Site icon Vistara News

Keerthy Suresh: ಕೀರ್ತಿ ಸುರೇಶ್ ಅಭಿನಯದ ರಿವಾಲ್ವರ್ ರೀಟಾ ಹೊಸ ಅಪ್‌ಡೇಟ್‌ ಏನು?

Keerthy Suresh Revolver Rita to go on floors soon

ಬೆಂಗಳೂರು: ಕಾಲಿವುಡ್‌ ನಟಿ ಕೀರ್ತಿ ಸುರೇಶ್ (Keerthy Suresh) ಅವರ ಮುಂಬರುವ ಚಿತ್ರಗಳಲ್ಲಿ ʻರಿವಾಲ್ವರ್ ರೀಟಾʼ(Revolver Rita) ಕೂಡ ಒಂದಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ತಂಡದ ಮೂಲಗಳ ಪ್ರಕಾರ, ರಿವಾಲ್ವರ್ ರೀಟಾದ ಪ್ರಿ-ಪ್ರೊಡಕ್ಷನ್ ಕೆಲಸವು ಮುಕ್ತಾಯದ ಹಂತದಲ್ಲಿದೆ ಎನ್ನಲಾಗಿದೆ. ಮುಂದಿನ ವಾರಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಚಿತ್ರವನ್ನು ಕೆ ಚಂದ್ರು ನಿರ್ದೇಶಿಸಿದ್ದಾರೆ ಮತ್ತು ಜಗದೀಶ್ ಪಳನಿಸಾಮಿ ಮತ್ತು ಸುಧನ್ ಸುಂದ್ರಂ ನಿರ್ಮಿಸಿದ್ದಾರೆ.

ಕೀರ್ತಿ ಸುರೇಶ್ ಕೊನೆಯದಾಗಿ ಮಲಯಾಳಂ ಚಿತ್ರ ʻವಾಶಿʼಯಲ್ಲಿ ಕಾಣಿಸಿಕೊಂಡಿದ್ದರು. ನ್ಯಾಚುರಲ್ ಸ್ಟಾರ್ ನಾನಿ ಅವರ ಮುಂಬರುವ ಚಿತ್ರ ʻದಸರಾʼ ಬಿಡುಗಡೆಗಾಗಿ ಅವರು ಕಾಯುತ್ತಿದ್ದಾರೆ. ರಿವಾಲ್ವರ್ ರೀಟಾ ಚಿತ್ರವು ಮಹಿಳಾ ಕೇಂದ್ರಿತ ಚಿತ್ರವಾಗಿದೆ. ಮೂಲಗಳ ಪ್ರಕಾರ, ಮುಂದಿನ ವಾರಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಸದ್ಯದಲ್ಲೇ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ.

ಇದನ್ನೂ ಓದಿ: Keerthy Suresh: ಮದುವೆ ವದಂತಿಗಳ ಬಗ್ಗೆ ಕೊನೆಗೂ ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್‌ ತಾಯಿ!

ರಿವಾಲ್ವರ್ ರೀಟಾ

ರಿವಾಲ್ವರ್ ರೀಟಾ ಚಿತ್ರವನ್ನು ಕೆ ಚಂದ್ರು ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕ ದಿನೇಶ್ ಕೃಷ್ಣನ್, ಸಂಕಲನಕಾರ ಪ್ರವೀಣ್ ಕೆಎಲ್, ಸಾಹಸ ನಿರ್ದೇಶಕ ದಿಲೀಪ್ ಸುಬ್ಬರಾಯನ್ ಮತ್ತು ಕಲಾ ನಿರ್ದೇಶಕ ವಿನೋತ್ ರಾಜ್‌ಕುಮಾರ್ ತಾಂತ್ರಿಕ ತಂಡದ ಭಾಗವಾಗಿದ್ದಾರೆ. ಈಗಾಗಲೇ ಚಿತ್ರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ. ಚಿತ್ರವನ್ನು ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ಜಂಟಿಯಾಗಿ ನಿರ್ಮಿಸಿದ್ದಾರೆ.

Exit mobile version