Site icon Vistara News

Puneeth Rajkumar: ʻಬೊಂಬೆ ಹೇಳುತೈತೆʼ ಹಾಡಿಗೆ ಕಿಲಿ ಪಾಲ್‌ ರೀಲ್ಸ್‌; ವಿಡಿಯೊ ವೈರಲ್‌!

Kili and Neema Lip Sink On Puneeth Rajkumar bombay helutaite Song vedio viral

ಬೆಂಗಳೂರು: ತಾಂಜಾನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್, ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಮತ್ತು ನೃತ್ಯ ಮಾಡುವ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಕಿಲಿ ಪಾಲ್‌ ಪುನೀತ್‌ ರಾಜ್‌ಕುಮಾರ್‌ ಅವರ (Puneeth Rajkumar) ʻಬೊಂಬೆ ಹೇಳುತೈತೆʼ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, ನೆಟಿಜನ್‌ಗಳು ಮೆಚ್ಚಿಕೊಂಡಿದ್ದಾರೆ. ʻಅಪ್ಪು ಅಮರʼ ಎಂದು ಪುನೀತ್‌ ಅವರ ಫ್ಯಾನ್ಸ್‌ ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಅವರಿಗೆ ಸಹೋದರಿ ನೀಮಾ ಕೂಡ ಸಾಥ್‌ ಕೊಟ್ಟಿದ್ದಾರೆ. ಪುನೀತ್‌ ಅವರ ʻರಾಜಕುಮಾರʼ ಸಿನಿಮಾದ ʻಬೊಂಬೆ ಹೇಳುತೈತೆʼ ಹಾಡಿಗೆ ಲಿಪ್‌ ಸಿಂಕ್ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ವಿಡಿಯೊ ಹಂಚಿಕೊಂಡ ಕಿಲಿ, ʻʻಇಡೀ ಭಾರತದಲ್ಲಿರುವ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಇದು ವಿಶೇಷವಾಗಲಿ ..ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲʼʼ ಎಂದು ಬರೆದಿದ್ದಾರೆ.

ಕಿಲಿ ಪಾಲ್ ಜನಪ್ರಿಯ ಮತ್ತು ಟ್ರೆಂಡಿಂಗ್ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುವುದರಿಂದ ಅವರು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: Puneeth Rajkumar: ಎದೆಯ ಮೇಲೆ ಅಪ್ಪು ಹೆಸರು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌; ಟೊಟೊ, ನುಕ್ಕಿ ಅಂದ್ರೆ ಯಾರು?

ವೈರಲ್‌ ವಿಡಿಯೊ

ಪುನೀತ್ ರಾಜ್​ಕುಮಾರ್‌ ನಟನೆಯ ‘ರಾಜಕುಮಾರ’ ಚಿತ್ರ ಹಲವು ಕಾರಣಗಳಿಗಾಗಿ ಕನ್ನಡ ಚಿತ್ರರಂಗದ ಒಂದು ಅಪೂರ್ವ ಚಿತ್ರವಾಗಿ ದಾಖಲಾಗಿದೆ. 2017ರಲ್ಲಿ ತೆರೆಕಂಡ ಈ ಚಿತ್ರ ಬಾಕ್ಸಾಫೀಸ್​ನಲ್ಲೂ ದಾಖಲೆ ಬರೆದಿತ್ತು. ಸಂತೋಷ್ ಆನಂದ್​ರಾಮ್ ನಿರ್ದೇಶಿಸಿದ್ದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿತ್ತು. ಬಿಡುಗಡೆಯಾಗಿ ಸುಮಾರು ಐದು ವರ್ಷ ಸಮೀಪಿಸುತ್ತಾ ಬಂದರೂ, ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಅಪ್ಪು ನೆನಪಾದ ತಕ್ಷಣ ‘‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ.. ನೀನೆ ರಾಜಕುಮಾರ’’ ಎನ್ನುವ ಸಾಲುಗಳು ಫ್ಯಾನ್ಸ್‌ ಹಾಡುತ್ತಲೇ ಇರುತ್ತಾರೆ.

Exit mobile version