‘ಹಮ್ಸಫರ್’ ಮತ್ತು ಶಾರುಖ್ ಖಾನ್ ಅಭಿನಯಿಸಿದ ರಾಯಿಸ್ (Raees) ಸಿನಿಮಾದಲ್ಲಿ ಶಾರುಖ್ ಜತೆ ಜೋಡಿಯಾಗಿ ಮಿಂಚಿದ್ದ ನಟಿ ಮಹಿರಾ ಖಾನ್ (Mahira Khan) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಾಕಿಸ್ತಾನಿ ನಟಿ ಮಹಿರಾ ಖಾನ್ ಎರಡನೇ ಬಾರಿಗೆ ವಿವಾಹವಾಗಿದ್ದಾರೆ. ನಟಿ ತನ್ನ ಆಪ್ತ ಸ್ನೇಹಿತ ಮತ್ತು ಉದ್ಯಮಿ ಸಲೀಂ ಕರೀಮ್ ಅವರನ್ನು ಅಕ್ಟೋಬರ್ 1ರಂದು ಮದುವೆಯಾದರು.
2007ರಲ್ಲಿ, ಮಹಿರಾ ಅವರು ಅಲಿ ಅಸ್ಕರಿ ಅವರನ್ನು ವಿವಾಹವಾಗಿದ್ದರು. 2015ರಲ್ಲಿ ಜೋಡಿ ಡಿವೋರ್ಸ್ ಪಡೆದುಕೊಂಡಿತು..
ಮಹಿರಾ ಹಾಗೂ ಅಲಿಗೆ 13 ವರ್ಷದ ಮಗ ಅಜ್ಲಾನ್ ಇದ್ದಾರೆ. ಈಗ ನಟಿ ವಿಚ್ಛೇದನೆಯಾಗಿ 8 ವರ್ಷಗಳ ಬಳಿಕ ಮರುಮದುವೆಯಾಗಿದ್ದಾರೆ.
ಇದನ್ನೂ ಓದಿ: Snehal Rai: 21 ವರ್ಷ ಹಿರಿಯ ರಾಜಕಾರಣಿ ಜತೆ ಕಿರುತೆರೆಯ ಖ್ಯಾತಿ ನಟಿ ಮದುವೆಯಾಗಲು ಇದೆ ಕಾರಣ!
ಮಾಹಿರಾ ವಧುವಾಗಿ ಬರುತ್ತಿದ್ದಂತೆ ಅವರ ಪತಿ ಸಲೀಂ ಭಾವುಕರಾಗಿದ್ದರು. ಕಸಲೀಂ ಮಾಹಿರಾ ಅವರನ್ನು ಎತ್ತಿಕೊಂಡು ಅವರ ಹಣೆಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.