Site icon Vistara News

Keerthy Suresh: ‘ದಸರಾ’ ತಂಡಕ್ಕೆ 70 ಲಕ್ಷ ರೂ. ಮೌಲ್ಯದ 130 ಚಿನ್ನದ ನಾಣ್ಯ ಗಿಫ್ಟ್‌ ಮಾಡಿದ್ರಾ ಕೀರ್ತಿ ಸುರೇಶ್‌?

Keerthy Suresh gifts 130 gold coins to Dasara crew

ಬೆಂಗಳೂರು: ನಟಿ ಕೀರ್ತಿ ಸುರೇಶ್‌ (Keerthy Suresh) ದಸರಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದೀಗ ಹೊಸ ಸುದ್ದಿಯೊಂದು ನಟಿಯ ಬಗ್ಗೆ ವೈರಲ್‌ ಆಗುತ್ತಿದೆ. ಕೀರ್ತಿ ಸುರೇಶ್ ಸುಮಾರು 130 ಚಿನ್ನದ ನಾಣ್ಯಗಳನ್ನು ಗಿಫ್ಟ್ ನೀಡಿದ್ದಾರೆ. 70 ಲಕ್ಷ ರೂ. ಬೆಲೆ ಬಾಳುವ ಗೋಲ್ಡ್ ಕಾಯಿನ್‌ಗಳನ್ನು ದಸರಾ ಸಿನಿಮಾ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಚಾಲಕ, ಲೈಟ್ ಬಾಯ್ ಸೇರಿದಂತೆ ಎಲ್ಲರಿಗೂ ಗೋಲ್ಡ್ ಕಾಯಿನ್ ಕೊಟ್ಟಿದ್ದಾರೆ ಎನ್ನುವ ವದಂತಿಗಳು ಹಬ್ಬಿವೆ.

ಸೌತ್ ಸ್ಟಾರ್ ಕೀರ್ತಿ ಸುರೇಶ್ ಸದ್ಯ ದಸರಾ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ತೆಲುಗು ಸ್ಟಾರ್ ನಾನಿ ಜತೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ದಸರಾ ಇದೇ ಮಾರ್ಚ್ 30ರಂದು ರಿಲೀಸ್ ಆಗುತ್ತಿದೆ. ಕೀರ್ತಿ ಸಂಪೂರ್ಣ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಸರಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ನಾನಿ ಸದ್ಯ ಈ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕೀರ್ತಿ ಹೆಚ್ಚಾಗಿ ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿಲ್ಲ.

ನಾನಿ ಮಾಸ್ ಅವತಾರ, ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಮನದಲ್ಲಿ ಕುತೂಹಲ ಹುಟ್ಟುಹಾಕಿದೆ. ನ್ಯಾಚುರಲ್ ಸ್ಟಾರ್ ರಗಡ್ ಲುಕ್, ಹಾವ ಭಾವ ಎಲ್ಲವೂ ಗಮನ ಸೆಳೆದಿದ್ದು, ನಾನಿ ಅಭಿಮಾನಿಗಳು ಕೂಡ ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ತೆರೆ ಮೇಲೆ ತರುತ್ತಿದೆ ದಸರಾ ಸಿನಿಮಾ.

ಇದನ್ನೂ ಓದಿ: Keerthy Suresh: ಮಲ್ಟಿ ಕಲರ್‌ ಉಡುಗೆಯಲ್ಲಿ ಕೀರ್ತಿ ಸುರೇಶ್‌ ಹೊಸ ಫೋಟೊಶೂಟ್‌!

ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್‌ನಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.

Exit mobile version