Site icon Vistara News

Leo Box Office Collection: ಮೊದಲ ದಿನ ‘ಲಿಯೋ’ ಬಾಕ್ಸ್‌ ಆಫೀಸ್‌ ಉಡೀಸ್; ಎಲ್ಲ ದಾಖಲೆ ಠುಸ್!

Leo box office collection

ಬೆಂಗಳೂರು: ದಳಪತಿ ವಿಜಯ್ ಅಭಿನಯದ ʻಲಿಯೋʼ ಮೊದಲ ದಿನ (Leo Box Office Collection) ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಅಕ್ಟೋಬರ್ 19ರ ಗುರುವಾರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಪ್ಯಾನ್-ಇಂಡಿಯಾದಲ್ಲಿಯೂ ದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಟ್ರೇಡ್ ಮೂಲಗಳ ಪ್ರಕಾರ, ಲಿಯೋ ಪ್ರಪಂಚದಾದ್ಯಂತ 140 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.

ಮೊದಲ ದಿನ ದೇಶೀಯ ನಿವ್ವಳ 68 ಕೋಟಿ ರೂ. ಗಳಿಕೆ ಕಂಡಿದೆ ಎಂತಲೂ ವರದಿಯಾಗಿದೆ. ಪ್ರಭಾಸ್‌ ಅವರ ಆದಿಪುರುಷ (130 ಕೋಟಿ ರೂ.) ಮತ್ತು ಶಾರುಖ್ ಖಾನ್‌ರ ಜವಾನ್ 129 ಕೋಟಿ ರೂ) ಚಿತ್ರಗಳನ್ನು ಹಿಂದಿಕ್ಕಿದ ಸಿನಿಮಾಗಿ ಹೊರಹೊಮ್ಮಿದೆ. ಐದು ವರ್ಷಗಳ ಹಿಂದೆ ರಜನಿಕಾಂತ್ ಅವರ 2.0 ಸಿನಿಮಾ 110 ಕೋಟಿ ರೂಪಾಯಿಗಳನ್ನು ಕಲೆಕ್ಷನ್‌ ಮಾಡಿತ್ತು. ಇದೀಗ ಲಿಯೋ ಸುಲಭವಾಗಿ ಹಿಂದಿಕ್ಕಿ, ತಮಿಳು ಚಿತ್ರರಂಗದ ಇತಿಹಾಸದಲ್ಲಿಯೇ 140 ಕೋಟಿ ರೂ. ಗಳಿಕೆ ಮಾಡಿದೆ. ಲಿಯೋ ಈಗ ತನ್ನ ಆರಂಭಿಕ ದಿನದಂದು ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದ ಕ್ಲಬ್‌ಗಳ ಆಯ್ದ ಪಟ್ಟಿಗೆ ಸೇರಿಕೊಂಡಿದೆ. ಈ ಕ್ಲಬ್‌ಗೆ ಆರ್‌ಆರ್‌ಆರ್, ಬಾಹುಬಲಿ 2, ಕೆಜಿಎಫ್ 2, ಸಾಹೋ, ಪಠಾಣ್‌, ಹಾಗೆಯೇ ಆದಿಪುರುಷ, 2.0 ಮತ್ತು ಜವಾನ್ ಕೂಡ ಸೇರಿತ್ತು.

ಲಿಯೋ 2ನೇ ದಿನದಂದು ಸಂಗ್ರಹಣೆಯಲ್ಲಿ ಸ್ವಲ್ಪ ಕುಸಿತವನ್ನು ಕಾಣುವ ಸಾಧ್ಯತೆಯಿದೆ. ಆದರೆ ಪ್ರಿ ಟಿಕೆಟ್‌ ಹೆಚ್ಚಾದರೆ ಕುಸಿತವು ತುಂಬಾ ಹೆಚ್ಚಿರುವುದಿಲ್ಲ ಎನ್ನಲಾಗಿದೆ. ಅಂದರೆ ಎರಡು ದಿನದಲ್ಲಿ ಚಿತ್ರ ದೇಶೀಯವಾಗಿ 100 ಕೋಟಿ ರೂ. ಹಾಗೂ ವಿಶ್ವಾದ್ಯಂತ 200 ಕೋಟಿ ರೂ. ದಾಟಬೇಕು. ಅನೇಕ ಟ್ರೇಡ್‌ ತಜ್ಞರು ಲಿಯೋ 1000 ಕೋಟಿ ರೂಪಾಯಿಗಳ ಗಡಿಯನ್ನು ಮುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Leo advance booking: ಟಿಕೆಟ್‌ ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ʻಜವಾನ್‌ʼ ಹಿಂದಿಕ್ಕಿದ ಲಿಯೋ!

ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪ್ರಪಂಚದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಯಿತು. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ, ʻʻಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಳನ್ನು ದಾಟಿದೆʼʼ ಎಂದು ಬರೆದಿದ್ದಾರೆ. ಆರಂಭಿಕ ವ್ಯಾಪಾರ ವರದಿಗಳ ಪ್ರಕಾರ, ಭಾರತದಲ್ಲಿ ಚಿತ್ರವು 63 ಕೋಟಿ ರೂ. ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 19 ರಂದು ಒಟ್ಟಾರೆ ಶೇಕಡ 86.92 ಆಕ್ಯುಪೆನ್ಸಿ ಹೊಂದಿತ್ತು.

2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ.

ಇದನ್ನೂ ಓದಿ: Leo Review: ಸಿಂಹವಾಗಲು ಪ್ರಯತ್ನಿಸಿ ಬೆಕ್ಕಿನಂತೆ ಕೊನೆಗೊಂಡಿತು! ಲಿಯೋಗೆ ಮಿಶ್ರ ಪ್ರತಿಕ್ರಿಯೆ

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version