Deepika Padukone: ಇಟಲಿಯಲ್ಲಿ 'ಫೈಟರ್‌' ಸಿನಿಮಾ ಶೂಟಿಂಗ್‌ ಜೋರು; ದೀಪಿಕಾ ಪಡುಕೋಣೆ ಫೋಟೊ ವೈರಲ್‌! - Vistara News

ಬಾಲಿವುಡ್

Deepika Padukone: ಇಟಲಿಯಲ್ಲಿ ‘ಫೈಟರ್‌’ ಸಿನಿಮಾ ಶೂಟಿಂಗ್‌ ಜೋರು; ದೀಪಿಕಾ ಪಡುಕೋಣೆ ಫೋಟೊ ವೈರಲ್‌!

Deepika Padukone: ಇತ್ತೀಚೆಗೆ ಶಾರುಖ್ ಖಾನ್ ಅವರ ಪಠಾಣ್‌ ಸಿನಿಮಾವನ್ನು ನಿರ್ದೇಶಿಸಿದ ಸಿದ್ಧಾರ್ಥ್ ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

VISTARANEWS.COM


on

Deepika Padukone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೀಪಿಕಾ ಪಡುಕೋಣೆ (Deepika Padukone) ಅವರು ಹೃತಿಕ್ ರೋಷನ್ (Hrithik Roshan) ಜತೆ ಶೀಘ್ರದಲ್ಲೇ ʻಫೈಟರ್‌ʼ ಸಿನಿಮಾದಲ್ಲಿ (Fighter Movie) ತೆರೆ ಹಂಚಿಕೊಳ್ಳಲಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ, ನಟಿ ಚಿತ್ರದ ಶೂಟಿಂಗ್‌ಗೆಂದು ಇಟಲಿಯಲಿದ್ದಾರೆ. ಇದೀಗ ಫೋಟೊ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ಚಿತ್ರತಂಡ ಇಟಲಿಯಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಇತ್ತೀಚೆಗೆ ಶಾರುಖ್ ಖಾನ್ ಅವರ ಪಠಾಣ್‌ ಸಿನಿಮಾವನ್ನು ನಿರ್ದೇಶಿಸಿದ ಸಿದ್ಧಾರ್ಥ್ ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ವರದಿಗಳ ಪ್ರಕಾರ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್‌ ಸಿನಿಮಾದ 15 ದಿನಗಳ ಕಾಲ ಶೂಟಂಗ್‌ನಲ್ಲಿದ್ದಾರೆ. ವೈರಲ್ ಆದ ಫೋಟೊದಲ್ಲಿ, ಇಟಲಿಯ ಫಿ ಬೀಚ್‌ನಲ್ಲಿ ದೀಪಿಕಾ ಸಿಬ್ಬಂದಿಯೊಬ್ಬರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ದೀಪಿಕಾ ಕಪ್ಪು ಬಟ್ಟೆ ಧರಿಸಿದ್ದಾರೆ. ಇಟಲಿಯ ಫೈಟರ್‌ ಸೆಟ್‌ನಲ್ಲಿ ದೀಪಿಕಾ ಪಡುಕೋಣೆ” ಎಂದು ಕ್ಯಾಪ್ಷನ್‌ ನೀಡಲಾಗಿದೆ. ಫೈಟರ್‌ 2024ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದೆ. ಅನಿಲ್ ಕಪೂರ್, ಅಕ್ಷಯ್ ಒಬೆರಾಯ್ ಮತ್ತು ಕರಣ್ ಸಿಂಗ್ ಗ್ರೋವರ್ ಸೇರಿದಂತೆ ಇತರ ತಾರೆಯರು ಇದ್ದಾರೆ.

ಕೆಆರ್‌ಕೆ ಟ್ವೀಟ್‌ನಲ್ಲಿ ಈ ಸಿನಿಮಾಗೆ ಹೃತಿಕ್‌ ರೋಷನ್‌ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ. ಸಿದ್ಧಾರ್ಥ್ ಆನಂದ್‌ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ಕೆಆರ್‌ಕೆ ಹೇಳಿಕೊಂಡಿದ್ದಾರೆ. ಉಳಿದ ಸೆಲೆಬ್ರಿಟಿಗಳು 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಂಭಾವನೆ ಮೊತ್ತವೇ 160 ಕೋಟಿ ರೂ. ತಲುಪಲಿದೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ. 350 ಕೋಟಿ ರೂ. ಬಜೆಟ್‌ ಈಗಾಗಲೆ ಮೀರಿದೆ.

ಹಲವರು ಇಷ್ಟು ಬಜೆಟ್‌ ಸಿನಿಮಾ ಅಲ್ಲ ಎಂದು ಕಾಮೆಂಟ್‌ ಮಾಡಿದ್ದರೂ, ಇದು ಭಾರತದಲ್ಲಿಯೇ ಅತಿ ದೊಡ್ಡ ಆ್ಯಕ್ಷನ್ ಸಿನಿಮಾ ಆಗಿರಲಿದೆ ಎಂದು ವರದಿಯಾಗಿದೆ. ಅನಿಲ್ ಕಪೂರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

ಇದನ್ನೂ ಓದಿ: Deepika Padukone : ದೀಪಿಕಾ ಬಿಕಿನಿ ಫೋಟೊ ನೋಡಿ ಪತಿ ರಣವೀರ್‌ ಹೀಗೆನ್ನಬೇಕಾ!

ಈ ಸಿನಿಮಾಗಾಗಿ ಹೃತಿಕ್‌ ಭರ್ಜರಿ ವರ್ಕೌಟ್‌ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ಹೃತಿಕ್ ರೋಷನ್‌ ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಫೋಟೊ ನೋಡಿ ಅವರ ಅಭಿಮಾನಿಗಳು ಸೇರಿದಂತೆ ಹಲವು ಬಾಲಿವುಡ್‌ ತಾರೆಯರು ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕ್ಲೀನ್ ಶೇವ್ ಲುಕ್‌ನಲ್ಲಿ ನಟ ಕಾಣಿಸಿಕೊಂಡಿದ್ದರು.

ದೀಪಿಕಾ ಕೊನೆಯ ಬಾರಿಗೆ ಶಾರುಖ್ ಖಾನ್ ಎದುರು ಬ್ಲಾಕ್ಬಸ್ಟರ್ ಹಿಟ್ ಚಿತ್ರ ಪಠಾಣ್‌ನಲ್ಲಿ ಹಾಗೂ ಜವಾನ್‌ನಲ್ಲಿ ಕಾಣಿಸಿಕೊಂಡರು.ಇದರ ಜತೆಗೆ ದೀಪಿಕಾ ಅವರು ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 AD ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ತೆಲುಗು ನಟ ಪ್ರಭಾಸ್‌ ಕೂಡ ನಟಿಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Dhadak 2: ‘ಧಡಕ್ 2’ ಸಿನಿಮಾ ಅನೌನ್ಸ್‌ ಮಾಡಿದ ಕರಣ್‌ ಜೋಹರ್: ʻಅನಿಮಲ್‌ʼ ನಟಿ ನಾಯಕಿ!

Dhadak 2:ಕರಣ್‌ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ನಿರ್ದೇಶಿಸಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

VISTARANEWS.COM


on

Karan Johar announces Dhadak 2
Koo

ಬೆಂಗಳೂರು:  ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar ) ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕರಣ್ ಜೋಹರ್ ತಮ್ಮ ಹೊಸ ಚಿತ್ರಕ್ಕೆ ‘ಧಡಕ್ 2’ (Dhadak 2) ಎಂದು ಹೆಸರಿಟ್ಟಿದ್ದಾರೆ. ಕರಣ್‌ ಜೋಹರ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ʻಅನಿಮಲ್‌ʼ ಸಿನಿಮಾ ಖ್ಯಾತಿಯ ತೃಪ್ತಿ ಡಿಮ್ರಿ ನಟಿಸಲಿದ್ದಾರೆ. ಶಾಜಿಯಾ ಇಕ್ಬಾಲ್ ನಿರ್ದೇಶಿಸಲಿದ್ದಾರೆ.

ʻಗಲ್ಲಿ ಬಾಯ್’ ಖ್ಯಾತಿಯ ಸಿದ್ಧಾಂತ್​ ಚತುರ್ವೇದಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ‘ಧಡಕ್​ 2’ ಸಿನಿಮಾದಲ್ಲಿ ಜಾತಿಯ ಕುರಿತಾದ ಕಹಾನಿ ಇರಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.ಕರಣ್​ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ‘ಧಡಕ್​ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಕರಣ್ ಜೋಹರ್ “ಒಂದು ಕಾಲದಲ್ಲಿ ಒಬ್ಬನಿದ್ದ ರಾಜ, ಒಬ್ಬಳಿದ್ದಳು ರಾಣಿ. ಆದರೆ ಅವರಿಬ್ಬರದ್ದೂ ಬೇರೆ ಜಾತಿ. ಕಥೆ ಮುಗಿಯಿತುʼʼಎಂದು ವಿಡಿಯೊ ಜತೆ ಕ್ಯಾಪ್ಞನ್‌ ಶೇರ್‌ ಮಾಡಿಕೊಂಡಿದ್ದಾರೆ. ಧಡಕ್ 2 ಚಿತ್ರಮಂದಿರಗಳಲ್ಲಿ 2024ರ ನವೆಂಬರ್‌ 22ರಂದು ಬಿಡುಗಡೆಯಾಗುತ್ತಿದೆ.

ಜೀ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್ ಮತ್ತು ಕ್ಲೌಡ್ 9 ಪಿಕ್ಚರ್ಸ್ ನಿರ್ಮಿಸಿರುವ ‘ಧಡಕ್ 2’ ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2018ರಲ್ಲಿ ಕರಣ್​ ಜೋಹರ್​ ನಿರ್ಮಾಣ ಮಾಡಿದ್ದ ‘ಧಡಕ್​’ ಸಿನಿಮಾದಲ್ಲಿ ಕೂಡ ಜಾತಿಗೆ ಸಂಬಂಧಿಸಿದ ಕಥೆ ಇತ್ತು. ಆ ಸಿನಿಮಾ ಮೂಲಕ ನಟಿ ಜಾನ್ವಿ ಕಪೂರ್​ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದರು. ಅದು ಮರಾಠಿಯ ‘ಸೈರಾಟ್​’ ಸಿನಿಮಾದ ರಿಮೇಕ್​ ಆಗಿತ್ತು.

ಇದನ್ನೂ ಓದಿ: Sahara Movie Trailer: ಕ್ರಿಕೆಟ್ ಆಧಾರಿತ `ಸಹಾರಾ’ ಸಿನಿಮಾ ಟ್ರೈಲರ್‌ ಔಟ್‌ ಮಾಡಿದ RCB ಮಾಜಿ ಆಟಗಾರ

ಕರಣ್‌ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ನಿರ್ದೇಶಿಸಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Continue Reading

ಬಾಲಿವುಡ್

Munawar Faruqui: ಮತ್ತೊಂದು ಮದುವೆಯಾದರಾ ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ?

Munawar Faruqui: ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ತಮ್ಮ ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

VISTARANEWS.COM


on

Munawar Faruqui gets married for second timeʼ Munawar Faruqui gets married for second timeʼ
Koo

ಬೆಂಗಳೂರು: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ (Munawar Faruqui)  ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮೆಹಜಬೀನ್ ಕೋಟ್ವಾಲಾ (Mehzabeen Coatwala) ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮುನಾವರ್ ಮದುವೆಯಲ್ಲಿ ಅವರ ಆತ್ಮೀಯರು ಮಾತ್ರ ಹಾಜರಿದ್ದರು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಮುಂಬೈನ ಐಟಿಸಿ ಗ್ರ್ಯಾಂಡ್ ಮರಾಠಾದಲ್ಲಿ ಆರತಕ್ಷತೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮುನಾವರ್ ಅವರ ಸ್ನೇಹಿತ-ನಟ ಹಿನಾ ಖಾನ್ ಈ ಸಮಾರಂಭಕ್ಕೆ ಆಹ್ವಾನಿತರಾದವರಲ್ಲಿ ಒಬ್ಬರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಿನಾ ಈ ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಮುನಾವರ್ ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು.

ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಆಸ್ಪತ್ರೆಗೆ ದಾಖಲು

ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

ಏ. 10ರ ಮಧ್ಯರಾತ್ರಿ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಮೇಲೆ ರೆಸ್ಟೋರೆಂಟ್ ಮಾಲೀಕರು ಮೊಟ್ಟೆ ಎಸೆದಿದ್ದರು. ಆರೋಪಿಗಳು ಮುನಾವರ್ ಫಾರೂಕಿ ಅವರನ್ನು ಮಿನಾರಾ ಮಸೀದಿ ಪ್ರದೇಶದ ತಮ್ಮ ರೆಸ್ಟೋರೆಂಟ್‌ ಇಫ್ತಾರ್‌ಗೆ ಆಹ್ವಾನಿಸಿದ್ದರು. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ತಿರದ ಮತ್ತೊಂದು ಉಪಾಹಾರ ಗೃಹಕ್ಕೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡು ಮುನಾವರ್ ಫಾರೂಕಿ ಮೇಲೆ ಮೇಲೆ ಮೊಟ್ಟೆಗಳನ್ನು ಎಸೆದಿರುವುದಾಗಿ ವರದಿಯಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯ ವಿರುದ್ಧ ಪೈದೋನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.

Continue Reading

ಸಿನಿಮಾ

Anant Ambani: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಪ್ಲ್ಯಾನಿಂಗ್‌ ಹೇಗಿದೆ? ಸಖತ್‌ ಕ್ಯೂರಿಯಸ್‌ ಆಗಿರಲಿದೆ ರಾಧಿಕಾ ಉಡುಪು!

Anant Ambani: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ,ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ – ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

VISTARANEWS.COM


on

Anant Ambani things to know from celebrity guests to space theme bash
Koo

ಬೆಂಗಳೂರು: ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಇಟಲಿಯಲ್ಲಿ ಆಯೋಜಿಸಿದ್ದಾರೆ.  ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಅಂಬಾನಿ ಕುಟುಂಬದ ಇತರ ಗಣ್ಯ ವ್ಯಕ್ತಿಗಳು ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆಗೆ ತೆರಳುತ್ತಿದ್ದಾರೆ. 2024ರ ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಆಚರಣೆಗಳಂತೆಯೇ ಇದು ಕೂಡ ಅದ್ಧೂರಿಯಾಗಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ,ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ – ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಆಚರಣೆ ಎಲ್ಲಿ ಪ್ರಾರಂಭವಾಗುತ್ತದೆ? ಹೇಗೆ ಇರಲಿದೆ?

ವರದಿಯ ಪ್ರಕಾರ, ಮೇ 28 ಮತ್ತು 30ರ ನಡುವೆ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು)  800 ಅತಿಥಿಗಳಿಗಾಗಿ  ಪಾರ್ಟಿ ಆಯೋಜಿಸಲಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ. 

ಮೇ 30 ರಂದು, ಅತಿಥಿಗಳು ಬಂದಿಳಿಯುತ್ತಾರೆ. ನಂತರ ಔತಣಕೂಟ ಮತ್ತು ಪಾರ್ಟಿಯು 1 ಗಂಟೆಗೆ ಪ್ರಾರಂಭವಾಗುತ್ತದೆ. ಮೇ 31 ರಂದು ಬೆಳಗ್ಗೆ ಕ್ರೂಸ್‌ನಲ್ಲಿ ಅತಿಥಿಗಳು ಇಳಿಯುತ್ತಾರೆ. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಮುಂತಾದ ಗಣ್ಯ ಸೆಲೆಬ್ರಿಟಿಗಳು ಇರಲಿದ್ದಾರೆ. ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಕುಟುಂಬದೊಂದಿಗೆ ಆಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ ರಾಧಿಕಾ ಮರ್ಚಂಟ್‌ ಡ್ರೆಸ್‌!

ರಾಧಿಕಾ ಮರ್ಚಂಟ್‌ ಅಂದವಾದ ಕಸ್ಟಮ್-ನಿರ್ಮಿತ ಗ್ರೇಸ್ ಲಿಂಗ್ ಕೌಚರ್ ( Grace Ling Couture piece) ಪೀಸ್ ಧರಿಸುತ್ತಾರೆ ಎನ್ನಲಾಗಿದೆ. ಈ ಉಡುಪು 3D ವಿನ್ಯಾಸದಲ್ಲಿ ಇರಲಿದೆಯಂತೆ. ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ ಎನ್ನಲಾಗಿದೆ.

ಜಾಮ್‌ನಗರದಲ್ಲಿ ನಡೆದ ಆಚರಣೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸುಮಾರು 1,200 ಅತಿಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Continue Reading

ಬಾಲಿವುಡ್

Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Anant Ambani Radhika: ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಆಯೋಜಿಸಿದ್ದಾರೆ. ಹೀಗಾಗಿ ಆಲಿಯಾ ದಂಪತಿ ಇಟಲಿಗೆ ಹೊರಡಿದ್ದಾರೆ ಎಂದು ವರದಿಯಾಗಿದೆ. 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ.

VISTARANEWS.COM


on

Ranbir Kapoor and Alia Bhatt flew to Italy
Koo

ಬೆಂಗಳೂರು: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಗಳು ರಾಹಾ ಕಪೂರ್ ಜತೆ ಭಾನುವಾರ ರಾತ್ರಿ (ಮೇ.26) ಮುಂಬೈನಿಂದ ಇಟಲಿಗೆ ಹಾರಿದ್ದಾರೆ. ಮುಂಬೈನ ಕಲಿನಾ ವಿಮಾನ ನಿಲ್ದಾಣದಿಂದ (Ranbir Kapoor and Alia Bhatt flew to Italy) ಕುಟುಂಬ ಹೊರಡುತ್ತಿರುವ ಹಲವು ಫೋಟೊ ಹಾಗೂ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಆಯೋಜಿಸಿದ್ದಾರೆ. ಹೀಗಾಗಿ ಆಲಿಯಾ ದಂಪತಿ ಇಟಲಿಗೆ ಹೊರಡಿದ್ದಾರೆ ಎಂದು ವರದಿಯಾಗಿದೆ.

800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ರಣಬೀರ್‌ ಮಗಳನ್ನು ಎತ್ತಿಕೊಂಡಿದ್ದಾರೆ. ಪ್ರಯಾಣಕ್ಕಾಗಿ, ಆಲಿಯಾ ಬೂದು ಬಣ್ಣದ ಹೂಡಿ ಮತ್ತು ಪ್ಯಾಂಟ್ ಧರಿಸಿದ್ದರು. ರಣಬೀರ್ ಬಿಳಿ ಟೀ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಹಾ ಕಪೂರ್ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಅಂಬಾನಿ ಕುಟುಂಬ ಆಯೋಜಿಸಿದ್ದು, ಈ ವಿವಾಹಪೂರ್ವ ಆಚರಣೆಯಲ್ಲಿ ಕುಟುಂಬ ಭಾಗಿಯಾಗಲಿದೆ.

ಇದನ್ನೂ ಓದಿ: Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇರಲಿದ್ದಾರಂತೆ.ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Continue Reading
Advertisement
Prajwal Revanna Case
ಕರ್ನಾಟಕ21 mins ago

Prajwal Revanna Case: ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

Narendra Modi
ದೇಶ45 mins ago

Narendra Modi: ರಾಹುಲ್‌ ಗಾಂಧಿ, ಕೇಜ್ರಿವಾಲ್‌ಗೆ ಪಾಕ್‌ ಬೆಂಬಲ; ತನಿಖೆಯಾಗಲಿ ಎಂದ ಮೋದಿ

INDIA Bloc
ದೇಶ1 hour ago

INDIA Bloc: ಜೂನ್‌ 1ರಂದು ‘ಇಂಡಿಯಾ’ ಸಭೆಗೆ ಮಮತಾ ಬ್ಯಾನರ್ಜಿ ಗೈರು; ಆದ್ಯತೆ ಬೇರೆ ಎಂದ ದೀದಿ

Bomb Threat
ದೇಶ1 hour ago

Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Suspicious Death
ಕರ್ನಾಟಕ1 hour ago

Suspicious Death: ಕಾಂಗ್ರೆಸ್ ಮುಖಂಡನ ಸಾವಿಗೆ ಕೊನೆಗೂ ಸಿಕ್ತು ಟ್ವಿಸ್ಟ್; ನಿಗೂಢ ಸಾವನ್ನು ಭೇದಿಸಿದ ಖಾಕಿ

MLC North East Graduate Constituency Non Party Candidate Nara Pratap Reddy election campaign in Vijayanagara District
ರಾಜಕೀಯ2 hours ago

MLC Election: ಕ್ಷೇತ್ರದೆಲ್ಲೆಡೆ ಪದವೀಧರ ಮತದಾರರಿಂದ ಉತ್ತಮ ಸ್ಪಂದನೆ: ನಾರಾ ಪ್ರತಾಪ್‌ ರೆಡ್ಡಿ

Python spotted in Chikkasandra village of Shira taluk
ಕರ್ನಾಟಕ2 hours ago

Snake Rescue: ಶಿರಾದಲ್ಲಿ ಹೆಬ್ಬಾವು ರಕ್ಷಿಸಿದ ಮಾಜಿ ಸೈನಿಕ

Fortis Hospital doctors team performed complex surgery for three different diseases simultaneously
ಕರ್ನಾಟಕ2 hours ago

Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

New Financial Rules
ವಾಣಿಜ್ಯ2 hours ago

New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

Balkar Singh
ದೇಶ2 hours ago

Balkar Singh: ಕೆಲಸ ಕೇಳಿಕೊಂಡು ಬಂದ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಆಪ್‌ ಸಚಿವ; ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ4 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌