Site icon Vistara News

Katrina Kaif: ʻಮೆರ‍್ರಿ ಕ್ರಿಸ್‌ಮಸ್‌ʼ ಸಿನಿಮಾ ಮತ್ತೆ ಮಂದೂಡಿಕೆ; ರಿಲೀಸ್‌ ಡೇಟ್‌ ರಿವೀಲ್‌!

Katrina-Vijay Sethupathi

ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವುದು ಸಹಜ. ಆದರೆ ಇಲ್ಲೊಂದು ಚಿತ್ರ 4 ಬಾರಿ ರಿಲೀಸ್‌ ದಿನಾಂಕವನ್ನು ಬದಲಾವಣೆ ಮಾಡಿಕೊಂಡಿದೆ. ಹೌದು, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʻಮೆರ‍್ರಿ ಕ್ರಿಸ್‌ಮಸ್‌ʼ (‘Merry Christmas’) ನಾಲ್ಕನೇ ಬಾರಿ ಬಿಡುಗಡೆ ತಾರೀಕನ್ನು ಬದಲಾವಣೆ ಮಾಡಿ ಘೋಷಣೆ ಹೊರಡಿಸಿದೆ. ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಮತ್ತು ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ (Vijay Sethupathi) ತೆರೆ ಮೇಲೆ ಒಂದಾಗುತ್ತಿರುವ ಈ ಚಿತ್ರ ಆರಂಭದಲ್ಲಿ ಡಿಸೆಂಬರ್‌ 23ರಂದು ತೆರೆಗೆ ಬರಲಿದೆ ಎನ್ನಲಾಗಿತ್ತು. ಬಳಿಕ ಡಿಸೆಂಬರ್‌ 15ಕ್ಕೆ ದಿನಾಂಕ ಬದಲಾಯಿಸಿಕೊಂಡಿತ್ತು. ಅಂದೇ ಸಿದ್ಧಾರ್ಥ್‌ ಮಲ್ಹೋತ್ರಾ ನಟನೆಯ ‌ʼಯೋಧʼ ಕೂಡ ಬಿಡುಗಡೆಯಾಗುತ್ತಿರುವುದರಿಂದ ʻಮೆರ‍್ರಿ ಕ್ರಿಸ್‌ಮಸ್‌ʼ ಅನ್ನು ಒಂದು ವಾರ ಮೊದಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಇದೀಗ 2024ರ ಜನವರಿ 12ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.

ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅವರ ಡೈನಾಮಿಕ್ ಜೋಡಿಯನ್ನು ಒಳಗೊಂಡ ಶ್ರೀರಾಮ್ ರಾಘವನ್ ನಿರ್ದೇಶನದ ‘ಮೆರ್ರಿ ಕ್ರಿಸ್ಮಸ್’ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಡಿಸೆಂಬರ್ 8 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಈಗ ಜನವರಿ 12 ರಂದು ಥಿಯೇಟರ್‌ಗೆ ಬರಲಿದೆ.

ʼಮೊದಲ ಬಾರಿ ಕತ್ರಿನಾ ಕೈಫ್‌ ಮತ್ತು ವಿಜಯ್‌ ಸೇತುಪತಿ ಒಂದಾಗುತ್ತಿದ್ದು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆದಿದೆ

ಈ ಹಿಂದೆ ʼಅಂಧಾಧುನ್‌ʼ, ʼಬದ್ಲಾಪುರ್‌ʼ ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಶ್ರೀರಾಮ್‌ ರಾಘವನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟನೆಯ ಜತೆಗೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕತ್ರಿನಾ ಕೈಫ್‌ ಮತ್ತು ಶ್ರೀರಾಮ್‌ ರಾಘವನ್‌ ಅವರ ಮೊದಲ ತಮಿಳು ಚಿತ್ರ ಇದಾಗಿರಲಿದೆ.

ಇದನ್ನೂ ಓದಿ: ‘Merry Christmas’Movie: ಕೊನೆಗೂ ʻಮೆರ‍್ರಿ ಕ್ರಿಸ್‌ಮಸ್‌ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

ಹಿಂದಿ ಚಿತ್ರದಲ್ಲಿ ಸಂಜಯ್‌ ಕಪೂರ್‌, ವಿನಯ್‌ ಪಾಠಕ್‌, ಪ್ರತಿಮಾ ಕಣ್ಣನ್‌ ಮತ್ತು ಟಿನ್ನು ಆನಂದ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್‌ ಕುಮಾರ್‌, ಷನ್ಮುಖರಾಜ, ಕೆವಿನ್‌ ಜೈ ಬಾಬು ಮತ್ತು ರಾಜೇಶ್‌ ವಿಲಿಯಮ್ಸ್‌ ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿದ್ದ ಶ್ರೀರಾಮ್‌ ರಾಘವನ್‌, ‘ʻಮೆರ‍್ರಿ ಕ್ರಿಸ್‌ಮಸ್‌ʼ ಲವ್‌ ಸ್ಟೋರಿಯನ್ನೊಳಗೊಂಡಿದೆ. ಇದು ನನ್ನ ಹಿಂದಿನ ಚಿತ್ರ ‘ಅಂಧಾಧುನ್‌’ಗಿಂತ ಭಿನ್ನವಾಗಿರಲಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ ಎಂದಿದ್ದರು. ಪೋಸ್ಟರ್‌ ನೋಡಿದ ವೀಕ್ಷಕರು ಈ ಚಿತ್ರದಲ್ಲೂ ಸ್ವಲ್ಪ ಪ್ರಮಾಣದ ಕ್ರೈಂ ಅಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇದು ಕೊನೆಯ ಭಾಗದಲ್ಲಿ ಬರಲಿದೆಯಂತೆ. ʼʼವಿಜಯ್‌ ಸೇತುಪತಿ ಇರುವುದಿಂದ ತಮಿಳಿನಲ್ಲೂ ಚಿತ್ರ ಮಾಡುವ ಕುರಿತು ಚಿಂತನೆ ನಡೆಸಿದ್ದೆವುʼʼ ಎಂದು ಶ್ರೀರಾಂ ರಾಘವನ್‌ ಹೇಳಿದ್ದಾರೆ. ಎರಡೂ ಭಾಷೆಗಳಲ್ಲಿ ನಾಯಕ-ನಾಯಕಿಯಾಗಿ ವಿಜಯ್‌ ಸೇತುಪತಿ-ಕತ್ರಿನಾ ಕೈಫ್‌ ಇರಲಿದ್ದಾರೆ.

Exit mobile version