ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ (Kiccha Sudeep) ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 28 ವರ್ಷಗಳು ಕಳೆದಿವೆ. ಅಭಿಮಾನಿಗಳನ್ನು ಮನರಂಜಿಸಿ, ಅವರ ಪ್ರೀತಿಯನ್ನು ಗಳಿಸಿಕೊಂಡ ಕಿಚ್ಚ ಅವರ ಫ್ಯಾನ್ಸ್ CDP (ಸಿಡಿಪಿ) ರಿಲೀಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಮೊದಲಿಗೆ 1997ರಲ್ಲಿ ಬಿಡುಗಡೆಯಾದ ʻತಾಯವ್ವʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾಕ್ಕೆಂದು ಅವರು ಜನವರಿ 31ರಂದು ಮೊದಲನೆಯದಾಗಿ ಬಣ್ಣ ಹಚ್ಚಿ, ಕ್ಯಾಮೆರಾ ಮುಂದೆ ನಿಂತಿದ್ದರು. ಈಗಾಗಲೇ 55ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಇವರು ಇದೀಗ ಮ್ಯಾಕ್ಸ್ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ʻʻಅಭಿಮಾನಿಗಳ ಆರಾಧ್ಯ ದೇವರು ಭಾರತೀಯ ಚಿತ್ರರಂಗದ ಮಾಣಿಕ್ಯ, ಅಭಿನಯ ಚಕ್ರವರ್ತಿ, ಕರುನಾಡ ಬಾದ್ ಷ ಕಿಚ್ಚ ಸುದೀಪ್ ಅಣ್ಣನ ಸಿನಿ ಪಯಣಕ್ಕೆ ಸಾಟಿಯಿಲ್ಲದ 28 ವರ್ಷಗಳ ಸಂಭ್ರಮʼʼಎಂದು ಅಭಿಮನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Kiccha Sudeep: ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್ ಡ್ರೆಸ್! ಏನಿದರ ಸ್ಪೆಷಲ್?
ಅಭಿಮಾನಿಗಳ ಆರಾಧ್ಯ ದೇವರು
— ಮಂಜು ಕಿಚ್ಚ (@Manjuna29) January 30, 2024
ಭಾರತೀಯ ಚಿತ್ರರಂಗದ ಮಾಣಿಕ್ಯ, ಅಭಿನಯ ಚಕ್ರವರ್ತಿ, ಕರುನಾಡ ಬಾದ್ ಷ ಕಿಚ್ಚ ಸುದೀಪ್ ಅಣ್ಣನ ಸಿನಿ ಪಯಣಕ್ಕೆ ಸಾಟಿಯಿಲ್ಲದ 28 ವರ್ಷಗಳ ಸಂಭ್ರಮ..👑👏❤️🥳#28YearsOfKicchaBOSSism 🔥🔥#KicchaSudeep𓃵 #kicchasudeep #Baadshah #sudeep #kicchaboss #MaxTheMovie Kichcha Sudeep 👑 pic.twitter.com/pDjGA7Mqcg
ಅಭಿನಯ ಚಕ್ರವರ್ತಿ ನಮ್ಮ "ಕಿಚ್ಚ ಸುದೀಪ್" ಸರ್ ಸಿನಿ ಪಯಣಕ್ಕೆ (28) ವರ್ಷಗಳ ಸಂಭ್ರಮ.!🤗❤️
— ಸುದೀಪ್ ಸಾಂಸ್ಕೃತಿಕ ಪರಿಷತ್ತು (ರಿ) (@ssparishattu) January 30, 2024
@KicchaSudeep #28YearsOfKicchaBOSSism 🎉#MaxTheMovie #KicchaBOSS#BossOfSandalwood #KicchaSudeep𓃵 pic.twitter.com/bZzzmBXyu5
@KicchaSudeep ಚಿತ್ರರಂಗವೆಂಬ ಸಾಮ್ರಾಜ್ಯದ ಸಿಂಹಾಸನವೇರಿ,ಕನ್ನಡ ಚಿತ್ರರಂಗದಿಂದ ಶುರುವಾಗಿ ದೇಶದಾದ್ಯಂತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿರುವ ಅಭಿನಯ ಚಕ್ರವರ್ತಿ ನಮ್ಮ ಕಿಚ್ಚ ಸುದೀಪ್ ಅಣ್ಣ '#28YearsOfSudeepism#max #KicchaSudeep𓃵 ❤️🌍 pic.twitter.com/wJaCmvNjPl
— Sunil hv (@SunilHv9) January 30, 2024
ಜಿಮ್, ವರ್ಕೌಟ್ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್, ಪೈಲ್ವಾನ್ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್ (Kichcha Sudeep) ಅಚ್ಚರಿ ನೀಡಿದ್ದರು. ಈಗ ಮ್ಯಾಕ್ಸ್ ಸಿನಿಮಾಗೆ (ಕಿಚ್ಚ 46)ಅವಿರತವಾಗಿ ವರ್ಕೌಟ್ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಈಗಾಗಲೇ ಕೆ 46 ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ʻಕಿಚ್ಚ 46ʼ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ರಣರಣ ರಕ್ಕಸನಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಟೀಸರ್‌ನಲ್ಲಿ ಕಿಚ್ಚನ ಮಾಸ್ ಡೈಲಾಗ್ ಹೈಲೈಟ್ ಆಗಿದೆ. ʻಯುದ್ಧ ಹುಟ್ಟಾಕೋರ್ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್ ಡೈಲಾಗ್ ಹೊಡೆದಿದ್ದಾರೆ ಕಿಚ್ಚ. ಜತೆಗೆ ಕಿಚ್ಚ 47 ಸಿನಿಮಾ ಬಗ್ಗೆ ಹೊಸ ಹೊಸ ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಕಿಚ್ಚ 47 ಟೀಸರ್ ಮೇಕಿಂಗ್ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ.