Mahesh Babu: ʻಗುಂಟೂರು ಖಾರಂʼನಲ್ಲಿ ಮಹೇಶ್‌ಬಾಬು ಸೇದಿದ್ದು ಆಯುರ್ವೇದ ಬೀಡಿ! - Vistara News

South Cinema

Mahesh Babu: ʻಗುಂಟೂರು ಖಾರಂʼನಲ್ಲಿ ಮಹೇಶ್‌ಬಾಬು ಸೇದಿದ್ದು ಆಯುರ್ವೇದ ಬೀಡಿ!

Mahesh Babu: ಈಗಾಗಲೇ ಗುಂಟೂರು ಖಾರಂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಕರ ಸಂಕ್ರಾಂತಿಯಂದು, ಮಹೇಶ್ ಬಾಬು ತಮ್ಮ ಗುಂಟೂರು ಖಾರಂ ತಂಡದೊಂದಿಗೆ ತಮ್ಮ ನಿವಾಸದಲ್ಲಿ ಸಕ್ಸೆಸ್‌ ಪಾರ್ಟಿಯನ್ನು ಆಯೋಜಿಸಿದ್ದರು.

VISTARANEWS.COM


on

Mahesh Babu smoking beedi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಮಹೇಶ್ ಬಾಬು (Mahesh Babu) ನಟನೆಯ ʻಗುಂಟೂರು ಖಾರಂʼ (Guntur Kaaram) ಜ.12ರಂದು ತೆರೆ ಕಂಡಿತ್ತು. ಸಿನಿಮಾದಲ್ಲಿನ ಧೂಮಪಾನದ ದೃಶ್ಯಗಳ ಬಗ್ಗೆ ಮಹೇಶ್‌ ಬಾಬು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಬೀಡಿ ಸೇದುವ ದೃಶ್ಯದ ನಂತರ ಮೈಗ್ರೇನ್‌ಗೆ ಮಹೇಶ್ ಬಾಬು ತುತ್ತಾಗಿದ್ದರು ಎಂಬುದು ರಿವೀಲ್‌ ಆಗಿದೆ. ಈ ಬಗ್ಗೆ ಸ್ವತಃ ನಟನೇ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಮಾತನಾಡಿ ʻʻನಾನು ಸ್ಮೋಕ್‌ ಮಾಡುವುದಿಲ್ಲ. ಹಾಗೇ ಯಾರಿಗೂ ಅದನ್ನು ಮಾಡಲು ಪ್ರೋತ್ಸಾಹಿಸುವುದಿಲ್ಲ. ಸಿನಿಮಾದಲ್ಲಿ ನನಗೆ ಮೊದಲಿಗೆ ನಿಜವಾದ ಬೀಡಿಯನ್ನು ನೀಡಿದ್ದರು. ಅದಾದ ಬಳಿಕ ನನಗೆ ಮೈಗ್ರೇನ್ ಬಂದಿತು. ಈ ಬಗ್ಗೆ ನಿರ್ದೇಶಕ ತ್ರಿವಿಕ್ರಮ್ ಅವರ ಬಳಿ ಚರ್ಚಿಸಿದೆ. ಈ ಬಗ್ಗೆ ಅವರು ತುಂಬ ಯೋಚಿಸಿದರು. ಇದಾದ ಮೇಲೆ ನನಗೆ ‘ಆಯುರ್ವೇದ ಬೀಡಿ’ಯನ್ನು ತಂದುಕೊಟ್ಟರು. ಲವಂಗದ ಎಲೆಗಳಿಂದ ಮಾಡಿದ ಆಯುರ್ವೇದ ಬೀಡಿಯನ್ನು ತಂದುಕೊಟ್ಟ ಮೇಲೆ ನನಗೆ ಯಾವುದೇ ಸಮಸ್ಯೆಯಾಗಲಿಲ್ಲ. ಪುದೀನಾ ಪರಿಮಳ ಕೂಡ ಇತ್ತು. ತಂಬಾಕಿನ ಅಂಶ ಅದರಲ್ಲಿ ಇರಲಿಲ್ಲʼʼ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ʻಗುಂಟೂರು ಖಾರಂʼ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಕರ ಸಂಕ್ರಾಂತಿಯಂದು, ಮಹೇಶ್ ಬಾಬು ತಮ್ಮ ಗುಂಟೂರು ಖಾರಂ ತಂಡದೊಂದಿಗೆ ತಮ್ಮ ನಿವಾಸದಲ್ಲಿ ಸಕ್ಸೆಸ್‌ ಪಾರ್ಟಿಯನ್ನು ಆಯೋಜಿಸಿದ್ದರು. ನಮ್ರತಾ ಶಿರೋಡ್ಕರ್, ಸಿತಾರಾ, ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ, ದಿಲ್ ರಾಜು ಮತ್ತು ವಂಶಿ, ನಟನ ಸಹ-ನಟರು, ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: Mahesh Babu: ಹೊಸ ಅಧ್ಯಾಯ ಶುರು ಮಾಡಿದ ಮಹೇಶ್‌ ಬಾಬು ಪುತ್ರ! ತಂದೆ-ತಾಯಿಗೆ ಹೆಮ್ಮೆ!

ಸದ್ಯ ಇದು ಜಾಗತಿಕವಾಗಿ ಸುಮಾರು 164 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಬಜೆಟ್‌ ಪೈಕಿ ಶೇ. 56ರಷ್ಟು ಮರಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ. ತ್ರಿವಿಕ್ರಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಮೂಲಕ ಮಹೇಶ್‌ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಮೊದಲ ದಿನ (ಜನವರಿ 12) ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಗುಂಟೂರು ಖಾರಂʼನ ಎರಡು ಮತ್ತು ಮೂರನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿತ್ತು.

ಶನಿವಾರ ಚಿತ್ರ ಕಲೆಕ್ಟ್‌ ಮಾಡಿದ್ದು ಕೇವಲ 13.55 ಕೋಟಿ ರೂ. ಇನ್ನು ಭಾನುವಾರ 14.25 ಕೋಟಿ ರೂ. ಗಳಿಸಿದರೆ, ಸಂಕ್ರಾಂತಿ ಹಿನ್ನಲೆಯಲ್ಲಿ ಸೋಮವಾರ 14 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಕಥೆಯಲ್ಲಿ ಹೊಸತನವಿಲ್ಲ ಎನ್ನುವುದು ಬಹುತೇಕ ವೀಕ್ಷಕರ ಅಭಿಪ್ರಾಯ. ಅದಾಗ್ಯೂ ಮಹೇಶ್‌ ಬಾಬು ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Trisha Krishnan: ತ್ರಿಶಾ ಬಗ್ಗೆ ನಾಲಿಗೆ ಹರಿಯಬಿಟ್ಟ ರಾಜಕೀಯ ಮುಖಂಡ; ತಪ್ಪಿನ ಅರಿವಾಗಿ ಹೇಳಿದ್ದೇನು?

Trisha Krishnan: ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ ವಿರುದ್ಧ ನಾಲಗೆ ಹರಿಯಬಿಟ್ಟ ತಮಿಳುನಾಡಿನ ರಾಜಕೀಯ ಮುಖಂಡ ಎ.ವಿ.ರಾಜು ಕೊನೆಗೀ ಕ್ಷಮೆ ಯಾಚಿಸಿದ್ದಾರೆ.

VISTARANEWS.COM


on

trisha raju
Koo

ಚೆನ್ನೈ: ಕೆಲವು ದಿನಗಳ ಹಿಂದೆ ಕಾಲಿವುಡ್‌ ಹಿರಿಯ ನಟ ಮನ್ಸೂರ್​ ಅಲಿ ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್‌ (Trisha Krishnan) ವಿರುದ್ಧ ಅಸಂಬದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಇದೀಗ ತಮಿಳುನಾಡಿನ ರಾಜಕೀಯ ಮುಖಂಡ ಎ.ವಿ.ರಾಜು (A.V.Raju) ಕೂಡ ತ್ರಿಶಾ ವಿರುದ್ಧ ನಾಲಿಗೆ ಹರಿಯ ಬಿಟ್ಟಿದ್ದಾರೆ. ಇತ್ತೀಚೆಗೆ ಎಐಎಡಿಎಂಕೆ (AIADMK) ಪಕ್ಷದಿಂದ ಉಚ್ಛಾಟಿತರಾದ ಎ.ವಿ.ರಾಜು, ʼʼನಿರ್ದಿಷ್ಟ ಮೊತ್ತದ ಹಣಕ್ಕೆ ಬದಲಾಗಿ ಶಾಸಕರ ಆದೇಶದ ಮೇರೆಗೆ ತ್ರಿಶಾ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಯಿತುʼʼ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ನಟಿ, ʼʼಇಂತಹ ಕೀಳು ಹೇಳಿಕೆ ನೀಡಿದ್ದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಗುಡುಗಿದ್ದಾರೆ. ಈ ಮಧ್ಯೆ ಎ.ವಿ.ರಾಜು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

ಎ.ವಿ.ರಾಜು ಹೇಳಿದ್ದೇನು?

ಪಶ್ಚಿಮ ಸೇಲಂನ ಶಾಸಕ ಜಿ.ವೆಂಕಟಚಲಂ ಅವರನ್ನು ಟೀಕಿಸುವ ಭರದಲ್ಲಿ ತ್ರಿಶಾ ಹೆಸರನ್ನು ಎ.ವಿ.ರಾಜು ಪ್ರಸ್ತಾವಿಸಿದ್ದಾರೆ. ಆ ಹಿರಿಯ ರಾಜಕಾರಣಿಗಾಗಿ ತ್ರಿಷಾಗೆ ದುಡ್ಡು ಕೊಟ್ಟು ನಮ್ಮ ರೆಸಾರ್ಟ್‌ ಕರೆಸಿಕೊಂಡಿದ್ದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ʼʼವೆಂಕಟಚಲಂ ಅವರು ತ್ರಿಶಾ ಅವರನ್ನು 25 ಲಕ್ಷ ರೂಪಾಯಿಗೆ ಕೇಳಿದ್ದರು. ಅದನ್ನು ಶಾಸಕ ಕರುಣಾಸ್​ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಾಗಿ ಹಲವು ನಟಿಯರು ಇದ್ದಾರೆʼʼ ಎಂದು ಅಸಹ್ಯಕರವಾಗಿ ಮಾತನಾಡಿದ್ದರು. ಈ ಹೇಳಿಕೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ರಿಶಾ ಕೆಂಡಾಮಂಡಲ

ರಾಜು ವಿರುದ್ಧ ತ್ರಿಶಾ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಪ್ರಚಾರ ಪಡೆಯಲು ಕೀಳು ವ್ಯಕ್ತಿಗಳು ಎಂಥ ಕೆಳಮಟ್ಟಕ್ಕೆ ಬೇಕಾದರು ಇಳಿಯುವುದನ್ನು ಪದೇಪದೇ ನೋಡಲು ಅಸಹ್ಯ ಎನಿಸುತ್ತೆ. ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನನ್ನ ಲೀಗಲ್​ ಡಿಪಾರ್ಟ್​ಮೆಂಟ್​ನವರು ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆʼʼ ಎಂದು ತ್ರಿಶಾ ಹೇಳಿದ್ದಾರೆ.

ಕ್ಷಮೆ ಯಾಚನೆ

ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಎ.ವಿ.ರಾಜು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದ ಅವರು, “ನಾನು ನಟಿ ತ್ರಿಶಾ ಅವರನ್ನು ಹೋಲುವ ಮಹಿಳೆಯನ್ನು ಉಲ್ಲೇಖಿಸಿದ್ದೇನೆ ಹೊರತು ಸ್ವತಃ ನಟಿಯ ಬಗ್ಗೆ ಹೇಳಿಕೆ ನೀಡಿಲ್ಲ. ತ್ರಿಶಾ ಸೇರಿದಂತೆ ಚಿತ್ರರಂಗದ ಎಲ್ಲರಿಗೂ ಕ್ಷಮೆ ಯಾಚಿಸುತ್ತೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mansoor Ali Khan: ಅಸಭ್ಯ ಹೇಳಿಕೆ ನೀಡಿದ್ದಲ್ಲದೆ ತ್ರಿಶಾ ವಿರುದ್ಧವೇ ಮೊಕದ್ದಮೆ; ನಟನಿಗೆ ಕೋರ್ಟ್‌ ತಪರಾಕಿ

ತ್ರಿಶಾ ಬೆಂಬಲಕ್ಕೆ ಬಂದ ಸೆಲೆಬ್ರಿಟಿಗಳು

ತ್ರಿಶಾ ಬೆಂಬಲಕ್ಕೆ ಹಲವರು ಧಾವಿಸಿದ್ದಾರೆ. ನಟ ವಿಶಾಲ್‌ ಈ ಬಗ್ಗೆ ಎಕ್ಸ್‌ ಮೂಲಕ ಪೋಸ್ಟ್‌ ಹಂಚಿಕೊಂಡು ಧೈರ್ಯ ತುಂಬಿದ್ದಾರೆ. “ರಾಜಕೀಯ ಪಕ್ಷವೊಂದರ ಮೂರ್ಖನೊಬ್ಬ ನಮ್ಮ ಸಿನಿಮಾ ಇಂಡಸ್ಟ್ರಿ ಕಲಾವಿದರೊಬ್ಬರ ಬಗ್ಗೆ ತುಂಬಾ ಕೆಟ್ಟದಾಗಿ ಮತ್ತು ಅಸಹ್ಯಕರವಾಗಿ ಮಾತನಾಡಿದ್ದಾನೆ ಎಂದು ತಿಳಿಯಿತು. ನಾನು ಅವರ ಹೆಸರನ್ನು ಉಲ್ಲೇಖಿಸುವುದಿಲ್ಲ. ಏಕೆಂದರೆ ಅವರು ಅದನ್ನು ಪ್ರಚಾರಕ್ಕಾಗಿ ಮಾಡಿದ್ದಾರೆ ಎಂದು ನನಗೆ ತಿಳಿದಿದೆ. ಇದು ಸೆಲೆಬ್ರಿಟಿಗಳ ಬಗ್ಗೆ ನಕಾರಾತ್ಮಕ ಪ್ರಚಾರದಿಂದ ಹಣ ಗಳಿಸಲು ಪ್ರಯತ್ನಿಸುವ ಪ್ರವೃತ್ತಿ ಎನ್ನುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಸ್ವಲ್ಪವಾದರೂ ಶಿಸ್ತು ರೂಢಿಸಿಕೊಳ್ಳಿʼʼ ಎಂದು ಹೇಳಿದ್ದಾರೆ. ಇವರ ಜತೆಗೆ ಸಿನಿರಂಗದ ಹಲವರು, ಅಭಿಮಾನಿಗಳು ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Aadujeevitham Movie : ಆಡು ಜೀವಿತಂ‌ ನಿರೀಕ್ಷೆಗೂ ಮೊದಲೇ ತೆರೆಗೆ; ರಿಲೀಸ್‌ ಡೇಟ್‌ ಫಿಕ್ಸ್‌

Aadujeevitham Movie : ಭಾರಿ ಸದ್ದು ಮಾಡುತ್ತಿರುವ ಕುತೂಹಲಕಾರಿ ಚಿತ್ರ ಆಡು ಜೀವಿತಂ ಮಾರ್ಚ್‌ 28ರಂದು ತೆರೆಗೆ ಅಪ್ಪಳಿಸಲಿದೆ. ಕೊಲ್ಲಿ ರಾಷ್ಟ್ರಕ್ಕೆ ಹೋದ ಕೇರಳಿಗನೊಬ್ಬನ ಬದುಕಿನ ಕಥೆ ಇದರಲ್ಲಿದೆ.

VISTARANEWS.COM


on

Aadujeevitham Movie prithviraj sukumaran
Koo

ಬೆಂಗಳೂರು: ದೀರ್ಘ ಕಾಯುವಿಕೆ ಚಿಕ್ಕದಾಗುತ್ತದೆ! ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ದಿ ಗೋಟ್ ಲೈಫ್ -ಆಡುಜೀವಿತಮ್ (Aadujeevitham Movie) ಈಗ ಮಾರ್ಚ್ 28ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ (Film release on March 28). ಹೀಗೆಂದು ಚಿತ್ರತಂಡ ಘೋಷಣೆ ಮಾಡಿದೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಕುತೂಹಲಿಗಳನ್ನು ಇನ್ನಷ್ಟು ಕಾಯಿಸದೆ ಬೇಗನೆ ಚಿತ್ರಮಂದಿರಕ್ಕೆ ಬರಲು ತೀರ್ಮಾನಿಸಲಾಗಿದೆ.

ಭಾರತೀಯ ಚಲನಚಿತ್ರೋದ್ಯಮದ ವಿವಿಧ ಸೂಪರ್‌ಸ್ಟಾರ್‌ಗಳು ಮೂರು ನಿಗೂಢ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇದೀಗ ಪೂರ್ಣ ರೂಪದೊಂದಿಗೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.

Aadujeevitham-Movie

ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡುಜೀವಿತಂ’ ಕಾದಂಬರಿಯನ್ನು ಆಧರಿಸಿದೆ, ಇದನ್ನು ವಿದೇಶಿ ಭಾಷೆಗಳು ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಿಸಲಾಗಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ವಿದೇಶದಲ್ಲಿ ಅದೃಷ್ಟವನ್ನು ಹುಡುಕುತ್ತಾ ವಲಸೆ ಹೋದ ಯುವಕ ನಜೀಬ್‌ನ ಜೀವನದ ಕಥೆಯನ್ನು ಆಧರಿಸಿದೆ

ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶಿಸಿದ ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

Aadujeevitham Movie

ದಿ ಗೋಟ್ ಲೈಫ್ ಚಿತ್ರದ ಸಂಗೀತ ನಿರ್ದೇಶನ ಮಾಡಿರುವುದು ಎ.ಆರ್. ರೆಹಮಾನ್. ರೆಸುಲ್ ಪೂಕುಟ್ಟಿ ಮತ್ತು ಸುನಿಲ್‌ ಕೆಎಸ್‌. ಚಿತ್ರದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಮತ್ತು ಚಿತ್ರಕ್ಕೆ ಶ್ರೀಕರ್ ಪ್ರಸಾದ್ ಸಂಕಲನವಿದೆ.

ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಚಿತ್ರೀಕರಿಸಲಾಗುತ್ತಿರುವ ಈ ಚಲನಚಿತ್ರವು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಇದುವರೆಗಿನ ಅತಿದೊಡ್ಡ ಸಾಹಸ ಎನ್ನಲಾಗುತ್ತಿದೆ.

ವಿಷುಯಲ್ ರೊಮ್ಯಾನ್ಸ್ ಒಂದು ವಿಶಿಷ್ಟವಾದ ಭಾರತೀಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, ಕೇರಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 7 ವರ್ಷಗಳ ಅಲ್ಪಾವಧಿಯಲ್ಲಿ, ಕಂಪನಿಯು ಸೃಜನಶೀಲ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ, ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.

ವಿಷುಯಲ್ ರೋಮ್ಯಾನ್ಸ್ “100 ಇಯರ್ಸ್ ಆಫ್ ಕ್ರಿಸೋಸ್ಟೋಮ್” ನಿರ್ಮಾಣದ ಮೂಲಕ ಸಿನಿಮಾ ಜಗತ್ತಿನಲ್ಲಿ ಒಂದು ಮೈಲಿಗಲ್ಲು ಸಾಧಿಸಿತು, ಇದು 48 ಗಂಟೆಗಳ ಕಾಲ ಅಭೂತಪೂರ್ವ ಅವಧಿಯ ಸಾಕ್ಷ್ಯಚಿತ್ರವಾಗಿದೆ. ವ್ಯಾಪಕವಾಗಿ ಮೆಚ್ಚುಗೆ ಪಡೆದು ಗಿನ್ನಿಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಗೌರವ ಪಡೆದಿದೆ.

ಇದನ್ನೂ ಓದಿ: Aadujeevitham Movie: ವಲಸೆ ಕಥೆ ಹೊತ್ತ ಆಡುಜೀವಿತಂ ರಿಲೀಸ್‌ ಡೇಟ್‌ ನ. 30ಕ್ಕೆ ಅನೌನ್ಸ್‌

ದಾರ್ಶನಿಕ ಚಲನಚಿತ್ರ ನಿರ್ಮಾಪಕ ಬ್ಲೆಸ್ಸಿ ಐಪ್ ಥಾಮಸ್ ಸ್ಥಾಪಿಸಿದ ವಿಷುಯಲ್ ರೋಮ್ಯಾನ್ಸ್ ಕಥೆ ಹೇಳುವ ಅವರ ಉತ್ಸಾಹ ಮತ್ತು ಸಿನಿಮಾ ಕಲಾತ್ಮಕತೆಗೆ ಬದ್ಧತೆಯನ್ನು ಒಳಗೊಂಡಿದೆ. ಬ್ಲೆಸ್ಸಿಯ ಕ್ರಿಯಾಶೀಲತೆಯು ಅವರಿಗೆ ಗಮನಾರ್ಹವಾದ ಮನ್ನಣೆಯನ್ನು ತಂದುಕೊಟ್ಟಿದೆ. ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

Aadujeevitham Movie : ಏನಿದು ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

Aadujeevitham Movie1

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಹೌದು ನಾವು ತಗಡುಗಳು, ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ: ಸೈಲೆಂಟ್‌ ಆದ ಉಮಾಪತಿ ಶ್ರೀನಿವಾಸ್!

Actor Darshan: ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು ಆದರೆ ದರ್ಶನ್ ಇಂದಿನ ಸಮಾರಂಭದಲ್ಲಿ, ಉಮಾಪತಿಯನ್ನುದ್ದೇಶಿಸಿ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದೀಗ ಉಮಾಪತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

upatai shrinivasReacted To Darshan words
Koo

ಬೆಂಗಳೂರು: ಇಂದು (Actor Darshan) (ಫೆ.20) ಪ್ರಸನ್ನ ಚಿತ್ರಮಂದಿರದಲ್ಲಿ ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಮಾರಂಭದಲ್ಲಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ದರ್ಶನ್‌ ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು ಆದರೆ ದರ್ಶನ್ ಇಂದಿನ ಸಮಾರಂಭದಲ್ಲಿ, ಉಮಾಪತಿಯನ್ನುದ್ದೇಶಿಸಿ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದೀಗ ಉಮಾಪತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ

ʻʻನಾನು ಅವರಿಗೆಲ್ಲ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ತಗಡುಗಳು..ತಗಡಿನ ಹಾಗೇ ಇರಬೇಕು. ದೊಡ್ಡ ವ್ಯಕ್ತಿಗಳು ಮಾತನಾಡಿದ್ದಾರೆ ತೊಂದರೆ ಇಲ್ಲ. ದೊಡ್ಡವರು ಮಾತನಾಡಿದ್ದಾರೆ. ಅದಕ್ಕೆಲ್ಲ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗುತ್ತದೆಯಾ? ಈಗ ಎಲ್ಲ ಕತೆಗಳನ್ನು ಸಿನಿಮಾ ಮಾಡೋಕಾಗಲ್ಲ. ‘ಕಾಟೇರ’ ಟೈಟಲ್ ಯಾರ ಬ್ಯಾನರ್ ಅಲ್ಲಿ ರಿಜಿಸ್ಟರ್ ಆಯ್ತು ಎಂಬುದು ಚೇಂಬರ್​ನಲ್ಲಿ ಮಾಹಿತಿ ಸಿಗುತ್ತದೆ. ಟೈಟಲ್‌ ರೆಫರ್ ಮಾಡಿದ್ರು. ಅದನ್ನು ನನ್ನ ಹೆಸರಲ್ಲಿ ರಿಜಿಸ್ಟರ್‌ ಮಾಡಿಸಿಕೊಂಡಿದ್ದೆ. ‘ಮದಗಜ’ ಸಿನಿಮಾ ಟೈಟಲ್ ರಾಮಮೂರ್ತಿ ಅವರ ಬಳಿ ಇತ್ತು, ನೀವು ‘ಮದಗಜ’ ಕೊಡಿ ನಾನು ‘ಕಾಟೇರ’ ಕೊಡ್ತೀನಿ ಎನ್ನುವ ಒಪ್ಪಂದದ ಮೇಲೆ ಟೈಟಲ್ ಕೊಟ್ಟೆ’ ಎಂದಿದ್ದಾರೆ ಉಮಾಪತಿ.

ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗಲ್ಲ

ಕಾಟೇರ ವಿಚಾರವಾಗಿ ಮಾತನಾಡಿ ʻಕಥೆಯನ್ನು ಎಲ್ಲರೂ ಕೂತು ಚರ್ಚಿಸಿಯೇ ಮಾಡಿದ್ದು. ಅದರಲ್ಲಿ ಪ್ರಮುಖ ಪಾತ್ರ ನಂದಿತ್ತು. ಈಗ ಹಾಗಲ್ಲ ನಿರ್ದೇಶಕರು ಅವರ ಕಡೆ ಇದ್ದಾರೆ. ಅವರ ಅಕ್ಕ ಪಕ್ಕದಲ್ಲಿ ಇರೋರು ಸಪೋರ್ಟ್‌ ಮಾಡುತ್ತಾರೆ. ಈಗ ನಾವು ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗಲ್ಲ. ನಾವು ತಗಡಗಳು ತಗಡಗಳಾಗಿಯೇ ಇರಬೇಕುʼʼಎಂದರು.

ಇದನ್ನೂ ಓದಿ: Actor Darshan: ಅಯ್ಯೋ ತಗಡೇ, ಯಾಕಪ್ಪ ಗುಮ್ಮಿಸ್ಕೋತಿಯಾ: ಉಮಾಪತಿಗೆ ದರ್ಶನ್‌ ವಾರ್ನಿಂಗ್‌!

ಕಾಲಯ ತಸ್ಮೈ ನಮಃ,

ʻʻವಾದ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ಸರಿ ಸಮಾನಕ್ಕೆ ಇರೋ ವ್ಯಕ್ತಿ ನಾನಲ್ಲ. ಹಾಗಾಗಿ ಅವರ ಹೇಳಿದ್ದಕ್ಕೆ ನಾವು ವಾದ ಮಾಡೋಕು ಆಗಲ್ಲ. ಹರ್ಟ್‌ ಅಂತಲ್ಲ. ನಮಗೆ ಮಾಡೋಕೆ ಕೆಲಸ ತುಂಬ ಇದೆ. ಅವರಷ್ಟು ಬೆಳೆದಾಗ ನಾವು ಉತ್ತರ ಕೊಡೋಣ. ಕಾಲಯ ತಸ್ಮೈ ನಮಃ, ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಎಂದೇನಿಲ್ಲ. ಅವರು ಗೆದ್ದಿದ್ದಾರೆ ಖುಷಿಯಾಗಿದ್ದಾರೆ. ನಮ್ಮಿಂದ ಅವರ ಗೆಲುವಿಗೆ ಏನು ಕೊಡುಗೆ ಇಲ್ಲʼʼ ಎಂದರು.

ʻಹಿಂದೆಯೇ ಒಮ್ಮೆ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದ ಎಂದು ದರ್ಶನ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಉಮಾಪತಿ, ಯಾರು ಯಾರು ಸಿಕ್ಕಿ ಬಿದ್ದರು? ಯಾರು ಏನು ಮಾಡಿಕೊಂಡರು? ಅವರೆಲ್ಲ ದೊಡ್ಡ ವ್ಯಕ್ತಿಗಳು. ನಮ್ಮ ಹಾಸಿಗೆ ಇದ್ದಷ್ಟು ನಾವು ಕಾಲು ಚಾಚಬೇಕು. ನಾನು ತಪ್ಪು ಮಾಡಿದ್ದಾಗಿದ್ದರೆ ಲೀಗಲಿ ಮೂವ್ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ’ ಎಂದು ಪ್ರಶ್ನೆ ಮಾಡಿದರು. ʻಕಾಟೇರ ನಿಮ್ಮದೇ ಅಂತ ಕ್ಲೇಮ್‌ ಮಾಡ್ತೀರಾ?ʼʼ ಎಂದು ಕೇಳಿದಾಗ, ಮಾತನಾಡಿʻʻ ‘ಬಾಯಲ್ಲಿ ಏನು ಬೇಕಾದರೂ ಹೇಳಬಹುದು ಆದರೆ ಮನಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಕತೆ ಮಾಡಿಸಬೇಕಾದರೆ ಯಾರು ಮಾಡಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಡ ವ್ಯಕ್ತಿ ತರುಣ್​ ಸುಧೀರ್​ಗೆ ಸಹ ಗೊತ್ತಿದೆ. ಈಗ ನಾವು ಕಾಲು ಧೂಳು ಸಮನಾಗಿ ಕಾಣಿಸುತ್ತಿದ್ದೇವೆʼʼ ಎಂದು ಬೇಸರ ಹೊರ ಹಾಕಿದರು ಉಮಾಪತಿ.

Continue Reading

South Cinema

Anjali Menon: ʻಬೆಂಗಳೂರು ಡೇಸ್’ ಖ್ಯಾತಿಯ ನಿರ್ದೇಶಕಿ ಅಂಜಲಿ ಮೆನನ್ ತಮಿಳು ಸಿನಿಮಾಗೆ ಕೆಆರ್‌ಜಿ ಸ್ಟುಡಿಯೋಸ್‌ ಸಾಥ್‌!

Anjali Menon: ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ. ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

VISTARANEWS.COM


on

Anjali Menon announces her Tamil film with KRG Studios
Koo

ಬೆಂಗಳೂರು: ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ (Anjali Menon) ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. “ಬೆಂಗಳೂರು ಡೇಸ್”, “ಉಸ್ತಾದ್ ಹೊಟೇಲ್”, “ಮಂಜಡಿಕುರು”, “ಕೂಡೆ” ಮತ್ತು ಇತ್ತೀಚಿನ “ವಂಡರ್ ವುಮನ್” ಅಂತಹ ಹಿಟ್‌ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಈ ಸಹಯೋಗದ‌ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ.

ಈ ಸಂಸ್ಥೆ 2020ರಲ್ಲಿ, “ರತ್ನನ್ ಪ್ರಪಂಚ” ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ‌ ಧನಂಜಯ್ ಅಭಿನಯದಲ್ಲಿ ಮೂಡಿ‌ಬಂದ ಈ‌ ಚಿತ್ರ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು‌. ನಂತರದಲ್ಲಿ , ಮಾರ್ಚ್ 2023ರಲ್ಲಿ ತೆರೆ ಕಂಡ “ಗುರುದೇವ್ ಹೊಯ್ಸಳ” ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು. ಕೆ ಆರ್ ಜಿ ಸ್ಟುಡಿಯೋಸ್‌ನ‌ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Actor Dhanush: ಧನುಷ್ ಎರಡನೇ ನಿರ್ದೇಶನದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಫಸ್ಟ್ ಲುಕ್ ಔಟ್‌!

ಈ ಕುರಿತು ನಿರ್ದೇಶಕಿ ಅಂಜಲಿ‌ ಮೆನನ್ ಮಾತನಾಡಿ, ʻʻಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನೂ ತಲುಪುತ್ತಿರುವ‌ ಈ ಕಾಲದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸೂಕ್ತ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆʼʼ ಎಂದರು‌.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥಾಪಕರು ಮತ್ತು ನಿರ್ಮಾಪಕರು ಆದ ಕಾರ್ತಿಕ್ ಗೌಡ ಮಾತನಾಡಿ, ʻʻಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್ ಜಿ ಸ್ಟುಡಿಯೋಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. “ಸಿನಿಮಾ”ಗೆ ಇರುವ‌ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರೂ ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆʼʼ ಎಂದರು.

ʻʻಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಯ ಈ‌ ಸಹಯೋಗ ಕೇವಲ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸುವುದಷ್ಟೇ ಅಲ್ಲದೆ, ಕಥಾ ನಿರೂಪಣೆಯಲ್ಲಿ‌ ಹೊಸ ಆವಿಷ್ಕಾರಗಳನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ‌ ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಗೆ ಗುಣಮಟ್ಟದ ಕಥಾ ವಸ್ತು ಹಾಗೂ ನವೀನ ಕಥಾ ನಿರೂಪಣೆಗೆ ಅಂಜಲಿ ಮೆನನ್ ಜೊತೆಗಿನ ಸಹಯೋಗ ಬಲು ದೊಡ್ಡ ಉದಾಹರಣೆ ಮತ್ತು ಮಾದರಿಯಾಗಲಿದೆʼʼ ಎಂದರು.

Continue Reading
Advertisement
Shivraj Singh Chouhan
ಕರ್ನಾಟಕ32 mins ago

Shivraj Singh Chouhan: ಮೋದೀಜಿ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದ ಶಿವರಾಜ್ ಸಿಂಗ್ ಚೌಹಾಣ್

Vistara editorial, Do not disrespectful to the Anthem of Karnataka
ಪ್ರಮುಖ ಸುದ್ದಿ36 mins ago

ವಿಸ್ತಾರ ಸಂಪಾದಕೀಯ: ನಾಡಗೀತೆ, ಕವಿವಾಕ್ಯಕ್ಕೆ ಅಪಚಾರ ಆಗದಿರಲಿ

Karnataka Government clarified about Non Hindus in Hindu Temples Management
ಕರ್ನಾಟಕ57 mins ago

Hindu Temples: ದೇವಸ್ಥಾನ ಸಮಿತಿಗೆ ಅನ್ಯಧರ್ಮೀಯರ ನೇಮಕ; ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟನೆ

Gavyamrita Book
ಉತ್ತರ ಕನ್ನಡ1 hour ago

ಗವ್ಯಾಮೃತ ಪುಸ್ತಕ ಲೋಕಾರ್ಪಣೆ; ಗೋವಿನ ಕುರಿತ ಸುವಿಚಾರಗಳನ್ನು ಸಮಾಜಕ್ಕೆ ತಲುಪಿಸಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

Indus App Store launched by Walmart-owned PhonePe
ದೇಶ1 hour ago

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ2 hours ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ2 hours ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ2 hours ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ3 hours ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್3 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ20 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌