ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ಅವರ ಮುಂದಿನ ಚಿತ್ರ, ‘ಕಿಚ್ಚ 46’ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್ ಧಾನು ಇತ್ತೀಚೆಗೆ ಘೋಷಿಸಿದ್ದರು. ಇದೀಗ ಈ ಸಿನಿಮಾದ ಟೀಸರ್ (Kiccha 46 Teaser) ಬಿಡುಗಡೆಗೊಂಡಿದೆ. ʻಕಿಚ್ಚ 46ʼ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ರಣರಣ ರಕ್ಕಸನಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಟೀಸರ್‌ನಲ್ಲಿ ಕಿಚ್ಚನ ಮಾಸ್ ಡೈಲಾಗ್ ಹೈಲೈಟ್ ಆಗಿದೆ. ʻಯುದ್ಧ ಹುಟ್ಟಾಕೋರ್ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್ ಡೈಲಾಗ್ ಹೊಡೆದಿದ್ದಾರೆ ಕಿಚ್ಚ. ಇದೀಗ ಈ ಡೈಲಾಗ್ ಟ್ರೆಂಡ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರ ಕಿಚ್ಚ 46 ಟೀಸರ್ ಬಿಡುಗಡೆಗೊಂಡಿದ್ದು, ಎದೆ ಬಗೆಯುವ ಡೈಲಾಗ್ ಹೊಡೆದಿದ್ದಾರೆ ಅಭಿನಯ ಚಕ್ರವರ್ತಿ. ಸದ್ಯದಲ್ಲೇ ಕಿಚ್ಚ-46 ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕಿಚ್ಚ 46 ಸಿನಿಮಾ ತಂಡ ದಿನೇದಿನೆ ಹೊಸ ಅಪ್‌ಡೇಟ್ ಹಂಚಿಕೊಳ್ಳುತ್ತಲೇ ಇತ್ತು. ಹೀಗಿರುವಾಗ ಫ್ಯಾನ್ಸ್ ಟೀಸರ್ ಬಿಡುಗಡೆ ಯಾವಾಗ ಎಂದು ಪ್ರಶ್ನೆ ಕೇಳುತ್ತಲೇ ಇದ್ದರು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಕಿಚ್ಚ 46 ಸಿನಿಮಾವನ್ನು ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿಯ ‘ವಿ ಕ್ರಿಯೇಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಬ್ಯಾನರ್ ಜತೆ ಸುದೀಪ್ ಅವರು ಸಿನಿಮಾ ಮಾಡಲಿರುವುದು ವಿಶೇಷ.
ಇದನ್ನೂ ಓದಿ: Kichcha Sudeepa: ಸಿನಿಮಾಗೆ ಕಾಲಿಟ್ಟ ಅಕ್ಕನ ಮಗನಿಗೆ ಕಿಚ್ಚ ಸುದೀಪ್ ಕಿವಿ ಮಾತು; ಟೈಟಲ್ ಕೊಟ್ಟಿದ್ದು ಯಾರು?
ಕಿಚ್ಚ ಸುದೀಪ್ ಪೋಸ್ಟ್
𝐓𝐇𝐄 𝐃𝐄𝐌𝐎𝐍 𝐖𝐀𝐑 𝐁𝐄𝐆𝐈𝐍𝐒😈#Kichcha46Teaser out now!
— Kichcha Sudeepa (@KicchaSudeep) July 2, 2023
🔗 https://t.co/nuVPnwIhJ3#Kichcha46 @theVcreations @Kichchacreatiin @saregamasouth @TSrirammt @shivakumarart @vijaykartikeyaa @shekarchandra71 @AJANEESHB @ganeshbaabu21 #SaregamaMusic @KRG_Connects #Kiccha46 pic.twitter.com/YW5NN9n4TQ
ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಚಿತ್ರತಂಡ ಹೇಳಿಕೊಂಡಿರಲಿಲ್ಲ. ಈಗಾಗಲೇ ಕಿಚ್ಚನ ಕೈಯಲ್ಲಿ ಮೂರು ಸಿನಿಮಾಗಳಿವೆ. ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.