Kiccha Sudeep: ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌? - Vistara News

ಫ್ಯಾಷನ್

Kiccha Sudeep: ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌?

ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ (Kiccha Sudeep) ವೀಕೆಂಡ್‌ನಲ್ಲಿ ಧರಿಸುವ ಯೂನಿಕ್‌ ಔಟ್‌ಫಿಟ್‌ಗಳನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲ, ಫ್ಯಾಷನ್‌ ಪ್ರಿಯರು ಕಾದಿರುತ್ತಾರೆ. ಇದಕ್ಕೆ ಕಾರಣ ಪ್ರತಿಬಾರಿ ಅವರು ಧರಿಸುವ ಯೂನಿಕ್‌ ಫ್ಯಾಷನ್‌! ಅವರ ಈ ಡಿಫರೆಂಟ್‌ ಡಿಸೈನರ್‌ವೇರ್ಸ್ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

VISTARANEWS.COM


on

Kiccha Sudeep unique fashion wears in Bigg Boss season 10
ಚಿತ್ರಗಳು : ಬಿಗ್‌ಬಾಸ್‌ ಸೀಸನ್‌10ನಲ್ಲಿ ಕಿಚ್ಚ ಸುದೀಪ್‌ರ ಪಾಪ್ಯುಲರ್‌ ಔಟ್‌ಫಿಟ್ಸ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
VISTARA-EXCLUSIVE

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಪ್ರತಿವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಷನ್‌ ಪ್ರಿಯರಿಗೂ ಕುತೂಹಲವಿರುತ್ತದೆ. ಹೌದು. ಸುದೀಪ್‌ರವರು ಪ್ರತಿ ವೀಕೆಂಡ್‌ನಲ್ಲಿ ಧರಿಸುವ ಒಂದೊಂದು ಡಿಫರೆಂಟ್‌ ಔಟ್‌ಫಿಟ್‌ಗಳು ನೋಡುಗರ ಕಣ್ಣರಳಿಸುತ್ತವೆ. ಕೆಲವೊಮ್ಮೆ ಬಾಲಿವುಡ್‌ಗರನ್ನು ಮೀರಿಸುವಂತಹ ಹುಬ್ಬೇರಿಸುವಂತಹ ಫ್ಯೂಶನ್‌ ಡಿಸೈನರ್‌ವೇರ್‌ಗಳನ್ನು ಕಾಣಬಹುದು. ಈ ಡಿಸೈನರ್‌ವೇರ್‌ಗಳ ಹಿಂದಿರುವ ಡಿಸೈನರ್‌ಗಳ್ಯಾರು? ಡಿಸೈನ್‌ ಆಯ್ಕೆ ಹೇಗೆ? ಅಷ್ಟ್ಯಾಕೆ ದುಬಾರಿ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌ಗೆ ಸೂಟನ್ನು ರ‍್ಯಾಂಪ್‌ ಲೆಬೆಲ್‌ನ ಸೆಲೆಬ್ರೆಟಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಸಿದ್ಧಪಡಿಸಿದರೇ, ಜಂಪ್‌ಸೂಟ್‌ನಂತವನ್ನು ಡಿಸೈನರ್‌ ಭರತ್‌ ಸಾಗರ್‌ ಸಿದ್ಧಪಡಿಸಿ, ಸ್ಟೈಲಿಂಗ್‌ ಮಾಡುತ್ತಾರಂತೆ.

ಲಕ್ಷ ರೂ. ಮೀರುವ ದುಬಾರಿ ಔಟ್‌ಫಿಟ್‌ಗಳಿವು

ಇನ್ನು, ಕಿಚ್ಚ ಸುದೀಪ್‌ರವರು ಧರಿಸುವ ಒಂದೊಂದು ಸೂಟ್‌ನ ಫ್ಯಾಬ್ರಿಕ್‌ ಇಟಲಿ, ಲಂಡನ್‌ ಹಾಗೂ ಜಪಾನ್‌ನಿಂದ ಅಮದು ಮಾಡಿಕೊಳ್ಳಲಾಗುತ್ತದಂತೆ. ಇವುಗಳ ಫ್ಯಾಬ್ರಿಕ್‌ ಫಾಲ್‌ ಆ್ಯಂಡ್‌ ಫೀಲ್‌ ಟೆಕ್ಚ್ಷರ್‌ ಹೊಂದಿರುವುದರಿಂದ ಇವುಗಳ ಬೆಲೆ ದುಬಾರಿಯಂತೆ. ಕಡಿಮೆ ಎಂದರೂ ಒಂದು ಸೂಟ್‌ ಸೆಟ್‌ ಬೆಲೆ 70 ಸಾವಿರ ದಾಟುತ್ತದಂತೆ. ಕೆಲವೊಮ್ಮೆ ಲಕ್ಷ ರೂ.ಗಳನ್ನೂ ಮೀರಬಹುದು.

ಇದನ್ನೂ ಓದಿ: Kiccha Sudeep: ಫ್ಯಾನ್ಸ್‌ ಜತೆ ಕಿಚ್ಚ ಸುದೀಪ್‌ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್‌

ಸುದೀಪ್‌ರ ಅಭಿರುಚಿಗೆ ತಕ್ಕಂತೆ ಡಿಸೈನರ್‌ವೇರ್ಸ್

ಆರಂಭದಿಂದಲೂ ಬಿಗ್‌ಬಾಸ್‌ ಸೀಸನ್‌ಗಳಿಗಾಗಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಅವರು ಸಿದ್ಧಪಡಿಸಿರುವ ಸೂಟ್‌ಗಳು ಸಖತ್‌ ಟ್ರೆಂಡ್‌ ಸೆಟ್‌ ಮಾಡಿದೆಯಂತೆ. “ಪ್ರತಿವಾರ ಮೂರ್ನಾಲ್ಕು ಸೂಟ್‌ ಸೆಟ್‌ ರೆಡಿ ಇರಿಸಿರುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಅಭಿರುಚಿಗೆ ತಕ್ಕಂತೆ ಫೀಡ್‌ಬ್ಯಾಕ್‌ ಪಡೆದು ಕಲರ್ಸ್ ಹಾಗೂ ವಿನ್ಯಾಸವನ್ನು ಡಿಫರೆಂಟ್ ಆಗಿ ಸಿದ್ಧಪಡಿಸುತ್ತೇವೆ” ಎನ್ನುತ್ತಾರೆ ಭರತ್ ರಾಮ್‌ದಾಸ್‌. ಮತ್ತೊಂದು ದಿನ ಡಿಫರೆಂಟ್‌ ವಿನ್ಯಾಸದ ಜಂಪ್‌ ಸೂಟ್‌ ಸೆಟ್‌ಗಳಲ್ಲಿ ಕಾಣಿಸುವ ಸುದೀಪ್‌ ಅವರಿಗೆ ಇವನ್ನು ಸ್ಟೈಲಿಂಗ್‌ ಹಾಗೂ ಡಿಸೈನ್‌ ಮಾಡುವುದು ಮತ್ತೊಬ್ಬ ಡಿಸೈನರಾದ ಭರತ್‌ ಸಾಗರ್‌. ಧರಿಸುವ ಶೂನಿಂದ ಹಿಡಿದು, ಆಕ್ಸೆಸರೀಸ್‌ ಆಯ್ಕೆ ಕೂಡ ಇವರದ್ದೇ.

ಸುದೀಪ್‌ ಡಿಸೈನರ್‌ವೇರ್‌ ಡಿಟೇಲ್ಸ್

ಭರತ್‌ ರಾಮ್‌ದಾಸ್‌ ಅವರ ರ‍್ಯಾಂಪ್‌ ಬ್ರ್ಯಾಂಡ್‌ ಆಕಾಶ ನೀಲಿ ವರ್ಣದ ಅತ್ಯಾಕರ್ಷಕ ವಿನ್ಯಾಸದ ಕೊ-ಆರ್ಡ್ ಜಾಕೆಟ್‌ ಔಟ್‌ಫಿಟ್‌, ರಸ್ಟಿಕ್‌ ಚಾರ್ಮ್ ನೀಡಿದ ಆಲೀವ್‌ ಗ್ರೀನ್‌ ಜಾಕೆಟ್‌, ತಿಳಿ ಹಾಫ್‌ ವೈಟ್‌ ವರ್ಣದ ಓವರ್‌ಸೈಝ್‌ ಜಾಕೆಟ್‌ ಸೆಟ್‌, ಫ್ಲಾನೆಲ್‌ ಫ್ಯಾಬ್ರಿಕ್‌ನ ಕೋಲ್‌ ಕೋ ಆರ್ಡ್ ಜಾಕೆಟ್‌ ಸೆಟ್‌, ಬೀಸ್ಪೋಕ್‌ ಕ್ಯಾರೆಮಲ್‌ ಕೆಫೆ ಜಾಕೆಟ್‌, ಪೇಂಟರ್‌ ಪ್ಯಾಂಟ್‌ ಶೈಲಿಯೊಂದಿಗೆ ಬ್ಲಾಕ್‌ ಫಾರೆಸ್ಟ್ ಗ್ರೀನ್‌ ಶೇಡ್‌ನ ಸೆಟ್‌ ಸೇರಿದಂತೆ ಸುದೀಪ್‌ ಧರಿಸಿದ ಜಾಕೆಟ್‌ ಸೂಟ್ಸ್ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಬರ್ತ್‌ಡೇಗೆ ಫ್ಯಾನ್ಸ್ ದಂಡು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು…

ಇನ್ನು, ಸೂಟ್‌ ಹೊರತುಪಡಿಸಿದಲ್ಲಿ, ಸುದೀಪ್‌ರ ಜಂಪ್‌ಸೂಟ್‌ ಶೈಲಿಯ ಔಟ್‌ಫಿಟ್‌ ಗಮನಿಸಿರುತ್ತೀರಿ! ಇದು ಡಿಸೈನರ್‌ ಹಾಗೂ ಸ್ಟೈಲಿಸ್ಟ್ ಭರತ್‌ ಸಾಗರ್‌ ಕೈ ಚಳಕ ಎನ್ನಬಹುದು. ಇಲ್ಲಿ ಅವರು ಬಾಟಲ್‌ ಪೈಪ್‌ ಬ್ರ್ಯಾಂಡ್‌ ನ ಜಂಪ್‌ಸೂಟ್‌ ಜತೆಗೆ ರೇರ್‌ ರ‍್ಯಾಬೀಟ್‌, ಅರ್ಮಾನಿ ಸೇರಿದಂತೆ, ನಾನಾ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಆ್ಯಕ್ಸೆಸರೀಸ್‌ ಮಿಕ್ಸ್‌ ಮ್ಯಾಚ್‌ ಮಾಡಿದ್ದಾರೆ. ಹಾಗಾಗಿ ಈ ಕಂಪ್ಲೀಟ್‌ ಜಂಪ್‌ಸೂಟ್‌ ಔಟ್‌ಫಿಟ್‌ ಲುಕ್‌ ತೀರಾ ದುಬಾರಿ ಎನ್ನಬಹುದು. ಇವೆಲ್ಲಾ ಹೈ ಮೆನ್ಸ್‌ ಫ್ಯಾಷನ್‌ ಲಿಸ್ಟ್‌ಗೆ ಸೇರುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Alia Cut Kurta Set Fashion: ಪಾಪ್ಯುಲರ್‌ ಆಯ್ತು, ಅಲಿಯಾ ಕಟ್‌ ಕುರ್ತಾ ಸೂಟ್‌ ಸೆಟ್!

ಅಲಿಯಾ ಕಟ್‌ ಕುರ್ತಾ ಹಾಗೂ ಲಾಂಗ್‌ ಸೂಟ್‌ ಸೆಟ್‌ಗಳು (Alia Cut Kurta Set Fashion) ಇದೀಗ ಸಖತ್‌ ಪಾಪ್ಯುಲರ್‌ ಆಗಿವೆ. ಇದಕ್ಕೆ ಕಾರಣ, ನಟಿ ಅಲಿಯಾ ಭಟ್‌ ಎಂದರೇ ಅಚ್ಚರಿಯಾಗಬಹುದು. ಸಿನಿಮಾವೊಂದರಲ್ಲಿ ಧರಿಸಿದ್ದ ಈ ಶೈಲಿಯ ಕುರ್ತಾ, ಸೂಟ್‌ಗಳು ಬಹಳ ದಿನಗಳ ನಂತರ ಟ್ರೆಂಡಿಯಾಗಿದೆ. ಏನಿದು ಅಲಿಯಾ ಕಟ್ ಕುರ್ತಾ? ಸೂಟ್‌? ಗೌನ್‌ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Alia Cut Kurta Set Fashion
ಚಿತ್ರಗಳು: ಐಶ್ವರ್ಯ ಲಕ್ಷ್ಮಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಲಿಯಾ ಕಟ್‌ ಸೂಟ್‌, ಕುರ್ತಾ ಹಾಗೂ ಗೌನ್‌ ಸೆಟ್‌ಗಳು (Alia Cut Kurta Set Fashion) ಸಖತ್‌ ಟ್ರೆಂಡ್‌ನಲ್ಲಿವೆ. ಹೌದು, ಹೆಚ್ಚು ಪಾಪ್ಯುಲರ್‌ ಆಗಿವೆ. ಅದರಲ್ಲೂ ಫ್ಲೋರಲ್‌ ಪ್ರಿಂಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಎಥ್ನಿಕ್‌ ಲುಕ್‌ ನೀಡುವ ಇವು ಈ ಸೀಸನ್‌ನ ಇಂಡಿಯನ್‌ ಔಟ್‌ಫಿಟ್‌ಗಳ ಟಾಪ್ ಲಿಸ್ಟ್‌ನಲ್ಲಿ ಸೇರಿವೆ.

What is Alia Cut Dress?

ಏನಿದು ಅಲಿಯಾ ಕಟ್‌ ಡ್ರೆಸ್?

ಎಥ್ನಿಕ್‌ ಲುಕ್‌ ನೀಡುವ ಟ್ರೆಡಿಷನಲ್‌ ಕುರ್ತಾ, ಸೂಟ್‌ಗಳಿವು. ವೇಸ್ಟ್‌ಸ್ಟೈಲ್‌ನಿಂದ ಮೇಲಿನ ಭಾಗ ಎರಡ್ಮೂರು ಕಟ್ಟಿಂಗ್‌ ಒಳಗೊಂಡಿರುತ್ತದೆ. ಬಟಲ್‌ಲೆಸ್‌ ಆಗಿದ್ದರೂ ಲೇಸ್‌ ವರ್ಕ್‌ನಿಂದ ಪ್ರತ್ಯೇಕವಾಗಿರುವಂತೆ ಕಾಣುತ್ತದೆ. ಧರಿಸಿದಾಗ ಮಂಡಿಯಿಂದ ಕೆಳಗಿನ ತನಕ ನಿಲ್ಲುತ್ತದೆ. ಕೊಂಚ ದೊಗಲೆಯಾಗಿರುತ್ತದೆ.

ಅಲಿಯಾ ಕಟ್‌ ಹೆಸರು ಯಾಕೆ ಬಂತು!

ಹಿಂದಿ ಸಿನಿಮಾವೊಂದರಲ್ಲಿ ನಟಿ ಅಲಿಯಾ ಭಟ್‌ ಧರಿಸಿದ್ದ ಕುರ್ತಾವಿದು. ಆಕೆ ಧರಿಸಿದ ನಂತರ ಈ ಕುರ್ತಾ ಹೊಸ ಹೆಸರನ್ನು ಪಡೆಯುವುದರೊಂದಿಗೆ ನಾನಾ ಶೈಲಿಯಲ್ಲಿ ಮಾನಿನಿಯರನ್ನು ಸವಾರಿ ಮಾಡತೊಡಗಿತು. ಸಾಮಾನ್ಯ ಮಹಿಳೆಯರು ಇದಕ್ಕೆ ಅಲಿಯಾ ಕಟ್‌ ಕುರ್ತಾ ಅಥವಾ ಸೂಟ್‌ ಎಂದು ನಾಮಕರಣ ಮಾಡಿದರು. ಮೊಬೈಲ್‌ನಲ್ಲಿ ಆಕೆ ಧರಿಸಿರುವ ಈ ಕುರ್ತಾ ಇಲ್ಲವೇ ಸೂಟ್‌ ಫೋಟೋ ತೋರಿಸಿ, ಅಂಗಡಿಗಳಲ್ಲಿ ಕೇಳುವ ಪರಿಪಾಟ ಹೆಚ್ಚಾಗಿ, ಇದೇ ಹೆಸರು ಚಾಲ್ತಿಗೆ ಬಂದಿತು ಎನ್ನುತ್ತಾರೆ ಡಿಸೈನರ್‌ಗಳು. ಅವರ ಪ್ರಕಾರ, ಈ ಉಡುಪು ಯಾವ ಮಟ್ಟಿಗೆ, ಟ್ರೆಂಡಿಯಾಯಿತೆಂದರೇ, ನಾರ್ತ್ ಇಂಡಿಯಾ ಮಾತ್ರವಲ್ಲ, ದಕ್ಷಿಣ ಭಾರತದ ಮಹಿಳೆಯರು ಕೂಡ ಈ ಬಗೆಯ ಕುರ್ತಾ, ಸೂಟ್‌ ಇಲ್ಲವೇ ಗೌನ್‌ ಶೈಲಿಯವನ್ನು ಹೆಚ್ಚೆಚ್ಚು ಧರಿಸಲಾರಂಭಿಸಿದರು. ಹಾಗೆಂದು ಈ ಶೈಲಿಯ ಕುರ್ತಾ-ಸೂಟ್‌ಗಳು ಹೊಸ ಅವಿಷ್ಕಾರವೇನಲ್ಲ! ಎನ್ನುತ್ತಾರೆ. ಇನ್ನು, ಟ್ರೆಡಿಷನಲ್‌ ಲುಕ್‌ ಇರುವ ಈ ಉಡುಪು ಎಂತಹ ಪರ್ಸನಾಲಿಟಿಯವರಿಗೂ ಹೊಂದುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Trending Alia Cut Gown Designs

ಟ್ರೆಂಡ್‌ನಲ್ಲಿರುವ ಅಲಿಯಾ ಕಟ್‌ ಸೂಟ್‌/ಕುರ್ತಾ/ಗೌನ್‌ ಡಿಸೈನ್ಸ್

ಟ್ರಾಪಿಕಲ್‌ ಪ್ರಿಂಟ್ಸ್, ಪ್ಲಾಂಟ್ಸ್, ಗಾರ್ಡನ್‌ ಪ್ರಿಂಟ್‌ನವು ಪ್ರಚಲಿತದಲ್ಲಿವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣುವ ಲೈಟ್‌ ಶೇಡ್‌ನ ಫ್ಲೋರಲ್‌ ಪ್ರಿಂಟೆಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಕಾಟನ್‌, ಕಾಟನ್‌ ಸಿಲ್ಕ್‌, ಲೆನಿನ್‌, ರಯಾನ್‌ ಫ್ಯಾಬ್ರಿಕ್‌ನವಲ್ಲೂ ಇವನ್ನು ಕಾಣಬಹುದು. ಇನ್ನು, ನಾನಾ ಪ್ರಯೋಗಾತ್ಮಕ ವಿನ್ಯಾಸದವು ಎಂಟ್ರಿ ನೀಡಿವೆ. ಆದರೆ, ಮೂಲ ಡಿಸೈನ್‌ನ ಲಾಂಗ್‌ ಅಲಿಯಾ ಕಟ್‌ ಕುರ್ತಾ ಸೆಟ್‌ ಬೇಡಿಕೆ ಮಾತ್ರ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು.

5 Tips for Alia Cut Kurta Lovers

ಅಲಿಯಾ ಕಟ್‌ ಕುರ್ತಾ/ಸೂಟ್‌/ಗೌನ್‌ ಪ್ರಿಯರಿಗೆ 5 ಟಿಪ್ಸ್

  • ಸೀಸನ್‌ ಶೇಡ್‌ನದ್ದನ್ನು ಆಯ್ಕೆ ಮಾಡಿ.
  • ಈ ಔಟ್‌ಫಿಟ್‌ ಎಥ್ನಿಕ್‌ ಲುಕ್‌ ನೀಡುವುದು ಗ್ಯಾರಂಟಿ.
  • ಈ ಉಡುಪಿಗೆ ಲೈಟ್‌ ಮೇಕಪ್‌ ಕೂಡ ಅಂದವಾಗಿ ಕಾಣುತ್ತದೆ.
  • ದುಪಟ್ಟಾ ಇಲ್ಲದೆಯೂ ಧರಿಸಬಹುದು.
  • ತೀರಾ ದೊಗಲೆಯಾಗಿರುವುದನ್ನು ಆಯ್ಕೆ ಮಾಡಬೇಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

Continue Reading

ಫ್ಯಾಷನ್

Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

ಜಾಮ್‌ನಗರದಲ್ಲಿ 3 ದಿನಗಳ ಕಾಲ ನಡೆಯಲಿರುವ, ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ (Anant Ambani Radhika Merchant) ಗ್ರ್ಯಾಂಡ್‌ ಪ್ರಿ- ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಹಾಗೂ ಸೆಲೆಬ್ರೆಟಿಗಳಿಗೆ ಈಗಾಗಲೇ ಡ್ರೆಸ್‌ಕೋಡ್‌ ಪಾಲಿಸುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲೇ ಸೂಚಿಸಲಾಗಿದೆ. ಹಾಗಾದಲ್ಲಿ, ಯಾವ್ಯಾವ ಉಡುಗೆ-ತೊಡುಗೆಗಳಿಗೆ ಆದ್ಯತೆ ನೀಡಲಾಗಿದೆ? ಅವು ಯಾವುವು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Anant Ambani Radhika Merchant
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಫ್ಯಾಮಿಲಿಯ ಸಂಭ್ರಮ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವದ 3 ದಿನಗಳ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರು ಹಾಗೂ ಸೆಲೆಬ್ರೆಟಿಗಳಿಗೆ ರಾಯಲ್‌ ಡ್ರೆಸ್‌ಕೋಟ್‌ ಪಾಲಿಸುವ ಬಗ್ಗೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಸೂಚಿಸಲಾಗಿದೆ. ಹೌದು, ಈಗಾಗಲೇ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮಗಳಿಗೆ ತಕ್ಕಂತೆ ಧರಿಸಬೇಕಾದ ಡ್ರೆಸ್‌ಕೋಡ್‌ ಬಗ್ಗೆ ನಮೂದಿಸಲಾಗಿದೆ. ಯಾವ್ಯಾವ ಬಗೆಯ ಉಡುಗೆ-ತೊಡುಗೆಗಳು ಈ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್. ಗುಜರಾತ್‌ನ ಜಾಮ್ ನಗರದ ಮೊಟಿಖ್ ವಾಡಿಯಲ್ಲಿನಡೆಯಲಿರುವ ಈ ಗ್ರ್ಯಾಂಡ್‌ ಕಾರ್ಯಕ್ರಮಗಳಲ್ಲಿ ಒಂದೊಂದು ದಿನವೂ ಒಂದೊಂದು ಬಗೆಯ ಡ್ರೆಸ್‌ಕೋಡ್‌ ನಿಗಧಿಪಡಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಹೊಂದುವಂತೆ ಡ್ರೆಸ್‌ಕೋಡ್‌ ರೂಪಿಸಲಾಗಿದೆ. ಅಷ್ಟೇಕೆ! ಭಾಗವಹಿಸುವ ಸೆಲೆಬ್ರೆಟಿಗಳಿಗೆ ಸಹಾಯವಾಗುವಂತೆ ಮೇಕಪ್‌ ಆರ್ಟಿಸ್ಟ್‌ನಿಂದಿಡಿದು ಎಲ್ಲಾ ಸೌಲಭ್ಯಗಳನ್ನು ಅಲ್ಲಿಯೇ ಕಲ್ಪಿಸಲಾಗಿದೆ ಎನ್ನುತ್ತವೆ ಮೂಲಗಳು.

Anant Ambani Radhika Merchant Cocktail dress code

ಮಾರ್ಚ್ 1: ಇವನಿಂಗ್‌ ಎವರ್‌ಲ್ಯಾಂಡ್‌ ಕಾಕ್‌ಟೈಲ್‌ ಡ್ರೆಸ್ ಕೋಡ್‌

ಇವನಿಂಗ್‌ ಎವರ್‌ಲ್ಯಾಂಡ್‌ ಹೆಸರಿನಲ್ಲಿ ನಡೆಯುವ ಮೊದಲ ದಿನದ ಸಂಜೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಕಾಕ್‌ಟೈಲ್‌ ಡ್ರೆಸ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಅಂದು ನಡೆಯುವ ಮ್ಯಾಜಿಕಲ್‌ ಮ್ಯೂಸಿಕ್‌, ಡ್ಯಾನ್ಸ್‌ಗೆ ಹೊಂದುವಂತೆ ರಸಮಯ ಸಂಜೆಗೆ ಹೊಂದುವಂತಹ ವೆಸ್ಟರ್ನ್ ಗೌನ್ಸ್, ಪ್ಯಾಂಟ್‌ ಸೂಟ್‌, ಶಿಮ್ಮರ್‌ ಫ್ಲೂಯಿಂಗ್‌ಗೌನ್ಸ್, ಮಿನುಗುವ ಆಕ್ಸೆಸರೀಸ್ ಸೇರಿದಂತೆ ನಾನಾ ಕಾಕ್‌ಟೈಲ್‌ ಉಡುಪುಗಳು ಈ ಲಿಸ್ಟ್‌ನಲ್ಲಿ ಸೇರಿವೆ.

Anant Ambani Radhika Merchant Jungle theme dress code

ಮಾರ್ಚ್ 2: ವಾಕ್‌ ಆನ್‌ ದಿ ವೈಲ್ಡ್ ಸೈಡ್ – ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌

ಮಾರ್ಚ್ 2ರಂದು ಅಂಬಾನಿ ರೆಸ್ಕ್ಯೂ ಸೆಂಟರ್‌ನಲ್ಲಿ ನಡೆಯಲಿರುವ ವಾಕ್‌ ಆನ್‌ ದಿ ವೈಲ್ಡ್ ಸೈಡ್‌ ಹೆಸರಿನ ಔಟ್‌ಡೋರ್‌ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಅನಿಮಲ್‌ ಪ್ರಿಂಟ್ಸ್, ಸಫಾರಿ ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌ ಫಿಕ್ಸ್ ಮಾಡಲಾಗಿದೆ. ಸುತ್ತಾಡುವ ಕಾರ್ಯಕ್ರಮ ಇದಾಗಿರುವುದರಿಂದ ಕಂಫರ್ಟಬಲ್‌ ಫುಟ್‌ವೇರ್‌ ಧರಿಸಲು ಸೂಚಿಸಲಾಗಿದೆ.

Anant Ambani Radhika Merchant Dazzling desi romance theme dress code

ಮೇಲಾ ರುಜ್‌ (ಜಾತ್ರೆ) – ಡ್ಯಾಜ್ಲಿಂಗ್‌ ದೇಸಿ ರೊಮಾನ್ಸ್ ಥೀಮ್‌ ಡ್ರೆಸ್‌ಕೋಡ್‌

ಇನ್ನು, ಇದೇ ದಿನ ಸಂಜೆ ನಡೆಯಲಿರುವ “ಮೇಲಾ ರುಜ್‌” ಹೆಸರಿನ ದೇಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಡ್ಯಾಜ್ಲಿಂಗ್‌ ದೇಸಿ ರೊಮಾನ್ಸ್ ಲುಕ್‌ ನೀಡುವಂತಹ ಗ್ರ್ಯಾಂಡ್‌ ಫ್ಯಾಬ್ರಿಕ್‌ ಹಾಗೂ ಎಂಬ್ರಾಯ್ಡರಿ ವರ್ಕ್ ಇರುವಂತಹ ದೇಸಿ ಉಡುಗೆ-ತೊಡುಗೆ ಧರಿಸುವಂತೆ ಪ್ರಕಟಿಸಲಾಗಿದೆ. ಮಾನಿನಿಯರಿಗೆ ಪಾಸ್ಟೆಲ್‌ ಬೋಲ್ಡ್ ಶೇಡ್‌ನ ಸಿಕ್ವೀನ್ಸ್ ಸೀರೆ, ಗ್ರ್ಯಾಂಡ್‌ ಎಂಬ್ರಾಯ್ಡರಿ ಲೆಹೆಂಗಾ, ಮೆನ್ಸ್ ಕೆಟಗರಿಯವರಿಗೆ ಬಂದಗಾಲ, ಶೆರ್ವಾನಿ ಎಂದು ತಿಳಿಸಲಾಗಿದೆ. ಇದೇ ಸಮಯದಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಡಾನ್ಸ್ ಮಾಡಲು ಸಹಾಯವಾಗುವಂತಹ ಉಡುಗೆಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ.

Anant Ambani Radhika Merchant Tusker Trails

ಮಾರ್ಚ್ 3 : ಟಸ್ಕರ್‌ ಟ್ರಯಲ್ಸ್ – ಹೇರಿಟೇಜ್‌ ಇಂಡಿಯಾ

ಬೆಳಗ್ಗೆ ಶುರುವಾಗುವ ಟಸ್ಕರ್‌ ಟ್ರಯಲ್‌ ಹೆಸರಿನ ಔಟ್‌ಡೋರ್‌ ಆಕ್ಟಿವಿಟಿಯಲ್ಲಿ, ಅತಿಥಿಗಳು ಕ್ಯಾಶುವಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನು, ಅದೇ ದಿನ ಸಂಜೆ ವೇಳೆ ನಡೆಯುವ ಹಸ್ತಾಕ್ಷರ್‌ ಕಾರ್ಯಕ್ರಮದಲ್ಲಿ ಹೆರಿಟೇಜ್‌ ಇಂಡಿಯನ್‌ ಡ್ರೆಸ್‌ಕೋಡ್‌ ನೀಡಿದ್ದು, ಇಲ್ಲಿ ನಡೆಯುವ ರಾಯಲ್‌ ಪಾರ್ಟಿಯಲ್ಲಿ ಅತಿಥಿಗಳು, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ರಾಯಲ್‌ ಲುಕ್ ನೀಡುವ ರೇಷ್ಮೆ ಸೀರೆ, ಲೆಹೆಂಗಾ, ಅನಾರ್ಕಲಿ, ಶೆರ್ವಾನಿ, ಟರ್ಬನ್‌, ಕುರ್ತಾದಂತಹ ದೇಸಿ ಅಟೈರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Star Fashion: ರೈನ್‌ಸ್ಟೋನ್ ಜಂಪ್‌ಸೂಟ್‌ನಲ್ಲಿ ರಾಕ್‌ಸ್ಟಾರ್‌ನಂತೆ ಮಿಂಚಿದ ಸಾನ್ಯಾ ಅಯ್ಯರ್

Continue Reading

ಫ್ಯಾಷನ್

Sandalwood Star Fashion: ರೈನ್‌ಸ್ಟೋನ್ ಜಂಪ್‌ಸೂಟ್‌ನಲ್ಲಿ ರಾಕ್‌ಸ್ಟಾರ್‌ನಂತೆ ಮಿಂಚಿದ ಸಾನ್ಯಾ ಅಯ್ಯರ್

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಜಗಮಗಿಸುವ ಅತ್ಯಾಕರ್ಷಕ ಡಿಸೈನರ್‌ವೇರ್‌ ರೈನ್‌ಸ್ಟೋನ್‌ ಬಾಡಿಕಾನ್‌ ಜಂಪ್‌ಸೂಟ್‌ನಲ್ಲಿ ಸ್ಯಾಂಡಲ್‌ವುಡ್‌ ಯುವ ನಟಿ ಸಾನ್ಯಾ ಅಯ್ಯರ್ (Sandalwood Star Fashion), ರಾಕ್‌ ಹಾಗೂ ಪಾಪ್‌ ಸ್ಟಾರ್ಸ್ ರಿಹಾನಾ ಹಾಗೂ ಜೆನಿಫರ್‌ ಲೊಪೆಝ್‌ನಂತೆ ಮಿಂಚಿದರು. ಅವರ ಈ ಡಿಸೈನರ್‌ವೇರ್‌ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Sandalwood Star Fashion
ಚಿತ್ರಗಳು: ಸಾನ್ಯಾ ಅಯ್ಯರ್, ಸ್ಯಾಂಡಲ್‌ವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಜಗಮಗಿಸುವ ಅತ್ಯಾಕರ್ಷಕ ಡಿಸೈನರ್‌ವೇರ್‌ ರೈನ್‌ಸ್ಟೋನ್‌ ಬಾಡಿಕಾನ್‌ ಜಂಪ್‌ಸೂಟ್‌ನಲ್ಲಿ ಸ್ಯಾಂಡಲ್‌ವುಡ್‌ ಯುವ ನಟಿ ಸಾನ್ಯಾ ಅಯ್ಯರ್ (Sandalwood Star Fashion) ರಾಕ್‌ಸ್ಟಾರ್‌ನಂತೆ ಕಂಗೊಳಿಸಿದ್ದಾರೆ. ನೋಡಲು ರಾಕ್‌ ಹಾಗೂ ಪಾಪ್‌ ಸ್ಟಾರ್‌ಗಳಾದ ರಿಹಾನಾ ಹಾಗೂ ಜೆನಿಫರ್‌ ಲೊಪೆಝ್‌ನಂತೆ ಇತ್ತೀಚಿನ ವೇದಿಕೆಯೊಂದರ ಪರ್ಫಾಮಾನ್ಸ್‌ವೊಂದರಲ್ಲಿ ಮಿಂಚಿದರು. ಅವರ ಈ ಅತ್ಯಾಕರ್ಷಕ ಡಿಸೈನರ್‌ವೇರ್‌ ಕುರಿತಂತೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.

What is a Rhinestone Bodycon Jumpsuit?

ಏನಿದು ರೈನೋಸ್ಟೋನ್ ಬಾಡಿಕಾನ್‌ ಜಂಪ್‌ಸೂಟ್‌?

ಮೆರ್ಮೈಡ್ ಬಾಡಿಕಾನ್‌ ರೈನೋಸ್ಟೋನ್‌ ಜಂಪ್‌ಸೂಟ್‌, ರಾಕ್‌ ಸ್ಟಾರ್ ಹಾಗೂ ಪಾಪ್‌ಸ್ಟಾರ್ ಲುಕ್‌ ನೀಡುವಂತಹ ಡಿಸೈನರ್‌ವೇರ್‌. ಅಂದಹಾಗೆ, ಈ ಔಟ್‌ಫಿಟ್‌ಗೆ ಅತ್ಯುತ್ತಮ ಬಾಡಿ ಮಾಸ್‌ ಇಂಡೆಕ್ಸ್ ಹೊಂದಿರಬೇಕು. ಬಾಡಿ ಫಿಟ್‌ ಇರಬೇಕು. ಲೈಕ್ರಾ ಮೆಟಿರಿಯಲ್‌ನಲ್ಲಿ ಸಿದ್ಧಗೊಂಡಿರುವ ಈ ಔಟ್‌ಫಿಟ್‌ ಬ್ಲಾಕ್‌ ಸಿಕ್ವೀನ್ಸ್ ಪ್ಯಾಚ್‌ ವರ್ಕ್ನ ಫ್ಯಾಬ್ರಿಕ್‌ ಒಳಗೊಂಡಿದೆ. ಗ್ಲ್ಯೂ ಫಿನಿಶಿಂಗ್‌ ನೀಡುವ ಈ ಉಡುಪು ರೆಡ್‌ ಕಾರ್ಪೆಟ್ ಹಾಗೂ ಸ್ಟೇಜ್‌ ಕಾರ್ಯಕ್ರಮಗಳಿಗೆ ಪರ್ಫೆಕ್ಟ್ ಹೊಂದುತ್ತದೆ. ಇಡೀ ಡಿಸೈನರ್‌ವೇರ್‌ ಜ್ಯುವೆಲ್‌ನಂತೆ ಮಿನುಗುವುದರಿಂದ ಜ್ಯುವೆಲರಿಗಳನ್ನು ಧರಿಸುವ ಅಗತ್ಯವಿರುವುದಿಲ್ಲ, ಅಷ್ಟೊಂದು ಆಕರ್ಷಕವಾಗಿದೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ.

Love the Sanya rhinestone jumpsuit

ಸಾನ್ಯಾ ರೈನ್ ಸ್ಟೋನ್‌ ಜಂಪ್‌ಸೂಟ್‌ ಲವ್‌

ಈ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಸಾನ್ಯಾ, ನನಗಂತೂ ಈ ಡಿಸೈನರ್‌ವೇರ್‌ ಬಹಳ ಇಷ್ಟವಾಯಿತು. ಯಾಕೆಂದರೇ, ವಕೌಟ್‌ ಮಾಡುವ ನಮಗೆ ಫಿಟ್ನೆಸ್‌ ಬಗ್ಗೆ ತುಸು ಪ್ರೀತಿ ಜಾಸ್ತಿ. ಇದಕ್ಕೆ ಪೂರಕ ಎಂಬಂತೆ, ಲಕ್ಷ್ಮಿ ಕೃಷ್ಣ ಅವರ ಈ ಡಿಸೈನರ್‌ವೇರ್‌ ಧರಿಸಿದಾಗ ಆಗಿದ್ದ ಖುಷಿಗೆ ಪಾರವೇ ಇರಲಿಲ್ಲ! ರಾಕ್‌ಸ್ಟಾರ್‌ ಫಿಲೀಂಗ್‌ ನೀಡಿತು. ಇದು ನನ್ನ ಅಲ್ಟಿಮೆಂಟ್‌ ಫ್ಯಾಷನ್‌ವೇರ್‌ ಆಗಿತ್ತು! ಇದುವರೆಗೂ ಈ ರೀತಿಯ ಫ್ಯಾಷನ್‌ವೇರ್‌ ನಾನು ಧರಿಸಿಯೇ ಇರಲಿಲ್ಲ! ಈ ಔಟ್‌ಫಿಟ್‌ ಎಷ್ಟೊಂದು ಕ್ರಿಯೇಟಿವ್‌ ಆಗಿತ್ತೆಂದರೇ ಡಿಸೈನರನ್ನು ಪ್ರಶಂಸಿಸಲೇಬೇಕು ಎನ್ನುತ್ತಾರೆ. ಅವರ ಪ್ರಕಾರ, ಔಟ್‌ಆಫ್‌ ಬಾಕ್ಸ್ ಯೋಚನೆ ಮಾಡಿದಾಗ ಮಾತ್ರ ಡಿಸೈನರ್‌ಗಳಿಗೆ ಇಂತಹ ಕ್ರಿಯೇಟಿವ್‌ ಫ್ಯಾಷನ್‌ ಸೃಷ್ಟಿಸಲು ಸಾಧ್ಯ ಎಂದು ಹೊಗಳುತ್ತಾರೆ.

Sanya Iyer, Sandalwood actress

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಮಾತು

ಈ ಡಿಸೈನರ್‌ವೇರ್‌ ಸಿದ್ಧಪಡಿಸಲು ಅದರ ಮೇಲಿನ ವರ್ಕ್‌ಗಾಗಿ ಸರಿಸುಮಾರು 3000 ಗಂಟೆಗಳು ಹಿಡಿದಿವೆ. ಇದೊಂದು ಪ್ರಯೋಗಾತ್ಮಕ ಕಾಸ್ಟ್ಯೂಮ್‌. ಸುಮಾರು 5000 ರೈನ್‌ಸ್ಟೋನ್ಸ್ ಈ ಉಡುಪಿನ ಮೇಲಿದೆ. ಸ್ಯಾಂಡಲ್‌ವುಡ್‌ ತಾರೆಯರು ಕೂಡ ಇಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ ಧರಿಸಿ ಪರ್ಫಮಾನ್ಸ್ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಡಿಜಿಟಲ್‌ ಪ್ರಿಂಟ್‌ ಹಾಗೂ ಹ್ಯಾಂಡ್‌ವರ್ಕ್‌ನಿಂದ ಕೂಡಿರುವ ಈ ಡ್ರೆಸ್, ಸಾನ್ಯಾ ಧರಿಸಿದ್ದು ನನಗೆ ಖುಷಿಯಾಯಿತು ಎಂದು ತಮ್ಮ ಎಕ್ಸ್ ಕ್ಲೂಸೀವ್‌ ಡಿಸೈನರ್‌ವೇರ್‌ ಬಗ್ಗೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Blouse Design: ಗ್ರ್ಯಾಂಡ್‌ ಸೀರೆ ಬ್ಲೌಸ್‌ಗೆ ಅತ್ಯಾಕರ್ಷಕ ಬಾಜುಬಂದ್‌ ಎಂಬ್ರಾಯ್ಡರಿ ಡಿಸೈನ್‌ ಹೇಗಿದೆ ನೋಡಿ!

Continue Reading

ಫ್ಯಾಷನ್

Silicon Mini Handbags Trend: ಇದೀಗ ಸಖತ್‌ ಟ್ರೆಂಡಿ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್ಸ್!

ಇದೀಗ ನಾನಾ ಬಗೆಯ ವಿನ್ಯಾಸದ ಬಣ್ಣ ಬಣ್ಣದ ಜೆಲ್ಲಿಯಂತಿರುವ ಮಿನಿ ಸ್ಲಿಂಗ್ ಕಿಡ್ಸ್ ಹ್ಯಾಂಡ್ ಬ್ಯಾಗ್‌ಗಳು (Silicon Mini Handbags Trend) ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿರುವ ಇವು ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ? ಕೈಗೆಟಕುವ ದರದಲ್ಲಿ ಎಲ್ಲಿ ದೊರೆಯುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.

VISTARANEWS.COM


on

Silicon mini handbags trend
ಚಿತ್ರಗಳು: ಮಿಂಚು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಂಡಿಯಾಗಿರುವ ಜೆಲ್ಲಿಯಂತಿರುವ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್‌ಗಳು (Silicon Mini Handbags Trend) ಪುಟ್ಟ ಹೆಣ್ಣುಮಕ್ಕಳನ್ನು ಸವಾರಿ ಮಾಡತೊಡಗಿವೆ. ನೋಡಲು ಫಂಕಿ ಲುಕ್ ನೀಡುವ ಈ ಕ್ಯೂಟ್ ಮಿನಿ ಹ್ಯಾಂಡ್ ಬ್ಯಾಗ್‌ಗಳು ಇದೀಗ ನಾನಾ ಬಗೆಯ ವಿನ್ಯಾಸದಲ್ಲಿ ಹಾಗೂ ಬಣ್ಣದಲ್ಲಿ ದೊರೆಯುತ್ತಿವೆ.

Popular jelly mini handbags

ಪಾಪ್ಯುಲರ್ ಆದ ಜೆಲ್ಲಿ ಮಿನಿ ಹ್ಯಾಂಡ್ ಬ್ಯಾಗ್ಸ್

“ಹೆಣ್ಣುಮಕ್ಕಳಿಗೆ ಮೊದಲಿನಿಂದಲೂ ನೇತಾಡುವ ಬಗೆಬಗೆಯ ಡಿಸೈನ್‌ನ ಪರ್ಸ್ ಹಾಗೂ ಹ್ಯಾಂಡ್ ಬ್ಯಾಗ್‌ ಸ್ಲಿಂಗ್ ಬ್ಯಾಗ್‌ಗಳನ್ನು ಹಾಕಿಕೊಳ್ಳುವುದು ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು, ಕೆಲವು ಮಕ್ಕಳಂತೂ ದೊಡ್ಡವರಂತೆ ಸಿಂಗರಿಸಿಕೊಂಡು, ಔಟ್‌ಫೀಟ್‌ನೊಂದಿಗೆ ಹ್ಯಾಂಟ್‌ ಬ್ಯಾಗ್‌ ಕೂಡ ಹಾಕಿಕೊಳ್ಳಲು ಬಯಸುತ್ತಾರೆ. ಇಂತಹ ಮಕ್ಕಳಿಗೆ ಇಷ್ಟವಾಗುವಂತೆ, ಇದೀಗ ಬ್ರಾಂಡ್ ಡಿಸೈನ್ ಮೀರಿಸುವಂತಹ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಧರಿಸಿದಾಗ ಆಕರ್ಷಕವಾಗಿ ಕಾಣುವ ಇವುಗಳ ಬೆಲೆಯೂ ಕೂಡ ದೊಡ್ಡ ಬ್ಯಾಗ್‌ಗಳಷ್ಟೇ ಇದೆ. ಟ್ವಿನ್ನಿಂಗ್ ಮಾಡಲು ಬಯಸುವ ಅಮ್ಮ-ಮಗಳು ಕೂಡ ಇವನ್ನು ಕೊಳ್ಳಬಹುದು. ದೊಡ್ಡ ಡಿಸೈನಿಂಗ್ ಬ್ಯಾಗ್‌ನ ರಿಪ್ಲಿಕಾದಂತೆ ಕಾಣಿಸುವ ಈ ಬ್ಯಾಗ್‌ಗಳು ಇದೀಗ ಸಖತ್ ಪಾಪ್ಯುಲರ್ ಆಗಿವೆ” ಎನ್ನುತ್ತಾರೆ ಬ್ಯಾಗ್ ಮಾರಾಟಗಾರರು. ಅವರ ಪ್ರಕಾರ, ಆಫ್‌ಲೈನ್‌ ಅಂಗಡಿಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಇವುಗಳ ಮಾರಾಟ ಹೆಚ್ಚಿದೆ ಎನ್ನುತ್ತಾರೆ.

Trendy jelly mini sling hand bags

ಟ್ರೆಂಡಿಯಾಗಿರುವ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್ಸ್

ಕ್ಲಚ್ ಜೆಲ್ಲಿ ಫ್ಲಾಪ್ ಹ್ಯಾಂಡ್ ಬಾಗ್, ಜೆಲ್ಲಿ ಕ್ಯಾಂಡಿ ಮಿನಿ ಸ್ಲಿಂಗ್ ಬ್ಯಾಗ್, ಮಿನಿ ಪರ್ಲ್ ಸ್ಲಿಂಗ್ ಬ್ಯಾಗ್, ಜೆಲ್ಲಿ ಕ್ರಾಸ್‌ಬಾಡಿ ಸ್ಲಿಂಗ್ ಬ್ಯಾಗ್, ಕಾರ್ಟೂನ್ ಪ್ಯಾಚ್ ವರ್ಕ್ ಜೆಲ್ಲಿ ಶೇಡ್ ಮಿನಿ ಬ್ಯಾಗ್, ಪರ್ಲ್ ಹ್ಯಾಂಡಲ್ ಮಿನಿ ಜೆಲ್ಲಿ ಬ್ಯಾಗ್, ಕ್ರಿಸ್‌ಕ್ರಾಸ್‌ ಸ್ಲಿಂಗ್ ಬ್ಯಾಗ್, ಟ್ರೆಂಡಿ ಸಿಲಿಕಾನ್ ಜೆಲ್ಲಿ ಬ್ಯಾಗ್ ಸೇರಿದಂತೆ ನಾನಾ ಡಿಸೈನ್‌ನವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಮಕ್ಕಳಿಗೆ ಪ್ರಿಯವಾಗುವಂತಹ ಕ್ಯಾಂಡಿ ಕಲರ್‌ಗಳು, ಡಾರ್ಕ್ ಶೇಡ್‌ನವು, ಲೈಟ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ. ಇನ್ನು ನೋಡಲು ಬ್ರಾಂಡೆಡ್ ಡಿಸೈನರ್ ಬ್ಯಾಗ್‌ಗಳಂತೆಯೇ ಕಾಣಿಸುವ ಈ ಮಿನಿ ಜೆಲ್ಲಿ ಬ್ಯಾಗ್‌ಗಳು ಕಲರ್‌ಫುಲ್‌ ಶೇಡ್‌ನಲ್ಲಿ ಜನಪ್ರಿಯಗೊಂಡಿವೆ. ಆನ್‌ಲೈನ್‌ನಲ್ಲೂ ಸಾಕಷ್ಟು ಡಿಸೈನ್‌ನಲ್ಲಿ ಲಭ್ಯವಿರುವ ಇವು ಅಂಗಡಿಗಳಲ್ಲೂ ದೊರೆಯುತ್ತಿವೆ. ಬ್ರಾಂಡೆಡ್ ರಿಪ್ಲಿಕಾ ಡಿಸೈನ್‌ನಲ್ಲಿರುವ ಲೋಕಲ್ ಬ್ರಾಂಡ್‌ನವು ಕಡಿಮೆ ದರದಲ್ಲಿ ದೊರೆಯುತ್ತವೆ. ಸುಮಾರು 250 ರೂ.ಗಳಿಂದ ಆರಂಭಗೊಂಡು 700ರೂ.ಗಳವರೆಗೂ ಬೆಲೆ ಇದೆ. ಚೌಕಾಸಿ ಮಾಡಿ ವ್ಯಾಪಾರ ಮಾಡಿ ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

Where available in Bangalore?

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ?

ಉದ್ಯಾನನಗರಿಯ ಮಲ್ಲೇಶ್ವರಂ 8ನೇ ಕ್ರಾಸ್ ಸುತ್ತಮುತ್ತ, ಜಯನಗರ 4ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ್, ಕಮರ್ಷಿಯಲ್ ಸ್ಟ್ರೀಟ್ ಅಕ್ಕ-ಪಕ್ಕದ ಅಂಗಡಿಗಳಲ್ಲಿ, ಗಾಂಧೀಬಜಾರ್, ಮೆಜಸ್ಟಿಕ್ ಆಸುಪಾಸಿನ ಅಂಗಡಿಗಳಲ್ಲಿ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಮಕ್ಕಳಿಗೆ ಸುಮ್ಮನೆ ಹೆಚ್ಚು ಬೆಲೆಯ ಬ್ರಾಂಡೆಡ್ ಮಿನಿ ಬ್ಯಾಗ್‌ಗಳನ್ನು ಹೆಚ್ಚು ಹಣ ತೆತ್ತು ಕೊಂಡುಕೊಳ್ಳುವ ಬದಲು ರಿಪ್ಲಿಕಾ ಕೊಡಿಸಿದರೇ ಉತ್ತಮ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Orrys Nut & Bolt Earring Fashion: ವಿಚಿತ್ರ ಸ್ಟೈಲಿಂಗ್‌ ಮಾಡುವ ಪೇಜ್‌ ತ್ರಿ ಸ್ಟಾರ್‌ನ ಕಿವಿ ಅಲಂಕರಿಸಿದ ನಟ್‌ & ಬೋಲ್ಟ್!

Continue Reading
Advertisement
kannada sign boards
ಪ್ರಮುಖ ಸುದ್ದಿ15 mins ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ22 mins ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ22 mins ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ32 mins ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ52 mins ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ1 hour ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು8 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Siddaramaiah
ಪ್ರಮುಖ ಸುದ್ದಿ8 hours ago

ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌