Site icon Vistara News

Mahesh Babu | ಭರ್ಜರಿ ಕಲೆಕ್ಷನ್‌ ಮಾಡಿದ ಸರ್ಕಾರು ವಾರಿ ಪಾಟ

Sarkaru Vaari Paata

ಬೆಂಗಳೂರು: ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಮತ್ತು ಕೀರ್ತಿ ಸುರೇಶ್ ನಟನೆಯ ಸರ್ಕಾರು ವಾರಿ ಪಾಟ ಸಿನಿಮಾಗೆ ಮೊದಲನೇ ದಿನವೇ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದರ ಮೇಲೊಂದು ಒಂದು ಸಿನಿಮಾಗಳಲ್ಲಿ ಸೋಲುಂಡ ಕೀರ್ತಿ ಸುರೇಶ್‌ ಮೊಗದಲ್ಲಿ ಈಗ ನಗೆ ಬೀರಿದೆ. ಪರಶುರಾಮ ನಿರ್ದೇಶಿಸಿದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದೆ.

ಇದನ್ನೂ ಓದಿ | ಪೋಷಕರೇ ನಿರ್ಮಿಸಿರುವ  ಸಿನಿಮಾ ʼSelfie ಮಮ್ಮಿGoogle ಡ್ಯಾಡಿʼ

ಅಭಿಮಾನಿಗಳ ಮನಸ್ಸು ಗೆದ್ದ Sarkaru Vaari Paata ಸಿನಿಮಾ 36.01 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ವಿಶ್ವಾದ್ಯಂತ ₹40 ಕೋಟಿ ಕಲೆಕ್ಷನ್‌ ಮಾಡಿದೆ ಎಂದು  ಮಾಹಿತಿ ಇದೆ. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

ಈ ಹಿಂದೆ ಕೂಡ ಮಹೇಶ್‌ ಬಅಬು ಬಅಲಿವುಡ್‌ ಸಿನಿಮಾ ರಂಗ ನನ್ನನ್ನು ಕೊಳ್ಲುವ ಶಕ್ತಿ ಇಲ್ಲ ಎಂದು ಹೇಳಿದ್ದರು. ‘ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್ ಗಳು ಬಂದಿವೆ. ಆದರೆ ಅವರು ನನ್ನನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ನನ್ನ ಸಮಯ ವ್ಯರ್ಥ ಮಾಡುವುದಿಲ್ಲ. ತೆಲುಗು ಸಿನಿಮಾರಂಗದಲ್ಲಿ ನನಗೆ ಇರುವ ಪ್ರೀತಿ ಮತ್ತು ಸ್ಟಾರ್‌ಡಮ್ ಬಿಟ್ಟು ಬೇರೆ ಸಿನಿಮಾರಂಗಕ್ಕೆ ಹೋಗುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನಾನು ಇಲ್ಲೇ ಸಿನಿಮಾ ಮಾಡುತ್ತೇನೆ ಅವುಗಳನ್ನು ಎಲ್ಲರೂ ನೋಡುತ್ತಾರೆ’ ಎಂದು ಹೇಳಿದ್ದರು. 

ಇದನ್ನೂ ಓದಿ | Major : ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಸಿನಿಮಾ ಟ್ರೈಲರ್‌ ಔಟ್

Exit mobile version