Site icon Vistara News

Lokesh Kanagaraj: ಸಿನಿಮಾರಂಗಕ್ಕೆ ಗುಡ್‌ಬೈ ಹೇಳ್ತಾರಂತೆ ʻವಿಕ್ರಮ್‌ʼ, ʻಮಾಸ್ಟರ್‌ʼ ಸಿನಿಮಾ ಖ್ಯಾತಿಯ ಲೋಕೇಶ್‌ ಕನಕರಾಜ್!

Lokesh Kanagaraj quit movies

ಬೆಂಗಳೂರು: ಯುವ ಮತ್ತು ಪ್ರತಿಭಾವಂತ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ಅವರು ಸದ್ಯ ದಳಪತಿ ವಿಜಯ್‌ ಅವರ ಆ್ಯಕ್ಷನ್ ಥ್ರಿಲ್ಲರ್ ಲಿಯೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಷಾ ಕೃಷ್ಣನ್ ಎಷ್ಟೋ ವರ್ಷದ ಬಳಿಕ ವಿಜಯ್‌ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಲೋಕೇಶ್‌ ಅವರು ಅವರ ಫ್ಯಾನ್ಸ್‌ಗೆ ಬೇಸರದ ಸಂಗತಿಯೊಂದು ರಿವೀಲ್‌ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕನಕರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಸಿನಿಮಾನಗಳನ್ನು ಮಾಡುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.

‘ಕೈದಿ’ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಬೇಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವುದಾಗಿ ಸುಳಿವು ನೀಡಿದ್ದಾರೆ. ಲೀಯೊ ಸಿನಿಮಾ ಬಳಿಕ ನಂತರ ತಲೈವಾ ರಜನಿಕಾಂತ್‌ ಅವರ ʼ171ʼ ಚಿತ್ರ ನಿರ್ದೇಶಿಸುವ ಬಗ್ಗೆಯೂ ಗಾಸಿಪ್‌ಗಳು ಹರಿದಾಡುತ್ತಿದೆ. ‘ಮಾಸ್ಟರ್’ ಹಾಗೂ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾಗಳಿಂದ ಸಖತ್‌ ಜನಪ್ರಿಯತೆ ಗಳಿಸಿದ್ದರು. ಇದೀಗ ದಕ್ಷಿಣ ಭಾರತದ ಚಿತ್ರರಂಗದ ಬಹು ಬೇಡಿಕೆಯ ಫಿಲ್ಮ್ ಮೇಕರ್ ಎನಿಸಿಕೊಂಡಿದ್ದಾರೆ. ಇಷ್ಟಾದರೂ ಕೂಡ ಆದಷ್ಟು ಬೇಗ ಸಿನಿಮಾ ರಂಗದಿಂದ ದೂರವಾಗುವ ಬಗ್ಗೆ ಲೋಕೇಶ್‌ ಅವರು ಪ್ರಸ್ತಾಪಿಸಿದ್ದಾರೆ.

ಸಂದರ್ಶನದಲ್ಲಿ ʻʻ”ನನ್ನ ಕರಿಯರ್‌ನಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಪ್ಲ್ಯಾನ್​ ನನಗೆ ಇಲ್ಲ. ಚಿತ್ರರಂಗದಲ್ಲಿ ಏನಾದರೂ ಮಾಡೋಣ ಎಂದು ನಾನು ಇಲ್ಲಿಗೆ ಬಂದೆ ಅಷ್ಟೇ. ಲೋಕೇಶ್​ ಸಿನಿಮ್ಯಾಟಿಕ್​ ಯೂನಿವರ್ಸ್​ಸಾಧ್ಯವಾಗಿದ್ದು ನಿರ್ಮಾಪಕರ ನಂಬಿಕೆ ಮತ್ತು ಸಹಾಯದಿಂದ. ಹಾಗಾಗಿ ನಾನು ನಿರ್ಮಾಪಕರಿಗೆ ಮತ್ತು ಎಲ್ಲ ನಟರ ಅಭಿಮಾನಿಗಳಿಗೆ ಕೃತಜ್ಞನಾಗಿ ಇರುತ್ತೇನೆ. ನಾನು 10 ಸಿನಿಮಾ ಮಾಡಿದ ಬಳಿಕ ಚಿತ್ರರಂಗ ತೊರೆಯುತ್ತೇನೆ” ಎಂದು ಮಾತನಾಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ; Vijay Thalapathy: ನಿರ್ದೇಶಕ ಮಿಸ್ಕಿನ್‌ ಜತೆ ಶೂಟಿಂಗ್‌ ಅನುಭವ ಹಂಚಿಕೊಂಡ ಲೋಕೇಶ್ ಕನಕರಾಜ್!

ನಿರ್ದೇಶಕ ಲೋಕೇಶ್ ಕನಕರಾಜ್ ಹಾಲಿವುಡ್ ಫಿಲ್ಮ್ ಮೇಕರ್ಸ್ ಕ್ವಿಂಟಿನ್ ಟೆರೆಂಟಿನೊ ಸಿನಿಮಾಗಳಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ದಶಕದ ಹಿಂದೆ ಕ್ವಿಂಟಿನ್ ಟೆರೆಂಟಿನೊ ಕೂಡ 10 ಸಿನಿಮಾಗಳ ನಂತರ ಚಿತ್ರರಂಗಕ್ಕೆ ಗುಡ್‌ಬೈ ಹೇಳುವುದಾಗಿ ಹೇಳಿದ್ದರು. ಇದೀಗ ಅವರ ಹಾದಿಯಲ್ಲೇ ಲೋಕೇಶ್‌ ನಡೆಯಲಿದ್ದಾರೆ ಎನ್ನಲಾಗುತ್ತಿದೆ.

ಲಿಯೋ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿವೆ. ಚಿತ್ರದಲ್ಲಿ ಪ್ರಿಯಾ ಆನಂದ್, ಸಂಜಯ್ ದತ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಸಂತಿ ಮಾಯಾದೇವಿ, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಲಿಯೋ ಅಕ್ಟೋಬರ್ 19ರಂದು ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Exit mobile version