Site icon Vistara News

KGF Chapter 2: ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಜಿಎಫ್‌ 2 ಚಿತ್ರದ 6 ವಿಶೇಷ ಸಂಗತಿಗಳಿವು!

KGF Chapter 2

ಕೆಜಿಎಫ್ ಚಾಪ್ಟರ್ 2 (KGF Chapter 2) ಟೀಸರ್ ಸೂಪರ್‌ಸ್ಟಾರ್ ಯಶ್ (super star yash) ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಎರಡು ನಿಮಿಷಗಳ ಟೀಸರ್‌ನಲ್ಲಿ (KGF Chapter 2 Teaser) ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಕೆಜಿಎಫ್ ಚಾಪ್ಟರ್ 2 ಹೇಗಿರುತ್ತದೆ ಎಂಬುದರ ಕುರಿತು ಒಂದು ನೋಟವನ್ನು ಈ ಚಿತ್ರ ನೀಡಿತ್ತು. ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರ ಅತ್ಯತ್ತಮ ಅಭಿನಯ ಟೀಸರ್‌ನಲ್ಲಿ ಎಲ್ಲರ ಗಮನ ಸೆಳೆದಿತ್ತು. 2019ರ ಕೆಜಿಎಫ್ ಚಾಪ್ಟರ್ 1 ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು. ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ಈ ಆಕ್ಷನ್ ಚಿತ್ರವು ಕನ್ನಡ ಭಾಷೆಯ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಯಿತು. ಇದೀಗ ಕೆಜಿಎಫ್‌ ಚಾಪ್ಟರ್‌ 2 ಕನ್ನಡದ ಅತ್ಯುತ್ತಮ ಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:


1. ಚಿತ್ರದ ಟೀಸರ್ ಮೊದಲ 24 ಗಂಟೆಗಳಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಆಗಿತ್ತು. ಇದು 72 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಮೊದಲ 24 ಗಂಟೆಗಳಲ್ಲಿ ವಿಶ್ವದ 5ನೇ ಅತಿ ಹೆಚ್ಚು ವೀಕ್ಷಿಸಿದ ʼವಿಡಿಯೋʼ ಆಗಿತ್ತು.

2. ಮೊದಲ ಭಾಗದಂತೆಯೇ ಕೆಜಿಎಫ್ ಚಾಪ್ಟರ್ 2 ನೂರು ಕೋಟಿ ರೂ. ಬಜೆಟ್‌ನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಚಿತ್ರ ಡಬ್ ಆಗಿತ್ತು.

3. ಕೆಜಿಎಫ್ ಚಾಪ್ಟರ್ 2 ಕಥಾವಸ್ತುವು ರಾಕಿ ಸಾಯುತ್ತಿರುವ ತನ್ನ ತಾಯಿಗೆ ತಾನು ಎಂದಿಗೂ ಬಡತನದಲ್ಲಿ ಸಾಯುವುದಿಲ್ಲ ಎಂದು ಬಾಲ್ಯದಲ್ಲಿ ಮಾಡಿದ ಒಂದು ವಾಗ್ದಾನದ ಸುತ್ತ ಸುತ್ತುತ್ತದೆ. ಟೀಸರ್ ಕೊನೆಯಲ್ಲಿ “ಆ ಭರವಸೆಯನ್ನು ಉಳಿಸಿಕೊಳ್ಳಲಾಗುವುದು” ಎಂದು ಸೂಚಿಸಿತ್ತು. ಈ ಮೂಲಕ ಚಿತ್ರದ ಕಥಾವಸ್ತುವಿನ ಬಗ್ಗೆ ಸಂಪೂರ್ಣ ಸುಳಿವು ನೀಡಿತ್ತು.


4. ಮೂವತ್ತು ವರ್ಷಗಳ ಕಥೆಯನ್ನು ಹೇಳುವ ಕೆಜಿಎಫ್‌ ಯಶ್ ಅವರು ಚಿನ್ನದ ವ್ಯವಹಾರವನ್ನು ಆಳಲು ಬಯಸುವುದು, ಅಧಿಕಾರಕ್ಕಾಗಿ ಹಸಿದ ರಾಜಕಾರಣಿಗಳು ಮತ್ತು ದರೋಡೆಕೋರರ ನಡುವಿನ ಕಥಾ ಹಂದರವನ್ನು ಒಳಗೊಂಡಿದೆ . ರಾಕಿ ತನ್ನ ಪ್ರೀತಿಗಾಗಿ, ಅಧಿಕಾರಕ್ಕಾಗಿ ಹಸಿದಿರುವವರಿಗೆ ಪಾಠ ಕಲಿಸುವ ಉದ್ದೇಶಕ್ಕಾಗಿ ಏನು ಮಾಡುತ್ತಾರೆ ಎಂಬುದಕ್ಕೆ ಚಿತ್ರವೂ ಉತ್ತರಿಸುತ್ತದೆ.

5. ಸೂರ್ಯವರ್ಧನ್ ಅವರ ಸಹೋದರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಎಲ್ಲರ ಗಮನ ಸೆಳೆದಿದ್ದಾರೆ. ಸೂರ್ಯವರ್ಧನ್ ಅವರ ಪಾತ್ರವನ್ನು ರಮೇಶ್ ಇಂದಿರಾ ಅವರು ಕೆಜಿಎಫ್ ಅಧ್ಯಾಯ 1ರಲ್ಲಿ ನಿರ್ವಹಿಸಿದ್ದರು. ಅವರು ಕೋಲಾರ ಚಿನ್ನದ ಗಣಿಗಳ (ಕೆಜಿಎಫ್) ಆಡಳಿತಗಾರರಾಗಿದ್ದರು. ಸೂರ್ಯವರ್ಧನ್ ಅವರ ಮಗ ಗರುಡ ಮೊದಲ ಚಿತ್ರದಲ್ಲಿ ವಿಲನ್ ಆಗಿದ್ದರು ಮತ್ತು ಈಗ ಈ ದುಷ್ಟ ಖಳನಾಯಕನ ಪರಂಪರೆಯನ್ನು ಸಂಜಯ್ ದತ್ ತೆಗೆದುಕೊಳ್ಳುವುದನ್ನು ಕೆಜಿಎಫ್ 2ರಲ್ಲಿ ಕಾಣಬಹುದು. ಗರುಡನ ಪಾತ್ರವನ್ನು ಮಾಡಿರುವ ರಾಮಚಂದ್ರರಾಜು ಅವರು ಈ ಚಿತ್ರದಲ್ಲಿ ನಟಿಸುವ ಮೊದಲು ಯಶ್ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು!


ಇದನ್ನೂ ಓದಿ: Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

6. ಕೆಜಿಎಫ್ ಚಾಪ್ಟರ್ 2 ಒಂದು ಕಾಲ್ಪನಿಕ ಕಥೆಯಾಗಿದೆ. ಇದು ನಟ ಸಂಜಯ್ ದತ್ ಅವರು ನಟಿಸಿರುವ ದಕ್ಷಿಣ ಭಾರತೀಯ ಚೊಚ್ಚಲ ಚಿತ್ರವಾಗಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version