Site icon Vistara News

Mahalakshmi Ravindar | ಮದುವೆಯಾಗಿ ನೂರು ದಿನ: ಹೆಂಡತಿ ಕುರಿತಾಗಿ ಪೋಸ್ಟ್‌ ಹಂಚಿಕೊಂಡ ದಢೂತಿ ರವೀಂದ್ರ!

Mahalakshmi Ravindar

ಬೆಂಗಳೂರು : ಕಾಲಿವುಡ್ ನಟಿ ಮಹಾಲಕ್ಷ್ಮಿ (Mahalakshmi Ravindar) ಹಾಗೂ ರವೀಂದ್ರ ಚಂದ್ರಶೇಖರ್ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಮದುವೆಯಾಗಿ ನೂರು ದಿನಗಳನ್ನು ಜೋಡಿ ಪೂರೈಸಿದೆ. ಈ ಸಂಭ್ರಮವನ್ನು ಸ್ವತಃ ರವೀಂದ್ರ ಅವರೇ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. 

”ಅಮ್ಮು ನಾನು ಈ 100 ದಿನಗಳ ಪೋಸ್ಟ್‌ಗೆ ಉತ್ತಮ ಶೀರ್ಷಿಕೆಯನ್ನು ಬರೆಯಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನನಗೆ ನಾಟಕೀಯವಾಗಿ ಬರೆಯಲು ಸಾಧ್ಯವಾಗಲಿಲ್ಲ. ನನಗೆ ಅನಿಸಿದ್ದನ್ನು ಬರೆಯುತ್ತೇನೆ. 37 ವರ್ಷಗಳ ನಂತರ 100 ದಿನಗಳು ನಾನು ಪ್ರತಿ ಸೆಕೆಂಡ್‌ನಲ್ಲೂ ಸಂತೋಷದಿಂದ ಬದುಕಿದ್ದೇನೆ. ನಾನು ಇಂದು ಹ್ಯಾಪಿಯಾಗಿ ಇದ್ದೇನೆ ಅಂದರೆ, ಅದಕ್ಕೆ ನೀನೇ ಕಾರಣ ಅಮ್ಮುʼʼ ಎಂದು ಅವರು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ | Hansika Motwani | ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ: ಮದುವೆ ಫೋಟೊಗಳು ಇಲ್ಲಿವೆ!

ಮದುವೆಯಿಂದ ಟ್ರೋಲ್ ಮೂಲಕವೇ ಸುದ್ದಿಯಾದ ಸೌತ್​ನ ಸೆಲೆಬ್ರಿಟಿ ಜೋಡಿ ಎಲ್ಲವನ್ನೂ ಮೀರಿ ಜತೆಯಾಗಿ ಸಂತೋಷದಿಂದ ಬದುಕುತ್ತಿದ್ದಾರೆ. ಕಿರುತೆರೆ ನಟಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ ಎಂದು ಹೇಳಲಾಗಿತ್ತು. ನೆಗೆಟಿವ್ ಕಾಮೆಂಟ್ ಬಂದರೂ, ಇಬ್ಬರೂ ನಗು ನಗುತ್ತಲೇ ಅವುಗಳನ್ನು ತೆಗೆದುಕೊಂಡರು. 

ಇದನ್ನೂ ಓದಿ | Star Fashion | ಬಾಲಿವುಡ್‌ ನಟಿ ನೇಹಾ ದೂಪಿಯಾರ ಬ್ಲೇಝರ್‌ ಪ್ರೇಮ

Exit mobile version