ಬೆಂಗಳೂರು : ಕೆಜಿಎಫ್ ಪಾತ್ರದಲ್ಲಿನ ಮೂಲಕ ಗಮನ ಸೆಳೆದಿರುವ ಅರ್ಚನಾ ಜೋಯಿಸ್ ಮತ್ತು ಗುಲ್ಟೂ ಖ್ಯಾತೀಯ ನವೀನ್ ಶಂಕರ್ ʼಕ್ಷೇತ್ರಪತಿʼ ಚಿತ್ರತಂಡ ಸೇರಿಕೊಂಡಿದ್ದಾರೆ.
ಶ್ರೀಕಾಂತ್ ಚಿತ್ರದ ನಿರ್ದೇಶಕರಾಗಿದ್ದು, ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದ ಗದಗದಲ್ಲಿ ನಡೆಯಲಿದೆ. ಇದೀಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕರು , ಕ್ಷೇತ್ರಪತಿ ಎಂಬುದು ಸಂಸ್ಕೃತ ಪದ. ರೈತನ ಸಮನಾರ್ಥಕ ಪದವಾಗಿದೆ ಎಂದಿದ್ದಾರೆ.
ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್
ಇದು ಕೃಷಿ ಆಧಾರಿತ ಸಿನಿಮಾವಾಗಿದ್ದು, ಕೃಷಿ ಕ್ಷೇತ್ರ ಹಾಗೂ ರೈತ ಎದುರಿಸುತ್ತಿರುವ ಬಿಕ್ಕಟ್ಟನ್ನು ಆಧರಿಸಿದೆ. ಕ್ಷೇತ್ರಪತಿಯು ನಾಯಕನ ವೈಯಕ್ತಿಕ ಪ್ರಯಾಣದ ಸುತ್ತ ಈ ಕಥೆ ಸುತ್ತುತ್ತದೆ. ನವೀನ್ ಶಂಕರ್ ಇಂಜಿನಿಯರ್ ಪಾತ್ರದಲ್ಲಿ, ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ವೈಬಿವಿ ಶಿವ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ನ ಬೆಂಬಲದೊಂದಿಗೆ ಧನಂಜಯ್ ಅವರ 25 ನೇ ಚಿತ್ರ ಹೊಯ್ಸಳದಲ್ಲಿ ನವೀನ್ ಪ್ರತಿಸ್ಪರ್ಧಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ | Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು