Site icon Vistara News

Sugarless Movie | ಕನ್ನಡದ ಶುಗರ್‌ಲೆಸ್‌ ಚಿತ್ರಕ್ಕೆ ಒಳ್ಳೇ ಟೇಸ್ಟ್‌ ಇದೆ ಅಂದ್ರು ವಿಜಯ್‌ ಸೇತುಪತಿ

Sugarless Movie

ಬೆಂಗಳೂರು: ಪೃಥ್ವಿ ಅಂಬಾರ್‌ ಹಾಗೂ ಪ್ರಿಯಾಂಕ ತಿಮ್ಮೇಶ್‌ ಅಭಿನಯದ ಶುಗರ್‌ಲೆಸ್‌ ಸಿನಿಮಾ (Sugarless Movie) ಜುಲೈ 8ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿ ಪರಭಾಷಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್‌-೨ ಹಾಗೂ ‘777 ಚಾರ್ಲಿ’ ಸಿನಿಮಾ ಭಾರಿ ಯಶಸ್ಸು ಕಂಡಿತು. ಈಗ ‘ಶುಗರ್​ಲೆಸ್​’ ಸಿನಿಮಾ ಸರದಿ.

ʻಶುಗರ್‌ಲೆಸ್‌ʼ ಸಿನಿಮಾ ತಂಡಕ್ಕೆ ಪ್ರಶಂಸೆಗಳು ಹರಿದುಬರುತ್ತಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್​ ನಟ ವಿಜಯ್​ ಸೇತುಪತಿ ʻಶುಗರ್​ಲೆಸ್​’ ಚಿತ್ರಕ್ಕೆ ಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಚಿತ್ರದ ಅದ್ಭುತ ಯಶಸ್ಸಿಗೆ ಶುಭಾಶಯಗಳು ಎಂದು ಹಾರೈಸಿದ್ದಾರೆ.

ಇದನ್ನೂ ಓದಿ | Pruthvi Ambaar | ದೂರದರ್ಶನದಲ್ಲಿ ಪೃಥ್ವಿ ಅಂಬಾರ್‌ ಜತೆಯಾದ ನಟಿ ಅಯನಾ

ನಿರ್ದೇಶಕ ಕೆ.ಎಂ.ಶಶಿಧರ್‌ ಅವರ ಚೊಚ್ಚಲ ಚಿತ್ರವಾಗಿದ್ದು, ಸಕ್ಕರೆ ಕಾಯಿಲೆ ಇರುವ ಯುವಕನೊಬ್ಬನ ಮನಸಿನ ತಳಮಳಗಳು, ಸಂಕಟವನ್ನು ತೆರೆದಿಡುವ ಕಥಾ ಹಂದರವನ್ನು ಹೊಂದಿದೆ. ಜತೆಗೆ ಸಕ್ಕರೆ ಕಾಯಿಲೆ ಇದ್ದರೂ ನಾಯಕ ಹೇಗೆ ಸುಖಮಯ ಜೀವನ ನಡೆಸುತ್ತಾನೆ ಎಂಬ ಕಥಾ ಹಂದರ ಈ ಸಿನಿಮಾ ಹೊಂದಿದೆ.

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ ಹಲವು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಲವ್‌ ಮಾಕ್ಟೇಲ್‌ ಖ್ಯಾತಿಯ ಮಿಲನಾ ನಾಗರಾಜ್‌ ಅವರೊಂದಿಗೆ ನಟಿಸಿರುವ ʻಫಾರ್‌ ರೆಜಿಸ್ಟ್ರೇಷನ್‌ʼ (FOR REGN) ಸಿನಿಮಾ ಇನ್ನೇನು ಚಿತ್ರೀಕರಣ ಪೂರ್ಣಗೊಳ್ಳುವ ಹಂತದಲ್ಲಿದೆ.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಪೃಥ್ವಿ ಅಂಬಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ʻಭುವನಂ ಗಗನಂʼ ಎಂಬ ಟೈಟಲ್ ಇಡಲಾಗಿದ್ದು, ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ʻದೂರದರ್ಶನʼ ಹಾಗೂ ಅಂಕಿತಾ ಅಮರ್‌ ಅವರೊಂದಿಗೆ ʻಅಬ ಜಬ ದಬʼ ಚಿತ್ರದಲ್ಲಿಯೂ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | Upcoming Kannada Movie | ಒಂದೇ ದಿನ ತೆರೆಗೆ ಅಪ್ಪಳಿಸಲಿವೆ ಆರು ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

Exit mobile version