹಟ್ಟಿಗೆ ಭೇಟಿ ನೀಡಿ ಕುಟುಂಬಗಳಿಗೆ ಸಿವರಾಜ್‌ಕುಮಾರ್‌ ಹಾಗೂ ಗೀತಾ ಸಾಂತ್ವನ ಹೇಳಿದ್ದರು. ಇದೀಗ ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಾರೆ ದೊಡ್ಮನೆ ಮಗ.

ಏನಿದು ಘಟನೆ?

ಕಳೆದ 15 ದಿನದ ಹಿಂದಷ್ಟೇ ಹೊಸ ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾಕ್ಸ್‌ ವಾಹನ ಖರೀದಿ ಮಾಡಿದ್ದ ಕುಟುಂಬ, ವಾಹನಕ್ಕೆ ಪೂಜೆ ಮಾಡಿಸಲು ಮನೆ ದೇವರು ಯಲ್ಲಮ್ಮ ದೇವಾಲಯಕ್ಕೆ ತೆರಳಿದ್ದರು. ನಾಗೇಶ್‌ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಮ್ಮ ದೇವಾಲಯಕ್ಕೆ ಸೋಮವಾರ ರಾತ್ರಿ ತೆರಳಿದ್ದರು. ವಾಹನಕ್ಕೆ ಪೂಜೆ ಮಾಡಿಸಿಕೊಂಡು ಮರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು.

ಇದನ್ನೂ ಓದಿ: Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

ಟಿಟಿ ವಾಹನ ಖರೀದಿಸಿ ದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಿದ್ದ ಚಾಲಕ ಆದರ್ಶ, ಪೂಜೆಯ ಬಳಿಕ ಅದರ ಫೋಟೋಗಳನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಸೋಮವಾರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಆದರ್ಶ, ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್‌ನಲ್ಲಿ ವಾಹನ ಪೂಜೆ ಮಾಡಿಸಿ ಪೂಜೆ ಪೋಟೋಗಳನ್ನ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು. ಇಂದು ವಾಹನ ಛಿದ್ರಛಿದ್ರವಾಗಿದೆಯಲ್ಲದೆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತ್ತು.

ಇದನ್ನೂ ಓದಿ: Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆದಿತ್ತು. ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿ ನಂಬರ್ ಕೆಎ 51 ಡಿ3530ಗೆ ಟಿಟಿ ವಾಹನ ಸಂಖ್ಯೆ ಕೆಎ01 ಎಬಿ4760 ಡಿಕ್ಕಿ ಹೊಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಲಾರಿಯನ್ನು ಕಾಣದೆ ಟಿಟಿ ಚಾಲಕ ಆದರ್ಶ ಇದಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಬಹುಶಃ ಲಾರಿ ಕಾಣಿಸಿರಲಾರದು. ಬೆಳಗಿನ ಜಾವ ನಿದ್ರೆಯ ಮಂಪರಿನಲ್ಲಿ ಈ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು.

ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆದರು. ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ ಭೇಟಿ ನೀಡಿ ಪರಿಶೀಲಿಸಿದ್ದರು.

ಟಿಟಿ ವಾಹನದಲ್ಲಿ 17 ಜನ ಪ್ರಯಾಣ ಮಾಡುತ್ತಿದ್ದರು. 13 ಜನರ ಸಾವಿಗೀಡಾಗಿದ್ದು, 4 ಜನ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾ ಭಾಯಿ (65), ಪುಣ್ಯ (50), ಮಂಜುಳಾಬಾಯಿ (57), ಆದರ್ಶ್ (23), ಮಾನಸಾ (24), ರೂಪಾ (40), ಮಂಜುಳಾ (50) ಎಂದು ಗುರುತಿಸಲಾಗಿದೆ. 4 ವರ್ಷದ ಹಾಗೂ 6 ವರ್ಷದ ಇಬ್ಬರು ಮಕ್ಕಳು ಸಹ ಮೃತಪಟ್ಟಿದ್ದರು. ಅರ್ಪಿತಾ, ಅರುಣಾ, ಅನ್ನಪೂರ್ಣ ಆಸ್ಪತ್ರೆಯಲ್ಲಿರುವ ಗಾಯಾಳುಗಳು.

13 ಜನರ ಸಾವಿನ ಸುದ್ದಿ ಕೇಳಿ ಎಮ್ಮೆಹಟ್ಟಿ ಗ್ರಾಮದ ಜನತೆ ಶಾಕ್ ಆಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮೃತ ವಿಶಾಲಾಕ್ಷಮ್ಮ, ಆದರ್ಶ್, ನಾಗೇಶ್, ಭಾಗ್ಯ, ಮಾನಸ, ಸುಭದ್ರತಾಯಿ ಮೂಲತಃ ಎಮ್ಮೆಹಟ್ಟಿ ಗ್ರಾಮದವರು. ಪರಶುರಾಮ್, ರೂಪ ದಂಪತಿಗಳು ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿಗಳು. ಮಂಜುಳಬಾಯಿ, ಮಂಜುಳ ಭದ್ರಾವತಿ ತಾಲೂಕಿನ ಕಲ್ಯಾಳ್ ಸರ್ಕಲ್‌ನವರು. ಅಂಜು ಕಡೂರು ತಾಲೂಕಿನ ಬೀರೂರು ನಿವಾಸಿ. ಪುಣ್ಯ ಬಾಯಿ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ.

ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು.

Continue Reading

Latest

Deepika Padukone: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

Deepika Padukone: ತಾಯ್ತನ ಎನ್ನುವುದು ಹೆಣ್ಣಿಗೆ ಒಂದು ಸಂಭ್ರಮ. ನಟಿ ದೀಪಿಕಾ ಪಡುಕೋಣೆ ಕೂಡ ಈಗ ಆ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಈಗಾಗಲೇ ತಮ್ಮ ಬೇಬಿ ಬಂಪ್ ತೋರಿಸಿ ಸಖತ್ ಸುದ್ದಿಯಲ್ಲಿರುವ ದೀಪಿಕಾ ಈಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಗೀತ ಸಮಾರಂಭದಲ್ಲಿ ವಿಶೇಷವಾದ ಸೀರೆಯೊಂದನ್ನು ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ತೋರಣಿಯ ಹುಕುಮ್ ಕಿ ರಾಣಿ ಸೀರೆಯಲ್ಲಿ ಸಖತ್ ಆಗಿ ಕಂಗೊಳಿಸಿದ್ದಾರೆ. ಈ ಸೀರೆಯ ವಿಶೇಷತೆ ಏನೆಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Deepika Padukone
Koo

ಮುಂಬೈ : ಸಿನಿಮಾ ತಾರೆಯರು ಹಾಗೂ ಪ್ರಸಿದ್ಧ ಶ್ರೀಮಂತ ಕುಟುಂಬದವರು ಯಾವುದೇ ವಸ್ತುಗಳನ್ನು ಧರಿಸಿದರೂ ಅದು ಹೆಚ್ಚು ಸುದ್ದಿಯಾಗುತ್ತದೆ. ಅದರಲ್ಲೂ ಬಾಲಿವುಡ್ ನಟಿಯರು ತೊಡುವ ಸೀರೆ, ಫ್ಯಾಶನ್ ಡ್ರೆಸ್‌ಗಳು ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ಇದೀಗ ನಟಿ ದೀಪಿಕಾ ಪಡುಕೋಣೆ(Deepika Padukone )ಯವರ ಸೀರೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ತಾಯಿಯಾಗುವ ಸಂಭ್ರಮದಲ್ಲಿರುವ ನಟಿ ದೀಪಿಕಾ ಪಡುಕೋಣೆ ತನ್ನ ಬೇಬಿ ಬಂಪ್ ಅನ್ನು ತುಂಬಾ ವಿಶೇಷವಾದ ಲುಕ್‌ನಲ್ಲಿ ತೋರಿಸಲು ಪ್ರಾರಂಭಿಸಿದ್ದಾರೆ. ಹಾಗೇ ಗರ್ಭಿಣಿಯರು ತಮ್ಮ ಬೇಬಿ ಬಂಪ್‌ನಲ್ಲಿ ಯಾವ ರೀತಿ ಫ್ಯಾಷನ್ ಡ್ರೆಸ್ ಧರಿಸಬಹುದು ಎಂದು ತೋರಿಸಿಕೊಡುತ್ತಿದ್ದಾರೆ.

ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಗೀತ ಸಮಾರಂಭಕ್ಕಾಗಿ ಅವರು ಧರಿಸಿದ ಸೀರೆ ಅನೇಕರನ್ನು ಆಕರ್ಷಿಸಿದೆ. ದೀಪಿಕಾ ಪಡುಕೋಣೆ ಸೊಗಸಾದ ತೋರಣಿ ಸೀರೆಯಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆಯವರು ತೋರಣಿಯ ‘ಹುಕುಮ್‌ ಕಿ ರಾಣಿ’ ಸೀರೆಯನ್ನು ಧರಿಸಿದ್ದರು, ಇದರ ಬೆಲೆ 1.92 ಲಕ್ಷ ರೂ.ಗಳಾಗಿವೆ. ಈ ಸೀರೆ ಸಮಕಾಲೀನ ವಿನ್ಯಾಸದೊಂದಿಗೆ ಐಷಾರಾಮಿ ಮತ್ತು ಸಾಂಪ್ರದಾಯಿಕ ಸೌಂದರ್ಯವನ್ನು ಒಳಗೊಂಡಿದೆ ಎನ್ನಲಾಗಿದೆ. ನಟಿ ದೀಪಿಕಾ ಅವರು ನೇರಳೆ ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಸೀರೆಯನ್ನು ಧರಿಸಿದ್ದು, ಸೆರಗಿನ ಮೇಲಿನ ಫ್ರೇಮಿಂಗ್ ಅನ್ನು ಸುಚಾ ಜರ್ದೋಜ್‌ನಲ್ಲಿ ರಚಿಸಲಾಗಿದೆ. ಮತ್ತು ಕೈ ಕಸೂತಿ ಡೋರಿಯಾ ಕೂಡ ಎಲ್ಲರ ಕಣ್ಮನ ಸೆಳೆಯುವಂತಿದೆ.

ಬ್ರಾಂಡ್ ಪ್ರಕಾರ, ಇದರೊಂದಿಗೆ ಬರುವ ರವಿಕೆಯು ಸಾಂಪ್ರದಾಯಿಕ ರಜಪೂತಾನಾ ಚನಿಯಾ ಚೋಲಿಯಿಂದ ಸ್ಫೂರ್ತಿ ಪಡೆದಿದೆ. ಆದರೆ ಸುಚಾ ಜರ್ದೋಜ್ ಮತ್ತು ಶುದ್ಧ ಮೋಟಿಯಾ ಕೈಯಿಂದ ನೇಯ್ದ ಟ್ಯಾಸೆಲ್‌ಗಳಲ್ಲಿನ ಚಿಡಿ ವಿನ್ಯಾಸಗಳು ಸುಂದರವಾಗಿದೆ. ದೀಪಿಕಾ ಅವರು ಈ ಸೊಗಸಾದ ಸೀರೆಗೆ ಸರಿ ಹೊಂದುವಂತಹ ಆಭರಣಗಳನ್ನು ಧರಿಸಿದ್ದು, ಅವರ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ. ಕಿವಿಯೋಲೆಗಳು ಮತ್ತು ಚೋಕರ್ ಸೇರಿದಂತೆ ಅವರು ಧರಿಸಿದ ಆಭರಣ ಆ ಸೀರೆಯ ವಿನ್ಯಾಸಗಳಿಗೆ ಸಖತ್‌ ಮ್ಯಾಚಿಂಗ್‌ ಆಗಿದೆ.

ಭದ್ರ ಸಂಜಲಿ ಎಂಬ ಹೆಸರಿನ ಸೀರೆಯು ತೋರಣಿ ಕ್ಲಾಸಿಕ್ಸ್‌ನ ಒಂದು ಭಾಗವಾಗಿದೆ. ಭದ್ರ ಸಂಜಲಿ ಸೀರೆಯು ಸುಂದರವಾದ ಕಸೂತಿಯಿಂದ ಅಲಂಕರಿಸಲ್ಪಟ್ಟಿದೆ. ಸಂಗೀತ ಸಮಾರಂಭದಂತಹ ಭವ್ಯವಾದ ಆಚರಣೆಗಳಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸೀರೆಯ ಮೇಲಿನ ವಿನ್ಯಾಸಗಳು ಕರಣ್ ತೋರಣಿಯವರ ವಿನ್ಯಾಸಗಳ ವಿಶಿಷ್ಟ ಲಕ್ಷಣವನ್ನು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಭಾರತದ ಸಂಪ್ರದಾಯದ ಸೌಂದರ್ಯವನ್ನು ಎತ್ತಿ ತೋರಿಸುವಲ್ಲಿ ಹೆಸರುವಾಸಿಯಾದ ಕರಣ್ ತೋರಣಿ ಅವರು ಭದ್ರ ಸಂಜಲಿ ಸೀರೆಯೊಂದಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

ಆದರೆ ಈ ಸೀರೆಯನ್ನು ತಯಾರು ಮಾಡಲು ಸುಮಾರು 3400 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು ಎನ್ನಲಾಗಿದೆ. 16ನೇ ಶತಮಾನದ ಹೈದರಾಬಾದ್‌ನ ಚೌ ಮೊಹಲ್ಲಾ ಅರಮನೆಯಿಂದ ಇದು ಸ್ಫೂರ್ತಿ ಪಡೆದಿದೆ.

Continue Reading
Advertisement
NEET UG 2024
ದೇಶ10 mins ago

NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

OPS News
ಕರ್ನಾಟಕ10 mins ago

OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅರ್ಹರಿಗೆ ಒಪಿಎಸ್‌, ಪ್ರಸ್ತಾವನೆ ಸಲ್ಲಿಕೆಗೆ ಆದೇಶ

ಕ್ರೀಡೆ19 mins ago

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

First Night Video
Latest23 mins ago

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

Ragging case in Bengaluru
ಬೆಂಗಳೂರು27 mins ago

Ragging Case : ಬೆಂಗಳೂರಲ್ಲಿ ನಿಲ್ಲದ ವ್ಹೀಲಿಂಗ್‌ ಆ್ಯಂಡ್‌ ರ‍್ಯಾಗಿಂಗ್‌ ಹಾವಳಿ; ಮಹಿಳೆ ಹಿಂದೆ ಬಿದ್ದ ಪೋಲಿ ಹುಡುಗರು

Supreme Court
ಪ್ರಮುಖ ಸುದ್ದಿ28 mins ago

Sandeshkhali case : ಸಿಬಿಐ ತನಿಖೆ ವಿರುದ್ಧದ ಅರ್ಜಿ ವಜಾ; ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ

Kiccha Sudeep Call Boss To Only Two Persons
ಸ್ಯಾಂಡಲ್ ವುಡ್34 mins ago

Kiccha Sudeep: ಇಬ್ಬರಿಗೆ ಮಾತ್ರ ʻಬಾಸ್‌ʼ ಎಂದು ಕರೆಯುವೆ ಎಂದ ಕಿಚ್ಚ; ಯಾರವರು?

France Election
ಪ್ರಮುಖ ಸುದ್ದಿ55 mins ago

France Election: ಫ್ರಾನ್ಸ್ ಚುನಾವಣೆ: ಎಡ ಪಕ್ಷಗಳ ಒಕ್ಕೂಟದ ಮೇಲುಗೈ; ಅತಂತ್ರ ಫಲಿತಾಂಶ

Chennai Police commissioner
ಪ್ರಮುಖ ಸುದ್ದಿ59 mins ago

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Rohit Sharma
ಕ್ರೀಡೆ59 mins ago

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ1 hour ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು5 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ20 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ23 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ24 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌