Site icon Vistara News

Lagaan Movie | ಲಗಾನ್‌ಗೆ 21 ವರ್ಷ, ಮತ್ತೆ ಸೇರಿದ ಆಮೀರ್ ಟೀಮ್

Lagaan Movie

ಬೆಂಗಳೂರು : ಬಾಲಿವುಡ್‌ ಸ್ಟಾರ್‌ ಆಮೀರ್‌ ಖಾನ್‌ ಅವರ ʼಲಗಾನ್‌ʼ ಸಿನಿಮಾ (Lagaan Movie) ಬಿಡುಗಡೆಯಾಗಿ 21 ವರ್ಷಗಳು ಕಳೆದಿವೆ. ಆಮೀರ್‌ ಖಾನ್‌ ವೃತ್ತಿ ಬದುಕನ್ನೇ ಬದಲಿಸಿದ ಅಪರೂಪದ ಚಿತ್ರ ಲಗಾನ್‌.

2001ರ ಜೂನ್‌ 15ರಂದು ಅಶುತೋಷ್‌ ಗೋವಾರಿಕರ್‌ ನಿರ್ದೇಶನದ ಈ ಚಿತ್ರ ತೆರೆಗೆ ಬಂದಿತ್ತು. ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಕೀರ್ತಿಗೆ ಪಾತ್ರವಾದ ಲಗಾನ್‌ ಸಿನಿಮಾ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೂ ಶಾರ್ಟ್‌ಲಿಸ್ಟ್‌ ಮೂಲಕ ಸೆಲೆಕ್ಟ್‌ ಆಗಿತ್ತು. ಈ ಸಿನಿಮಾದಲ್ಲಿ ಆಮೀರ್‌ ಖಾನ್‌ ಜತೆ ಗ್ರೇಸಿ ಸಿಂಗ್ ಮತ್ತು ವಿದೇಶಿ ನಟಿ ರಾಚೆಲ್ ಸಹ ಅಭಿನಯಿಸಿದ್ದಾರೆ.

ಆಮೀರ್‌ ಮತ್ತು ತಂಡದ ಇತರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರದ ನೆನಪುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದರ ಯಶಸ್ಸಿಗೆ ತಮ್ಮ ಮಾಜಿ ಪತ್ನಿ ರೀನಾ ದತ್ ಸಹ ಕಾರಣ ಎಂದು ಕೂಡ ಆಮೀರ್‌ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಹಲವರು ಬಾಲಿವುಡ್ ಸ್ಟಾರ್ಸ್ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

ಬ್ರಿಟಿಷ್‌ ದಬ್ಬಾಳಿಕೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ಸೆಟೆದು ನಿಲ್ಲುವ ಕಥಾ ಹಂದರವನ್ನು ಲಗಾನ್‌ ಹೊಂದಿದೆ. ಕ್ರಿಕೆಟ್‌ ಆಟ ಇಲ್ಲಿ ಕೇಂದ್ರ ಸ್ಥಾನದಲ್ಲಿದೆ. ಲಗಾನ್‌ ಮೇಕಿಂಗ್‌ಅನ್ನು ʼಮ್ಯಾಡ್ನೆಸ್‌ ಇನ್‌ ದ ಡೆಸರ್ಟ್‌ʼ (Madness In The Desert)-The story of making “Lagaan ಎಂಬ ಎರಡೂವರೆ ಗಂಟೆಗಳ ಸಾಕ್ಷ್ಯ ಚಿತ್ರದಲ್ಲಿ ವಿವರಿಸಲಾಗಿದೆ. ಅದರಲ್ಲಿ ಲಗಾನ್‌ ಸಿನಿಮಾದ ಚಿತ್ರೀಕರಣ ಕುರಿತು ಸಾಕಷ್ಟು ಮಾಹಿತಿ ನೀಡಿದೆ.

ಇದನ್ನೂ ಓದಿ | Made In China Film | ಕನ್ನಡದ ಮೊದಲ ವರ್ಚುವಲ್‌ ಕತೆಯ ಸಿನಿಮಾ ಜೂನ್‌ 17ಕ್ಕೆ ತೆರೆಗೆ

10,000 ಜನರೊಂದಿಗೆ ಲಗಾನ್‌ ಕ್ಲೈಮ್ಯಾಕ್ಸ್‌ ಚಿತ್ರೀಕರಣ

ಹಳ್ಳಿಗರು ಮತ್ತು ಬ್ರಿಟಿಷರ ನಡುವಿನ ಮ್ಯಾಚ್‌ನಲ್ಲಿ ಸಾಕಷ್ಟು ಜನ ಸಮೂಹದ ದೃಶ್ಯ ತೆಗೆಯಬೇಕಿತ್ತು. ಆ ಸಂದರ್ಭದಲ್ಲಿ ಚಿತ್ರತಂಡ ಅಲ್ಲಿಯೇ ನೆರೆದಿರುವ ಹಳ್ಳಿಗರನ್ನು ಕರೆಯಿಸಿ ಚಿತ್ರೀಕರಣ ಮಾಡಿತ್ತು. ಅವರಿಗೆ ಕಾಸ್ಟ್ಯೂಮ್‌ ಮತ್ತು ಆಹಾರದ ವ್ಯವಸ್ಥೆ ನೀಡುವುದು ಸವಾಲಾಗಿತ್ತು. ಶೂಟಿಂಗ್‌ ವೇಳೆ ಎಲ್ಲರನ್ನೂ ಹುರಿದುಂಬಿಸಲು ʼಆತಿ ಕ್ಯಾ ಖಂಡಾಲಾʼ ಹಾಡನ್ನು ಹಾಡಿ, ಪ್ರೇರೇಪಿಸಿ ಜನರನ್ನು ಆಮೀರ್‌ ಹುರಿದುಂಬಿಸುತ್ತಿದ್ದರು. ನಿರ್ದೇಶಕರು ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸೆರೆ ಹಿಡಿದಿದ್ದಾರೆ. ಅದನ್ನು ಚಿತ್ರದಲ್ಲಿಯೂ ಕೂಡ ಬಳಸಿಕೊಂಡಿರುವುದು ಇನ್ನೂ ವಿಶೇಷ.

ಡೈರೆಕ್ಟರ್‌ಗೆ ಒಂದು ತಿಂಗಳು ಬೆಡ್‌ ರೆಸ್ಟ್‌

ಶೂಟಿಂಗ್‌ ಮದ್ಯೆ ಅಶುತೋಷ್ ಅವರಿಗೆ ಬೆನ್ನುನೋವು ಉಂಟಾಗಿತ್ತು. ಅದು ಅವರನ್ನು ಪೂರ್ಣ ತಿಂಗಳು ಬೆಡ್ ರೆಸ್ಟ್‌ನಲ್ಲಿ ಇರಿಸಿತ್ತು. ನಿಗದಿತ ಸಮಯಕ್ಕೂ ಹೆಚ್ಚು ದಿನ ಶೂಟಿಂಗ್‌ ಆಗಿರುದ್ದರಿಂದ ಬಜೆಟ್‌ಗೂ ಮೀರಿ ಚಿತ್ರೀಕರಣ ವೆಚ್ಚ ಆಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕರು ಮಲಗಿಕೊಂಡೇ ಮಾನಿಟರ್‌ ಮೂಲಕ ಚಿತ್ರವನ್ನು ನೋಡಿ ಚಿತ್ರೀಕರಣ ಮುಂದುವರೆಸಿದರು.

ಹಿಂದಿಯಲ್ಲಿ ರಾಚೆಲ್‌ ಶೆಲ್ಲಿ ಮತ್ತು ಪಾಲ್‌ ಬ್ಲ್ಯಾಕ್‌ಥಾರ್ನರ್‌ ಪ್ರಯತ್ನ

ಎಲಿಜಬೆತ್ ಪಾತ್ರದಲ್ಲಿ ನಟಿಸಿದ ಬ್ರಿಟಿಷ್ ನಟರಾದ ರಾಚೆಲ್ ಶೆಲ್ಲಿ ಮತ್ತು ಕ್ಯಾಪ್ಟನ್ ರಸೆಲ್ ಪಾತ್ರದಲ್ಲಿ ನಟಿಸಿದ ಪಾಲ್ ಬ್ಲ್ಯಾಕ್‌ಥಾರ್ನ್ ಅವರು ತಮ್ಮ ಹೆಚ್ಚಿನ ಸಂಭಾಷಣೆಗಳನ್ನು ಹಿಂದಿಯಲ್ಲಿ ಹೊಂದಿದ್ದರು. ಆದರೆ ಅವರಿಗೆ ಹಿಂದಿ ಭಾಷೆಯ ಪದ ಸವಾಲ್‌ ಆಗಿತ್ತು. ಅವರಿಗೆ ಬಾಷೆಯಲ್ಲಿ ಹಿಡಿತ ಬರಲು ಚಿತ್ರತಂಡ ಲಂಡನ್‌ನಲ್ಲಿ ಹಿಂದಿ ಟ್ಯೂಟರ್‌ ನೇಮಿಸಿದ್ದರು. ತಿಂಗಳುಗಳ ಕಾಲ ಹಿಂದಿ ಕಲಿತಿದ್ದರು. ತಮ್ಮ ಪಾತ್ರದ ಡೈಲಾಗ್‌ಗಳಿಗಿಂತಲೂ ಹೆಚ್ಚು ಹಿಂದಿಯನ್ನು ಕಲಿತಿರುವುದಾಗಿ ನಟಿ ಹೇಳಿಕೊಂಡಿದ್ದರು.

ಸಹಾಯಕ ನಿರ್ದೇಶಕರಿಂದಲೂ ನಟನೆ

ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರು ತಂಡದ ಕ್ಯಾಪ್ಟನ್ ಆಗಿದ್ದರು. ಇವರ ಜತೆ ಸಹಾಯಕ ನಿರ್ದೇಶಕರಾಗಿ ರೀಮಾ ಕಾಗ್ತಿ, ಕಿರಣ್ ರಾವ್ ಮತ್ತು ಅಪೂರ್ವ ಲಖಿಯಾ ಕೊಡುಗೆ ನೀಡಿದ್ದಾರೆ. ಇದರಲ್ಲಿನ ಮೂವರು ಸಹಾಯಕ ನಿರ್ದೇಶಕರು ಈ ಚಿತ್ರದ ನಂತರ ತಮ್ಮ ವೃತ್ತಿಜೀವನದಲ್ಲಿ ಹೆಸರಾಂತ ನಿರ್ದೇಶಕರಾದರು.

ರೀಮಾ ಕಾಗ್ತಿ ʼತಲಾಶ್ʼ, ʼಗೋಲ್ಡ್ʼ ಮತ್ತು ʼಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್‌ʼನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಲಿವುಡ್ ಅನುಭವದ ಕಾರಣದಿಂದ ಅಪೂರ್ವ ಲಖಿಯಾ, ಶೂಟೌಟ್ ಅಟ್ ಲೋಖಂಡ್‌ವಾಲಾ, ಮಿಷನ್ ಇಸ್ತಾಂಬುಲ್ ಮತ್ತು ಇತ್ತೀಚಿನ ವೆಬ್ ಸೀರೀಸ್ ಕ್ರಾಕ್‌ಡೌನ್‌ಗಳನ್ನು ನಿರ್ದೇಶಿಸಿದರು. ಕಿರಣ್ ರಾವ್ ಅವರು 2011ರ ‌ʼಧೋಬಿ ಘಾಟ್ʼ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ, ಬಾಲಿವುಡ್‌ ನಟ ಸಿದ್ಧಾಂತ್‌ ಕಪೂರ್‌ ವಶಕ್ಕೆ

ಭುಜ್‌ನ ಅಪಾರ್ಟ್‌ಮೆಂಟ್‌ನಲ್ಲಿ ಚಿತ್ರತಂಡ ವಸತಿ

ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಭುಜ್‌ನಲ್ಲಿ ನೆಲೆಸಬೇಕಾಗಿತ್ತು. ಆದರೆ ಇಡೀ ಸಿಟಿಯಲ್ಲಿ ಮೂರೇ ಹೋಟೆಲ್‌ ಇದ್ದ ಕಾರಣ ರೂಮ್‌ ಸಿಕ್ಕಿರಲಿಲ್ಲ. ಆದ್ದರಿಂದ, ನಿರ್ಮಾಣ ತಂಡವು ಇಡೀ ಅಪಾರ್ಟ್‌ಮೆಂಟನ್ನೇ ಬಾಡಿಗೆಗೆ ಪಡೆದುಕೊಂಡಿತು. ತಂಡದ ಸೌಕರ್ಯಕ್ಕಾಗಿ ಏರ್ ಕಂಡಿಷನರ್ ಮತ್ತು ಗೀಸರ್‌ಗಳನ್ನು ನೀಡಿ ವ್ಯವಸ್ಥೆ ಕಲ್ಪಿಸಿತ್ತು. ತಂಡ ಆರು ತಿಂಗಳ ಕಾಲ ಅಲ್ಲಿಯೇ ನೆಲೆಸಿ ಚಿತ್ರೀಕರಣ ಪೂರ್ಣ ಮಾಡಿತು.

ಸೆಟ್‌ನಲ್ಲಿ ಕಟ್ಟುನಿಟ್ಟಾದ ಶಿಸ್ತು

ಚಿತ್ರ ಶೂಟ್‌ ನಡೆಯಬೇಕಾದರೆ ಬೆಳಗ್ಗೆ 5 ಗಂಟೆಗೆ ತಮ್ಮ ಅಪಾರ್ಟ್‌ಮೆಂಟ್‌ನಿಂದ ಬಸ್‌ನಲ್ಲಿ ತಂಡ ತೆರಳಬೇಕಾಗಿತ್ತು. ನಿರ್ಮಾಪಕರು ಕೂಡ ಕಟ್ಟುನಿಟ್ಟಾಗಿದ್ದರೆಂದು ಈ ಬಗ್ಗೆ ಸ್ವತಃ ಅಮೀರ್‌ ಖಾನ್‌ ಹೇಳಿಕೊಂಡಿದ್ದಾರೆ. ಒಮ್ಮೆ ಅಮೀರ್‌ ಖಾನ್‌ ಸೆಟ್‌ಗೆ ತಡವಾಗಿ ಬಂದಿದಕ್ಕೆ ಸಿಬ್ಬಂದಿ ಮುಂದೆ ತಪ್ಪಿತಸ್ಥನಾಗಿ ಕಾಣುವಂತೆ ಅನ್ನಿಸಿತ್ತು ಎಂದು ಹೇಳಿಕೊಂಡಿದ್ದರು.

ಇದೀಗ ಲಗಾನ್‌ ಟೀಮ್‌ ಮತ್ತೆ ಭೇಟಿ ಆಗಿದೆ. ರೀಮಾ ಕುರಿತಾಗಿ ಸಂತಸವನ್ನು ಪೋಸ್ಟ್‌ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ ಅಮೀರ್. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಮೀರ್‌ ಖಾನ್‌ ‘ಸಾಮಾನ್ಯವಾಗಿ ರೀನಾ ಸಿನಿಮಾಗಳಿಂದ ದೂರವೇ ಇರುತ್ತಾರೆ. ಅವರಿಗೆ ಚಿತ್ರರಂಗದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ, ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಈ ಗೆಲುವಿನ ಪಾಲಲ್ಲಿ ಅವರದ್ದೂ ಪಾಲು ಇದೆʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

Exit mobile version