ಚೆನ್ನೈ: ಬಹು ನಿರೀಕ್ಷೆಯ ದಳಪತಿ ವಿಜಯ್ (Thalapathy Vijay) ಅಭಿನಯ ಹಾಗೂ ಲೋಕೇಶ್ ಕನಕರಾಜ್ (Lokesh Kanagaraj) ನಿರ್ದೇಶನದ ಲಿಯೋ (Leo Movie) ತಮಿಳು ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಗುರುವಾರ ಟ್ರೈಲರ್ ರಿಲೀಸ್ ಆಗಿದೆ. ವಿಜಯ್ ಅವರ ಅಭಿಮಾನಿಗಳಿಗಂತೂ ಟ್ರೈಲರ್ ಹಬ್ಬ ಆಗಿದೆ. ಲಿಯೋ ಸಿನಿಮಾ ಇದೇ ತಿಂಗಳು 19 ರಂದು ತೆರೆಗೆ ಅಪ್ಪಳಿಸಲು ಸಿದ್ದವಾಗಿದ್ದು, ಈಗ ಟ್ರೈಲರ್ (trailer Out) ಜೋರು ಹವಾ ಸೃಷ್ಟಿಸಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ.
ಅಕ್ಟೋಬರ್ 5 ರಂದು ‘ಲಿಯೋ’ ನಿರ್ಮಾಪಕರು ಬೃಹತ್ ಆಚರಣೆಗಳ ನಡುವೆ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದರು. ಸನ್ ಟಿವಿಯ ಅಧಿಕೃತ ಪುಟಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಲಿಯೋ ಟ್ರೈಲರ್ ಧಮಾಕಾ ಆಗಿದ್ದು, ಅರ್ಜುನ್ ಸರ್ಜಾ, ಸುನಿಲ್ ದತ್, ತೃಷಾ ಕೃಷ್ಣನ್ ಅವರನ್ನು ಕಾಣಬಹುದು. ಟ್ರೈಲರ್ ಮಾತ್ರ ಮಸ್ತ್ ಆಗಿದ್ದು, ಸಿನಿಮಾದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ. ಖಳರನ್ನು ಅಟ್ಟಾಡಿಸಿಕೊಂಡು ವಿಜಯ್ ಮಟ್ಟ ಹಾಕುವುದು ಮಜವಾಗಿದೆ. ಲೋಕೇಶ್ ಕನಕರಾಜ್ ಅವರು ಪವರ್ ಫುಲ್ ಸಿನಿಮಾ ನೀಡಿರುವ ಸಾಧ್ಯತೆ ಇದೆ .
ಲಿಯೋ ಸಿನಿಮಾ ಟ್ರೈಲರ್ ಲಾಂಚ್
ಲಿಯೋ, ಒಂದೆರಡು ವಾರಗಳಲ್ಲಿ ಗ್ರಾಂಡ್ ಥಿಯೇಟ್ರಿಕಲ್ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ, ಚಿತ್ರತಂಡ ಬಾಲಿವುಡ್ ಹಿರಿಯ ಸೂಪರ್‌ಸ್ಟಾರ್ ಸಂಜಯ್ ದತ್ ಸೇರಿದಂತೆ ಉಳಿದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿತ್ತು. ಇದೀಗ ಅರ್ಜುನ್ ಸರ್ಜಾ ಅವರ ಬಹುನಿರೀಕ್ಷಿತ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಂಡಿದೆ. ಚಿತ್ರದಲ್ಲಿ ʻಹೆರಾಲ್ಡ್ ದಾಸ್ʼ ಪಾತ್ರವನ್ನು ನಿರ್ವಹಿಸಲಿರುವ ಅರ್ಜುನ್ ಸರ್ಜಾ ಅವರು ಖಡಕ್ ಆಗಿ ಕಾಣುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Leo poster: ಕಾಮ್ ಲುಕ್‌ನಲ್ಲಿ ದಳಪತಿ ವಿಜಯ್; ʻಲಿಯೋʼ ತೆಲುಗು ಪೋಸ್ಟರ್ ಔಟ್!
2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು.
ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್ (Thalathy Vijay) ಹಾಗೂ ಲೋಕೇಶ್ ಕನಕರಾಜ್ ʼಲಿಯೋʼ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್ ಲುಕ್ ಹಾಗೂ ಮೊದಲ ಸಾಂಗ್ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.