Site icon Vistara News

KGF | ತಮಿಳಿನಲ್ಲಿ ಬರುತ್ತಿದೆ ರಿಯಲ್‌ ಕೆಜಿಎಫ್‌: ಹೀರೋ ಯಶ್‌ ಅಲ್ಲ!

KGF

ಬೆಂಗಳೂರು: ಭಾರತೀಯ ಸಿನಿ ರಂಗದಲ್ಲಿ ಭಾರಿ ಹೆಸರು ಮಾಡಿದ ಸಿನಿಮಾ ಸಾಲಿನಲ್ಲಿ ಕನ್ನಡದ ಕೆಜಿಎಫ್‌ (KGF) ಸಹ ಒಂದು. ಕೆಜಿಎಫ್‌ 1 ಹಾಗೂ ಕೆಜಿಎಫ್‌-2 ಸಿನಿಮಾ ನಂತರ ಕೆಜಿಎಫ್‌-3 ಬರಲಿದೆಯಾ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಸದ್ಯಕ್ಕಂತೂ ಕೆಜಿಎಫ್‌ 3 ಸಿನಿಮಾ ಚಿತ್ರೀಕರಣ ಇಲ್ಲ ಎಂದು ಚಿತ್ರ ನಿರ್ದೇಶಕ ಪ್ರಶಾಂತ್‌ ನೀಲ್‌ ಹೇಳಿದ್ದರು. ಇದರ ಬೆನ್ನಲ್ಲೇ ತಮಿಳಿನಲ್ಲೊಂದು ಕೆಜಿಎಫ್ ಸಿನಿಮಾ ಮೂಡಿ ಬರಲಿದೆ. ಅಲ್ಲದೆ, ಇದು ಈ ಸಿನಿಮಾಗಿಂತ ತುಸು ಹೆಚ್ಚೇ ಭಿನ್ನವಾಗಿರಲಿದೆ ಎಂದು ಹೇಳಿಕೊಳ್ಳಲಾಗಿದೆ.

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು, ಅವರು ಬೇರೆಯದ್ದೇ ಕತೆ ಹೇಳುತ್ತಿದ್ದಾರೆ. ಕೆಜಿಎಫ್‌ನಲ್ಲಿ ನೈಜವಾಗಿ ಘಟಿಸಿದ ಸಂಘರ್ಷಗಳ ಹೂರಣಗಳನ್ನು ಒಳಗೊಂಡು ಸಿನಿಮಾವನ್ನು ತೆರೆಗೆ ತರಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಸ್ಟೋರಿ ಬರುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಇದು ಎಷ್ಟರಮಟ್ಟಿಗೆ ಪ್ರೇಕ್ಷಕರ ಗೆಲ್ಲಲಿದೆ ಎಂಬ ವಿಚಾರವೂ ಮುಖ್ಯವಾಗಲಿದೆ.

ಈ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿದ್ದಾರೆ. ʻʻಇದೊಂದು ಒಳ್ಳೆಯ ಸಿನಿಮಾ ಆಗಿದೆ. ಆಸ್ಕರ್‌ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಎಂದುʼʼ ನಟ ವಿಕ್ರಮ್‌ ಹೊಗಳಿದ್ದಾರೆ.

ಇದನ್ನೂ ಓದಿ | ಬೆಂಗಳೂರಲ್ಲಿ ಅಪಘಾತ, KGF ನಟನ ಬೆಂಜ್ ಕಾರು ಜಖಂ

Exit mobile version