ಬೆಂಗಳೂರು : ‘ವಿಕ್ರಾಂತ ರೋಣ’ ಸಿನಿಮಾದ ಪ್ರಮೋಷನ್ ಜೋರಾಗಿ ನಡೆಯುತ್ತಿದೆ. ಕಿಚ್ಚ ಸುದೀಪ್ (Kichcha Sudeepa) ನಟನೆಯ ಈ ಚಿತ್ರವನ್ನು ನೋಡಲು ಅಭಿಮಾನಿಗಳು ದಿನಗಣನೆ ಮಾಡುತ್ತಿದ್ದಾರೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ನಾಯಕ ನಟ ಸುದೀಪ್ ಭೇಟಿ ನೀಡಿ ಸಿನಿಮಾಕ್ಕೆ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಸುದೀಪ್‌ಗೆ ಕೋವಿಡ್-೧೯ ಸೋಂಕು ತಗುಲಿದೆ ಎಂಬ ವದಂತಿಗಳು ಹಬ್ಬುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವದಂತಿ ಹರಿದಾಡುತ್ತಿದ್ದು, ಈ ಕುರಿತು ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. “ʻವಿಕ್ರಾಂತ್ ರೋಣ’ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಫೀವರ್ ಬಂದಿದೆ. ಇದು ಸಾಮಾನ್ಯವಾದ ವೈರಲ್ ಫೀವರ್. ಸುದೀಪ್ ಅವರು ವಿಶ್ರಾಂತಿ ಪಡೆದು ಶುಕ್ರವಾರದಿಂದ (ಜು.22) ಪ್ರಮೋಷನ್ ಕಾರ್ಯ ಮುಂದುವರಿಸಲಿದ್ದಾರೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿʼʼ ಎಂದು ಕೋರಿದ್ದಾರೆ.
ಇದನ್ನೂ ಓದಿ | Cinedubs Mobile App | ವಿಕ್ರಾಂತ್ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್ ಆ್ಯಪ್; ಏನಿದರ ವಿಶೇಷತೆ?
ವಿಕ್ರಾಂತ ರೋಣ ಸಿನಿಮಾದ ಪ್ರಚಾರಕ್ಕೆ ಕಿಚ್ಚ ಸುದೀಪ್ ದೆಹಲಿ, ಮುಂಬೈ ಹಾಗೂ ಜೈಪುರಕ್ಕೆ ಹೋಗಿದ್ದರು. ಗುರುವಾರ (ಜು.20) ಚೆನ್ನೈಗೆ ತೆರಳಬೇಕಿತ್ತು. ವೈರಲ್ ಫೀವರ್ ನಿಂದ ಚೆನ್ನೈ ಪ್ರಯಾಣ ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
“ಜುಲೈ 22, 23 ಮತ್ತು 24ರಂದು ಒಟ್ಟು ಮೂರುದಿನಗಳ ಕಾಲ ಮುಂಬೈನಲ್ಲಿ ವಿಕ್ರಾಂತ್ ರೋಣ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಲಿದ್ದಾರೆ. 25ಕ್ಕೆ ಹೈದರಾಬಾದ್ ಮತ್ತು 26ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿ ಬಳಿಕ 27ರಂದು ದುಬೈನಲ್ಲಿ ನಡೆಯಲಿರುವ ಪ್ರೀಮಿಯರ್ ಶೋಗೆ ತೆರಳಲಿದ್ದಾರೆ. ಹೀಗಿದ್ದರೂ ಸುದೀಪ್ ಅವರಿಗೆ ಕೊರೋನಾ ಬಂದಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆʼ ಎಂದು ಅವರು ವಿವರಿಸಿದ್ದಾರೆ.
ಜುಲೈ 28 ರಂದು 3D ಯಲ್ಲಿ ಥಿಯೇಟರ್‌ಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗುತ್ತಿದೆ. ಜುಲೈ 27ರಂದು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರೀಮಿಯರ್ ಅನ್ನು ಆಯೋಜಿಸಲಾಗಿದೆ. ಜುಲೈ 24 ಅಥವಾ 25 ರಂದು ಬೆಂಗಳೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮಗಳನ್ನು ನಡೆಸಲು ತಂಡ ನಿರ್ಧರಿಸಿದೆ.
ಇದನ್ನೂ ಓದಿ | Vikrant Rona Movie | ವಿಕ್ರಾಂತ್ ರೋಣ ಟ್ರೈಲರ್ ಕೌಂಟ್ ಡೌನ್ ಶುರು