ಬೆಂಗಳೂರು: ತಮಿಳು ಖ್ಯಾತ ಹಾಸ್ಯನಟ ಮಯಿಲ್‌ಸ್ವಾಮಿ (Mayilsamy) ಅವರು ಫೆ.19ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮಯಲ್‍ಸ್ವಾಮಿ ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ತಮಿಳಿನಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಮಿಳು ಸಿನಿ ರಂಗ ಕಂಬನಿ ಮಿಡಿದಿದೆ. ಇತ್ತೀಚೆಗೆ ಅವರು ಪೂರ್ಣಗೊಳಿಸಿರುವ ‘ಗ್ಲಾಸ್‌ಮಾಸ್ಟೆಸ್’ ಸಿನಿಮಾ ಡಬ್ಬಿಂಗ್ ಮಾಡುವ ವಿಡಿಯೊ ವೈರಲ್ ಆಗಿದೆ.
“ನಾವು ಒಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿದ್ದೇವೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮಯಿಲ್‌ಸಾಮಿ ಸರ್” ಎಂದು ಟ್ವೀಟ್ ಮಾಡುವ ಮೂಲಕ ನೆಟಿಜನ್‌ಗಳು ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: Shahnawaz Pradhan Dies: ಬಾಲಿವುಡ್ ನಟ ಶಹನವಾಜ್ ಪ್ರಧಾನ್ ಹೃದಯಾಘಾತದಿಂದ ನಿಧನ
ಕಮಲ್ ಹಾಸನ್ ಟ್ವೀಟ್ ಮಾಡಿ. ʻʻನನ್ನ ಗೆಳೆಯ ಮಯಿಲ್‌ಸ್ವಾಮಿ ತಮ್ಮದೇ ಶೈಲಿಯ ಹಾಸ್ಯ ನಟನೆಯನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ್ಮೀಯ ಗೆಳೆಯನಿಗೆ ನಮನಗಳುʼʼಎಂದು ಬರೆದುಕೊಂಡಿದ್ದಾರೆ.
ನಟಿ ಸಾಕ್ಷಿ ಅಗರ್ವಾಲ್ ಟ್ವೀಟ್ ಮಾಡಿ, ʻʻಸುದ್ದಿ ಕೇಳಿ ಆಘಾತವಾಯಿತು. ನಿಮ್ಮ ಹಾಸ್ಯಪ್ರಜ್ಞೆ ಮತ್ತು ಸಕಾರಾತ್ಮಕ ಮನೋಭಾವವು ಶೂಟಿಂಗ್ ನಲ್ಲಿ ಯಾವಾಗಲೂ ನಗು ಮತ್ತು ಸಂತೋಷದಿಂದ ಕೂಡಿತ್ತು. ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳುʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Balipa Narayana Bhagavata: ಬಲಿಪ ನಾರಾಯಣ ಭಾಗವತ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ
ನಟನೆಗೆ ಸೈ ಎನಿಸಿಕೊಂಡಿರುವ ಮಾಯಿಲ್‌ಸಾಮಿ
‘ಧೂಲ್’, ‘ವಸೀಗರ’, ‘ಗಿಲ್ಲಿ’, ‘ಗಿರಿ’, ‘ಉತ್ತಮಪುತಿರನ್’, ‘ವೀರಂ’, ‘ಕಾಂಚನ’, ಮತ್ತು ‘ಕಂಗಳಲ್ ಕೈದು ಸೇಯ್ ‘ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ..’ಕಂಗಳಲ್ ಕೈದು ಸೇಯ್ʼ ಚಿತ್ರದ ನಟನೆಗೆ ತಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡುವ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ದೊರೆತಿದೆ .ಅವರು ಇತ್ತೀಚೆಗೆ ನೆಂಜುಕು ನೀಡಿ, ವೀಟ್ಲಾ ವಿಶೇಷಂ ಮತ್ತು ದಿ ಲೆಜೆಂಡ್‌ನಲ್ಲಿ ಕಾಣಿಸಿಕೊಂಡರು. ಮಾಯಿಲ್‌ಸಾಮಿ ಅವರು ಸ್ಟ್ಯಾಂಡ್-ಅಪ್ ಹಾಸ್ಯನಟ, ಟಿವಿ ನಿರೂಪಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು.