ಬೆಂಗಳೂರು: ನಟಿ ಖುಷ್ಬೂ (Khushbu Sundar) ಅವರು 90ರ ದಶಕದಲ್ಲಿ ಅತ್ಯುತ್ತಮ ನಟಿಯಾಗಿ ಅಭಿಮಾನಿಗಳನ್ನು ಗೆದ್ದ ನಟಿ. ಹೆಚ್ಚಾಗಿ ದಕ್ಷಿಣ ಭಾರತ ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಇವರ ನಟನೆಗೆ ಮೆಚ್ಚಿದ ಅಭಿಮಾನಿಗಳು ಖುಷ್ಬೂ ಅವರಿಗೆ ದೇವಸ್ಥಾನವನ್ನೂ ಕಟ್ಟಿರುವ ಉದಾಹರಣೆಗಳಿವೆ. ಖುಷ್ಬೂ ರಜನಿ, ಕಮಲ್, ಸತ್ಯರಾಜ್, ಶರತ್ಕುಮಾರ್ ಮುಂತಾದ ಹಲವು ನಾಯಕರ ಎದುರು ನಟಿಸಿದ್ದರು. ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಬಳಿಕ ನಿರ್ದೇಶಕ ಸುಂದರ್ ಸಿ ಅವರನ್ನು ವಿವಾಹವಾದರು. ನಟಿಗೆ ಅನಂತಿಕಾ ಮತ್ತು ಆವಂತಿಕಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿ ವಿದೇಶದಲ್ಲಿ ಓದುತ್ತಿರುವ ಆವಂತಿಕಾ ತಮ್ಮ ಉಡುಪಿನ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಆವಂತಿಕಾ (Avantika) ಅವರ ಫೋಟೊಗಳಿಗೆ ‘ʼಒಳ ಉಡುಪು ಹಾಕದೇ ಬಟ್ಟೆ ಹಾಕಿದ್ದೀರಾʼ’ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ‘ʼನೀವು ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ’ʼ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಆವಂತಿಕಾ ತಮ್ಮ ಇನ್ಸ್ಟಾದಲ್ಲಿ ತುಂಬಾ ಆಕರ್ಷಕವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೊಗಳಿಗೆ ಖುಷ್ಬೂ ಅವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅವಂತಿಕಾ ಸ್ಕರ್ಟ್ನಲ್ಲಿ ಫೋಟೊ ಹಾಕಿದ್ದಾರೆ. ಮೈ ಮೇಲೆ ಹಾಕಿರುವ ಹಚ್ಚೆಗಳು ಹೈಲೈಟ್ ಆಗಿವೆ. ಇದಕ್ಕೆ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆ. ಆಕೆ ಸುಂದರವಾಗಿದ್ದರೂ ಬಟ್ಟೆ ತುಂಬಾ ಅಸಹ್ಯವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ಸೂಚಿಸುತ್ತಿದ್ದಾರೆ. ಒಬ್ಬರು ʻʻಈ ಫೋಟೊಗಳನ್ನು ನೋಡುವ ಯಾರಾದರೂ ಲೈಂಗಿಕವಾಗಿ ಪ್ರೇರೇಪಿಸಲ್ಪಟ್ಟಿದ್ದರೆ, ಆಕೆಯ ಜತೆ ಅನುಚಿತವಾಗಿ ವರ್ತಿಸಿದರೆ ಯಾರು ಹೊಣೆ?ʼʼ ಎಂದು ಪ್ರಶ್ನಿಸಿದ್ದಾರೆ. ʻʻನಾಗರೀಕತೆ ಎಂದರೆ ದೇಹವನ್ನು ಮುಚ್ಚಿಕೊಳ್ಳುವುದುʼʼ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಖುಷ್ಬೂ ಜತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದು ಕಡಿಮೆ ಇದು ಎಂದು ಹಲವರು ಹೇಳಿಕೊಂಡಿದ್ದಾರೆ. ಅವಂತಿಕಾ ಅವರು ಕೂದಲಿಗೆ ಬಣ್ಣ ಹಾಕಿದ್ದಾರೆ. ‘ಮಗಳನ್ನು ಖುಷ್ಬೂ ಸರಿಯಾಗಿ ಬೆಳೆಸಿಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಆವಂತಿಕಾ ಪೋಸ್ಟ್
ಇದನ್ನೂ ಓದಿ: Khushbu Sundar: ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ʻರಣಧೀರʼ ನಟಿ ಖುಷ್ಬು ಸುಂದರ್
ರಾಜಕೀಯದಲ್ಲಿ ಸಕ್ರಿಯರಾಗಿರುವ ನಟಿ ಖುಷ್ಬೂ ಕೆಲವು ದಿನಗಳ ಹಿಂದೆ ತೀವ್ರ ಜ್ವರ ಹಾಗೂ ನೋವಿನಿಂದ ಬಳಲುತ್ತಿದ್ದರು. ಅರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವರ್ಷದ ಆರಂಭದಲ್ಲಿ ನಟಿ 20 ಕೆಜಿ ತೂಕ ಇಳಿಸಿದ ನಂತರ ಸುದ್ದಿಯಲ್ಲಿದ್ದರು. ವಿಜಯ್ ಅಭಿನಯದ ವಾರಿಸು ಚಿತ್ರದಲ್ಲಿ ನಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ವಂಶಿ ಪಡಿಪಲ್ಲಿ ನಿರ್ದೇಶಿಸಿದ್ದಾರೆ..