ಬೆಂಗಳೂರು: ನಟಿ ಕೀರ್ತಿ ಸುರೇಶ್ (Keerthy Suresh) ಅವರು ವಿಜಯ್ ದಳಪತಿ ಜತೆಗಿನ ವಿವಾಹದ ಕುರಿತು ಸುದ್ದಿಯಲ್ಲಿದ್ದಾರೆ. ಹಾಗೂ ಕೇರಳದಲ್ಲಿ ರೆಸಾರ್ಟ್ ಹೊಂದಿರುವ ತನ್ನ ಶಾಲಾ ಸ್ನೇಹಿತನನ್ನು ಮದುವೆಯಾಗುವುದಾಗಿ ಕೀರ್ತಿ ಸುರೇಶ್ ಹೇಳಿಕೊಂಡಿದ್ದು,10 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅವರಿಬ್ಬರೂ ಪೋಷಕರ ಅನುಮತಿ ಪಡೆದ ನಂತರ ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಕೀರ್ತಿ ಸುರೇಶ್, ತಾಯಿ ಮೇನಕಾ (Menaka) ಮಗಳ ಮದುವೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೀರ್ತಿ ಅವರ ಮದುವೆಯ ಬಗ್ಗೆ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕೀರ್ತಿ ಸುರೇಶ್ ಅವರ ತಾಯಿಯ ಇತ್ತೀಚಿನ ಉತ್ತರವು ನಟಿಯ ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಭೈರವ, ಸರ್ಕಾರ್ ಸಿನಿಮಾಗಳಲ್ಲಿ ಜೋಡಿಯಾಗಿ ವಿಜಯ್- ಕೀರ್ತಿ ನಟಿಸಿದ್ದರು. ಹಾಗಾಗಿ ಈ ಮದುವೆ ಸುದ್ದಿ ಹಬ್ಬಿತ್ತು. ಈ ಕಡೆ ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಕೀರ್ತಿ ಜತೆ 2ನೇ ಮದುವೆ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಕೆಲವು ದಿನಗಳಿಂದ ಓಡಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ. ಇದು ಕೇವಲ ಪ್ರಚಾರಕಷ್ಟೇ. ಇದೆಲ್ಲಾ ಕೇವಲ ಗಾಳಿ ಸುದ್ದಿ ಅಷ್ಟೇ ಎಂದು ಕೀರ್ತಿ ಅವರ ತಾಯಿ ಮೇನಕಾ ಸುರೇಶ್ ಮದುವೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Rashmika Mandanna | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಕಾಂಬಿನೇಶನ್ ಸಿನಿಮಾಗೆ ನೋಟಿಸ್
ವದಂತಿ ಆಗಿದ್ಯಾಕೆ?
ಇತ್ತೀಚೆಗಷ್ಟೇ ʻವಾರಿಸು’ ಆಡಿಯೊ ಲಾಂಚ್‌ನಲ್ಲಿ ವಿಜಯ್ ಪತ್ನಿ ಗೈರಾಗಿದ್ದರು. ಬಳಿಕ ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಶಾಸ್ತ್ರದಲ್ಲಿಯೂ ಸಂಗೀತಾ ಅವರು ಕಾಣಿಸಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಇದೀಗ ಡಿವೋರ್ಸ್ ವದಂತಿ ಸತ್ಯ ಎನ್ನಲಾಗುತ್ತಿದೆ.ವಿಕಿಪೀಡಿಯಾ ಪೇಜ್‌ನಲ್ಲೂ ಇಬ್ಬರು ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎಂದು ಪ್ರಕಟವಾಗಿದೆ. 1999ರಲ್ಲಿ ನಟ ವಿಜಯ್ ಹಾಗೂ ಸಂಗೀತಾ ಪ್ರೀತಿಸಿ ಮದುವೆಯಾಗಿದ್ದರು. ಶ್ರೀಲಂಕಾ ಮೂಲದ ಸಂಗೀತಾ ಅವರು, ವಿಜಯ್ ಅವರ ಅಭಿಮಾನಿಯಾಗಿದ್ದರು. ಹೀಗಾಗಿ ಅವರನ್ನ ಭೇಟಿ ಮಾಡಲು ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು. ಅಭಿಮಾನಿಯ ಪ್ರೀತಿ ಒಪ್ಪಿಕೊಂಡ ವಿಜಯ್, ಸಂಗೀತಾ ಜತೆ ಸಪ್ತಪದಿ ತುಳಿದಿದ್ದರು.
ಕೀರ್ತಿ ಸುರೇಶ್ ತಮಿಳಿನಲ್ಲಿ ‘ಮಾಮನ್ನನ್’, ‘ಸೈರನ್’, ‘ರಘು ತಾತಾ’, ಮತ್ತು ‘ರಿವಾಲ್ವರ್ ರೀಟಾ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.