Site icon Vistara News

Mahesh Babu: ಮಹೇಶ್‌ ಬಾಬು ವರ್ಕೌಟ್‌ ವಿಡಿಯೊ ವೈರಲ್‌; ʻಭಾರತದ ಜಾನ್‌ ವಿಕ್‌ʼ ಅಂದ್ರು ಫ್ಯಾನ್ಸ್‌!

Mahesh Babu workout

ಬೆಂಗಳೂರು: ಈಗಾಗಲೇ ನಟ ಮಹೇಶ್‌ ಬಾಬು (Mahesh Babu) ʻಗುಂಟೂರು ಖಾರಂʼ ಸಿನಿಮಾದ ಹೊಸ ರಗಡ್‌ಲುಕ್‌ನಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಹೀಗಿರುವಾಗ ಇದೀಗ ನಟನ ವರ್ಕೌಟ್‌ ವಿಡಿಯೊ ಸಖತ್‌ ವೈರಲ್‌ ಆಗುತ್ತಿದೆ. ಮಹೇಶ್‌ ಬಾಬು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ನೋಡಿದ ನೆಟ್ಟಿಗರು, ನಟನಿಗೆ 48 ವರ್ಷ ವಯಸ್ಸಾಗಿದೆ ಎಂದು ನಂಬಲು ಅಸಾಧ್ಯ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಜುಲೈ 1ರಂದು ಮಹೇಶ್‌ ಬಾಬು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ನನ್ನ ಶನಿವಾರದ ಸಿಜಲ್ ಸೆಟ್!! ನನ್ನ ನೆಚ್ಚಿನ ಸ್ಕಿಲ್‌ಮಿಲ್ ಫಿನಿಶರ್ ಜತೆಗೆ… 1 ನಿಮಿಷ ಲ್ಯಾಂಡ್‌ಮೈನ್ ಪ್ರೆಸ್, 1 ನಿಮಿಷ ಕೆಟಲ್‌ಬೆಲ್ ಸ್ವಿಂಗ್, 1 ನಿಮಿಷ ಸ್ಕಿಲ್‌ಮಿಲ್ ರನ್‌. ನೀವು ಎಷ್ಟು ಸೆಟ್ ಮಾಡಬಹುದು?’ ಎಂದು ತಮ್ಮ ಫ್ಯಾನ್ಸ್‌ಗೆ ಪ್ರಶ್ನೆ ಕೇಳಿದ್ದಾರೆ. ಜತೆಗೆ ವಿಡಿಯೊಗೆ ನಟ ತಮ್ಮ ಜಿಮ್ ತರಬೇತುದಾರರಾದ ಮಿನಾಶ್ ಗೇಬ್ರಿಯಲ್ ಮತ್ತು ಹೀತ್ ಮ್ಯಾಡ್ಯೂಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಮಹೇಶ್ ಪೋಸ್ಟ್ ಹಂಚಿಕೊಂಡ ಕೂಡಲೇ ಅವರ ಅಭಿಮಾನಿಗಳು ನಟನನ್ನು ಕಮೆಂಟ್ ವಿಭಾಗದಲ್ಲಿ ಹೊಗಳಿದ್ದಾರೆ. ಮಹೇಶ್‌ ಅವರ ದೇಹ ದಂಡಿಸುವ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಭಾರತದ ಜಾನ್‌ ವಿಕ್‌ʼ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ನಮೃತಾ ಕೂಡ ಫೈರ್‌ ಇಮೋಜಿ ಕಮೆಂಟ್‌ ಮಾಡಿದ್ದಾರೆ.

ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ʻಗುಂಟೂರು ಖಾರಂʼ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಬದಲಿಗೆ ಮೀನಾಕ್ಷಿ ಚೌಧರಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ತಾಯಿಯ ಪಾತ್ರವನ್ನು ನಿರ್ವಹಿಸಲು ರಮ್ಯಾ ಕೃಷ್ಣನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ. ಈ ಬದಲಾವಣೆಗಳ ಹೊರತಾಗಿ, ಚಿತ್ರದ ಹಿನ್ನೆಲೆ ಸಂಗೀತವನ್ನು ಇನ್ನು ಮುಂದೆ ಸಂಗೀತ ನಿರ್ದೇಶಕ ಥಮನ್ ನೀಡುವುದಿಲ್ಲ ಎಂದು ವದಂತಿಗಳಿವೆ. ವದಂತಿಗಳನ್ನು ನಂಬುವುದಾದರೆ, ಅನಿರುದ್ಧ್ ಶೀಘ್ರದಲ್ಲೇ ಗುಂಟೂರು ಖಾರಂ ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ: Mahesh Babu: ರೇಂಜ್‌ ರೋವರ್‌ ಕಾರು ಖರೀದಿಸಿದ ನಟ ಮಹೇಶ್‌ ಬಾಬು, ರೇಟ್‌ ಕೇಳಿದರೆ ಅಬ್ಬಾ ಅಂತೀರಿ

ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇಪದೆ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು, ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗುವುದಿಲ್ಲ . 2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ‘ಹಾರಿಕಾ ಆ್ಯಂಡ್​ ಹಾಸಿನಿ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್​. ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು.

Exit mobile version