ಕೇರಳ : 52ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಘೋಷಿಸಿದ್ದಾರೆ. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಜೋಜು ಜಾರ್ಜ್ ಮತ್ತು ಬಿಜು ಮೆನೋನ್ ಹಂಚಿಕೊಳ್ಳುತ್ತಿದ್ದಾರೆ.
ಜೋಜು ಜಾರ್ಜ್ ಅವರು ‘ಮಧುರಂ’, ʼತುರಮುಖಂ’, ‘ಫ್ರೀಡಂ ಮಿಡ್‌ನೈಟ್’ ಮತ್ತು ‘ನಯಟ್ಟು’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿ ಪಡೆದರು. ಸಾನು ವರ್ಗೀಸ್ ಅವರ ನಿರ್ದೇಶನದ ‘ಆರ್ಕ್ಕರಿಯಂ’ ಚಿತ್ರದಲ್ಲಿ ಹಿರಿಯ ವ್ಯಕ್ತಿಯ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ನಟ ಬಿಜು ಮೆನೋನ್ ಅವರು ಜೋಜು ಅವರೊಂದಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ರೂಪದರ್ಶಿ
ತೀರ್ಪುಗಾರರಾದ ಅಧ್ಯಕ್ಷ ಸಯೀದ್ ಅಖ್ತರ್ ಮಿರ್ಜಾ ಅವರು ಅತ್ಯುತ್ತಮ ನಟನನ್ನು ಆಯ್ಕೆ ಮಾಡುವುದು ‘ಅತ್ಯಂತ ಕಷ್ಟಕರವಾಗಿದೆ’ ಎಂದು ಹಂಚಿಕೊಂಡಿದ್ದಾರೆ.
ತೀರ್ಪುಗಾರರು ಬಿಜು ಮೆನನ್ ಅವರ ‘ಆರ್ಕ್ಕರಿಯಂ’ನಲ್ಲಿನ ಅಭಿನಯವನ್ನು ‘ಅತ್ಯಂತ ಸೂಕ್ಷ್ಮ’ ವಾಗಿದೆ ಎಂದು ಹೇಳಿದ್ದಾರೆ.
ಈ ವರ್ಷ ವಿವಿಧ ವಿಭಾಗಗಳ ಅಡಿಯಲ್ಲಿ ಸುಮಾರು 142 ಚಲನಚಿತ್ರಗಳನ್ನು ಪ್ರಶಸ್ತಿಗಾಗಿ ಸಲ್ಲಿಸಲಾಗಿದೆ. ಥಿಯಟ್ರಿಕಲ್ ಬಿಡುಗಡೆಗಳು ಮತ್ತು ಡೈರೆಕ್ಟ್ ಡಿಜಿಟಲ್‌ನೊಂದಿಗೆ ಸಿನಿಮಾ ಬಿಡುಗಡೆ ಆಗಿದ್ದು ಪ್ರಶಸ್ತಿಗೆ ಪರಿಗಣಿಸಲಾಗಿದೆ,
29 ಚಿತ್ರಗಳು ಅಂತಿಮ ಸುತ್ತುಗಳನ್ನು ತಲುಪಿದವು. ನಂತರ ಅದನ್ನು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರ ಸಯೀದ್ ಅಖ್ತರ್ ಮಿರ್ಜಾ ವಿಶ್ಲೇಷಣೆ ಮಾಡಿದ್ದಾರೆ. ಭೂತಕಾಲಂ ಚಿತ್ರದ ನಟನೆಗಾಗಿ ರೇವತಿಗೆ ಅತ್ಯುತ್ತಮ ನಟಿ, ದಿಲೀಶ್ ಪೋತನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಬಂದಿದೆ.
ಇದನ್ನೂ ಓದಿ | Me Too ಆರೋಪ ಸುಳಿಯಲ್ಲಿ ಮಲಯಾಳಂ ನಟ ವಿಜಯ್ ಬಾಬು: ನಾನವನಲ್ಲ ಎಂದ ʼಶರಬತ್ ಶಮೀರ್ʼ