Site icon Vistara News

Liger Movie | ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಎದರು ಅಬ್ಬರಿಸಲಿರುವ ಖಳನಾಯಕ ಇವರೇ!

Liger Movie

ಬೆಂಗಳೂರು: ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ‘ಲೈಗರ್’ ಸಿನಿಮಾ (Liger Movie) ರಿಲೀಸ್‌ಗೆ ಇನ್ನೇನು ದಿನಗಣನೆ ಶುರುವಾಗಿದೆ. ಇದೇ 25ರಂದು ಪಂಚ ಭಾಷೆಯಲ್ಲಿ ಚಿತ್ರ ಮೆರವಣಿಗೆ ಹೊರಡಲಿದೆ. ಬಾಕ್ಸರ್ ಆಗಿ ಅಬ್ಬರಿಸಲಿರುವ ವಿಜಯ್ ಎದುರು ವಿಶ್ ಎಂಬ ಯುವ ನಟ ಖಳನಾಯಕನಾಗಿ ತೊಡೆ ತಟ್ಟಲಿದ್ದಾರೆ.

ಪುರಿ ಕನೆಕ್ಟ್ಸ್ ಪ್ರೊಡಕ್ಷನ್ ಹೌಸ್‌ನ ಸಿಇಒ ಆಗಿದ್ದ ವಿಶ್ ತೆರೆ ಹಿಂದೆ ಸಾಕಷ್ಟು ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಈಗ ಇವರು ಲೈಗರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ವಿಜಯ್ ಎದುರು ವಿಶ್ ಪ್ರತಿಸ್ಪರ್ಧಿಯಾಗಿದ್ದಾರೆ.

ಇದನ್ನೂ ಓದಿ | Liger Movie | ಆಗಸ್ಟ್ 19ಕ್ಕೆ ಬೆಂಗಳೂರಿನಲ್ಲಿ ಲೈಗರ್ ಪ್ರೀ ರಿಲೀಸ್ ಈವೆಂಟ್

ಪುರಿ ಕನೆಕ್ಟ್ಸ್ ಹಾಗೂ ಧರ್ಮ ಪ್ರೊಡಕ್ಷನ್ ಅಡಿ ರೆಡಿಯಾಗಿರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್‌ಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು, ವಿಜಯ್‌ಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ನಟಿಸಿದ್ದು, ರಮ್ಯಾ ಕೃಷ್ಣ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Liger Movie | ಗುಲಾಬಿ ಸಾಕು ಮಾನ ಮುಚ್ಚೋಕೆ! ಲೈಗರ್‌ ಪೋಸ್ಟರ್‌ನಲ್ಲಿ ವಿಜಯ್‌ ದೇವರಕೊಂಡ ನಗ್ನಾವತಾರ

Exit mobile version