ವೈರಲ್ ನ್ಯೂಸ್
Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್ ವೈರಲ್
ರಸ್ತೆ ಮೇಲೆ ಪೀಡಿಸುತ್ತಿದ್ದ ಯುವಕನಿಗೆ ಅಪ್ರಾಪ್ತ ಬಾಲಕಿ ತನ್ನ ಅಕ್ಕನೊಂದಿಗೆ ಸೇರಿಕೊಂಡು ಬುದ್ಧಿ ಕಲಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಅದರ ವಿಡಿಯೊ ವೈರಲ್ (Viral Video) ಆಗಿದೆ.
ಅಹಮದಾಬಾದ್: ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ರಸ್ತೆ ಮೇಲೆ ಓಡಾಡುವಾಗ ಪುಂಡ ಪೋಕರಿಗಳು ಅವರನ್ನು ಚುಡಾಯಿಸುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಕೆಲವರು ಪ್ರೀತಿ ಪ್ರೇಮ ಎಂದು ಹೇಳಿಕೊಂಡು ಹಿಂದೆ ಬಿದ್ದುಬಿಡುತ್ತಾರೆ ಕೂಡ. ಅದೇ ರೀತಿಯಲ್ಲಿ ಅಪ್ರಾಪ್ತ ಬಾಲಕಿಯ ಹಿಂದೆ ಬಿದ್ದಿದ್ದ ಹುಡುಗನೊಬ್ಬನಿಗೆ ಆಕೆ ಮತ್ತು ಆಕೆಯ ಅಕ್ಕನೇ ಪಾಠ ಕಲಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಬ್ರಹ್ರಾಂಪುರದಲ್ಲಿ 17 ವರ್ಷದ ಬಾಲಕಿ ಗುರುವಾರ ಬೆಳಗ್ಗೆ 6.45ರ ಸಮಯಕ್ಕೆ ಸೈಕಲ್‌ನಲ್ಲಿ ಶಾಲೆಗೆ ಹೋಗುವ ಸಮಯದಲ್ಲಿ ವಿಜಯ್ ಸರ್ಕಾಟೆ ಹೆಸರಿನ ಯುವಕ ಆಕೆಯನ್ನು ತಡೆದಿದ್ದಾನೆ. ಆಕೆಯನ್ನು ಪೀಡಿಸಿ ಆಕೆಯ ಬ್ಯಾಗ್‌ನೊಳಗೆ ಗಿಫ್ಟ್ ತುರುಕಿಸಿದ್ದಾನೆ. ಬಾಲಕಿಗೆ ಮುತ್ತು ಕೊಟ್ಟು ಎಳೆದಾಡಿದ್ದಾನೆ. ಆಕೆ ಆ ದಿನ ಸಂಜೆ ಮನೆಗೆ ಬಂದು ತಾಯಿಯ ಬಳಿ ಎಲ್ಲ ವಿಚಾರ ಹೇಳಿಕೊಂಡು ಅತ್ತಿದ್ದಾಳೆ.
ಇದನ್ನೂ ಓದಿ: Viral News: ಹೆಂಡಕ್ಕಾಗಿ ಹೋರಾಟ! ಬಸ್‌ಗಳಲ್ಲಿ ಡಿಫೆನ್ಸ್ ಮದ್ಯ ಒಯ್ಯೋಕೆ ಬೇಕು ಪರ್ಮಿಶನ್; ನಾರಿಯರ ಪ್ರತಿಭಟನೆ
ಮಾರನೇ ದಿನ ಆಕೆ ಮತ್ತು ಆಕೆಯ 19 ವರ್ಷದ ಅಕ್ಕ ಒಂದು ಪ್ಲಾನ್ ಮಾಡಿದ್ದಾರೆ. ಬಾಲಕಿ ಶಾಲೆ ಮುಗಿಸಿ ಬರುವ ಸಮಯದಲ್ಲಿ ಮತ್ತೆ ಆ ಹುಡುಗ ಬಂದು ಕಾಟ ಕೊಡಲಾರಂಭಿಸಿದ್ದಾನೆ. ಆಗ ಬೇರೇನೂ ಯೋಚನೆ ಮಾಡದ ಬಾಲಕಿ ಆತನಿಗೆ ಹೊಡೆಯಲಾರಂಭಿಸಿದ್ದಾಳೆ. ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಬಾಲಕಿಯ ಅಕ್ಕನೂ ಸ್ಥಳಕ್ಕೆ ಬಂದು ಆಕೆಗೆ ಜತೆ ನಿಂತಿದ್ದಾಳೆ.
#Ahmedabad: 2 teen sisters confront a molester. They fought him off when the man tried to molest the school going girl. pic.twitter.com/yeGQCo49pK
— sanjana (she/her) (@sanjanausd08) June 24, 2023
ಯುವಕ ರಸ್ತೆ ಮೇಲೆ ಬಿದ್ದಿದ್ದರೂ ಲೆಕ್ಕಿಸದ ಯುವತಿ ಬೆಲ್ಟ್‌ನಲ್ಲಿ ಆತನಿಗೆ ಹೊಡೆದಿದ್ದಾಳೆ. ಬೂಟು ಕಾಲಿನಲ್ಲಿ ಒದ್ದಿದ್ದಾಳೆ. ಸ್ಥಳದಲ್ಲಿ ಜನ ಸೇರಿಕೊಂಡು ಏನಾಯ್ತು ಎಂದು ಕೇಳಿದಾಗ ಆತ ಕೊಟ್ಟ ಕಾಟದ ಬಗ್ಗೆ ವಿವರಿಸಿದ್ದಾಳೆ. ಅದರಿಂದಾಗಿ ಯಾರೊಬ್ಬರೂ ಯುವಕನ ಸಹಾಯಕ್ಕೆ ಹೋಗಿಲ್ಲ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಅಕ್ಕ ತಂಗಿಯ ಈ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಟ ಕೊಡುವ ಹುಡುಗರಿಗೆ ಈ ರೀತಿಯಲ್ಲಿ ಹುಡುಗಿಯರೇ ಶಿಕ್ಷೆ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.
ಪ್ರಮುಖ ಸುದ್ದಿ
Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ
Bed Bugs: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿ ತಿಗಣೆ ಕಾಟ ವಿಪರೀತವಾಗಿದ್ದು, ಈ ಕುರಿತಾದ ಫೋಟೋ, ವಿಡಿಯೋಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುತ್ತಿದ್ದಾರೆ.
ಪ್ಯಾರಿಸ್: ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ (Paris City) ತನ್ನ ಐಫೆಲ್ ಟವರ್, ಚಾಂಪ್ಸ್-ಎಲಿಸೀಸ್ ಮತ್ತು ಲೌವ್ರೆ ಮ್ಯೂಸಿಯಂ ಸೇರಿದಂತೆ ಇನ್ನ ಅನೇಕ ಐತಿಹಾಸಿಕ ಹೆಗ್ಗುರುತಗಳಿಗಾಗಿ ಪ್ರಸಿದ್ಧಿಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ಯಾರಿಸ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ತಿಗಣೆಗಳಿಂದ (Bed Bugs) ಜನರು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ, ತಿಗಣೆಗಳ ನಿರ್ಮೂಲನಕ್ಕಾಗಿ ಫ್ರಾನ್ಸ್ ಸರ್ಕಾರವು (France Government) ಸಮರವನ್ನೇ ಸಾರಿದೆ(Viral News).
ಹೈಸ್ಪೀಡ್ ರೈಲುಗಳು, ಬಸ್‌ಗಳು, ಸಿನಿಮಾ ಥಿಯೇಟರ್‌ಗಳು, ಚಾರ್ಲ್ಸ್ ಡೇ ಗೌಲ್ ವಿಮಾನ ನಿಲ್ದಾಣ ಸೇರಿದಂತೆ ನಗರದ ಬಹುತೇಕ ತಿಗಣೆ ಕಾಟದ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ಯಾರಿಸ್ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ರಾನ್ಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bed bugs seen crawling over seats on Paris trains and buses as France battles a bed bug invasion. pic.twitter.com/XnwcrQgVax
— Project TABS (@ProjectTabs) October 2, 2023
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಫ್ರಾನ್ಸ್ ಸರ್ಕಾರ ಈಗ ತಿಗಣೆ ಸಂಹಾರಕ್ಕೆ ಮುಂದಾಗಿದೆ. ಫ್ರಾನ್ಸ್ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಅವರು, ಸಾರ್ವಜನಿಕ ಸಾರಿಗೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ. ಈ ವೇಳೆ, ತಿಗಣೆಗಳ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ, ಪ್ರಯಾಣಿಕರಿಗೆ ತಿಗಣೆ ಕಾಟದಿಂದ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಫ್ರಾನ್ಸ್ ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಫ್ರಾನ್ಸ್ 24 ವರದಿ ಮಾಡಿದೆ.
ತಿಗಣೆ ಸಂವಹಾರ ಮಾಡುವುದಕ್ಕಾಗಿಯೇ ಮೀಸಲಾದ ಕಾರ್ಯಪಡೆಯನ್ನು ರಚಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕು ಎಂದು ಪ್ಯಾರಿಸ್ ಸಿಟಿ ಹಾಲ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಒತ್ತಾಯಿಸಿದೆ. ಫ್ರೆಂಚ್ ಸಾರಿಗೆ ಪೂರೈಕೆದಾರರು ಇತ್ತೀಚೆಗೆ ಈ ತಿಗಣೆಗಳು ಕಂಡು ಬಂದಿಲ್ಲ ವಾಸ್ತವದ ನಡುವೆಯೂ ಅವುಗಳ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: 163 ಇಲಿ ಹಿಡಿಯಲು 69 ಲಕ್ಷ ರೂ. ವೆಚ್ಚ ಮಾಡಿದ ರೈಲ್ವೆ ಇಲಾಖೆ! ಭ್ರಷ್ಟಾಚಾರ ಎಂದು ಕಿಡಿಕಾರಿದ ಕಾಂಗ್ರೆಸ್
ಪ್ಯಾರಿಸ್ ಮೆಟ್ರೋ ಕಾರ್ಯನಿರ್ವಹಣೆ ಮಾಡುವ ಆರ್‌ಎಟಿಪಿ, ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ನಮ್ಮ ಉಪಕರಣಗಳಲ್ಲಿ ತಿಗಣೆಗಳ ಕುರಿತಾದ ಯಾವುದೇ ಸಾಬೀತಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಸಿಎನ್ಎನ್‌ಗೆ ತಿಳಿಸಿದೆ.
ಮನೆಗಳಲ್ಲಿ ತಿಗಣೆ ಹೆಚ್ಚಾಗುವ ಸಂಭವಗಳಿವೆ. ತ್ವರಿತಗತಿಯಲ್ಲಿ ತಿಗಣೆಗಳು ಹೆಚ್ಚಾಗುತ್ತಿರುವ ಕುರಿತು ಅಗತ್ಯವಿರುವ ಎಲ್ಲ ಸಂಗತಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪ್ರಯಾಣ, ಹಂಚಿಕೊಳ್ಳುವ ವಸತಿ ವ್ಯವಸ್ಥೆ ಸೇರಿದಂತೆ ಕೆಲವು ಸಂಗತಿಗಳು ತಿಗಣೆಗಳ ಸಮಸ್ಯೆ ಕಾರಣವಾಗಿರಬಹುದು ಎಂದು ANSESನ ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಸಮಾಜ ವಿಭಾಗದ ಉಪ ನಿರ್ದೇಶಕರಾದ ಕರೀನ್ ಫಿಯೋರ್ ಅವರು ತಿಳಿಸಿದ್ದಾರೆ.
ವೈರಲ್ ನ್ಯೂಸ್
Viral News: ಹುಟ್ಟುಹಬ್ಬದಂದು ಮಗಳಿಗೆ ಕೊಳಕು ನೀರು ತುಂಬಿದ ಬಾಟಲಿ ನೀಡಿದ ತಂದೆ; ಹಿಂದಿದೆ ಅದ್ಭುತ ಪಾಠ
Viral News: ಮಹಿಳೆಯೊಬ್ಬರಿಗೆ ಅವರ ತಂದೆ ಕೊಳಕು ನೀರು ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೂ ಒಂದು ಗಿಫ್ಟಾ? ಎಂದು ಮೂಗು ಮುರಿಯಬೇಡಿ. ಇದರ ಹಿಂದಿದೆ ಬಹು ದೊಡ್ಡ ಜೀವನ ಪಾಠ, ಅದೇನು ಎನ್ನುವುದರ ವಿವರ ಇಲ್ಲಿದೆ.
ಬೆಂಗಳೂರು: ಸಾಮಾನ್ಯವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ರೀತಿ ಪಾತ್ರರಿಗೆ ಉತ್ತಮ, ದುಬಾರಿ ಉಡುಗೊರೆ ನೀಡುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಹುಟ್ಟುಹಬ್ಬದಂದು ತನ್ನ ತಂದೆಯಿಂದ ಪಡೆದುಕೊಂಡ ಗಿಫ್ಟ್ ನೋಡಿದರೆ ನಿಮ್ಮ ಹುಬ್ಬೇರುವುದು ಖಚಿತ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಂದೆಯಿಂದ ಸ್ವೀಕರಿಸಿದ ʼಅಪರೂಪʼದ ಉಡುಗೊರೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ʼʼತಂದೆ ನನ್ನ ಹುಟ್ಟುಹಬ್ಬಕ್ಕೆ ಕೊಳಚೆ ನೀರು ತುಂಬಿದ ಬಾಟಲಿಯನ್ನು ಗಿಫ್ಟ್ ಆಗಿ ನೀಡಿದ್ದಾರೆʼʼ ಎಂದಿದ್ದಾರೆ. ಜತೆಗೆ ಅವರು ಅದರ ಹಿಂದಿರುವ ಕಾರಣವನ್ನೂ ವಿವರಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
ಯಾರು ಈ ಮಹಿಳೆ?
ಪೆಟ್ರೀಷಿಯಾ ಮೌ ಎನ್ನುವ ಮಹಿಳೆಯೇ ಈ ʼಅಪರೂಪʼದ ಉಡುಗೊರೆ ಪಡೆದಾಕೆ. ʼʼಈ ವರ್ಷದ ನನ್ನ ಹುಟ್ಟುಹಬ್ಬಕ್ಕೆ ತಂದೆ ಕೊಳಚೆ ನೀರಿರುವ ಬಾಟಲಿಯನ್ನು ಗಿಫ್ಟ್ ಮಾಡಿದ್ದಾರೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಹಿಂದೆಲ್ಲ ಅವರ ತಂದೆ ಬರ್ತ್ ಡೇ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್, ಪೆಪ್ಪರ್ ಸ್ಪ್ರೇ, ಕೀ ಚೈನ್, ಆಕೆಗಾಗಿಯೇ ಬರೆದ ಪುಸ್ತಕ ಮುಂತಾದ ಅರ್ಥಪೂರ್ಣ ಗಿಫ್ಟ್ ನೀಡಿದ್ದರಂತೆ. ʼʼಈ ಬಾರಿ ತುಂಬಾ ವಿಶೇಷವಾದ ಉಡುಗೊರೆ ನೀಡುತ್ತೇನೆ. ಅದರ ಖರೀದಿಗೆ ಹಣ ಬೇಕಾಗುವುದಿಲ್ಲ. ಆದರೆ ಅತೀ ಮುಖ್ಯ ಜೀವನ ಪಾಠ ಕಲಿಸುತ್ತದೆʼ ಎಂದು ತಂದೆ ಈ ಹಿಂದೆಯೇ ಹೇಳಿದ್ದರುʼʼ ಎಂದು ಮೌ ಬರೆದುಕೊಂಡಿದ್ದಾರೆ.
For my birthday this year, my dad gifted me a dirty bottle of water. Not kidding.
— Patricia Mou (@patriciamou_) October 2, 2023
In the past he’s gifted me: a first aid kit, pepper spray, an encyclopedia, a key chain, dedicated a book he wrote to me, etc. good ol dad gifts.
He told me this years gift was extra special as… pic.twitter.com/N56AiGgErJ
ಜೀವನ ಸಂದೇಶವೇನು?
ಮುಂದೆ ಮೌ ಕೊಳಚೆ ನೀರು ಬೋಧಿಸುವ ಬಹುಮುಖ್ಯ ಜೀವನ ಪಾಠ ವಿವರಿಸುತ್ತಾರೆ. ಇದು ಓದುತ್ತಿದ್ದಂತೆ ನೀವು ಕೂಡ ಅಮೂಲ್ಯ ಉಡುಗೊರೆ ಎಂದಯ ತಲೆ ತೂಗುವುದು ಖಂಡಿತ. ಆಕೆ ಬರೆಯುತ್ತಾರೆ, ʼʼಅಲುಗಾಡಿಸಿದ ಕೊಳಚೆ ನೀರಿನ ಬಾಟಲಿಯ ನೀರು ಚಿಂತೆ, ಗೊಂದಲ, ಕೋಪದಲ್ಲಿರುವ ನಿಮ್ಮ ಮನಸ್ಥಿತಿಯನ್ನು ಹೋಲುತ್ತದೆ. ಆಗ ಪ್ರತಿಯೊಂದು ನಿಮ್ಮ ಕಣ್ಣಿಗೆ ತಪ್ಪಾಗಿಯೇ ಕಾಣಿಸುತ್ತದೆ. ಯಾವಾಗ ನೀರು ಶಾಂತವಾಗುತ್ತದೆಯೋ ಆಗ ಕೊಳಕೆಲ್ಲ ಕೆಳಗೆ ಉಳಿದು ಮೇಲೆ ಶುಭ್ರ ನೀರು ಕಾಣಿಸುತ್ತದೆ. ಆಗ ಕೊಳಕು ಬಾಟಲಿಯ 10% ಭಾಗದಲ್ಲಷ್ಟೇ ಉಳಿದಿರುತ್ತದೆ. ಅದರಂತೆ ನಮ್ಮ ಮನಸ್ಸಿನ ಗೊಂದಲವೆಲ್ಲ ತಿಳಿಯಾದಾಗ ಎಲ್ಲವೂ ಸರಿಯಾಗಿ ಗೋಚರಿಸುತ್ತದೆ. ಆದ್ದರಿಂದ ನಾವು ಸರಿಯಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕುʼʼ ಎಂದು ಮೌ ಹೇಳಿದ್ದಾರೆ.
ʼʼವಾರಾಂತ್ಯದ ಬಳಿಕ ನಾನು ಸಮುದ್ರದ ದಂಡೆಗೆ ತೆರಳಿ ಬಾಟಲಿ ನೀರನ್ನು ಸುರಿದೆ. ಅದರೊಂದಿಗೆ ನಾನು ಇನ್ನೊಂದು ಪಾಠವನ್ನೂ ಕಲಿತೆ. ನಾವು ಸಾಗರದ ಹನಿಯಲ್ಲ, ನಾವು ಒಂದು ಹನಿಯಲ್ಲಿ ಸಾಗರ’ ಎನ್ನುವುದನ್ನು ಕಂಡುಕೊಂಡೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
ಅಕ್ಟೋಬರ್ 2ರಂದು ಮಾಡಲಾದ ಈ ಪೋಸ್ಟ್ ಅನ್ನು ಈಗಾಗಲೇ ಸುಮಾರು 1.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಜತೆಗೆ 5,900 ಅಧಿಕ ಲೈಕ್ ಲಭಿಸಿದೆ. ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ʼʼಇದು ಉತ್ತಮ ಉಡುಗೊರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಜೀವನ ಪಾಠ ನಿಜಕ್ಕೂ ಅತ್ಯುತ್ತಮವಾದುದು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅದ್ಭುತ ತಂದೆʼʼ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ. “ಸರಳ ಆದರೆ ಆಳವಾದ ಜೀವನ ಪಾಠ. ಅವರು ಕಲಿಸಲು ಬಯಸಿದ ಎರಡನೇ ಜೀವನ ಪಾಠ, ಒಮ್ಮೆ ಕಳೆದು ಹೋದರೆ, ಅದು ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಐದನೆಯವರು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಜೀವನವನ್ನು ಸರಳವಾಗಿ ತಿಳಿಸಿದ ತಂದೆಯ ಪ್ರಯತ್ನಕ್ಕೆ ಭಾರಿ ಮೆಚ್ಚುಗೆಯೇ ಲಭಿಸಿದೆ.
ಕರ್ನಾಟಕ
Gold Smuggling : ವಿಮಾನದಲ್ಲಿ ಬಂಗಾರದ ಮನುಷ್ಯರು!; ಪ್ಯಾಂಟಲ್ಲೂ ಚಿನ್ನ, ಪ್ಯಾಂಟಿನೊಳಗೂ ಚಿನ್ನ, ಗಂಟಲ್ಲೂ ಚಿನ್ನ!
Gold smuggling: ಜನರು ಚಿನ್ನವನ್ನು ಕಸ್ಟಮ್ಸ್ ಕಣ್ತಪ್ಪಿಸಿ ತರಲು ಮಾಡುವ ಉಪಾಯಗಳನ್ನು ನೋಡಿದರೆ ಇನ್ನೋವೇಟಿವ್ ಪ್ರಶಸ್ತಿ ಕೊಡುವಂತಿವೆ. ಆದರೆ, ಅಧಿಕಾರಿಗಳು ಮತ್ತು ತಂತ್ರಜ್ಞಾನ ಅದಕ್ಕಿಂತಲೂ ಬುದ್ಧಿವಂತರು!
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಚಿನ್ನ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂದು ಒಂದು ಹೊಸ ಗಾದೆಯೇ ಮಾಡಬೇಕಾದೀತೇನೋ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport) ಚಿನ್ನವನ್ನು ಕಣ್ತಪ್ಪಿಸಿ ತರಲು ಜನರು ಮಾಡುವ ಹೊಸ ಹೊಸ ಉಪಾಯಗಳಿಗೆ ಇನ್ನೋವೇಟಿವ್ ಐಡಿಯಾ ಪ್ರಶಸ್ತಿ ಕೊಡಬೇಕಾದೀತೇನೋ!
ಆ ಮಟಕ್ಕೆ ಜನರು ಹುಚ್ಚುಗಟ್ಟಿಕೊಂಡು ಚಿನ್ನದ ಗಟ್ಟಿಯನ್ನು ವಿದೇಶಗಳಿಂದ ತರಲು (Gold Smuggling) ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ವಿಮಾನ ನಿಲ್ದಾಣದಲ್ಲಿ (Bangalore Airport) ಸಿಕ್ಕಿಬೀಳುತ್ತಾರೆ, ಇನ್ನು ಕೆಲವರು ಸಿಕ್ಕಿ ಹಾಕಿಕೊಳ್ಳದೆ ಬಚಾವಾಗುತ್ತಾರೆ!
ಗುದದ್ವಾರ, ಕಾಲಿನ ಮಂಡಿಯಲ್ಲಿ ಚಿನ್ನ!
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಳು ಎರಡು ದಿನದ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದಾರೆ. ದುಬೈ ಹಾಗೂ ಕೊಲೊಂಬೊದಿಂದ ಬಂದ ನಾಲ್ವರು ಪ್ರಯಾಣಿಕರ ತೀವ್ರ ತಪಾಸಣೆ ವೇಳೆ ಅವರಲ್ಲಿ ಮೂರು ಕೆಜಿ ಚಿನ್ನ ಪತ್ತೆಯಾಗಿದೆ. ಅವರು ಅದನ್ನು ಎಲ್ಲಿಟ್ಟುಕೊಂಡಿದ್ದರು ಎಂದು ತಿಳಿದರೆ ನೀವು ಮೂಗಿಗೆ ಬೆರಳಿಡುತ್ತೀರಿ! ಯಾಕೆಂದರೆ ಅವರಲ್ಲಿ ಕೆಲವರ ಬಳಿ ಚಿನ್ನ ಪತ್ತೆಯಾಗಿದ್ದು ಗುದದ್ವಾರದಲ್ಲಿ (Gold Found in anus). ಇನ್ನೊಬ್ಬ ಕಾಲಿನ ಮಂಡಿಯಲ್ಲಿ ಆಪರೇಟ್ ಮಾಡಿ ಚಿನ್ನ ಇಟ್ಟುಕೊಂಡು ಬಂದಿದ್ದ.
ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ನಾಲ್ವರು ಪ್ರಯಾಣಿಕರ ಕರಾಮತ್ತು ಬಯಲಾಗಿದ್ದು, ಒಟ್ಟು 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್‌ಗಳು ಸಿಕ್ಕಿವೆ. ನಾಲ್ವರೂ ಪ್ರಯಾಣಿಕರು ಈಗ ಪೊಲೀಸರ ವಶದಲ್ಲಿದ್ದು, ಈ ಸಾಗಾಟದ ಹಿಂದಿರುವ ಜಾಲವನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ.
ಪೇಸ್ಟ್ ಮಾಡಿ ಪ್ಯಾಂಟ್‌ನೊಳಗೆ ಹಚ್ಚಿದ್ದ!
ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ಅದೆಷ್ಟು ಪ್ಲ್ಯಾನ್ ಮಾಡಿದ್ದ ಎಂದರೆ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಅವನ ಖತರ್ನಾಕ್ ಬುದ್ಧಿ ಹೇಗೆ ವರ್ಕ್ ಮಾಡಿತ್ತು ಎಂದರೆ ಕೊಲಂಬೊದಿಂದ ಶ್ರೀಲಂಕಾ ಏರ್ಲೈನ್ಸ್ ನಲ್ಲಿ ಬಂದಿದ್ದ ಈ ಪ್ರಯಾಣಿಕ ಪೌಡರ್ ರೂಪದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆ ಮಾಚಿದ್ದ.
ಪ್ಯಾಂಟ್‌ನ ಸೊಂಟದ ಪಟ್ಟಿಯ ಒಳಗಡೆ ಒಂದು ಕಡೆ ಜೇಬಿನ ತರ ಮಾಡುತ್ತೇವಲ್ಲ. ಇವರು ಇಡೀ ಪಟ್ಟಿಯನ್ನೇ ಹಾಗೆ ಮಾಡಿದ್ದ. ಅದರಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ ಅಂಟಿಸಿದ್ದ. ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡರೆ ಅದನ್ನು ಚಿನ್ನವಾಗಿ ಮರು ರೂಪ ನೀಡುವುದು ಕಷ್ಟವೇನಲ್ಲ ಅನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡ ಆತನನ್ನು ಈಗ ಚಿನ್ನದ ಸಹಿತ ಬಂಧಿಸಲಾಗಿದೆ. ಆತನ ಪ್ಯಾಂಟ್‌ನಲ್ಲಿ ಸುಮಾರು 74 ಗ್ರಾಂ ಚಿನ್ನ ಪತ್ತೆಯಾಗಿದೆ. ಇದೀಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ದೇಶ
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
Viral Video: ನಿಜಮಾಬಾದ್ ಸೂಪರ್ ಮಾರುಕಟ್ಟೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ನಿಜಮಾಬಾದ್: ಎನ್ ಸೂಪರ್ ಮಾರುಕಟ್ಟೆಯಲ್ಲಿ (Super Market) 4 ವರ್ಷದ ಬಾಲಕಿಯೊಬ್ಬಳು (4 year old Girl) ಚಾಕೋಲೆಟ್ ಆಸೆಗಾಗಿ ಫ್ರಿಡ್ಜ್ ತೆರೆಯಲು ಹೋದಾಗ, ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ (Nizamabad) ನಡೆದಿದೆ(Viral Video).
ನವಿಪೇಟೆಯ ಮಗುವಿನ ತಂದೆ ರಾಜಶೇಖರ್ ಅವರು ತಮ್ಮ ಮಗಳು ರುಷಿತಾ (4) ಅವರೊಂದಿಗೆ ಕೆಲವು ದಿನಸಿ ಖರೀದಿಸಲು ಎನ್ ಸೂಪರ್ ಮಾರ್ಕೆಟ್‌ಗೆ ಹೋಗಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಯಾಗಿರುವಂತೆ, ಮಗುವು ಫ್ರಿಡ್ಜ್ ತೆರೆಯಲು ಪ್ರಯತ್ನಿಸುವಾಗ ವಿದ್ಯುದಾಘಾತಕ್ಕೊಳಗಾಗುವುದನ್ನು ಕಾಣಬಹುದು. ವಿಶೇಷ ಎಂದರೆ, ಇದೇ ಫ್ರಿಡ್ಜ್‌ನಿಂದ ಬಾಲಕಿಯ ತಂದೆ ಕೆಲವು ಸೆಕೆಂಡುಗಳ ಏನನ್ನೋ ತೆಗೆದುಕೊಳ್ಳುತ್ತಾರೆ. ಆದರೆ, ಮಗು ಫ್ರಿಡ್ಜ್ ಬಾಗಿಲು ತೆರೆಯುತ್ತಲೇ ಮಗು ವಿದ್ಯುತ್ ತಗುಲಿ ಸಾವಿಗೀಡಾದ ಸಂಗತಿ ಅವರಿಗೆ ಗೊತ್ತಾಗುವುದಿಲ್ಲ. ಈ ಘಟನೆಯ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಭಾರೀ ವೈರಲ್ ಆಗಿದೆ.
సూపర్ మార్కెట్లో చాక్లెట్ కోసం ఫ్రిడ్జ్ ఓపెన్ చేయబోతే షాక్ కొట్టి చిన్నారి మృతి
— Telugu Scribe (@TeluguScribe) October 2, 2023
నిజామాబాద్ – నందిపేట్లోని నవీపేటకు చెందిన రాజశేఖర్ తన కూతురు రుషిత (4)తో కలిసి N సూపర్ మార్కెట్ వెళ్ళగా ఫ్రిడ్జ్ షాక్ కొట్టి చిన్నారి రుషిత ప్రాణాలు కోల్పోయింది.
చిన్నారి చాక్లెట్ కోసం ఫ్రిడ్జ్… pic.twitter.com/XAgbB8NdoO
ಈ ಸುದ್ದಿಯನ್ನೂ ಓದಿ: Viral Video: ಅಂಪೈರ್ ತೀರ್ಪಿಗೆ ಆಕ್ರೋಶಗೊಂಡು ಕೈ ಕೈ ಮಿಲಾಯಿಸಿದ ಸೆಲೆಬ್ರಿಟಿಗಳು
ವಿಡಿಯೋದಲ್ಲಿ ಏನಿದೆ?
ಮಗುವಿನ ತಂದೆ ಸೂಪರ್ ಮಾರ್ಕೆಟ್‌ಗೆ ಅವಳೊಂದಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೆರೆಹಿಡಿದ ದೃಶ್ಯಗಳ ಎಡಭಾಗದಲ್ಲಿ ಇರಿಸಲಾದ ಫ್ರಿಡ್ಜ್‌ನಲ್ಲಿ ಏನನ್ನಾದರೂ ಹುಡುಕುವಲ್ಲಿ ತಂದೆ ನಿರತರಾಗುತ್ತಾರೆ. ಏತನ್ಮಧ್ಯೆ, ಚಿಕ್ಕ ಹುಡುಗಿ ಬಲಭಾಗದಲ್ಲಿರುವ ಫ್ರಿಡ್ಜ್ ಅನ್ನು ತೆರೆಯಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳಲ್ಲಿ, ಅವಳು ವಿದ್ಯುತ್ ಸ್ಪರ್ಶಕ್ಕೆ ಒಳಗಾಗುತ್ತಾಳೆ ಮತ್ತು ಉಪಕರಣದ ಹ್ಯಾಂಡಲ್ ಅನ್ನು ಹಿಡಿದುಕೊಂಡು ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ತನ್ನ ಮಗುವಿಗೆ ಏನಾಗುತ್ತದೆ ಎಂದು ಗೊತ್ತಾಗದ ತಂದೆ ಪಕ್ಕದಲ್ಲೇ ತನಗೆ ಬೇಕಾದ್ದನ್ನು ಹೆಕ್ಕುತ್ತಿರುತ್ತಾರೆ. ಆದರೆ, ತಾನು ತೆಗೆದುಕೊಂಡು ವಸ್ತುಗಳೊಂದಿಗೆ ಹಿಂತಿರುಗಿ ನೋಡಿದಾಗ ಮಗು ಫ್ರಿಡ್ಜ್ ಹಿಡಿಕೆಗೆ ನೇತಾಡುತ್ತಿರುವುದನ್ನು ಕಾಣುತ್ತಾರೆ. ಕೂಡಲೇ ಕೈಯಲ್ಲಿದ್ದ ಎಲ್ಲ ವಸ್ತುಗಳನ್ನು ಎಸೆದು ಮಗುವನ್ನು ಎತ್ತಿಕೊಂಡು ಓಡುತ್ತಾರೆ. ಆದರೆ, ಅಷ್ಟೊತ್ತಿಗೆ ಮಗು ಸಾವಿಗೀಡಾಗುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಪ್ರಮುಖ ಸುದ್ದಿ23 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ14 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ