Kichcha Sudeep: ಎಂ ಎನ್​ ಕುಮಾರ್​ ಹೊರಿಸಿದ ಆರೋಪಕ್ಕೆ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್‌ - Vistara News

South Cinema

Kichcha Sudeep: ಎಂ ಎನ್​ ಕುಮಾರ್​ ಹೊರಿಸಿದ ಆರೋಪಕ್ಕೆ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್‌

Kichcha Sudeep: ಎನ್‌ ಎಂ ಕುಮಾರ್ ವಿವಾದಕ್ಕೆ ಸಂಬಂದಿಸಿದಂತೆ ಕಿಚ್ಚ ಸುದೀಪ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳಿಗೆ ಗೌರವ ಪೂರ್ವಕವಾಗಿ ತಾವು ನ್ಯಾಯಾಲಯಕ್ಕೆ ಹೋಗುತ್ತಿರುವುದರ ಬಗ್ಗೆ ಒಂದು ಆಪ್ತ ವಿವರಣೆ ಸಲ್ಲಿಸಿದ್ದಾರೆ.

VISTARANEWS.COM


on

Kichcha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ವಿರುದ್ಧ ಸ್ಯಾಂಡಲ್​ವುಡ್ ನಿರ್ಮಾಪಕರು ಸಿಡಿದೆದ್ದಿದ್ದಾರೆ. ನಿರ್ಮಾಪಕ ಎನ್‌ ಎಂ ಕುಮಾರ್ ವಿವಾದಕ್ಕೆ ಸಂಬಂದಿಸಿದಂತೆ ಕಿಚ್ಚ ಸುದೀಪ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳಿಗೆ ಗೌರವ ಪೂರ್ವಕವಾಗಿ ತಾವು ನ್ಯಾಯಾಲಯಕ್ಕೆ ಹೋಗುತ್ತಿರುವುದರ ಬಗ್ಗೆ ಒಂದು ಆಪ್ತ ವಿವರಣೆ ಸಲ್ಲಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಕಿಚ್ಚ ಸುದೀಪ್‌ ಪತ್ರದಲ್ಲಿ ʻʻಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಕಳೆದ 27 ವರ್ಷಗಳಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿಯಾಗಿ ಈ ಪತ್ರ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ 27 ವರ್ಷ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆ ಆಧಾರಾದ ಮೇಲೆ ಪತ್ರ ಬರೆಯುತ್ತಿದ್ದೇನೆ.

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ. ಅಷ್ಟೇ ಸ್ಪಂದಿಸಬೇಕಾದುದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ, ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ವೀಕ್ಷಿಸುವುದು ಮಾತ್ರ ಸಂಸ್ಥೆ ಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆ ಇಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.

ಇದನ್ನೂ ಓದಿ: Kichcha Sudeep: ಇನ್ನೇನಿದ್ದರೂ ಕಾನೂನು ಹೋರಾಟ, ಕುಮಾರ್ ಆರೋಪ ಸುಳ್ಳೆಂದ ಜಾಕ್‌ ಮಂಜು!

ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧ

ಅಲ್ಲದೇ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ, ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ – ಎನ್‌ ಎಂ ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪುಯತ್ನಿಸಿದ್ದೇನೆ, ನಾನು ಪುಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದ್ದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ, ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾ ಗೋಷ್ಟಿ ನಡೆಯಿತು, ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ, ಜತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿ ಕೊಂಡಿತು. ಸಂಧಾನವೆಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು, ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧವಾಗುವುದು.

ಇದನ್ನು ಒಂದು ಉದಾಹರಣೆಯಾಗಿ ತಮಗೆ ಅರ್ಥ ಮಾಡಿಸುವುದಾದರೆ, ಒಂದು ದಾಂಪತ್ಯದಲ್ಲಿ ಬಿರುಕು ಬಂದರೆ, ಆ ಕುಟುಂಬದ ಸ್ನೇಹಿತರು, ಯಾರ ಪರವಾಗಿ ನಿಲ್ಲಬೇಕೆಂದು ಸಂಕಟ ಪಡುತ್ತಾರೆ. ಆ ಸಂಧಿಗ್ಧತೆಯಲ್ಲಿ ಒಬ್ಬರ ಪರ ನಿಲ್ಲುವುದು ಸಮಂಜಸವೂ ಆಗಿರುವುದಿಲ್ಲ ಅಂತಹದೇ ಒಂದು ಒತ್ತಡ, ಸಂದಿಗ್ಧತೆ ಈಗ ನಮ್ಮ ಮಾತೃ ಸಂಸ್ಥೆಗಳನ್ನು ಆ ಒತ್ತಡ, ಸಂಕಷ್ಟಕ್ಕೆ, ನೀವುಗಳು ಸಿಲುಕಬಾರದೆಂದೇ ನಾನು ನ್ಯಾಯಾಲಯದ ಮೊರೆ ಹೋಗಿದ್ದು.

ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ

27 ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತುಪಡಿಸಿ 45 ಸಿನೆಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈ ವರಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ.

ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆ ಇಂದಲೇ ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾವೇ ಪಾಠ ಕಲಿತಿದ್ದೇನೆ.

ಇದನ್ನೂ ಓದಿ: Kiccha Sudeep : ನನ್ನ ಒಳ್ಳೆಯತನ ದುರುಪಯೋಗದ ಟೂಲ್‌ ಅಲ್ಲ! ಖಡಕ್‌ ಸಂದೇಶ ಕೊಟ್ಟ ಕಿಚ್ಚ ಸುದೀಪ್

ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿಷ್ಯಕ್ಕೆ ಕೆಟ್ಟ ಉದಾಹರಣೆಗಳು ದಕ್ಕ ಬಾರದು ಎಂದು ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ, ಸುಳ್ಳು, ಉದಾಹರಣೆಗೆ ನಾನು ಸಿಲುಕ ಬಾರದು. ಈ ಕಾರಣಕ್ಕೆ ಬೇರೆಲ್ಲರ ವಿಷಯದಲ್ಲಿ ಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ಧನಾಗಿದ್ದೇನೆ.

ಒಂದು ಮಾತು ನಿಮ್ಮ ಪತ್ರಿಕಾ ಗೋಷ್ಟೀಯಲ್ಲಿ ಹೊರಬಂತು. ಅದು ನನಗೆ ತೀವು ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕೆಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರ್ ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ, ಇಡೀ ಸಮಾಜಕ್ಕೆ ಕೊಟ್ಟಿ ಅಪಾಯಕಾರಿ ಸಂದೇಶ, ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕಟ್ಟೆ, ಬೆಳವಣಿಗೆ ಆರಂಭವಾಯಿತು?

ದೈಹಿಕವಾಗಿ, ಮಾನಸಿಕವಾಗಿ, ಕುಮಾರ್‌ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು. ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವ್ರ ನೋವು ತಂದಿದೆ ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ, ಆಗಲಾರೆ, ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶ್‌ ಅವರನ್ನು ಭಾಗಿ ಮಾಡಿದೆ. ಅವರಿಗೂ ನೋಟೀಸ್ ಕಳೆಸಿದೆ ವಿನಃ ಕೋಪ ತಾಪ ಆಕ್ರೋಶದಿಂದಲ್ಲ, ನೋವಿನಿಂದ, ಸುರೇಶ್ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನನ್ನ ತನಕ ಅಪರಿಚಿತರೋ, ಪರಿಚಿತರೋ, ಸಿನಿಮಾ ರಂಗದವರೋ ಅಲ್ಲವೋ, ಸಹಕಲಾವಿದರೋ, ತಂತ್ರಜ್ಞರೂ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಳು ಸಹಾಯ ಮಾಡಿದ್ದೇನೆ.

ಯಾರನ್ನೇ ಆಗಲಿ ಜೀವನ ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ.

ಎಲ್ಲ ನಿರ್ಮಾಪಕರ ಬಗೆ, ಗೌರವವಿಲ್ಲದ, ನಂಬಿಕೆ ಇಲ್ಲದ, ಇಷ್ಟರ ವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ ದುಃಖ ದುಮ್ಮಾನಗಳಿವೆ, ನಮ್ಮಲ್ಲಿ ಯಾರಿಗೆ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೋಣಗಾರ ಎನ್ನಲಾದೀತೆ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?

ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ

ಇನ್ನು ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ತಮಗೆ ವಯಕ್ತಿಕವಾಗಿ ನೀಡುತ್ತೇನೆ, ನಾನು ತುಂಬಾ ಆಸ್ತಿವಂತ ಅಲ್ಲದ ಇರಬಹದು. ಆದರೆ ಸಂಪಾದಿಸಿದ ಆಸ್ತಿಯಲ್ಲಿ ನನ್ನ ಬೆವರಿದ, ಶ್ರಮವಿದೆ 95ರಷ್ಟು ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ನೈತಿಕ ಶಕ್ತಿಯ ಮೇರೆಗೆ, ಈ ಕಠಿಣ ನಿಲುವು ಹೊಂದಿದ್ದೇನೆ.

ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರಿರ ಬಹುದು, ತಂತ್ರಜ್ಞರಿರ ಬಹುದು, ಯಾವುದೇ ವಿಭಾಗದವರಾಗಿರ ಬಹುದು, ಆ ದೂರಿನ ಕುರಿತಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದುವರಿಯಿರಿ ಮತ್ತು ಈ ಕೆಟ್ಟ, ಪರಂಪರೆಗೆ ನಾಂದಿ ಹೇಳುವುದಕ್ಕೆ, ನಾವು ಯಾರು ಹೊಣೆಗಾರರಾಗುವುದು ಬೇಡ.

ದಯಮಾಡಿ ತಾವು ಸಂದಿಗ್ನತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದೇನ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೂಡಿ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಾ, ಎಂದೆಂದಿಗೂ ನಿಮ್ಮವ ಸುದೀಪ್‌ʼʼಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: ʻಧೀರ ಭಗತ್ ರಾಯ್ʼ ಸಿನಿಮಾದ ʼಏನು ಕರ್ಮʼ ಹಾಡು ಬಿಡುಗಡೆ

Kannada New Movie: ಈ ಚಿತ್ರದ ನಿರ್ದೇಶಕರಾದ ಕರ್ಣನ್. ಎಸ್, ಏನು ಕರ್ಮ ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹಾಡು 2 ಲಕ್ಷ ವೀಕ್ಷಣೆ ಕಂಡಿರುವ ಬಗ್ಗೆ ಖುಷಿ ಇದೆ. ಪೂರ್ಣ ಅವರ ಅದ್ಭುತ ಲಿರಿಕ್ಸ್ ಎಲ್ಲರಿಗೂ ಇಷ್ಟವಾಗುತ್ತಿದೆ. ಜನ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ ಎಂದರು.

VISTARANEWS.COM


on

Kannada New Movie dheer bhahath Roy song out
Koo

ಬೆಂಗಳೂರು: ರಂಗಭೂಮಿ ಹಿನ್ನೆಲೆಯಿಂದ (Kannada New Movie) ಬಂದ ಎಷ್ಟೋ ಕಲಾವಿದರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗುತ್ತಿರುವವರು ರಾಕೇಶ್ ದಳವಾಯಿ. ‘ಧೀರ ಭಗತ್ ರಾಯ್’ ಚಿತ್ರದ ಮೂಲಕ ರಾಕೇಶ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಕರ್ಣನ್ ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಏನು ಕರ್ಮ ಹಾಡು ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಪ್ರತಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕರಾದ ಕರ್ಣನ್. ಎಸ್, ಏನು ಕರ್ಮ ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹಾಡು 2 ಲಕ್ಷ ವೀಕ್ಷಣೆ ಕಂಡಿರುವ ಬಗ್ಗೆ ಖುಷಿ ಇದೆ. ಪೂರ್ಣ ಅವರ ಅದ್ಭುತ ಲಿರಿಕ್ಸ್ ಎಲ್ಲರಿಗೂ ಇಷ್ಟವಾಗುತ್ತಿದೆ. ಜನ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ. 1970ರ ದಶಕದಲ್ಲಿ ಭೂಮಿ ಸುಧಾರಣೆ ಕಾಯ್ದೆ ಜಾರಿಗೆ ಬರುತ್ತದೆ, ನರಗುಂದದಲ್ಲಿ ಒಂದಷ್ಟು ರೈತರಿಗೆ ಭೂಮಿ ಸಿಗುತ್ತದೆ. ಆದರೆ ಅಲ್ಲಿನ ಭೂ ಮಾಲೀಕ ಜನರಿಗೆ ಸರಿಯಾಗಿ ಭೂಮಿ ಸಿಗಲು ಬಿಡದೆ ಜಮೀನನ್ನು ಕಬ್ಜ ಮಾಡಿರುತ್ತಾರೆ. ಅದನ್ನು ಚಿತ್ರ ನಾಯಕ ಜನರಿಗೆ ತಲುಪಿಸಲು ನಡೆಯುವ ಹೋರಾಟ, ಸಂಘರ್ಷ ಚಿತ್ರದ ಕಥಾವಸ್ತು ಇದು ಎಂದರು.

ನಾಯಕ ನಟ ರಾಕೇಶ್ ದಳವಾಯಿ ಮಾತನಾಡಿ. ʻʻನಾನು ಪರಿಪೂರ್ಣ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಧೀರ ಭಗತ್ ರಾಯ್. ಭಯ ಮತ್ತು ಜವಾಬ್ದಾರಿ ಎರಡನ್ನೂ ಒಟ್ಟಿಗೆ ಹಂಚಿಕೊಳುತ್ತ, ಎರಡು ವರ್ಷ ಧೀರ ಭಗತ್ ರಾಯ್ ಜತೆ ಜೀವಿಸಿದ್ದೇವೆ. ಹೆಣ್ಣು, ಪ್ರೀತಿ ಹಾಗೂ ಜವಾಬ್ದಾರಿಯನ್ನು ಏನೋ ಕರ್ಮ ಹಾಡಿನ ಮೂಲಕ ಹೇಳಿದ್ದೇವೆ. ನಾನು ಲಯರ್ ಪಾತ್ರ ಮಾಡಿದ್ದೇನೆ. ಅದು ಚಾಲೆಂಜಿಂಗ್ ವಿಷ್ಯ. ಕರ್ಣನ್ ಸರ್ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೀರೋಯಿನ್ ಸಿನಿಮಾಗೆ ಹೊಸಬರು. ಅವರಿಗೆ ಚಿತ್ರ ಚಾಲೆಂಜ್ ಆಗಿತ್ತುʼʼ ಎಂದರು.

ನಾಯಕಿ ಸುಚರಿತಾ ಸಹಾಯರಾಜ್ ಮಾತನಾಡಿ, ʻʻʻಇದು ನನ್ನ ಮೊದಲ ಸಿನಿಮಾ. ಹೀಗಾಗಿ ಟೆನ್ಷನ್ ಇದ್ದೇ ಇರುತ್ತದೆ. ನನ್ನ ಪಾತ್ರ ಸಾವಿತ್ರಿ ತುಂಬಾ ಸ್ಟ್ರಾಂಗ್ ಆಗಿ ಇದೆ. ನನ್ನಲ್ಲಿ ಸಾವಿತ್ರಿಯನ್ನು ಹೇಗೆ ಅಳವಡಿಸಿಕೊಳ್ಳುವುದು ಅನ್ನೋದನ್ನು ಥಿಂಕ್ ಮಾಡಿದೆ. ಅದಕ್ಕೆ ನಿರ್ದೇಶಕರು ಸಾಕಷ್ಟು ಸಪೋರ್ಟ್ ಮಾಡಿದರು. ಈ ಪಾತ್ರ ನೋಡಿದಾಗ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿದೆʼʼ ಎಂದು ತಿಳಿಸಿದರು.

ಧೀರ ಭಗತ್ ರಾಯ್ ಸಿನಿಮಾದ ‘ಏನು ಕರ್ಮ’ ಸಾಹಿತ್ಯ ಇರುವ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಪೂರ್ಣ ಚಂದ್ರ ತೇಜಸ್ವಿ ಪದ ಪೊಣಿಸಿ ಟ್ಯೂನ್ ಹಾಕಿರುವ ಗಾನಲಹರಿಗೆ ವಿಜಯ್ ಪ್ರಕಾಶ್ ಹಾಗೂ ಸಾಕ್ಷಿ ಕಲ್ಲೂರ್ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ. ಮನಮೋಹಕವಾಗಿರುವ ಈ ಸಾಂಗ್ ನಲ್ಲಿ ರಾಕೇಶ್ ಹಾಗೂ ಸುಚಾರಿತ ಕಾಣಿಸಿಕೊಂಡಿದ್ದಾರೆ.

ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ರಾಕೇಶ್ ಮತ್ತು ಸುಚರಿತಾ ಸಹಾಯರಾಜ್ ನಾಯಕ ಮತ್ತು ನಾಯಕಿಯಾಗಿ ನಟಿಸುತ್ತಿದ್ದಾರೆ.

ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಶ್ರೀ ಓಂ ಸಿನಿ ಎಂಟರ್ಟೈನರ್ಸ್ ಹಾಗೂ ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್.ಎಂ ಸಂಕಲನ ಚಿತ್ರಕ್ಕಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಲೈನ್ ಮ್ಯಾನ್ ಸಿನಿಮಾದಿಂದ ಬಂತು ಮೊದಲ ಹಾಡು!

Kannada New Movie: ಮೋಷನ್ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಲೈನ್ ಮ್ಯಾನ್ ಸಿನಿಮಾ ಅಂಗಳದಿಂದ ಮೊದಲ ಹಾಡು ಅನಾವರಣಗೊಂಡಿದೆ.

VISTARANEWS.COM


on

Kannada New Movie line man song out now
Koo

ಬೆಂಗಳೂರು: ʻಲೈನ್ ಮ್ಯಾನ್ʼ ಸಿನಿಮಾ (Kannada New Movie) ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಮಾರ್ಚ್ 15ಕ್ಕೆ ಚಿತ್ರ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಮೋಷನ್ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಲೈನ್ ಮ್ಯಾನ್ ಸಿನಿಮಾ ಅಂಗಳದಿಂದ ಮೊದಲ ಹಾಡು ಅನಾವರಣಗೊಂಡಿದೆ.

ಧರೆಗೆ ದೊಡ್ಡವರು ಎಂಬ ಜಾನಪದ ಹಾಡು ಬಿಡುಗಡೆಯಾಗಿದ್ದು, ನಿಂಗಶೆಟ್ಟಿ, ನಿಂಗರಾಜು ಕೆ ಕಲ್ಲಪ್ಪ ಹಾಗೂ ಶಂಕರ್ ಧ್ವನಿಯಾಗಿರುವ ಅರ್ಥಪೂರ್ಣ ಗೀತೆಗೆ ಕದ್ರಿ ಮಣಿಕಾಂತ್ ಟ್ಯೂನ್ ಹಾಕಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿಯೂ ಹಾಡು ಬಿಡುಗಡೆಯಾಗಿದೆ.

ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್‌ಗಳದ್ದು ಯಾವಾಗಲೂ ಕಷ್ಟ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಅಂತಹ ಕಥೆಯೇ ಲೈನ್ ಮ್ಯಾನ್ ಸಿನಿಮಾ. ರಘು ಶಾಸ್ತ್ರಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದೆ.

ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ; Kannada New Movie: ’ಲೈನ್ ಮ್ಯಾನ್’ ಮೋಷನ್ ಪೋಸ್ಟರ್ ರಿಲೀಸ್ : ಮಾ.15ಕ್ಕೆ ತೆರೆಗೆ!

ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರ ಇದಾಗಿದೆ. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು,
ಲೈನ್ ಮ್ಯಾನ್ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲೈನ್ ಮ್ಯಾನ್ ಸಿನಿಮಾ ಪ್ರದರ್ಶನವಾಗುತ್ತಿರುವುದು ವಿಶೇಷ. ನಾಳೆ‌ ಮತ್ತು ಚಿತ್ರೋತ್ಸವದ ಕೊನೆಯ ದಿನವಾದ ಮಾರ್ಚ್ 7ರಂದು ಲೈನ್ ಮ್ಯಾನ್ ಸ್ಪೆಷಲ್ ಸ್ಕ್ರೀನ್ ಇರಲಿದೆ.

Continue Reading

ಸ್ಯಾಂಡಲ್ ವುಡ್

Yuva Rajkumar: ನಾಳೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಮೊದಲ ಹಾಡು ಬಿಡುಗಡೆ!

Yuva Rajkumar: ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ಧೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

VISTARANEWS.COM


on

Yuva Rajkumar First single song
Koo

ಬೆಂಗಳೂರು: ಯುವ ರಾಜ್‌ಕುಮಾರ್ (Yuva Rajkumar) ಅಭಿನಯದ ಯುವ ಸಿನಿಮಾ ಇದೇ ಮಾರ್ಚ್ 29ರಂದು ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದರಾಮ್ (Santhosh Anand Ram) ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ಧೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಬಂಡವಾಳ ಹೂಡಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್​ರಾಮ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಡುಗಳ ಮೂಲಕ ಕ್ರೇಜ್​ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ.ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ-ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.

ಇದನ್ನೂ ಓದಿ: Yuva Rajkumar: ʻಸಲಾರ್‌ʼ ರಿಲೀಸ್‌ ದಿನ ಆಗ್ತಿಲ್ಲ ʻಯುವʼ ರಾಜ್‌ಕುಮಾರ್ ಚಿತ್ರ; ಹೊಸ ಡೇಟ್‌ ಅನೌನ್ಸ್‌!

ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಅದ್ಧೂರಿಯಾಗಿ ಸಮಾರಂಭ ಮಾಡಲಾಗುವುದು. ಈ ವೇದಿಕೆಯಲ್ಲಿ ‘ಒಬ್ಬನೇ ಶಿವ ಒಬ್ಬನೇ ಯುವ’ ಸಾಂಗ್​ ಬಿಡುಗಡೆ ಆಗಲಿದೆ. ಈ ಹಾಡಿಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಆಡಿಯೊ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್​ ಆಗಿವೆ ಎಂಬ ಸುದ್ದಿಯನ್ನು ಚಿತ್ರತಂಡ ಇತ್ತೀಚೆಗೆ ಬಿಟ್ಟುಕೊಟ್ಟಿತ್ತು. ಪ್ರತಿಷ್ಠಿತ ಆಡಿಯೊ ಸಂಸ್ಥೆಯಾದ ‘ಆನಂದ್ ಆಡಿಯೋ’ ದೊಡ್ಡ ಮೊತ್ತ ನೀಡಿ ‘ಯುವ’ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಆಕ್ಷೇಪಾರ್ಹ ಹೇಳಿಕೆ; ನಟ ದರ್ಶನ್‌ಗೆ ಮಹಿಳಾ ಆಯೋಗದಿಂದ ನೋಟಿಸ್‌!

Actor Darshan: ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ದರ್ಶನ್‌ ಅವರಿಗೆ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ವಿವರಣೆ ನೀಡಲು ಸೂಚನೆ ನೀಡಿದೆ.

VISTARANEWS.COM


on

Notice to Actor Darshan from Karnataka Women's Commission
Koo

ಬೆಂಗಳೂರು: ನಟ ದರ್ಶನ್‌ ಅವರಿಗೆ (Actor Darshan) ಮತ್ತೊಂದು ಸಂಕಷ್ಟ ಎದುರಾಗಿದೆ. ಶ್ರೀರಂಗಪಟ್ಟಣದಲ್ಲಿ ನಡೆದ ʻಬೆಳ್ಳಿ ಪರ್ವʼದಲ್ಲಿ ದರ್ಶನ್‌ ಅವರು ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡು, `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿʼʼ ಎಂದು ಹೇಳಿಕೆ ನೀಡಿದ್ದರು. ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡಿದ್ದ ನಟ ದರ್ಶನ್ ಬಗ್ಗೆ ಹಲವು ಕೇಸ್‌ಗಳು ದಾಖಲಾಗಿದ್ದವು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ನೋಟಿಸ್ ತಲುಪಿದ 10 ದಿನದಲ್ಲಿ ನಟ ಬಂದು ವಿವರಣೆ ನೀಡಲು ಸೂಚನೆ ನೀಡಿದೆ.

ದರ್ಶನ್‌ ಅವರು ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದಾಗಿ, ಗೌಡತಿಯರ ಸೇನೆ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೋರಿತ್ತು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ದರ್ಶನ್‌ ಅವರಿಗೆ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ವಿವರಣೆ ನೀಡಲು ಸೂಚನೆ ನೀಡಿದೆ.

ನಟ ದರ್ಶನ್‌ ವಿರುದ್ಧ ಇರುವ ಆರೋಪಗಳೇನು?

ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡಿದ್ದ ನಟ ದರ್ಶನ್‌ ಅವರು, ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರು ಎಂದು ಹೇಳಿದ್ದರು. ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: Actor Darshan: ಎದೆಯ ಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ!

ಈ ಹಿಂದೆಯೂ ಹೆಂಡತಿಗೆ ಕಿರುಕುಳ ಆರೋಪದಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮತ್ತೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆಬಿಚ್ಚಿ ರೂಮಿನಲ್ಲಿ, ಕೂಡಿಹಾಕಿ ಎಂಬ ಹೇಳಿಕೆ ನೀಡಿದ್ದರು. ಅದೇ ರೀತಿ ಇತ್ತೀಚೆಗೆ ನಿರ್ಮಾಪಕ ಉಮಾಪತಿ ಗೌಡ ಬಗ್ಗೆ ʼತಗಡುʼ ಎಂಬ ಪದ ಬಳಸಿದ್ದರಿಂದ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದರ್ಶನ್‌ ಅವರ ವಿವಾದಾತ್ಮಕ ಹೇಳಿಕೆಗಳ ಸಂಬಂಧ ವಿವಿಧೆಡೆ ದೂರುಗಳು ದಾಖಲಾಗಿವೆ. ಮಹಿಳೆಯೊಬ್ಬರು ಕೋರ್ಟ್‌ಗೆ ದೂರು ಕೂಡ ಸಲ್ಲಿಸಿದ್ದಾರೆ.

Continue Reading
Advertisement
Matrimony Couple
ದೇಶ5 mins ago

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

supreme
ದೇಶ21 mins ago

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

Blast-in-Bangalore-Rameshwaram-Cafe-cc-tv
ಬೆಂಗಳೂರು26 mins ago

Blast in Bengaluru : ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?; ಸ್ಫೋಟದ EXCLUSIVE ಸಿಸಿ ಟಿವಿ ಫೂಟೇಜ್‌ ಇದು

Kalaburgi has recorded the highest maximum temperature
ಮಳೆ29 mins ago

Karnataka Weather : ವಾರಾಂತ್ಯದಲ್ಲಿ ಇಲ್ಲೆಲ್ಲ ತಾಪಮಾನ ದುಪ್ಪಟ್ಟು

nathan lyon
ಕ್ರೀಡೆ34 mins ago

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

500 notes
ಮನಿ-ಗೈಡ್34 mins ago

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

nbcc
ಉದ್ಯೋಗ40 mins ago

Job Alert: ಎನ್‌ಬಿಸಿಸಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Blast in Bengaluru Time bomb planted in rameshwaram cafe Important evidence found
ಬೆಂಗಳೂರು46 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

Tarang Mela 1
ಬೆಂಗಳೂರು1 hour ago

TARANG Mela: ಬೆಂಗಳೂರಿನಲ್ಲಿ ತರಂಗ್ ಮೇಳಕ್ಕೆ ಚಾಲನೆ; ಕೃಷಿ ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ, ಮಾರಾಟ

Live In Couple
ದೇಶ1 hour ago

ಲಿವ್‌ ಇನ್‌ ಪಾರ್ಟ್‌ನರ್‌ನನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿದಳು ಕೊಲೆಗಾತಿ! ಮುಂದೇನಾಯ್ತು?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು46 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು3 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ14 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌