Site icon Vistara News

Love 360 | ಲವ್‌ 360 ಸಿನಿಮಾ ಟ್ರೈಲರ್‌ ರಿಲೀಸ್‌, ಹ್ಯಾಟ್ರಿಕ್‌ ಹೀರೋ ಮೆಚ್ಚುಗೆ

love 360

ಬೆಂಗಳೂರು : ಶಶಾಂಕ್‌ ಅವರ ನಿರ್ದೇಶನದ ಲವ್‌ 360 (Love 360) ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಟ್ರೈಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೈಲರ್‌ ಹಿನ್ನೆಲೆ ಸಂಗೀತ ಸಿದ್‌ ಶ್ರೀರಾಮ್‌ ಅವರ ʻʻಜಗವೇ ನೀನು ಗೆಳತಿಯೇʼʼ ಹಾಡು ಇದ್ದು ಡೈಲಾಗ್‌ ಮೂಲಕ ಮನಸ್ಸಿಗೆ ನಾಟುತ್ತದೆ. ನಟ ಪ್ರವೀಣ್‌ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮುಗ್ಧತೆಯನ್ನು ಹಾಗೂ ಪ್ರೀತಿ ಕಥಾ ಹಂದರವನ್ನು ಹೊಂದಿರುವಂತೆ ಇದೆ ಸಿನಿಮಾ. ಶಶಾಂಕ್‌ ಈ ಹಿಂದೆ ರಾಧಿಕ ಪಂಡಿತ್‌ ಅಭಿನಯದ ʻಮೊಗ್ಗಿನ ಮನಸ್ಸುʼ ಸಿನಿಮಾ ನಿರ್ದೇಶಕರಾಗಿದ್ದರು. ಆಗಸ್ಟ್‌ 19ರಂದು ಸಿನಿಮಾ ತೆರೆಗೆ ಬರಲಿದೆ. ನಾಯಕಿಯಾಗಿ ರಚನಾ ಇಂದರ್‌ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ | Karthikeya 2 | ನಿಖಿಲ್ ಸಿದ್ಧಾರ್ಥ್ ನಟನೆಯ ಕಾರ್ತಿಕೇಯ-2 ಸಿನಿಮಾದ ಟೀಸರ್ ರಿಲೀಸ್

ಟ್ರೈಲರ್‌ ಕುರಿತಾಗಿ ಮಾತನಾಡಿದ ಶಿವಣ್ಣ ಶಶಾಂಕ್‌ ಅವರ ವಿಶೇಷತೆ ಎಂದರೆ ʻʻತಮ್ಮ ಸ್ಟೋರಿಗೆ ಬೇಕಾದ ಸ್ಟಾರ್‌ಗಳನ್ನು ಹುಟ್ಟುಹಾಕುತ್ತಾರೆ. ಪ್ರವೀಣ್‌ ಹೊಸ ಹುಡುಗ ಎಂದು ಅನಿಸಿಲ್ಲ. ಈ ಚಿತ್ರದಲ್ಲಿ ಒಂದು ಟ್ರಿಕ್ಕಿ ಚಿತ್ರಕಥೆ ಇದೆ ಎಂದು ನನಗೆ ಅನಿಸುತ್ತಿದೆʼʼ ಎಂದು ಹೇಳಿದರು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

Exit mobile version