Site icon Vistara News

Mani Ratnam And Ilaiyaraaja : ಮಣಿರತ್ನಂ ಮತ್ತು ಇಳಯರಾಜ ಜೋಡಿಯ ಸೂಪರ್‌ ಹಿಟ್‌ ಹಾಡುಗಳು ಇಲ್ಲಿವೆ ನೋಡಿ!

Mani Ratnam And Ilaiyaraaja

#image_title

ಹೈದರಾಬಾದ್‌: ದಕ್ಷಿಣ ಭಾರತವು ಅನೇಕ ಪ್ರಸಿದ್ಧ ಕಲಾವಿದರನ್ನು ಕಂಡಿದೆ. ಅದರಲ್ಲಿ ನಿರ್ದೇಶಕ ಮಣಿರತ್ನಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ (Mani Ratnam And Ilaiyaraaja) ಕೂಡ ಹೌದು. ಅಂದ ಹಾಗೆ ಈ ಇಬ್ಬರೂ ಶ್ರೇಷ್ಠ ಕಲಾವಿದರ ಜನ್ಮದಿನಾಚರಣೆಯಿಂದು. ಇಳಯರಾಜ ಅವರು 1953ರ ಜೂನ್‌ 2ರಂದು ಜನಿಸಿದರೆ, ಮಣಿರತ್ನಂ ಅವರು 1956ರ ಜೂನ್‌ 2ರಂದು ಜನಿಸಿದರು. ಈ ವಿಶೇಷ ದಿನದಂದು ಈ ಜೋಡಿ ಕಮಾಲ್‌ ಮಾಡಿರುವ 10 ಅತ್ಯದ್ಭುತ ಸಿನಿಮಾಗಳ ಮಾಹಿತಿ ಇಲ್ಲಿದೆ.

ಪಲ್ಲವಿ ಅನು ಪಲ್ಲವಿ (1983)

ಮಣಿರತ್ನಂ ಅವರು ನಿರ್ದೇಶಕರಾಗಿ ಹೊರಹೊಮ್ಮಿದ್ದು ನಮ್ಮ ಕನ್ನಡದ ʼಪಲ್ಲವಿ ಅನು ಪಲ್ಲವಿʼ ಸಿನಿಮಾ ಮೂಲಕ. 1983ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಟ ಅನಿಲ್‌ ಕಪೂರ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಇಳಯರಾಜ ಅವರೇ ಸಂಗೀತ ನಿರ್ದೇಶನ ಮಾಡಿದ್ದರು. ಸಿನಿಮಾದ ಒಂದು ಸುಮಧುರ ಗೀತೆ ಇಲ್ಲಿದೆ.

ಉನಾರೂ (1984)

ಮಣಿರತ್ನಂ ಅವರ ಈ ಸಿನಿಮಾ ಕಾರ್ಖಾನೆಯೊಂದರ ಕಾರ್ಮಿಕರು ತಮ್ಮದೇ ಕಾರ್ಖಾನೆ ವಿರುದ್ಧ ಬಂಡಾಯವೇಳುವ ಕಥೆಯನ್ನು ಹೊಂದಿದೆ. ಇದರ ತೀರಂ ತೇಡಿ ಓಲಂ ಪಾಡಿ ಹಾಡು ಇಂದಿಗೂ ಅನೇಕರ ಫೇವರಿಟ್‌ ಲಿಸ್ಟ್‌ನಲ್ಲಿರುವ ಹಾಡಾಗಿದೆ.

ಪಾಗಲ್ ನಿಲವು (1985)

ಪಾಗಲ್‌ ನಿಲವು ಸಿನಿಮಾದಲ್ಲಿ ನಾಯಕ ನಟನಾಗಿರುವ ಮುರಳಿ ಮಾಫಿಯಾ ಗ್ಯಾಂಗ್‌ ಒಂದಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಆತ ಪೊಲೀಸ್‌ ಅಧಿಕಾರಿಯ ತಂಗಿಯನ್ನೇ ಪ್ರೀತಿಸುವ ಕಥೆ ಸಿನಿಮಾದಲ್ಲಿದೆ. ಈ ಸಿನಿಮಾದ ಹಾಡುಗಳು ಕೂಡ ಅಂದಿನ ಕಾಲದಲ್ಲಿ ಸೂಪರ್‌ ಹಿಟ್‌ ಆಗಿದ್ದವು.

ಇದಯಾ ಕೋವಿಲ್ (1985)

ಈ ಸಿನಿಮಾದಲ್ಲಿ ಮೋಹನ್‌ ನಾಯಕ ನಟನಾಗಿ ನಟಿಸಿದ್ದಾರೆ. ಅವರು ಇಬ್ಬರು ಯುವತಿಯರೊಂದಿಗೆ ಪ್ರೀತಿಯ ಸುಳಿಯಲ್ಲಿ ಸಿಲುಕಿಕೊಳ್ಳುವ ಕಥೆ ಇದಾಗಿದೆ. ಈ ಚಿತ್ರ ಕೂಡ ಸೂಪರ್‌ ಹಿಟ್‌ ಆಗಿತ್ತು.

ಮೌನ ರಾಗಂ (1986)

ಮೌನ ರಾಗಂ ಸಿನಿಮಾದಲ್ಲಿ ನಾಯಕ ನಟಿಯನ್ನು ನಾಯಕ ನಟನೊಂದಿಗೆ ಒತ್ತಾಯದಿಂದ ಮದುವೆ ಮಾಡಿಸಲಾಗುತ್ತದೆ. ಮದುವೆಯ ಉಡುಗೊರೆಯಾಗಿ ನಾಯಕಿ ಪತಿಯಿಂದ ವಿಚ್ಛೇದನ ಕೇಳುತ್ತಾಳೆ. ಒಂದು ಮದುವೆ ಮತ್ತು ವಿಚ್ಛೇದನದ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಇದರ ಅನೇಕ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

ನಾಯಗನ್ (1987)

ನಾಯಗನ್ ಮುಂಬೈ ಭೂಗತ ಲೋಕದ ಡಾನ್ ವರದರಾಜನ್ ಮುದಲಿಯಾರ್ ಅವರ ಜೀವನವನ್ನು ಆಧರಿಸಿದೆ. ಈ ಸಿನಿಮಾ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದರಲ್ಲಿ ಕಮಲ ಹಾಸನ್‌ ನಟಿಸಿದ್ದಾರೆ.

ಅಗ್ನಿ ನಚ್ಚತಿರಂ (1988)

ಈ ಸಿನಿಮಾವು ಇಬ್ಬರು ಮಲಸಹೋದರರ ಪೈಪೋಟಿ ಮತ್ತು ತಂದೆಯೊಂದಿಗಿನ ಅವರ ಸಂಬಂಧವನ್ನು ತೋರಿಸುವ ಕಥೆಯಾಗಿದೆ. ಈ ಚಿತ್ರದ ನಿನ್ನಕೋರಿ ವರಣಂ ಹಾಡು ಸಾಕಷ್ಟು ಪ್ರಸಿದ್ಧವಾಗಿತ್ತು.

ಗೀತಾಂಜಲಿ (1989)

ನಾಗಾರ್ಜುನ ಅಕ್ಕಿನೇನಿ ನಟಿಸಿರುವ ಈ ಸಿನಿಮಾದಲ್ಲಿ ನಾಯಕ ನಟ ಸಾಯಲು ಹೊರಟಿರುತ್ತಾನೆ. ಆಗ ಆತ ನಾಯಕ ನಟಿಯನ್ನು ನೋಡಿ ಪ್ರೀತಿಸಲು ಆರಂಭಿಸುತ್ತಾನೆ. ಮುಂದಿನ ಕತೆ ಕುತೂಹಲಕರವಾಗಿದೆ.

ಅಂಜಲಿ (1990)

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿರುವ ಚಿತ್ರ ಅಂಜಲಿ. ಇದು ಮಾನಸಿಕ ಅಸಾಮರ್ಥ್ಯದ ಮಗುವಿನ ಕಥೆಯೊಂದನ್ನು ಹೇಳುತ್ತದೆ. ಈ ಚಿತ್ರದಲ್ಲಿನ ಹಾಡುಗಳು ಕೂಡ ಅದ್ಭುತವಾಗಿದೆ.

ದಳಪತಿ (1991)

ಒಂದೇ ತಾಯಿಯ ಮಕ್ಕಳು ದರೋಡೆಕೋರ ಹಾಗೂ ಜಿಲ್ಲಾಧಿಕಾರಿಯಾಗುವ ಕಥೆ ಇದು. ಇದರಲ್ಲಿ ರಜನಿಕಾಂತ್‌ ದರೋಡೆಕೋರನಾಗಿದ್ದರೆ, ಅರವಿಂದ್‌ ಸ್ವಾಮಿ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಸಿನಿಮಾದಲ್ಲಿ ಇಳಯರಾಜ ಅವರು ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

Exit mobile version