Site icon Vistara News

Kichcha Sudeepa: ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿ ಮಹಿಳಾ ಅಭಿಮಾನಿಯ ಹುಚ್ಚು ಪ್ರೀತಿ; ಕಿಚ್ಚ ಹೇಳಿದ್ದೇನು?

Kichcha Sudeep fan vaishnavi

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ (Kichcha Sudeepa) ಹಲವು ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸುದೀಪ್ ಗುರುತಿಸಿಕೊಂಡಿದ್ದಾರೆ. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಬಳಗವಿದೆ. ಇದೀಗ ಮಹಿಳಾ ಅಭಿಮಾನಿಯ ಹುಚ್ಚು ಪ್ರೀತಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಿವಮೊಗ್ಗದ ವೈಷ್ಣವಿ ಅವರು ತಮ್ಮದೇ ರಕ್ತದಲ್ಲಿ ಸುದೀಪ್ ಅವರ ಫೋಟೊ ಬಿಡಿಸಿಕೊಂಡಿದ್ದಾರೆ. ಇದನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಕೂಡ ಇದನ್ನು ರಿಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿದೆ.ಮೊಟ್ಟೆ ಹಾಗೂ ಮಾಂಸಹಾರ ಸೇವಿಸದ ಹುಡುಗಿ ರಕ್ತದಲ್ಲಿ ಚಿತ್ರ ಬಿಡಿಸಿಕೊಂಡಿದ್ದಾರೆ ಗ್ರೇಟ್ ಎಂದು ವಿಡಿಯೊ ವೈರಲ್‌ ಆಗುತ್ತಿದೆ. ಈ ರೀತಿ ರಕ್ತದಲ್ಲಿ ಚಿತ್ರ ಬಿಡಿಸಿ ಅಭಿಮಾನ ತೋರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ. ರಕ್ತ ಅತ್ಯಮೂಲ್ಯವಾದುದ್ದು. ಅದನ್ನು ಈ ರೀತಿ ಅಭಿಮಾನ ತೋರಿಸಲು ಬಳಕೆ ಮಾಡುವುದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: Kichcha Sudeepa: ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ!

ʻʻವೈಷ್ಣವಿ ದೀಪು ಶಿವಮೊಗ್ಗದವರು ನಮ್ಮ ಕಿಚ್ಚ ಸುದೀಪ್ ಅಣ್ಣನಿಗಾಗಿ ಅವರ ರಕ್ತದಲ್ಲಿ ಅಣ್ಣನ ಚಿತ್ರವನ್ನು ಬಿಡಿಸಿದ್ದಾರೆ. ರಕ್ತ, ಮೊಟ್ಟೆ, ಮಾಂಸವನ್ನು ನೋಡದೆ ಇರುವ ಇವರು ನಿಜಕ್ಕೂ ಗ್ರೇಟ್ʼʼಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ (Kichcha Sudeep) ಅವರ ಮುಂದಿನ ಚಿತ್ರ, ‘ಕಿಚ್ಚ 46’ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್‌ ಧಾನು ಇತ್ತೀಚೆಗೆ ಘೋಷಿಸಿದ್ದರು. ಕಿಚ್ಚ ಸುದೀಪ್‌ ಅವರ ಕಿಚ್ಚ 46 ಟೀಸರ್‌ ಬಿಡುಗಡೆಗೊಂಡಿದ್ದು, ಎದೆ ಬಗೆಯುವ ಡೈಲಾಗ್ ಹೊಡೆದಿದ್ದಾರೆ ಅಭಿನಯ ಚಕ್ರವರ್ತಿ. ಸದ್ಯದಲ್ಲೇ ಕಿಚ್ಚ-46 ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕಿಚ್ಚ 46 ಸಿನಿಮಾ ತಂಡ ದಿನೇದಿನೆ ಹೊಸ ಅಪ್‌ಡೇಟ್‌ ಹಂಚಿಕೊಳ್ಳುತ್ತಲೇ ಇತ್ತು.ಕಿಚ್ಚ 46 ಸಿನಿಮಾವನ್ನು ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿಯ ‘ವಿ ಕ್ರಿಯೇಷನ್ಸ್​’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಬ್ಯಾನರ್​ ಜತೆ ಸುದೀಪ್​ ಅವರು ಸಿನಿಮಾ ಮಾಡಲಿರುವುದು ವಿಶೇಷ.

ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಚಿತ್ರತಂಡ ಹೇಳಿಕೊಂಡಿರಲಿಲ್ಲ. ಈಗಾಗಲೇ ಕಿಚ್ಚನ ಕೈಯಲ್ಲಿ ಮೂರು ಸಿನಿಮಾಗಳಿವೆ. ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

Exit mobile version