ಮುಂಬಯಿ: ಎರಡು ಪುಟ್ಟ ಮಕ್ಕಳ ತಾಯಿ ಕರೀನಾ ಕಪೂರ್ ಕೌಟುಂಬಿಕ ಬದುಕು ಮತ್ತು ಸಿನಿಮಾ ಬದುಕನ್ನು ಅತ್ಯಂತ ಬ್ಯಾಲೆನ್ಸ್‌ಡ್ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಐದು ವರ್ಷದ ತೈಮೂರ್ ಅಲಿ ಖಾನ್, ಒಂದು ವರ್ಷದ ಜೆಹ್ ಅಲಿ ಖಾನ್ ಅವರಿಬ್ಬರನ್ನು ಸಂಭಾಳಿಸುತ್ತಿದ್ದಾರೆ. ಈ ನಡುವೆ, ಅವರ ಹೊಟ್ಟೆಯಲ್ಲಿ ಮೂರನೇ ಮಗು ಬೆಳೆಯುತ್ತಾ ಇದೆ ಎನ್ನುವ ಸುದ್ದಿಯೊಂದು ಹರಡಿಕೊಂಡಿದೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ ಮಾತ್ರ ಸೂಪರ್ ಆಗಿದೆ!
ನಿಜವೆಂದರೆ, ಕರೀನಾ ಕಪೂರ್ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಆಗಸ್ಟ್ ೧೧ರಂದು ಬಿಡುಗಡೆಯಾಗಲಿರುವ ಈ ಚಿತ್ರ ಆಕೆಯ ಪಾಲಿಗೆ ಕಮ್ ಬ್ಯಾಕ್ ಸಿನಿಮಾ. ಅವರು ಆಮಿರ್ ಖಾನ್ ಗೆ ನಾಯಕಿಯಾಗಿದ್ದಾರೆ. ಮುಂದೆಯೂ ಸಿನಿಮಾ ಕೆರಿಯರ್ ಮುಂದುವರಿಸುವ ಇರಾದೆ ಹೊಂದಿರುವ ಆಕೆ ಒಂದು ವರ್ಷದ ಮಗುವನ್ನೇ ಬಿಟ್ಟು ಚಿತ್ರೀಕರಣಕ್ಕೆ ಬಂದಿದ್ದರು. ಇಂಥ ಹೊತ್ತಲ್ಲಿ ಮೂರನೇ ಮಗುನಾ?
ಕರೀನಾ ಕಪೂರ್ ಇತ್ತೀಚೆಗೆ ಸ್ವಲ್ಪ ದಪ್ಪ ಆಗಿದ್ದು ನಿಜ. ಅದನ್ನೇ ಮುಂದಿಟ್ಟುಕೊಂಡು ಕೆಲವರು ಮೂರನೇ ಮಗು ಇರಬಹುದಾ ಅಂತ ಕಲ್ಪನೆ ಮಾಡಿಕೊಂಡರು. ಈ ಬಗ್ಗೆ ಮಾಧ್ಯಮದ ಮಂದಿ ಕೇಳಿದಾಗ ಆಕೆ ಕೇಳಿದ್ರು: ಏನು ನಾನು ಮೆಷಿನಾ?
ಅವಳು ಗರ್ಭಿಣಿ ಇರಬಹುದಾ? ಇನ್ನೊಂದು ಮಗು ಇರಬಹುದಾ ಅಂತೆಲ್ಲ ಕೇಳ್ತೀರಲ್ಲಾ.. ನಾನೆಂಥ ಮೆಷಿನಾ.. ಹೀಗೆ ಮಕ್ಕಳನ್ನು ಹೆರುತ್ತಾ ಹೋಗಲು? ನೀವೇ ಎಲ್ಲ ಡಿಸೈಡ್ ಮಾಡ್ಬೇಡಿ… ಮತ್ತೆ ಗರ್ಭಿಣಿ ಆಗಬೇಕಾ ಬೇಡ್ವಾ ಅಂತ ನಂಗೂ ಯೋಚನೆ ಮಾಡ್ಲಿಕೆ ಅವಕಾಶ ಕೊಡಿ ಅಂತ ಮಾಧ್ಯಮಗಳನ್ನೇ ರೇಗಿಸಿದ್ದಾರೆ ಕರೀನಾ ಕಪೂರ್.
ಈ ರೂಮರುಗಳೆಲ್ಲ ಹುಟ್ಟಲು ಕಾರಣವಾಗಿದ್ದು ಇನ್‌ಸ್ಟಾ ಗ್ರಾಂನಲ್ಲಿ ಕರೀನಾ ಅವರೇ ಹಾಕಿದ ಒಂದು ಚಿತ್ರ. ಇದರಲ್ಲಿ ಅವರ ಹೊಟ್ಟೆ ಸ್ವಲ್ಪ ಬಂಪ್ ಕಾಣಿಸಿಕೊಂಡಿತ್ತು. ಅದನ್ನು ನೋಡಿ ʻಇರಬಹುದಾʼ ಅಂತ ಯೋಚನೆ ಮಾಡಿದ್ದರು ಜನ. ಅದಕ್ಕೆ ಉತ್ತರ ಕೊಟ್ಟಿರುವ ಕರೀನಾ ʻಅಯ್ಯೋ ದೇವ್ರೆ ಅದು ಪಾಸ್ಟಾ ಮತ್ತು ವೈನ್‌ನ ಪ್ರಭಾವರೀʼ ಅಂತ ರಾಗವೆಳೆದಿದ್ದಾರೆ. ʻʻಓ ದೇವ್ರೆ.. ಅದನ್ನೇ ನೋಡಿ ನಾನು ಗರ್ಭಿಣಿ ಅಂತ ತೀರ್ಮಾನ ಮಾಡಿದ್ರಾ? ಅದು ನಾನು ವೈನ್ ಕುಡಿದಿದ್ದು ಮತ್ತು ಪಾಸ್ಟಾ ತಿಂದಿದ್ದರ ಪ್ರಭಾವ ಇರಬಹುದು.. ನಂಗೂ ಗೊತ್ತಿಲ್ಲ. ನಾನು ನಲವತ್ತು ದಿನ ರಜೆಯಲ್ಲಿದ್ದೆ. ಈ ಟೈಮಲ್ಲಿ ಎಷ್ಟು ಪಿಜ್ಜಾ ತಿಂದಿದ್ದೇನೆ ಅಂತ ನಂಗೇ ಲೆಕ್ಕ ಇಲ್ಲ. ಅಷ್ಟೇ.. ಅದು ಬಿಟ್ಟು ಬೇರೇನೂ ಇಲ್ಲ. ನಾನು ತಿಂದಿದ್ದೇನೆ. ಈಗ ಕರಗಿಸಬೇಕು. ಇರ್ಲಿ ಬಿಡಿ.. ನಾವು ಕೂಡಾ ಮನುಷ್ಯರೇ ಅಲ್ವಾʼʼ ಅಂತ ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ ಕರೀನಾ.
ಇದನ್ನೂ ಓದಿ| ಕರೀನಾಗಿಂತ ಕರಿಷ್ಮಾಳನ್ನು ಇಷ್ಟಪಡುತ್ತಿದ್ದರಂತೆ ಅಜ್ಜ ರಾಜ್ ಕಪೂರ್