Site icon Vistara News

Keerthy Suresh: ಮಲ್ಟಿ ಕಲರ್‌ ಉಡುಗೆಯಲ್ಲಿ ಕೀರ್ತಿ ಸುರೇಶ್‌ ಹೊಸ ಫೋಟೊಶೂಟ್‌!

Keerthy Suresh new Photoshoot

ನಟಿ ಕೀರ್ತಿ ಸುರೇಶ್‌ ಹಾಗೂ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಚಿತ್ರ ʻದಸರಾʼ ಬಿಡುಗಡೆಗಾಗಿ ಜನ ಕಾಯುತ್ತಿದ್ದಾರೆ.

ಮುಂಬರುವ ಚಿತ್ರಗಳಲ್ಲಿ ʻರಿವಾಲ್ವರ್ ರೀಟಾʼ(Revolver Rita) ಕೂಡ ಒಂದಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದೀಗ ಹೊಸ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ ನಟಿ. ಮಲ್ಟಿ ಕಲರ್‌ ಸೂಟ್‌ನಲ್ಲಿ ಮಿಂಚುತ್ತಿದ್ದಾರೆ.

ಕೀರ್ತಿ ಸುರೇಶ್ ಕೊನೆಯದಾಗಿ ಮಲಯಾಳಂ ಚಿತ್ರ ʻವಾಶಿʼಯಲ್ಲಿ ಕಾಣಿಸಿಕೊಂಡಿದ್ದರು.

ರಿವಾಲ್ವರ್ ರೀಟಾ ಚಿತ್ರವು ಮಹಿಳಾ ಕೇಂದ್ರಿತ ಚಿತ್ರವಾಗಿದೆ. ಸದ್ಯದಲ್ಲೇ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ.

ಈಗಾಗಲೇ ಚಿತ್ರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ. ಚಿತ್ರವನ್ನು ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ಜಂಟಿಯಾಗಿ ನಿರ್ಮಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು ‘ರಘುತಾತಾ’. ಇದರಲ್ಲಿಯೂ ಪ್ರಧಾನ ಪಾತ್ರವನ್ನು ನಟಿ ನಿರ್ವಹಿಸುತ್ತಿದ್ದಾರೆ.

ನಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Exit mobile version