Site icon Vistara News

Katrina Kaif: ಅಮೆರಿಕದಲ್ಲಿ ಜಾಲಿ ಮೂಡ್‌ನಲ್ಲಿ ಕತ್ರಿನಾ ದಂಪತಿ; ವಿಕ್ಕಿ ಈಸ್‌ ಲಕ್ಕಿ ಎನ್ನುತ್ತಿದ್ದಾರೆ ನೆಟ್ಟಿಗರು

katrina instagram post

ವಾಷಿಂಗ್ಟನ್‌: ಬಾಲಿವುಡ್‌ನ ಮೋಸ್ಟ್‌ ಫೇವರಿಟ್‌ ನಟಿ ಕತ್ರಿನಾ ಕೈಫ್‌ (Katrina Kaif) ಸದ್ಯ ತಮ್ಮ ಪತಿ ವಿಕ್ಕಿ ಕೌಶಲ್‌ ಅವರೊಂದಿಗೆ ಅಮೆರಿಕದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪ್ರವಾಸವನ್ನು ಎಂಜಾಯ್‌ ಮಾಡುತ್ತಿರುವ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫೋಟೋ ನೋಡಿ ಫಿದಾ ಆಗಿದ್ದಾಗಿ ಹೇಳಲಾರಂಭಿಸಿದ್ದಾರೆ.

ಅಮೆರಿಕದ ವೆಸ್ಟ್‌ ವಿಲೇಜ್‌ನ ರೆಸ್ಟೋರೆಂಟ್‌ ಒಂದರಲ್ಲಿ ಇರುವ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಟೇಬಲ್‌ ಒಂದರ ಬಳಿ ಕುಳಿತುಕೊಂಡು ಕ್ಯಾಮರಾಕ್ಕೆ ಫೋಸ್‌ ಕೊಡುವ ಹಾಗೆ, ಬೇರತ್ತ ನೋಡುವ ಹಾಗೆ ಮತ್ತು ಸಾಫ್ಟ್‌ ಡ್ರಿಂಕ್‌ ಕುಡಿಯುವ ವೇಳೆ ತೆಗೆದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಬಿಳಿ ಮತ್ತು ನೀಲಿ ಬಣ್ಣದ ಆಫ್‌ ಶೋಲ್ಡರ್‌ ಡ್ರೆಸ್‌ ಅನ್ನು ನಟಿ ಇಲ್ಲಿ ತೊಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಪ್ರೀತಿಯಲ್ಲಿ ಬಿದ್ದ ಮಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ ಅಮ್ಮ! ಇದು ಲವ್ ಸೈಡ್ ಎಫೆೆಕ್ಟ್
ಕ್ಯಾಪ್ಶನ್‌ ಕೊಡದೆಯೇ ನಟಿ ಹಂಚಿಕೊಂಡಿರುವ ಈ ಫೋಟೋಗಳಿಗೆ ಎರಡು ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. “ನಾನು ನೋಡಿದ ಅತ್ಯಂತ ಸುಂದರಿ ನೀವು”, “ನಿಮ್ಮನ್ನು ಪತ್ನಿಯಾಗಿ ಪಡೆದ ವಿಕ್ಕಿ ನಿಜಕ್ಕೂ ಅದೃಷ್ಟವಂತರು”, “ವಿಕ್ಕಿ ಈಸ್‌ ಲಕ್ಕಿ”, “ಲಕ್ಕಿ ವಿಕ್ಕಿ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಪೋಸ್ಟ್‌ಗೆ ಬಂದಿವೆ.


ಕತ್ರಿನಾ ಕೈಫ್‌ ಅವರು ಸಲ್ಮಾನ್‌ ಖಾನ್‌ ಅವರ ಟೈಗರ್‌ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರ ಈ ವರ್ಷದ ದೀಪಾವಳಿಗೆ ತೆರೆ ಕಾಣಲಿದೆ. ಹಾಗೆಯೇ ನಟಿ ನಿರ್ದೇಶಕ ಫರ್ಹಾನ್‌ ಅಖ್ತರ್‌ ಅವರ ಜೀ ಲೇ ಜರಾ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್‌ ಅವರೊಂದಿಗೆ ನಟಿಸುತ್ತಿದ್ದಾರೆ. ಹಾಗೆಯೇ ನಿರ್ದೇಶಜ ಶ್ರೀರಾಮ್‌ ರಾಘವನ್‌ ಅವರ ಮೆರ್ರಿ ಕ್ರಿಸ್ಮಸ್‌ ಚಿತ್ರದಲ್ಲಿ ವಿಜಯ್‌ ಸೇತುಪತಿಯೊಂದಿಗೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್‌ ವೈರಲ್‌
ಕತ್ರಿನಾ ಅವರ ಪತಿ ವಿಕ್ಕಿ ಅವರ ಹಾಸ್ಯಭರಿತ ಚಿತ್ರ ಜರಾ ಹಟ್ಕೆ ಜರಾ ಬಚ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅದರಲ್ಲಿ ಅವರು ಸಾರಾ ಅಲಿ ಖಾನ್‌ ಅವರೊಂದಿಗೆ ನಟಿಸಿದ್ದಾರೆ. ಅದಲ್ಲದೆ ಮೇಘನಾ ಗುಲ್ಜಾರ್‌ ನಿರ್ದೇಶನದ ಸ್ಯಾಮ್‌ ಬಹದ್ದೂರ್‌ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತದ ವೀರ ಮತ್ತು ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಕಥೆಯಾಗಿದೆ. ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Exit mobile version