Site icon Vistara News

Liger Movie | ನೆಗೆಟಿವ್ ಕಮೆಂಟ್‌ಗೆ ಮುಗ್ಗರಿಸಿತೇ ಲೈಗರ್‌: ಮೊದಲ ದಿನದ ಕಲೆಕ್ಷನ್ ಕಡಿಮೆಯಾಗಿದ್ದೇಕೆ?

Liger Movie

ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ (Liger Movie) ವಿಶ್ವಾದ್ಯಂತ ಗುರುವಾರ (ಆ.25) ಬಿಡುಗಡೆಗೊಂಡಿತ್ತು. ಈ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಸೋಷಿಯಲ್‌ ಮೀಡಿಯಾಗಳಲ್ಲಿ ನೆಗೆಟಿವ್‌ ಕಮೆಂಟ್‌ಗಳು ಹೆಚ್ಚು ಬಂದಿದ್ದು, ಕಲೆಕ್ಷನ್‌ಗೆ ಬಹಳ ಪೆಟ್ಟು ಕೊಟ್ಟಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಲೈಗರ್ ಮೊದಲ ದಿನ ಗಳಿಸಿದ್ದು 20 ರಿಂದ 25 ಕೋಟಿ ರೂಪಾಯಿ ಮಾತ್ರ. ಪ್ರೀ ಬುಕ್ಕಿಂಗ್‌ನಿಂದಾಗಿ ಚಿತ್ರ ಇಷ್ಟರ ಮಟ್ಟಿಗೆ ಗಳಿಕೆ ಮಾಡಲು ಸಾಧ್ಯವಾಗಿದೆ. ಆದರೆ, ನೆಗೆಟಿವ್ ಪ್ರತಿಕ್ರಿಯೆಗಳು ಬಂದ ಮೇಲೆ ಜನ ಥಿಯೇಟರ್‌ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕೆಲವರು ಟ್ವಿಟರ್‌ ಮೂಲಕ ಜಾಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌ ಅನ್ನು ಈ ಸಿನಿಮಾ ಹೊಂದಿದೆ ಎಂದು ಬರೆದುಕೊಂಡಿದ್ದರು. ಆಂಧ್ರ ಬಾಕ್ಸ್‌ ಆಫೀಸ್‌ ಲೆಕ್ಕಾಚಾರದ ಪ್ರಕಾರ ಈ ಚಿತ್ರ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಯುಎಸ್‌ನಲ್ಲಿ ₹24.5 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ಆದರೆ, ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಸಿನಿಮಾಗೆ ಸಾಕಷ್ಟು ಜನರು ಬರುವ ನಿರೀಕ್ಷೆ ಇದ್ದು, ಕಲೆಕ್ಷನ್‌ ಹೆಚ್ಚಾಗಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ | Liger Movie | ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌: ಷರಾ ಬರೆದ ಟ್ವಿಟ್ಟಿಗರು!

ʻಸಿನಿಮಾದಲ್ಲಿ ಅಬ್ಬರವಿದ್ದರೂ ಸೊಗಸಾಗಿ ಮೂಡಿಬಂದಿದೆ. ಫೈಟರ್‌ ಜೀವನ ಅಷ್ಟಾಗಿ ಚೆನ್ನಾಗಿಲ್ಲ. ಫೈಟ್‌ಗಳ ಅಬ್ಬರ ಮಾತ್ರ ಇದೆ. ಆದರೆ, ಕಥೆ ಇಲ್ಲ” ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ ಬಗ್ಗೆಯೂ ಅಸಮಾಧಾನ ಕೇಳಿಬಂದಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌ ಇದಾಗಿದೆʼʼ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ಧರ್ಮ ಪ್ರೊಡಕ್ಷನ್‌ನಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. ಪೋಸ್ಟರ್‌ಗಳಿಂದಲೇ ಲೈಗರ್‌ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅಲ್ಲದೆ, ಬಳಿಕ ಬಂದ ಟ್ರೈಲರ್‌ ಇದಕ್ಕೆ ಪುಷ್ಟಿ ನೀಡಿತ್ತು. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು, ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

ವಿಜಯ್‌ ದೇವರಕೊಂಡ ಇಷ್ಟು ದಿನ ರೊಮ್ಯಾಂಟಿಕ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಬಾಕ್ಸಿಂಗ್‌ನ ದಿಗ್ಗಜ ಮೈಕ್‌ ಟೈಸನ್‌ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ | Liger Movie | ವಿಶ್ವಾದ್ಯಂತ ಶುರುವಾಗಿದೆ ಲೈಗರ್‌ ಆರ್ಭಟ: ಅಕ್ಡಿ ಪಕ್ಡಿ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್‌

Exit mobile version