ಬೆಂಗಳೂರು: ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಅವರಿಂದ ಹಿಡಿದು ಸೌತ್ ಸೂಪರ್‌ಸ್ಟಾರ್‌ಗಳ ಜತೆ ನಟಿಸಿ ಅತಿ ಕಡಿಮೆ ಸಮಯದಲ್ಲಿ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ತಮಿಳುನಾಡು ಮೂಲದ ಜಾಫರ್ ಸಾದಿಕ್ (Jaffer Sadiq). ಈತ ನೋಡುವುದಕ್ಕೆ ನಾಲ್ಕಡಿಯಾದರೂ, ಬಹುಮುಖ ಪ್ರತಿಭೆ ಎಂದರೆ ತಪ್ಪಿಲ್ಲ. ಕಳೆದ ಮೂರು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಜಾಫರ್ ಸಾದಿಕ್.
27 ವರ್ಷ ವಯಸ್ಸಿನ ಈ ನಟ, ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳ ಭಾಗವಾಗಿರುವುದರಿಂದ, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟರಲ್ಲಿ ಟಾಪ್‌ನಲ್ಲಿದ್ದಾರೆ. ತಮಿಳುನಾಡು ಮೂಲದ ಜಾಫರ್ ಸಾದಿಕ್ ಅವರು ಕೋವಿಡ್ ಬಳಿಕ ಕೆಲವು ದೊಡ್ಡ ಪ್ರಾಜೆಕ್ಟ್ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಪಡೆದರು. ಜಾಫರ್ ಸಾದಿಕ್ ಅವರು ಕಮಲ್ ಹಾಸನ್ ಅಭಿನಯದ ʻವಿಕ್ರಮ್ʼ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ʻಜೈಲರ್ʼ ಮತ್ತು ಶಾರುಖ್ ಅವರ ʻಜವಾನ್ʼ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಎಲ್ಲ ಚಿತ್ರಗಳು ಬ್ಲಾಕ್ ಬಸ್ಟರ್ ಆಗಿವೆ. ಜಾಫರ್ ಸಾದಿಕ್ ಅವರ ಕೊನೆಯ ಮೂರು ಚಿತ್ರಗಳು ಒಟ್ಟು 1900 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿವೆ.
ಇದನ್ನೂ ಓದಿ: Jawan Movie: ಜವಾನ್ ಸಿನಿಮಾಗೆ ವೃದ್ಧೆಯೊಬ್ಬರ ಮೆಚ್ಚುಗೆ; ಶಾರುಖ್ ಹೇಳಿದ್ದೇನು?
1995ರಲ್ಲಿ ಜನಿಸಿದ ಜಾಫರ್ ಸಾದಿಕ್ ಅವರು ನಟನಾಗುವ ಮೊದಲು ನೃತ್ಯಗಾರ ಮತ್ತು ನೃತ್ಯ ಸಂಯೋಜಕರಾಗಿದ್ದರು. ನೆಗೆಟಿವ್ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತಿ ಗಳಿಸಿದರು. 4 ಅಡಿ 8 ಇಂಚು ಎತ್ತರದ ನಟ 2020ರಲ್ಲಿ ತಮಿಳು ಸಿರೀಸ್ ‘ಪಾವ ಕಡೈಗಲ್’ (Paava Kadhaigal) ಪಾತ್ರದ ಮೂಲಕ ಫೇಮಸ್ ಆದರು.
2022ರಲ್ಲಿ, ಅವರು ಕಮಲ್ ಹಾಸನ್ ಅಭಿನಯದ ವಿಕ್ರಮ್ ಅವರ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾದಿಕ್ ಅವರು ವೆಂದು ತನಿಂಧತು ಕಾಡು( Vendhu Thanindhathu Kaadu) ಮತ್ತು ವೆಬ್ ಸರಣಿ ಶೈತಾನ್‌ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. 2023ರಲ್ಲಿ, ಅವರು ರಜನಿಕಾಂತ್ ಅವರ ʻಜೈಲರ್ʼ ಮತ್ತು ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್ ʻಜವಾನ್ʼನಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.