ನವ ವಸಂತಕ್ಕೆ ಕಾಲಿಡುತ್ತಿರುವ ಬಾಲಿವುಡ್‌ ಬೇಬೊ ಕರೀನಾ ಕಪೂರ್ ಖಾನ್‌‌ - Vistara News

ಬಾಲಿವುಡ್

ನವ ವಸಂತಕ್ಕೆ ಕಾಲಿಡುತ್ತಿರುವ ಬಾಲಿವುಡ್‌ ಬೇಬೊ ಕರೀನಾ ಕಪೂರ್ ಖಾನ್‌‌

ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ಖಾನ್‌ 42ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮ.

VISTARANEWS.COM


on

ಕರೀನಾ ಕಪೂರ್‌ ಖಾನ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕರೀನಾ ಕಪೂರ್‌ ಖಾನ್‌

1980ರ ಸೆಪ್ಟೆಂಬರ್‌ 21ರಂದು ಮಹಾರಾಷ್ಟ್ರದಲ್ಲಿ ಜನನ. 90ರ ದಶಕದ ಪ್ರಸಿದ್ದ ನಟ ರಣಧೀರ್‌ ರಾಜ್‌ ಕಪೂರ್‌‌ ಅವರ ಮಗಳು.

ಕರೀನಾ ಕಪೂರ್‌ ಖಾನ್‌

2000ದ Refugee ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ. ಈ ಚಿತ್ರಕ್ಕಾಗಿ ಇಂಟರ್‌ನ್ಯಾಷನಲ್‌ ಇಂಡಿಯನ್‌ ಫಿಲ್ಮ್‌ ಅಕಾಡೆಮಿ ಅವಾರ್ಡ್ಸ್‌ ಕಡೆಯಿಂದ ಸ್ಟಾರ್‌ ಡೆಬ್ಯೂ‌ ಆಫ್‌ ಇಯರ್‌ ಪ್ರಶಸ್ತಿ ಸಂದಿದೆ.

ಕರೀನಾ ಕಪೂರ್‌ ಖಾನ್‌

2007ರ Jab We Met ಚಿತ್ರದ ಗೀತ್ ಧಿಲ್ಲೋನ್ ಪಾತ್ರಕ್ಕಾಗಿ ಬೆಸ್ಟ್‌ ಆ್ಯಕ್ಟರ್‌ ಅವಾರ್ಡ್‌ ದೊರೆತಿದೆ.

ಕರೀನಾ ಕಪೂರ್‌ ಖಾನ್‌

ಅಶೋಕ, ಚುಪ್‌ ಚುಪ್‌ ಕೆ, 3 ಈಡಿಯೆಟ್ಸ್‌, ಗೋಲ್ಮಾಲ್‌ ರಿಟರ್ನ್ಸ್, ಗೋಲ್ಮಾಲ್‌ 3, ಹೀರೋಯಿನ್‌ ಇವರ ಜನಪ್ರಿಯ ಚಲನಚಿತ್ರಗಳು.

ಕರೀನಾ ಕಪೂರ್‌ ಖಾನ್‌

2012ರ ಡಿಸೆಂಬರ್‌ 16ರಂದು ಬಾಲಿವುಡ್‌ ಪ್ರಸಿದ್ದ ನಟ ಸೈಫ್‌ ಅಲಿ ಖಾನ್‌ ಜತೆ ವಿವಾಹವಾದರು. ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಕರೀನಾ ಕಪೂರ್‌ ಖಾನ್‌

2019ರ ಡ್ಯಾನ್ಸ್‌‌ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು.

ಕರೀನಾ ಕಪೂರ್‌ ಖಾನ್‌

ಇತ್ತೀಚೆಗೆ ತೆರೆ ಕಂಡ ಚಲನಚಿತ್ರ ಲಾಲ್‌ ಸಿಂಗ್‌ ಛಡ್ಡಾ.

ಇದನ್ನೂ ಓದಿ| ಈ ಶುಭದಿನ ರಿಯಲ್‌ ಸ್ಟಾರ್‌ ಉಪೇಂದ್ರ ಜನುಮದಿನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Amitabh Bachchan: ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸಿಕೊಂಡು ಬರುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಈ ಮುಂಚೆ ಮಾಹಿತಿ ಹಂಚಿಕೊಂಡಿದ್ದರು. ಜತೆಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು (Master Deenanath Mangeshkar Puraskar) ಪಡೆದರು.

VISTARANEWS.COM


on

Amitabh Bachchan, AR Rahman honoured with Deenanath Mangeshkar award
Koo

ಮುಂಬೈ: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಏಪ್ರಿಲ್ 24ರಂದು ಮುಂಬೈನ ವಿಲೇ ಪಾರ್ಲೆ ಪ್ರದೇಶದಲ್ಲಿ ʻಲತಾ ದೀನನಾಥ್ ಮಂಗೇಶ್ಕರ್ʼ ಪುರಸ್ಕಾರ (Lata Deenanath Mangeshkar award) ನೀಡಿ ಗೌರವಿಸಲಾಯಿತು. ಜತೆಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು (Master Deenanath Mangeshkar Puraskar) ಪಡೆದರು. ಏಪ್ರಿಲ್ 24 ರಂದು ಮುಂಬೈನಲ್ಲಿ ಮಂಗೇಶ್ಕರ್ ಕುಟುಂಬದ ಸದಸ್ಯರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಮಿತಾಭ್‌ ಬಚ್ಚನ್ ಅವರಿಗೆ ಗಾಯಕಿ ಉಷಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಮಾಡಬೇಕಿದ್ದ ಆಶಾ ಭೋಂಸ್ಲೆ ಅವರು ಅಸ್ವಸ್ಥರಾಗಿರುವ ಕಾರಣ ಪ್ರಶಸ್ತಿಯನ್ನು ನೀಡಲಾಗಲಿಲ್ಲ.

ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸಿಕೊಂಡು ಬರುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಈ ಮುಂಚೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Amitabh Bachchan: 30 ಅಡಿ ಎತ್ತರದ ಬಂಡೆಯಿಂದ ಜಿಗಿದ ಅಮಿತಾಭ್‌: ನಿಜವಾದ ‘ಆ್ಯಕ್ಷನ್ ಹೀರೊʼ ನೀವೆ ಎಂದ ಫ್ಯಾನ್ಸ್‌!

ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಅಮಿತಾಭ್‌ ಬಚ್ಚನ್‌ ಮಾತನಾಡಿ, “ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಪ್ರಶಸ್ತಿಗೆ ನಾನು ಅರ್ಹನೆಂದು ಯಾವುತ್ತೂ ಅಂದುಕೊಂಡಿರಲಿಲ್ಲ. ಹೃದಯನಾಥ್ ಜಿ ಅವರು ನಾನು ಇಲ್ಲಿಗೆ ಬರಲು ಸಾಕಷ್ಟು ಪ್ರಯತ್ನಿಸಿದರು. ಹೃದಯನಾಥ್ ಜೀ, ನಾನು ಕೊನೆಯ ಬಾರಿಗೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಈ ಹಿಂದೆ ನೀವು ಕರೆದಾಗ ನಾನು ಅಸ್ವಸ್ಥನಾಗಿದ್ದೆʼʼಎಂದರು .

ಅಮಿತಾಭ್ ಬಚ್ಚನ್ ತಮ್ಮ ಭಾಷಣದಲ್ಲಿ, ಅವರ ತಂದೆ, ಪ್ರಸಿದ್ಧ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರು ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಪ್ರೀತಿಸುತ್ತಿದ್ದರು ಎಂದರು. ಮಾತ್ರವಲ್ಲ ಲತಾ ಮಂಗೇಶ್ಕರ್ ಧ್ವನಿ ಅತ್ಯಂತ ಮಾಧುರ್ಯ ಹಾಗೂ ಮಧುವಾಗಿತ್ತು ಎಂದು ಹೇಳಿದರು.

ಎಆರ್ ರೆಹಮಾನ್ ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರಶಸ್ತಿಯ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. “ಇಂದು ʻಲತಾ ದೀನನಾಥ್ ಮಂಗೇಶ್ಕರ್ʼ ಪ್ರಶಸ್ತಿಯನ್ನು ಪಡೆಯಲು ಗೌರವವಾಗಿದೆ. ನಾನು ಮಂಗೇಶ್ಕರ್ ಕುಟುಂಬದ ಪರಂಪರೆಯನ್ನು ಮತ್ತು ಅವರ ಕಲೆಯ ಸಮರ್ಪಣೆಯನ್ನು ಆರಾಧಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ನಟರಾದ ರಣದೀಪ್ ಹೂಡಾ, ಅಶೋಕ್ ಸರಾಫ್, ಹಿನ್ನೆಲೆ ಗಾಯಕ ರೂಪಕುಮಾರ್ ರಾಥೋಡ್ ಮತ್ತು ನಟಿ ಪದ್ಮಿನಿ ಕೊಲ್ಹಾಪುರೆ ಅವರನ್ನು ಸನ್ಮಾನಿಸಲಾಯಿತು.

ಬಹು ಅಂಗಾಂಗ ವೈಫಲ್ಯದಿಂದ 2022ರ ಫೆಬ್ರವರಿ 6ರಂದು ನಿಧನರಾದ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಮಂಗೇಶ್ಕರ್ ಕುಟುಂಬ ಮತ್ತು ಟ್ರಸ್ಟ್ ಈ ಪ್ರಶಸ್ತಿಯನ್ನು ನೀಡುತ್ತ ಬರುತ್ತಿದೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ ಹಾಗೂ ಖ್ಯಾತ ಲೇಖಕಿ ಮಂಜಿರಿ ಫಡ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದೆ ವೇಳೆ ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು.

Continue Reading

ಸಿನಿಮಾ

Vicky Kaushal: ಛತ್ರಪತಿ ಸಂಭಾಜಿ ಮಹಾರಾಜ ಲುಕ್‌ನಲ್ಲಿ ವಿಕ್ಕಿ ಕೌಶಲ್; ಫೋಟೊ ಲೀಕ್‌!

Vicky Kaushal: ವಿಕ್ಕಿ ಕೌಶಲ್ ಕೂಡ ಈ ಸಿನಿಮಾಗಾಗಿ 25 ಕೆಜಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಅವರು ದೇಹದ ತೂಕ ಹೆಚ್ಚಿಸಿಕೊಳ್ಳಲು ಬೇರೆ ಡಯಟ್ ಫಾಲೋ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ಅವರು ಛತ್ರಪತಿ ಸಾಂಬಾಜಿ ಮಹರಾಜ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

VISTARANEWS.COM


on

Vicky Kaushal transforms into Chhatrapati Sambhaji Maharaj
Koo

ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ತಮ್ಮ ಮುಂದಿನ ಚಿತ್ರ `ಛಾವಾ’ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ವಿಕ್ಕಿ ಕೌಶಲ್ ಅವರ ಛತ್ರಪತಿ ಸಂಭಾಜಿ ಮಹಾರಾಜ ಲುಕ್ (leaked pics from sets of Chhava) ಲೀಕ್ ಆಗಿದೆ. ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ʻಛಾವಾʼ ಸಿನಿಮಾದ ಎರಡನೇ ಶೆಡ್ಯೂಲ್‌ ಫೋಟೊಗಳು ಎಂದು ವರದಿಯಾಗಿದೆ. ಲೀಕ್ ಆದ ಫೋಟೊದಲ್ಲಿ ವಿಕ್ಕಿ ಉದ್ದನೆಯ ಗಡ್ಡವನ್ನು ಬಿಟ್ಟಿರುವುದು ಕಾಣಬಹುದು. ಬೀಜ್ ಸ್ಲೀವ್‌ಲೆಸ್ ಜಾಕೆಟ್, ತಿಳಿ ಕಂದು ಬಣ್ಣದ ಧೋತಿ ಮತ್ತು ಸಾಂಪ್ರದಾಯಿಕ ಪರಿಕರಗಳನ್ನು ಹಾಕಿಕೊಂಡಿದ್ದಾರೆ. ವಿಕ್ಕಿ ಈ ಹೊಸ ಅವತಾರ ಕಂಡು ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.

ಇದನ್ನೂ ಓದಿ: Vicky Kaushal: ರಶ್ಮಿಕಾ ಜತೆ ರೊಮ್ಯಾನ್ಸ್‌ ಮಾಡಲು 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ವಿಕ್ಕಿ ಕೌಶಲ್!

ವಿಕ್ಕಿ ಕೌಶಲ್ ಕೂಡ ಈ ಸಿನಿಮಾಗಾಗಿ 25 ಕೆಜಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಅವರು ದೇಹದ ತೂಕ ಹೆಚ್ಚಿಸಿಕೊಳ್ಳಲು ಬೇರೆ ಡಯಟ್ ಫಾಲೋ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ಅವರು ಛತ್ರಪತಿ ಸಾಂಬಾಜಿ ಮಹರಾಜ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಶ್ಮಿಕಾ ಈಗಾಗಲೇ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಧ್ವನಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಕತ್ತಿ ಕಾಳಗ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಲು ನಾಲ್ಕು ತಿಂಗಳ ಕಾಲ ತರಬೇತಿಯನ್ನು ವಿಕ್ಕಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರಾಜೆಕ್ಟ್‌ ಅನ್ನು ದೊಡ್ಡದಾಗಿ ಮಾಡಲು ತಾಂತ್ರಿಕವಾಗಿಯೂ ಪಳಗಿದವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ʻಛಾವಾʼ ಸಿನಿಮಾ ಈ ಪ್ರೊಡಕ್ಷನ್ ಹೌಸ್‌ನ ಮೊದಲ ಐತಿಹಾಸಿಕ ಯೋಜನೆಯಾಗಿದೆ. ಈ ಯೋಜನೆ ವಿಕ್ಕಿ ಮತ್ತು ರಶ್ಮಿಕಾ ಅವರ ಮೊದಲ ಸಹಯೋಗವಾಗಿದೆ. ಈ ಹಿಂದೆ ಒಳಉಡುಪುಗಳ ಜಾಹೀರಾತಿಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು.

Continue Reading

ಬಾಲಿವುಡ್

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

Karan Johar: ಕರಣ್ ಜೋಹರ್ ಅವರು ಚಲನಚಿತ್ರ ನಿರ್ಮಾಪಕರಾದ ಯಶ್ ಜೋಹರ್ ಮತ್ತು ಹಿರೂ ಜೋಹರ್ ದಂಪತಿ ಪುತ್ರ. ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ʻಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹೆನಾ’, ‘ಮೈ ನೇಮ್ ಇಸ್ ಖಾನ್’, ‘ಸ್ಟೂಡೆಂಟ್ ಆಫ್ ದಿ ಇಯರ್’ ಹೀಗೆ ಅನೇಕ ಹಿಟ್‌ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

VISTARANEWS.COM


on

Karan Johar receives Director of the Year award from Vice President of India
Koo

ಬೆಂಗಳೂರು: ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ​​(AIMA)ನ ಒಂಬತ್ತನೇ ರಾಷ್ಟ್ರೀಯ ನಾಯಕತ್ವ ಸಮ್ಮೇಳನದಲ್ಲಿ ( National Leadership Conclave) ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಅವರಿಗೆ ವರ್ಷದ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ( ‘Rocky Aur Rani Kii Prem Kahaani’.) ಚಿತ್ರಕ್ಕಾಗಿ ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕರಣ್ ಜೋಹರ್ ಅವರಿಗೆ ಪ್ರಶಸ್ತಿಯನ್ನು ನೀಡಿದರು.

ಎಐಎಂಎ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಣ್ ದೆಹಲಿಗೆ ಬಂದಿದ್ದರು. ಪ್ರಶಸ್ತಿ ಸ್ವೀಕರಿಸದ ಬಳಿಕ ಕರಣ್ ತಮ್ಮ ಜೀವನದ ಎರಡು ಆಧಾರ ಸ್ತಂಭಗಳಾದ ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕರಣ್ ಮಾತನಾಡಿ “ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಅವರನ್ನು ಭೇಟಿಯಾಗಿದ್ದು ನನ್ನ ಅದೃಷ್ಟ. ನಾನು ಇಂದು ಇಲ್ಲಿಗೆ ಬಂದು ಕುಳಿತುಕೊಳ್ಳಲು ಕಾರಣ ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್‌ ಎಂಬ ಎರಡು ಆಧಾರ ಸ್ತಂಭಗಳು. ಇವರಿಬ್ಬರು ನನಗೆ ರಕ್ತಸಂಬಂಧಿಗಳೂ ಅಲ್ಲದೇ ಇದ್ದರೂ ನನ್ನನ್ನು ಬಲವಾಗಿ ನಂಬಿದ್ದರು. ಇಂದು ಇವರಿಬ್ಬರ ಸಪೋರ್ಟ್‌ ಮತ್ತು ನನ್ನ ಹಾರ್ಡ್‌ವರ್ಕ್‌ನಿಂದಾಗಿ ಇಲ್ಲಿಯವರೆಗೆ ಬಂದಿರುವೆ. ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದರು.

ಇದನ್ನೂ ಓದಿ: Karan Johar: 28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಕರಣ್ ಜೋಹರ್ ನಿರೂಪಕ!

ಕರಣ್ ಜೋಹರ್ ಅವರು ಚಲನಚಿತ್ರ ನಿರ್ಮಾಪಕರಾದ ಯಶ್ ಜೋಹರ್ ಮತ್ತು ಹಿರೂ ಜೋಹರ್ ದಂಪತಿ ಪುತ್ರ. ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ʻಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹೆನಾ’, ‘ಮೈ ನೇಮ್ ಇಸ್ ಖಾನ್’, ‘ಸ್ಟೂಡೆಂಟ್ ಆಫ್ ದಿ ಇಯರ್’ ಹೀಗೆ ಅನೇಕ ಹಿಟ್‌ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಮುಂಬರುವ ಸಿನಿಮಾ ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಮೇ 31 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

Continue Reading

ಬಾಲಿವುಡ್

OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

OM Puri: ಸ್ಟಾರ್ ಆಗುವುದು ಸುಲಭವಲ್ಲ. ಇಂದಿನ ಎಷ್ಟೋ ಸ್ಟಾರ್ ಗಳು ಒಂದು ಕಾಲದಲ್ಲಿ ತುಂಬಾ ಕಷ್ಟ ಪಟ್ಟಿದ್ದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಇವರಲ್ಲಿ ಓಂ ಪುರಿ ಕೂಡ ಒಬ್ಬರು. ಸ್ಟಾರ್ ಆಗುವ ಮೊದಲು ಅವರ ಬದುಕಿನ ಕಡುಕಷ್ಟದ ದಿನಗಳ ಹಿನ್ನೋಟ ಇಲ್ಲಿದೆ.

VISTARANEWS.COM


on

By

OM Puri
Koo

ಎಷ್ಟೇ ದೊಡ್ಡ ಮನೆತನದಿಂದ ಬಂದಿರಲಿ ಚಿತ್ರರಂಗದಲ್ಲಿ (film industry) ತನ್ನ ಸ್ವಂತ ಪರಿಶ್ರಮವಿಲ್ಲದೆ ಸ್ಟಾರ್ (star) ಆಗಲು ಸಾಧ್ಯವೇ ಇಲ್ಲ. ಇವತ್ತಿನ ಹಲವಾರು ಸೂಪರ್ ಸ್ಟಾರ್ ಗಳು (super star) ಒಂದು ಕಾಲದಲ್ಲಿ ಬೀದಿ ಬದಿಯಲ್ಲಿ ಮಲಗಿದ್ದರು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಬಾಲಿವುಡ್ ನ (bollywood) ಶಾರುಖ್ ಖಾನ್ (Shah Rukh Khan) , ಅಮಿತಾಬ್ ಬಚ್ಚನ್ (Amitabh Bachchan) ಕೂಡ ಒಂದು ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ಸಹಿಸಿಯೇ ಮೇಲಕ್ಕೆ ಏರಿದವರು. ಹೀಗೆಯೇ ಕಷ್ಟಪಟ್ಟು ಮನೆ ಮಾತಾಗಿರುವವರಲ್ಲಿ ಬಾಲಿವುಡ್ ನಲ್ಲಿ ವಿವಿಧ ಪಾತ್ರಗಳಿಂದ ಪ್ರಸಿದ್ದಿ ಪಡೆದ ನಟ ಓಂ ಪುರಿ (OM Puri) ಕೂಡ ಒಬ್ಬರು.

ಜನನ ದಾಖಲೆಯೇ ಇಲ್ಲ

ಹರಿಯಾಣದ ಅಂಬಾಲದಲ್ಲಿ ಜನಿಸಿದ್ದ ಓಂ ಪುರಿ ಅವರ ತಂದೆ ಟೆಕ್ ಚಂದ್ ಪುರಿ ಭಾರತೀಯ ಸೇನೆಯಲ್ಲಿದ್ದರು ಮತ್ತು ರೈಲ್ವೇಯಲ್ಲಿಯೂ ಕೆಲಸ ಮಾಡಿದ್ದರು. ಆದರೂ ಓಂ ಪುರಿ ಅವರು ಯಾವುದೇ ಜನನ ಪ್ರಮಾಣಪತ್ರವನ್ನು ಹೊಂದಿಲ್ಲ. ಹೀಗಾಗಿ ಅವರ ಜನ್ಮ ದಿನಾಂಕದ ಬಗ್ಗೆ ಅವರ ಕುಟುಂಬಕ್ಕೆ ಖಚಿತವಾಗಿ ತಿಳಿದಿಲ್ಲ.

ದಸರಾ ಆರಂಭವಾದ ಎರಡು ದಿನಗಳ ಅನಂತರ ತಾನು ಜನಿಸಿರುವುದಾಗಿ ತಾಯಿ ಹೇಳುತ್ತಿದ್ದರು ಎನ್ನುತ್ತಾರೆ ಓಂ ಪುರಿ.

ಇದನ್ನೂ ಓದಿ: Riteish Deshmukh: ರಾಮಮಂದಿರಕ್ಕೆ ಭೇಟಿ ಕೊಟ್ಟ ರಿತೇಶ್ ದೇಶಮುಖ್ ದಂಪತಿ!

ಸ್ವಂತ ಪರಿಶ್ರಮದಿಂದ ಖ್ಯಾತಿ

ಓಂಪುರಿ ಅವರ ಬಾಲ್ಯವು ತುಂಬಾ ಸುಲಭವಾಗಿರಲಿಲ್ಲ. ಇಂದು ನಾವು ಅವರ ಕುಟುಂಬದ ಬಗ್ಗೆ ಮಾತನಾಡುತ್ತೇವೆ. ಆದರೆ ಅವರು ಹಿಂದುಳಿದ ಹಿನ್ನೆಲೆಯಿಂದ ಬಂದು ದೊಡ್ಡ ಹೆಸರನ್ನು ತಮ್ಮ ಸ್ವಂತ ಪರಿಶ್ರಮದಿಂದಲೇ ಗಳಿಸಿದರು.
ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಉಳಿದರು.

ಓಂ ಪುರಿ ಅವರ ಎಂಟು ಸಹೋದರರು ಮತ್ತು ಸಹೋದರಿಯರಲ್ಲಿ ಕಿರಿಯರಾಗಿದ್ದರು. ದುರದೃಷ್ಟವಶಾತ್ ಅವರ ಎಲ್ಲಾ ಸಹೋದರರು ಮತ್ತು ಸಹೋದರಿಯರು ಬಾಲ್ಯದಲ್ಲೇ ಸರಿಯಾದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ನಿಧನರಾದರು. ಅವರ ಹಿರಿಯ ಸಹೋದರ ವೇದ್ ಮತ್ತು ಪುರಿ ಮಾತ್ರ ಬದುಕುಳಿದರು.


ಕಷ್ಟದ ಜೀವನ

ತಂದೆ ರೈಲ್ವೇ ಉದ್ಯೋಗಿಯಾಗಿದ್ದಾಗ ಸಿಮೆಂಟ್ ಕಳ್ಳತನದ ಆರೋಪದಿಂದ ಜೈಲು ಸೇರಿದ್ದರು. ಇದರ ಬಳಿಕ ಅವರ ಕುಟುಂಬವು ನಿರಾಶ್ರಿತವಾಯಿತು. ಈ ಸಮಯದಲ್ಲಿ ಓಂ ಪುರಿ ಅವರ ಸಹೋದರ ವೇದ್ ಪ್ರಕಾಶ್ ಪುರಿ ರೈಲು ನಿಲ್ದಾಣಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಓಂ ಪುರಿ ಅವರು ಸ್ಥಳೀಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ಬೆಂಬಲಿಸಲು ಇವರು ರೈಲು ಹಳಿಗಳಿಂದ ಕಲ್ಲಿದ್ದಲು ಸಂಗ್ರಹಿಸುತ್ತಿದ್ದರು.

ಕಷ್ಟವಿದ್ದರೂ ಓದು ಮುಂದುವರಿಸಿದರು

ಎಷ್ಟೇ ಕಷ್ಟವಿದ್ದರೂ ಪುರಿ ಅವರ ಅಧ್ಯಯನವನ್ನು ಬಿಡಲಿಲ್ಲ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿ, ಅಲ್ಲಿ ಅವರು ನಾಸಿರುದ್ದೀನ್ ಷಾ ಅವರನ್ನು ಭೇಟಿಯಾದರು. ಷಾ ಅವರು ಪುರಿ ಅವರನ್ನು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಕರೆ ತಂದರು.

ಷಾ ಅವರೊಂದಿಗೆ ಕೆಲಸ

ಓಂ ಪುರಿ ಮತ್ತು ನಾಸಿರುದ್ದೀನ್ ಷಾ ಅವರೊಂದಿಗೆ ಒಟ್ಟಿಗೆ 26 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮೊದಲ ಚಿತ್ರ 1977ರಲ್ಲಿ ಭೂಮಿಕಾ ಮತ್ತು ಅವರ ಕೊನೆಯ ಚಿತ್ರ 2009 ರಲ್ಲಿ ಬೋಲೋ ರಾಮ್.


ಹೃದಯಾಘಾತದಿಂದ ನಿಧನ

ಓಂ ಪುರಿ ಅವರು ಮುಂಬಯಿ ನ ಅಂಧೇರಿಯಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ 2017ರ ಜನವರಿ 6 ರಂದು ನಿಧನರಾದರು. ಚಾಚಿ 420 (1997), ಹೇರಾ ಫೆರಿ (2000), ಚೋರ್ ಮಚಾಯೆ ಶೋರ್ (2002), ದೀವಾನೆ ಹ್ಯೂ ಪಾಗಲ್, ಚುಪ್ ಚುಪ್ ಕೆ, ಕಿಸ್ಮೆತ್ ಕನೆಕ್ಷನ್ ಮತ್ತು ಮಲಾಮಾಲ್ ವೀಕ್ಲಿ (2006) ಮತ್ತು ಓಹ್ ಮೈ ಗಾಡ್, ಧೋಲ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದರು.

ಭಾರತೀಯ, ಬ್ರಿಟಿಷ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ನಟಿಸಿರುವ ಅವರಿಗೆ ನ್ಯಾಷನಲ್ ಫಿಲಂ ಅವಾರ್ಡ್, ಅತ್ಯತ್ತಮ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿದೆ.

Continue Reading
Advertisement
Road Accident in Chamarajanagar
ಚಾಮರಾಜನಗರ7 mins ago

Road Accident : ಶಾಸಕ ಎಆರ್ ಕೃಷ್ಣಮೂರ್ತಿ ಕಾರು ಅಪಘಾತ; ಚಲಿಸುತ್ತಿದ್ದಾಗಲೇ ಕಾರ್‌ ಟೈರ್‌ ಸ್ಫೋಟ

IPL 2024
ಕ್ರೀಡೆ22 mins ago

IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

gold rate today 34
ಚಿನ್ನದ ದರ26 mins ago

Gold Rate Today: ಬಂಗಾರದ ಮಾರುಕಟ್ಟೆಯಲ್ಲಿ ದರ ಇಂದು ತುಸು ಇಳಿಕೆ; 24Kಗೆ ಎಷ್ಟಿದೆ ನೋಡಿ

Lok sabha election 2024
Lok Sabha Election 202452 mins ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

leopard Attack
ಕ್ರೀಡೆ54 mins ago

leopard Attack: ಚಿರತೆ ದಾಳಿ; ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ತೀವ್ರ ಗಾಯ

Madhavi Latha
Lok Sabha Election 20241 hour ago

Kompella Madhavi Latha: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಆಸ್ತಿ ಎಷ್ಟಿದೆ ನೋಡಿ!

Tamannaah Bhatia Summoned in Illegal IPL Streaming Case
South Cinema1 hour ago

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Kotak Bank
ದೇಶ1 hour ago

Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Samsung India launched the 2nd edition of Samsung Innovation Campus
ದೇಶ1 hour ago

Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

physical abuse women
ಬೆಂಗಳೂರು1 hour ago

Physical abuse : ಬೆಂಗಳೂರಲ್ಲಿ ಯುವತಿ ಕಿಡ್ನ್ಯಾಪ್; ಐವರು ಕಾಮುಕರಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌