Site icon Vistara News

Leo Review: ಸಿಂಹವಾಗಲು ಪ್ರಯತ್ನಿಸಿ ಬೆಕ್ಕಿನಂತೆ ಕೊನೆಗೊಂಡಿತು! ಲಿಯೋಗೆ ಮಿಶ್ರ ಪ್ರತಿಕ್ರಿಯೆ

Leo Vijay Look

ಬೆಂಗಳೂರು: ದಳಪತಿ ವಿಜಯ್‌ ನಟನೆಯ ಲಿಯೋ ಸಿನಿಮಾ (Leo Review) ಅ.19ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ಲೋಕೇಶ್ ಕನಕರಾಜ್ ಮತ್ತು ವಿಜಯ್ ಮತ್ತೊಮ್ಮೆ ಈ ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ. ಲೋಕೇಶ್ ಕನಕರಾಜ್ ಅವರು ಪವರ್ ಫುಲ್ ಸಿನಿಮಾ ನೀಡಲಿದ್ದಾರೆ ಎಂದು ವಿಜಯ್‌ ಫ್ಯಾನ್ಸ್‌ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೀಗ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದೀಗ ನೆಟ್ಟಿಗರು ಟ್ವಿಟರ್‌ನಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ. ಲಿಯೋ ಕಥೆ ಹೊಸದೇನಲ್ಲ, ಪಾರ್ಥಿಬನ್ ಅಕಾ ಪಾರ್ತಿ (ವಿಜಯ್) ಹಿಮಾಚಲ ಪ್ರದೇಶದಲ್ಲಿ ಕಾಫಿ ಶಾಪ್ ನಡೆಸುತ್ತಿರುತ್ತಾನೆ. ಇಬ್ಬರು ಮಕ್ಕಳು. ಸತ್ಯ (ತ್ರಿಶಾ) ಹೆಂಡತಿ. ಒಂದು ದಿನ ದರೋಡೆಕೋರರಾದ ​​ಆಂಟೋನಿ ದಾಸ್ (ಸಂಜಯ್ ದತ್) ಮತ್ತು ಹೆರಾಲ್ಡ್ ದಾಸ್ (ಅರ್ಜುನ್ ಸರ್ಜಾ) ಅವರು ಪಾರ್ಥಿಬನ್ ಅವರನ್ನು ಆಂಥೋನಿಯ ಮಗ ಲಿಯೋ ದಾಸ್ ಎಂದು ಭಾವಿಸುತ್ತಾರೆ. ಅಲ್ಲಿಂದ ಕಥೆ ಮುಂದೆ ಸಾಗುತ್ತದೆ. ಮುಂದೆ ಏನಾಗುತ್ತದೆ? ಪಾರ್ತಿ ಅಪಾಯವನ್ನು ಹೇಗೆ ನಿಭಾಯಿಸುತ್ತಾನೆ? ಪಾರ್ತಿಬನ್ ಲಿಯೋ ದಾಸ್ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿನಿಮಾ ನೋಡಬೇಕು.

ವರದಿಗಳ ಪ್ರಕಾರ ಫ್ಯಾಮಿಲಿ-ಥ್ರಿಲ್ಲರ್ ಸೂತ್ರವನ್ನು ಉಳಿಸಿಕೊಳ್ಳುವ ಮೂಲಕ ಕನಕರಾಜ್ ಮತ್ತೊಮ್ಮೆ ‘ವಿಕ್ರಮ್’ ಮಾರ್ಗವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವೊಂದು ದೃಶ್ಯಗಳಲ್ಲಿ ನಿರ್ದೇಶಕರು ಅಭಿಮಾನಿಗಳು ಚಪ್ಪಾಳೆ-ಹೊಡೆಯುವಂತಹ ಸೀಕ್ವೆನ್ಸ್‌ಗಳನ್ನೂ ನೀಡಿದ್ದಾರೆ. ಪಾರ್ಥಿಬನ್ ಲಿಯೋ ಯಾರಿಗೂ ಕ್ಷಮೆಯಾಚಿಸುವುದಿಲ್ಲ ಮತ್ತು ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ಸಿದ್ಧನಿರುತ್ತಾನೆ. ಚಿತ್ರದ ಒಂದು ದೊಡ್ಡ ಹೈಲೈಟ್ ಎಂದರೆ ಹಿನ್ನೆಲೆ ಧ್ವನಿ. ಅನಿರುದ್ಧ ಅವರನ್ನು ಫ್ಯಾನ್ಸ್‌ ಹೊಗಳಿದ್ದಾರೆ.

ಇದನ್ನೂ ಓದಿ: IND vs BAN: ಕೊಹ್ಲಿಯನ್ನು ಕೆಣಕದಿದ್ದರೆ ಒಳಿತು; ಮುಷ್ಫಿಕರ್‌ ರಹೀಂ

ತ್ರಿಷಾ ಪಾತ್ರ ಕೂಡ ಸಿನಿಮಾದಲ್ಲಿ ಕಡಿಮೆ ಸ್ಪೇಸ್‌ ಇದೆ. ಅವರ ಪಾತ್ರವು ಕಥೆಗೆ ಹೆಚ್ಚಿನ ಮೌಲ್ಯವನ್ನು ನೀಡುವುದಿಲ್ಲ. ಚಿತ್ರ ನಿರ್ಮಾಪಕ ಗೌತಮ್ ವಾಸುದೇವ್ ಮೆನನ್ ಅನಾಯಾಸವಾಗಿ ಅಭಿನಯ ನೀಡಿದ್ದಾರೆ. ಮತ್ತೊಂದೆಡೆ, ಸಂಜಯ್ ದತ್ ದುರದೃಷ್ಟವಶಾತ್ ಚಿತ್ರದಲ್ಲಿ ವ್ಯರ್ಥವಾಗಿದ್ದಾರೆ. ಅವರ ವರ್ಚಸ್ಸು ಕಾಣೆಯಾಗಿದೆ. ಚಿತ್ರದಲ್ಲಿ ವಿಜಯ್ ಪಾತ್ರದ ಮುಂದೆ ಅವರ ಪಾತ್ರವು ದುರ್ಬಲವಾಗಿ ಕಾಣುತ್ತದೆ.

ಇದನ್ನೂ ಓದಿ: Shiva Rajkumar: ಬಿಗ್‌ ಡ್ಯಾಡಿ ಶಿವಣ್ಣ ಅದ್ಭುತ; ಮಿಸ್‌ ಮಾಡ್ದೆ ಸಿನಿಮಾ ನೋಡಿ ಅಂದ್ರು ಫ್ಯಾನ್ಸ್‌!

ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲ ವಿಜಯಬಾಲನ್‌ ಸಿನಿಮಾಗೆ 2 ಸ್ಟಾರ್‌ ಕೊಟ್ಟಿದ್ದಾರೆ. ಸಿಂಹವಾಗಲು ಪ್ರಯತ್ನಿಸಿ, ಬೆಕ್ಕಿನಂತೆ ಕೊನೆಗೊಂಡಿತು. ಜೋಸೆಫ್‌ ವಿಜಯ್‌ ಮತ್ತು ಪಾತ್ರವರ್ಗದ ಭರವಸೆ ಮತ್ತು ಕೆಲ ಶ್ಲಾಘನೀಯ ಪ್ರಯತ್ನಗಳ ಹೊರತಾಗಿಯೂ, ಫೈನಲ್‌ ರಿಸಲ್ಟ್‌ ನಿರಾಸೆ ಮೂಡಿಸಿದೆ. ಲೋಕೇಶ್‌ ಕನಕರಾಜ್‌ ಅವರ ಲಿಯೋ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಗಿದೆ. ಅಲ್ಲದೇ, ಚಿತ್ರ ಸ್ಥಿರತೆಯನ್ನು ನಿರ್ವಹಿಸಿಲ್ಲ. ಈ ಚಿತ್ರ ವಿಕ್ರಮ್‌ ಅಥವಾ ಕೈತಿ ಸಿನಿಮಾದ ಹತ್ತಿರದಲ್ಲಿಲ್ಲ. ಲೋಕೇಶ್‌ ಕನಕರಾಜ್‌ ವೃತ್ತಿಜೀವನದಲ್ಲೇ ದುರ್ಬಲ ಚಿತ್ರ. ಒಂದು ಸಾಧಾರಣ ಪ್ರಯತ್ನವಷ್ಟೇ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿಜಯ್ ಅಭಿಮಾನಿಗಳಿಗೆ ಶುದ್ಧ ಮನರಂಜನೆ ಸಿನಿಮಾ. ಆದರೆ ನೀವು ಒಳ್ಳೆಯ ಕಥಾಹಂದರವನ್ನು ಹುಡುಕುತ್ತಿದ್ದರೆ ಸಿನಿಮಾ ಅದಕ್ಕೆ ನ್ಯಾಯ ಒದಗಿಸಿಲ್ಲ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. 

Exit mobile version