Site icon Vistara News

Mahesh Babu: ʻಗುಂಟೂರು ಖಾರಂʼನಲ್ಲಿ ಮಹೇಶ್‌ಬಾಬು ಸೇದಿದ್ದು ಆಯುರ್ವೇದ ಬೀಡಿ!

Mahesh Babu smoking beedi

ಬೆಂಗಳೂರು: ನಟ ಮಹೇಶ್ ಬಾಬು (Mahesh Babu) ನಟನೆಯ ʻಗುಂಟೂರು ಖಾರಂʼ (Guntur Kaaram) ಜ.12ರಂದು ತೆರೆ ಕಂಡಿತ್ತು. ಸಿನಿಮಾದಲ್ಲಿನ ಧೂಮಪಾನದ ದೃಶ್ಯಗಳ ಬಗ್ಗೆ ಮಹೇಶ್‌ ಬಾಬು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಬೀಡಿ ಸೇದುವ ದೃಶ್ಯದ ನಂತರ ಮೈಗ್ರೇನ್‌ಗೆ ಮಹೇಶ್ ಬಾಬು ತುತ್ತಾಗಿದ್ದರು ಎಂಬುದು ರಿವೀಲ್‌ ಆಗಿದೆ. ಈ ಬಗ್ಗೆ ಸ್ವತಃ ನಟನೇ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಮಾತನಾಡಿ ʻʻನಾನು ಸ್ಮೋಕ್‌ ಮಾಡುವುದಿಲ್ಲ. ಹಾಗೇ ಯಾರಿಗೂ ಅದನ್ನು ಮಾಡಲು ಪ್ರೋತ್ಸಾಹಿಸುವುದಿಲ್ಲ. ಸಿನಿಮಾದಲ್ಲಿ ನನಗೆ ಮೊದಲಿಗೆ ನಿಜವಾದ ಬೀಡಿಯನ್ನು ನೀಡಿದ್ದರು. ಅದಾದ ಬಳಿಕ ನನಗೆ ಮೈಗ್ರೇನ್ ಬಂದಿತು. ಈ ಬಗ್ಗೆ ನಿರ್ದೇಶಕ ತ್ರಿವಿಕ್ರಮ್ ಅವರ ಬಳಿ ಚರ್ಚಿಸಿದೆ. ಈ ಬಗ್ಗೆ ಅವರು ತುಂಬ ಯೋಚಿಸಿದರು. ಇದಾದ ಮೇಲೆ ನನಗೆ ‘ಆಯುರ್ವೇದ ಬೀಡಿ’ಯನ್ನು ತಂದುಕೊಟ್ಟರು. ಲವಂಗದ ಎಲೆಗಳಿಂದ ಮಾಡಿದ ಆಯುರ್ವೇದ ಬೀಡಿಯನ್ನು ತಂದುಕೊಟ್ಟ ಮೇಲೆ ನನಗೆ ಯಾವುದೇ ಸಮಸ್ಯೆಯಾಗಲಿಲ್ಲ. ಪುದೀನಾ ಪರಿಮಳ ಕೂಡ ಇತ್ತು. ತಂಬಾಕಿನ ಅಂಶ ಅದರಲ್ಲಿ ಇರಲಿಲ್ಲʼʼ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ʻಗುಂಟೂರು ಖಾರಂʼ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಕರ ಸಂಕ್ರಾಂತಿಯಂದು, ಮಹೇಶ್ ಬಾಬು ತಮ್ಮ ಗುಂಟೂರು ಖಾರಂ ತಂಡದೊಂದಿಗೆ ತಮ್ಮ ನಿವಾಸದಲ್ಲಿ ಸಕ್ಸೆಸ್‌ ಪಾರ್ಟಿಯನ್ನು ಆಯೋಜಿಸಿದ್ದರು. ನಮ್ರತಾ ಶಿರೋಡ್ಕರ್, ಸಿತಾರಾ, ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ, ದಿಲ್ ರಾಜು ಮತ್ತು ವಂಶಿ, ನಟನ ಸಹ-ನಟರು, ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: Mahesh Babu: ಹೊಸ ಅಧ್ಯಾಯ ಶುರು ಮಾಡಿದ ಮಹೇಶ್‌ ಬಾಬು ಪುತ್ರ! ತಂದೆ-ತಾಯಿಗೆ ಹೆಮ್ಮೆ!

ಸದ್ಯ ಇದು ಜಾಗತಿಕವಾಗಿ ಸುಮಾರು 164 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಬಜೆಟ್‌ ಪೈಕಿ ಶೇ. 56ರಷ್ಟು ಮರಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ. ತ್ರಿವಿಕ್ರಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಮೂಲಕ ಮಹೇಶ್‌ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಮೊದಲ ದಿನ (ಜನವರಿ 12) ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಗುಂಟೂರು ಖಾರಂʼನ ಎರಡು ಮತ್ತು ಮೂರನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿತ್ತು.

ಶನಿವಾರ ಚಿತ್ರ ಕಲೆಕ್ಟ್‌ ಮಾಡಿದ್ದು ಕೇವಲ 13.55 ಕೋಟಿ ರೂ. ಇನ್ನು ಭಾನುವಾರ 14.25 ಕೋಟಿ ರೂ. ಗಳಿಸಿದರೆ, ಸಂಕ್ರಾಂತಿ ಹಿನ್ನಲೆಯಲ್ಲಿ ಸೋಮವಾರ 14 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಕಥೆಯಲ್ಲಿ ಹೊಸತನವಿಲ್ಲ ಎನ್ನುವುದು ಬಹುತೇಕ ವೀಕ್ಷಕರ ಅಭಿಪ್ರಾಯ. ಅದಾಗ್ಯೂ ಮಹೇಶ್‌ ಬಾಬು ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದೆ.

Exit mobile version