ಬೆಂಗಳೂರು: ʻರಜನಿ ಥರ್ಸೆ ಸ್ಟೋರೀಸ್ʼ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಬಿ.ಎಸ್ ನಿರ್ಮಾಣ ಮಾಡುತ್ತಿರುವ ʻಮೇಡ್ ಇನ್ ಬೆಂಗಳೂರುʼ (Made in Bengaluru) ಚಿತ್ರದ ಟೀಸರ್ ಈ ಹಿಂದೆ ಬಿಡುಗಡೆಯಾಗಿತ್ತು. ಹೊಸ ತಂಡ ಈ ಚಿತ್ರದ ಮೂಲಕ ಸ್ಯಾಂಡ್‌ವುಡ್‌ಗೆ ಎಂಟ್ರಿ ನೀಡಿದ್ದು, ಈ ಚಿತ್ರದ ಕಥೆ ಮತ್ತು ನಿರ್ದೇಶನವನ್ನು ಪ್ರದೀಪ್ ಶಾಸ್ತ್ರಿ ಮಾಡಿದ್ದಾರೆ. ಇದೀಗ ಚಿತ್ರತಂಡ ‘ಬನ್ನಿರಿ ಬೆಂಗಳೂರಿಗೆಲ್ಲ…ನಮ್ಮ ಕಂಪನಿ ಕಟ್ಟುವಾ’ ಎಂಬ ಹಾಡನ್ನು ಬಿಡುಗಡೆಗೊಳಿಸಿ ಸಖತ್ ಸದ್ದು ಮಾಡುತ್ತಿದೆ.
ಆಧುನಿಕ ಕನ್ನಡ ರಂಗಭೂಮಿಯ ಹರಿಕಾರ ಎಂದೇ ಪ್ರಖ್ಯಾತಿ ಪಡೆದ ಟಿ.ಪಿ ಕೈಲಾಸಂ ಅವರು ತಮ್ಮ ನಾಟಕದ ಮೂಲಕ ಜನ ಮನ್ನಣೆ ಪಡೆದವರು. ಅವರ ಸಾಹಿತ್ಯ ಕೂಡ ಅಸಂಖ್ಯಾತ ಜನರ ಮನಸ್ಸನ್ನು ಗೆದ್ದಿತ್ತು. ಅವರ ಹಾಡು ʻಬನ್ನಿರಿ ಭಾಮೆಯರೆಲ್ಲʼ ಯಾರಿಗೆ ಗೊತ್ತಿಲ್ಲ ಹೇಳಿ? ಇದೇ ಹಾಡನ್ನು ಇಟ್ಟುಕೊಂಡು “ಮೇಡ್ ಇನ್ ಬೆಂಗಳೂರು” ತಂಡ ಹಾಡನ್ನು ಬಿಡುಗಡೆಗೊಳಿಸಿದೆ. ಈ ಹಾಡು 11 ವಿವಿಧ ಭಾಷೆಗಳನ್ನು ಒಳಗೊಂಡಿರುವ ರಂಗ ಗೀತೆಯಾಗಿದೆ.
ಇದನ್ನೂ ಓದಿ | Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್; ಇದು ತಾರೆಗಳ ಸಮಾಗಮ!
ಕನ್ನಡ ನಾಟಕ ರಂಗಕ್ಕೆ ಹೊಸ ಆಯಾಮಗಳನ್ನು ತಂದ ಮಹಾನ್ ವ್ಯಕ್ತಿಗಳಾದ ಟಿ ಪಿ ಕೈಲಾಸಂ, ಎ ವಿ ವರದಾಚಾರ್, ಕೆ ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ, ಗುಬ್ಬಿ ವೀರಣ್ಣ ಹೀಗೆ ಕನ್ನಡ ರಂಗಭೂಮಿಯನ್ನು ಬದಲಿಸಿದ ಐಕಾನ್‌ಗಳಿಗೆ ಈ ಹಾಡನ್ನು ಸಮರ್ಪಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಡಿನಲ್ಲಿ ಇಡೀ ಬೆಂಗಳೂರಿನ ಜೀವನದ ಚಿತ್ರಣವಿದೆ. ಬೆಂಗಳೂರಿನಲ್ಲಿ ಬಂದು ನೆಲೆಸಿ ಎಂಥವರೂ ಜೀವನ ಕಟ್ಟಿಕೊಳ್ಳಬಹುದು, ವಿವಿಧ ಭಾಷೆಗಳ ನಡುವೆ ಏಕತೆ ಇಲ್ಲಿದೆ ಎಂಬ ಸಂದೇಶ ಸಾರಲಾಗಿದೆ.
ಅಶ್ವಿನ್ ಪಿ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡು ಮೂಡಿ ಬಂದಿದೆ. ಈ ಹಾಡಿನಲ್ಲಿ ಅಶ್ವಿನ್ ಪಿ ಕುಮಾರ್, ಶ್ರೀ ಹರ್ಷ ಎಂ ಆರ್, ಕಂಬದ ರಂಗಯ್ಯ, ರೋಹಿತ್ ಭಟ್ ಉಪ್ಪೂರ್, ಮಧ್ವೇಶ್ ಭಾರದ್ವಾಜ್, ಮೇಘನಾ ಕುಲಕರ್ಣಿ ಜೋಶಿ, ಪೂಜಾ ರಾವ್, ನಾರಾಯಣ ಶರ್ಮಾ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಷಣ್ಮುಗಂ, ಅಥರ್ವ ರಾವ್, ಅಪ್ಪಣ್ಣ, ಹಾಗೂ ರಾಕೇಶ್ ಪೂಜಾರಿ, ಅಶ್ವಿನ್ ಪ್ರಭಾತ್ (ಪ್ರಭಾತ್ ಸ್ಟುಡಿಯೋಸ್), ರಂಗಸ್ವಾಮಿ ರಂಗು (ಪ್ರಭಾತ್ ಸ್ಟುಡಿಯೋಸ್) ,ಸುಜಿತ್ ಶ್ರೀಧರ್, ವಾರುಣಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ದೊಡ್ಡ ಸ್ಟಾರ್ ನಟರ ದಂಡೇ ಇರುವುದು ವಿಶೇಷ. ಅನಂತ್ ನಾಗ್, ಸಾಯಿ ಕುಮಾರ್, ಪ್ರಕಾಶ್ ಬೆಳವಾಡಿ, ಮಧುಸೂಧನ್ ಗೋವಿಂದ್, ಪುನೀತ್ ಮಂಜುನಾಥ್, ವಂಶಿಧರ್, ಹಿಮಾಂಶಿ ವರ್ಮಾ, ಶಂಕರ ಮೂರ್ತಿ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ವಿನೀತ್ ಕುಮಾರ್, ಅನುರಾಗ್ ಪುತ್ತಿಗೆ, ಅರ್ಚನಾ ಕೊಟ್ಟಿಗೆ, ಲಕ್ಷ್ಮಿ ಮೂರ್ತಿ, ರಮೇಶ್ ಭಟ್, ಮಂದೀಪ್ ರೈ, ಎಂ.ಎಸ್ ಗಣೇಶ್ ಭಾರಧ್ವಾಜ್ ಅವರ ತಾರಾಗಣ ಚಿತ್ರಕ್ಕಿದೆ.
ಇದನ್ನೂ ಓದಿ | Ramya |18ನೇ ವಯಸ್ಸಿನಲ್ಲಿ ಹೇಗಿದ್ರು ಸ್ಯಾಂಡಲ್‌ವುಡ್ ಪದ್ಮಾವತಿ ? ಇಲ್ಲಿದೆ ಪೋಟೊ