ಬೆಂಗಳೂರು: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಇನ್‌ಸ್ಟಾಗ್ರಾಮ್ ಲೈವ್ ಸೆಶನ್‌ವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಮೊದಲ ಸಂಚಿಕೆ ಕಾಫಿ ವಿತ್ ಕರಣ್ ಸೀಸನ್ 8 ಟೀಕಿಸಿದ ಟ್ರೋಲಿಗರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಚಿಕೆಯಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅತಿಥಿಯಾಗಿ ಆಗಮಿಸಿದ್ದರು. ಅಷ್ಟೇ ಅಲ್ಲದೇ ಅವರ ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರು.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಂಚಿಕೆಯ ಸುತ್ತ ನಡೆದ ಎಲ್ಲಾ ಚರ್ಚೆಗಳ ಬಗ್ಗೆ ತನಗೆ ತಿಳಿದಿದೆ ಎಂದು ಕರಣ್ ಬಹಿರಂಗಪಡಿಸಿದರು. “ನಿಮಗೆ ಏನು ಮಾಡಬೇಕು ಅನಿಸಿತೋ ಅದನ್ನು ಮಾಡಿ. ಯಾರೂ ಇದನ್ನು ಗಮನಿಸುತ್ತಿಲ್ಲ. ಟ್ರೋಲ್ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ” ಎಂದು ಸಲಹೆ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ಬಂದ ನಂತರ ಮುಂಬರುವ ಸಂಚಿಕೆಗಳಲ್ಲಿ ಬದಲಾವಣೆಗಳನ್ನು ತರುತ್ತೇನೆ ಎಂತಲೂ ಹೇಳಿಕೊಂಡರು.
ಕಾಫಿ ವಿತ್ ಕರಣ್’ ಶೋನಲ್ಲಿ ವಿವಾದಗಳು ಸೃಷ್ಟಿ ಆಗಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಸಾಕಷ್ಟು ಕಾಂಟ್ರವರ್ಸಿಗಳು ಆಗಿದ್ದವು. ಹಾಗೇ ಈ ಸೀಸನ್‌ನಲ್ಲಿಯೂ ದೀಪಿಕಾ ಮೇಲೆ ರಣವೀರ್ ಸಿಟ್ಟಾಗಿದ್ದರು.
ದೀಪಿಕಾ ಅವರು ತಮ್ಮ ಡೇಟಿಂಗ್ ಕುರಿತಾಗಿ ರಣವೀರ್ ಮುಂದೆಯೇ ಶೋನಲ್ಲಿ ಮಾತನಾಡಿದ್ದರು. ಅದು ರಣವೀರ್ ಕೋಪಕ್ಕೆ ಕಾರಣವಾಗಿತ್ತು. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ದರು. ಇದಕ್ಕೆ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರುವುದಕ್ಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.
ಇದನ್ನೂ ಓದಿ: Deepika Padukone: ಇಟಲಿಯಲ್ಲಿ ‘ಫೈಟರ್’ ಸಿನಿಮಾ ಶೂಟಿಂಗ್ ಜೋರು; ದೀಪಿಕಾ ಪಡುಕೋಣೆ ಫೋಟೊ ವೈರಲ್!
ಇಷ್ಟೇ ಅಲ್ಲದೇ, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆʼ ಎಂದರು. ಇದನ್ನು ಕೇಳಿ ರಣವೀರ್ ಕಿಡಿಕಿಡಿಯಾದರು. ಪತ್ನಿಗೆ ಬುದ್ಧಿ ಕಲಿಸಲು ಪ್ರಶ್ನೆಯೊಂದಕ್ಕೆ ನಾನು ಮೂರು ಜನರನ್ನು ಭೇಟಿಯಾಗಿ ಬರುತ್ತಿದ್ದೆ ಎಂದರು. ಆಗ ದೀಪಿಕಾ ಯಾರು ಅವರು ಎಂದು ಅಚ್ಚರಿಯಿಂದ ಕೇಳಿದಾಗ, ರಣವೀರ್, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ? ನನ್ನನ್ನೇ ಪ್ರಶ್ನೆ ಮಾಡ್ತಿಯಾ ಎಂದರು. ತಾವು ಹೇಳಿದ್ದು ನೆನಪೇ ಇಲ್ಲ ಎಂದರು ಪ್ರಿಯಾಂಕಾ. ಆಗ ರಣವೀರ್ ನನಗೆ ಚೆನ್ನಾಗಿ ನೆನಪಿದೆ ಎಂದು ಕಿಡಿಕಿಡಿಯಾಗುತ್ತಲೇ ಹೇಳಿದ್ದರು.