Site icon Vistara News

Kareena Kapoor: ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾದ ಕರೀನಾ ಕಪೂರ್

Kareena Kapoor appointed Unicef India National Ambassador

ಬೆಂಗಳೂರು: ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ (Kareena Kapoor) ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ (Unicef India’s National Ambassador) ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್‌ ಜತೆ ನಟು ಹೊಂದಿ, ಅದರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ಭಾಗಿಯಾಗುತ್ತಿದ್ದರು. ಇದೀಗ ನಟಿ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾಗಿ ಟಿಪ್ಪಣಿಯನ್ನು ಬರೆದಿದ್ದಾರೆ. ಗೌರವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಭಾಷಣದ ವೇಳೆ ಕರೀನಾ ತಮ್ಮ ಹೊಸ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಾ ಭಾವುಕರಾದರು.

ಕರೀನಾ ಪೋಸ್ಟ್‌ನಲ್ಲಿ ʻʻನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ಕರೀನಾ ಕಪೂರ್ ಕೊನೆಯದಾಗಿ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Kareena Kapoor: ಸೈಫ್‌ ಅಲಿಖಾನ್ ರನ್ನು ಮದುವೆಯಾಗಬೇಡಿ ಎಂದು ಜನ ಕರೀನಾಗೆ ಹೇಳಿದ್ದು ಯಾಕೆ?

ಬಾಲಿವುಡ್‌ ಖ್ಯಾತ ನಟಿ ಕರೀನಾ ಕಪೂರ್‌ (Kareena Kapoor) ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ ಎಂದು ಫ್ಯಾನ್ಸ್‌ ಸಂತದಲ್ಲಿ ಇದ್ದಿದ್ದರು. ಆದರೀಗ ವರದಿಯ ಪ್ರಕಾರ ಕರೀನಾ ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಚಿತ್ರತಂಡ ಇನ್ನೊಬ್ಬ ನಟಿಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

ಕಳೆದ ತಿಂಗಳು ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್‌, ಯೂರೋಪ್ ಸೇರಿದಂತೆ ಹಲವೆಡೆ ʼಟಾಕ್ಸಿಕ್‌ʼ ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಇದರಿಂದ ಕನ್ಫರ್ಮ್ ಆಗಿದೆ.

Exit mobile version