Mani Ratnam And Ilaiyaraaja : ಮಣಿರತ್ನಂ ಮತ್ತು ಇಳಯರಾಜ ಜೋಡಿಯ ಸೂಪರ್‌ ಹಿಟ್‌ ಹಾಡುಗಳು ಇಲ್ಲಿವೆ ನೋಡಿ! Vistara News

ಸಿನಿಮಾ

Mani Ratnam And Ilaiyaraaja : ಮಣಿರತ್ನಂ ಮತ್ತು ಇಳಯರಾಜ ಜೋಡಿಯ ಸೂಪರ್‌ ಹಿಟ್‌ ಹಾಡುಗಳು ಇಲ್ಲಿವೆ ನೋಡಿ!

ಇಂದು (ಜೂ.2) ಇಳಯರಾಜ ಮತ್ತು ಮಣಿರತ್ನಂ (Mani Ratnam And Ilaiyaraaja) ಅವರ ಜನ್ಮದಿನ. ಈ ಇಬ್ಬರು ಒಟ್ಟಾಗಿ ಕಾರ್ಯ ನಿರ್ವಹಿಸಿದ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ.

VISTARANEWS.COM


on

Mani Ratnam And Ilaiyaraaja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ದಕ್ಷಿಣ ಭಾರತವು ಅನೇಕ ಪ್ರಸಿದ್ಧ ಕಲಾವಿದರನ್ನು ಕಂಡಿದೆ. ಅದರಲ್ಲಿ ನಿರ್ದೇಶಕ ಮಣಿರತ್ನಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ (Mani Ratnam And Ilaiyaraaja) ಕೂಡ ಹೌದು. ಅಂದ ಹಾಗೆ ಈ ಇಬ್ಬರೂ ಶ್ರೇಷ್ಠ ಕಲಾವಿದರ ಜನ್ಮದಿನಾಚರಣೆಯಿಂದು. ಇಳಯರಾಜ ಅವರು 1953ರ ಜೂನ್‌ 2ರಂದು ಜನಿಸಿದರೆ, ಮಣಿರತ್ನಂ ಅವರು 1956ರ ಜೂನ್‌ 2ರಂದು ಜನಿಸಿದರು. ಈ ವಿಶೇಷ ದಿನದಂದು ಈ ಜೋಡಿ ಕಮಾಲ್‌ ಮಾಡಿರುವ 10 ಅತ್ಯದ್ಭುತ ಸಿನಿಮಾಗಳ ಮಾಹಿತಿ ಇಲ್ಲಿದೆ.

ಪಲ್ಲವಿ ಅನು ಪಲ್ಲವಿ (1983)

ಮಣಿರತ್ನಂ ಅವರು ನಿರ್ದೇಶಕರಾಗಿ ಹೊರಹೊಮ್ಮಿದ್ದು ನಮ್ಮ ಕನ್ನಡದ ʼಪಲ್ಲವಿ ಅನು ಪಲ್ಲವಿʼ ಸಿನಿಮಾ ಮೂಲಕ. 1983ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಟ ಅನಿಲ್‌ ಕಪೂರ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಇಳಯರಾಜ ಅವರೇ ಸಂಗೀತ ನಿರ್ದೇಶನ ಮಾಡಿದ್ದರು. ಸಿನಿಮಾದ ಒಂದು ಸುಮಧುರ ಗೀತೆ ಇಲ್ಲಿದೆ.

ಉನಾರೂ (1984)

ಮಣಿರತ್ನಂ ಅವರ ಈ ಸಿನಿಮಾ ಕಾರ್ಖಾನೆಯೊಂದರ ಕಾರ್ಮಿಕರು ತಮ್ಮದೇ ಕಾರ್ಖಾನೆ ವಿರುದ್ಧ ಬಂಡಾಯವೇಳುವ ಕಥೆಯನ್ನು ಹೊಂದಿದೆ. ಇದರ ತೀರಂ ತೇಡಿ ಓಲಂ ಪಾಡಿ ಹಾಡು ಇಂದಿಗೂ ಅನೇಕರ ಫೇವರಿಟ್‌ ಲಿಸ್ಟ್‌ನಲ್ಲಿರುವ ಹಾಡಾಗಿದೆ.

ಪಾಗಲ್ ನಿಲವು (1985)

ಪಾಗಲ್‌ ನಿಲವು ಸಿನಿಮಾದಲ್ಲಿ ನಾಯಕ ನಟನಾಗಿರುವ ಮುರಳಿ ಮಾಫಿಯಾ ಗ್ಯಾಂಗ್‌ ಒಂದಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಆತ ಪೊಲೀಸ್‌ ಅಧಿಕಾರಿಯ ತಂಗಿಯನ್ನೇ ಪ್ರೀತಿಸುವ ಕಥೆ ಸಿನಿಮಾದಲ್ಲಿದೆ. ಈ ಸಿನಿಮಾದ ಹಾಡುಗಳು ಕೂಡ ಅಂದಿನ ಕಾಲದಲ್ಲಿ ಸೂಪರ್‌ ಹಿಟ್‌ ಆಗಿದ್ದವು.

ಇದಯಾ ಕೋವಿಲ್ (1985)

ಈ ಸಿನಿಮಾದಲ್ಲಿ ಮೋಹನ್‌ ನಾಯಕ ನಟನಾಗಿ ನಟಿಸಿದ್ದಾರೆ. ಅವರು ಇಬ್ಬರು ಯುವತಿಯರೊಂದಿಗೆ ಪ್ರೀತಿಯ ಸುಳಿಯಲ್ಲಿ ಸಿಲುಕಿಕೊಳ್ಳುವ ಕಥೆ ಇದಾಗಿದೆ. ಈ ಚಿತ್ರ ಕೂಡ ಸೂಪರ್‌ ಹಿಟ್‌ ಆಗಿತ್ತು.

ಮೌನ ರಾಗಂ (1986)

ಮೌನ ರಾಗಂ ಸಿನಿಮಾದಲ್ಲಿ ನಾಯಕ ನಟಿಯನ್ನು ನಾಯಕ ನಟನೊಂದಿಗೆ ಒತ್ತಾಯದಿಂದ ಮದುವೆ ಮಾಡಿಸಲಾಗುತ್ತದೆ. ಮದುವೆಯ ಉಡುಗೊರೆಯಾಗಿ ನಾಯಕಿ ಪತಿಯಿಂದ ವಿಚ್ಛೇದನ ಕೇಳುತ್ತಾಳೆ. ಒಂದು ಮದುವೆ ಮತ್ತು ವಿಚ್ಛೇದನದ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಇದರ ಅನೇಕ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

ನಾಯಗನ್ (1987)

ನಾಯಗನ್ ಮುಂಬೈ ಭೂಗತ ಲೋಕದ ಡಾನ್ ವರದರಾಜನ್ ಮುದಲಿಯಾರ್ ಅವರ ಜೀವನವನ್ನು ಆಧರಿಸಿದೆ. ಈ ಸಿನಿಮಾ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದರಲ್ಲಿ ಕಮಲ ಹಾಸನ್‌ ನಟಿಸಿದ್ದಾರೆ.

ಅಗ್ನಿ ನಚ್ಚತಿರಂ (1988)

ಈ ಸಿನಿಮಾವು ಇಬ್ಬರು ಮಲಸಹೋದರರ ಪೈಪೋಟಿ ಮತ್ತು ತಂದೆಯೊಂದಿಗಿನ ಅವರ ಸಂಬಂಧವನ್ನು ತೋರಿಸುವ ಕಥೆಯಾಗಿದೆ. ಈ ಚಿತ್ರದ ನಿನ್ನಕೋರಿ ವರಣಂ ಹಾಡು ಸಾಕಷ್ಟು ಪ್ರಸಿದ್ಧವಾಗಿತ್ತು.

ಗೀತಾಂಜಲಿ (1989)

ನಾಗಾರ್ಜುನ ಅಕ್ಕಿನೇನಿ ನಟಿಸಿರುವ ಈ ಸಿನಿಮಾದಲ್ಲಿ ನಾಯಕ ನಟ ಸಾಯಲು ಹೊರಟಿರುತ್ತಾನೆ. ಆಗ ಆತ ನಾಯಕ ನಟಿಯನ್ನು ನೋಡಿ ಪ್ರೀತಿಸಲು ಆರಂಭಿಸುತ್ತಾನೆ. ಮುಂದಿನ ಕತೆ ಕುತೂಹಲಕರವಾಗಿದೆ.

ಅಂಜಲಿ (1990)

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿರುವ ಚಿತ್ರ ಅಂಜಲಿ. ಇದು ಮಾನಸಿಕ ಅಸಾಮರ್ಥ್ಯದ ಮಗುವಿನ ಕಥೆಯೊಂದನ್ನು ಹೇಳುತ್ತದೆ. ಈ ಚಿತ್ರದಲ್ಲಿನ ಹಾಡುಗಳು ಕೂಡ ಅದ್ಭುತವಾಗಿದೆ.

ದಳಪತಿ (1991)

ಒಂದೇ ತಾಯಿಯ ಮಕ್ಕಳು ದರೋಡೆಕೋರ ಹಾಗೂ ಜಿಲ್ಲಾಧಿಕಾರಿಯಾಗುವ ಕಥೆ ಇದು. ಇದರಲ್ಲಿ ರಜನಿಕಾಂತ್‌ ದರೋಡೆಕೋರನಾಗಿದ್ದರೆ, ಅರವಿಂದ್‌ ಸ್ವಾಮಿ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಸಿನಿಮಾದಲ್ಲಿ ಇಳಯರಾಜ ಅವರು ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

ಕನ್ನಡಿಗರ ನೆಚ್ಚಿನ ತಂಡ ಬೆಂಗಳೂರು ಬುಲ್ಸ್​ಗೆ ಬೆಂಬಲ ಸೂಚಿಸಲು ಚಿತ್ರನಟ ಕಿಚ್ಚ ಸುದೀಪ್ ನಾಳಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

bengaluru bulls kiccha sudeep
Koo

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ ಪ್ರೊ ಕಬಡ್ಡಿ ಲೀಗ್‌(pro kabaddi) 10ನೇ ಆವೃತ್ತಿಯ ಬೆಂಗಳೂರು ಚರಣದ ಪಂದ್ಯಗಳು ನಾಳೆಯಿಂದ(ಡಿ.8) ಆರಂಭಗೊಳ್ಳಲಿದೆ. ಆತಿಥೇಯ ಬೆಂಗಳೂರು ಬುಲ್ಸ್(bengaluru bulls)​ ತಂಡ ನಾಳೆ ನಡೆಯುವ ಪಂದ್ಯದಲ್ಲಿ ದಬಾಂಗ್​ ಡೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದೆ. ಕನ್ನಡಿಗರ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸಲು ಚಿತ್ರನಟ ಕಿಚ್ಚ ಸುದೀಪ್(kiccha sudeep) ಹಾಜರ್​ ಆಗಲಿದ್ದಾರೆ.

ಕಿಚ್ಚ ಸುದೀಪ್​ ಅವರು ಬುಲ್ಸ್​ ಪಂದ್ಯ ವೀಕ್ಷಣೆಗೆ ಬರುತ್ತಿರುವ ವಿಚಾರವನ್ನು ಸ್ಟಾರ್​ಸ್ಪೋರ್ಟ್ಸ್​ ಕನ್ನಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಖಚಿತಪಡಿಸಿದೆ. ಟಿಟ್ವರ್​ ಎಕ್ಸ್​ ಖಾತೆಯಲ್ಲಿ ಬುಲ್ಸ್​ ತಂಡದ ಜೆರ್ಸಿಯಲ್ಲಿರು ಸುದೀಪ್​ ಅವರ ಫೋಟೊ ಹಂಚಿಕೊಂಡು ‘ಅಖಾಡಕ್ಕೆ ಕಿಚ್ಚೇರಿಸಲು ಖುದ್ದು ಕಿಚ್ಚನೇ ಬರಲಿದ್ದಾರೆ.’ ಎಂದು ಬರೆದುಕೊಂಡಿದೆ. ಹಿಂದಿನ ಕಲವು ಆವೃತ್ತಿಯಲ್ಲೂ ಸುದೀಪ್​ ಅವರು ಬುಲ್ಸ್​ ಪಂದ್ಯಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದರು.

ಗೆಲುವಿನ ಖಾತೆ ತೆರೆಯದ ಬುಲ್ಸ್​

10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್​ ತಂಡ ಈವರೆಗೆ 2 ಪಂದ್ಯಗಳನ್ನು ಆಡಿದ್ದು. ಆಡಿದ 2ರಲ್ಲೂ ಸೋಲು ಕಂಡಿದೆ. ಇದೀಗ ತವರಿನಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲಿದೆಯಾ ಎಂದು ಕಾದು ನೋಡಬೇಕಿದೆ. ಸುದೀಪ್​ ಕೂಡ ಆಟಗಾರರಿಗೆ ಆತ್ಮವಿಶ್ವಾಸ ತುಂಬಲಿದ್ದಾರೆ. ಒಟ್ಟಾರೆ ತವರಿನಲ್ಲಿ ಗೂಳಿಗಳು ಘರ್ಜನೆ ನಡೆಸಲು ಎಲ್ಲ ಸಿದ್ಧತೆ ನಡಸಿದ್ದಾರೆ.

ತಂಡದ ಸ್ಟಾರ್ ಆಟಗಾರರಾದ ಭರತ್​ ಕುಮಾರ್​, ವಿಕಾಸ್​ ಕಂಡೋಲ, ಸುರ್ಜಿತ್​ ಸಿಂಗ್​, ಅಭಿಷೇಕ್​ ಸಿಂಗ್​ ಅವರು ಉತ್ಕೃಷ್ಟ ಮಟ್ಟದ ಆಟ ತೋರ್ಪಡಿಸುವಲ್ಲಿ ಯಶಸ್ವಿಯಾದರೆ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಡೆಲ್ಲಿ ಕೂಡ ಬಲಿಷ್ಠ ಪಡೆಯಾಗಿದೆ. ಎಕ್ಸ್​ಪ್ರೆಸ್​ ಖ್ಯಾತಿಯ ನವೀನ್​ ಕುಮಾರ್​, ವಿಶಾಲ್​ ಭಾರದ್ವಾಜ್​, ಅಶು ಮಲಿಕ್​ ಇವರನ್ನೆಲ್ಲ ಕಟ್ಟಿಹಾಕಬೇಕು.

ಇದನ್ನೂ ಓದಿ Pro Kabaddi: ಗೆಲುವಿನ ನಗೆ ಬೀರಿದ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್

‘ಭಾರತದ ಪ್ರತಿ ಉಸಿರಲ್ಲೂ ಕಬಡ್ಡಿ’ ಎನ್ನುವ ಕ್ಯಾಂಪೇನ್ ಸ್ಥಳೀಯ ಕಬಡ್ಡಿ ಅಭಿಮಾನಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮವಾಗಿತ್ತು. ಈ ಕ್ಯಾಂಪೇನ್​ನ ಪೋಸ್ಟರ್​ನಲ್ಲಿ ಕಿಚ್ಚ ಸುದೀಪ್​ ಕೂಡ ಕಾಣಿಸಿಕೊಂಡಿದ್ದರು.

ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ ಜೀವಂತ

“ಕಬಡ್ಡಿಯಲ್ಲಿನ ಶಕ್ತಿ, ಧೈರ್ಯ, ದೃಢತೆ ಮತ್ತು ಸಂಪೂರ್ಣ ಉತ್ಸಾಹದ ಸಂಯೋಜನೆಯು ನನ್ನೊಂದಿಗೆ ಆಳವಾಗಿ ಅನುರಣಿಸುತ್ತದೆ. ನಮ್ಮ ರಾಷ್ಟ್ರದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಶಕ್ತಿ ಮತ್ತು ದೃಢತೆಗೆ ಸಮಾನಾರ್ಥಕವಾದ ಗೂಳಿಗಳ ಸದ್ಗುಣಗಳಿಂದ ಸ್ಫೂರ್ತಿಯನ್ನು ಪಡೆಯುತ್ತಿದ್ದೇನೆ, ನಾನು ‘ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ’ಯನ್ನು ಜೀವಂತವಾಗಿಸುವಲ್ಲಿ ಉತ್ಸುಕನಾಗಿದ್ದೇನೆ. ಈ ಭಾವನೆಯು ಕರ್ನಾಟಕದ ಚೈತನ್ಯವನ್ನು ಪ್ರತಿಬಿಂಬಿಸುವುದಲ್ಲದೆ, ಕನ್ನಡಿಗರ ಸಮುದಾಯದ ಅಚಲ ಬೆಂಬಲ ಮತ್ತು ಅದಮ್ಯ ಚೇತನಕ್ಕೆ ಗೌರವ ಸಲ್ಲಿಸುತ್ತದೆ. ನಮ್ಮ ಗೂಳಿಗಳ ಬೆಂಬಲಕ್ಕೆ ಕನ್ನಡಿಗರು ಕೈಜೋಡಿಸಿ ಎಂದು ಟೂರ್ನಿ ಆರಂಭಕ್ಕೂ ಮುನ್ನ ಕಿಚ್ಚ ಹೇಳಿದ್ದರು.

Continue Reading

ಬಾಲಿವುಡ್

The Kapil Sharma Show: 6 ವರ್ಷದ ಮುನಿಸು ಮರೆತು ಒಟ್ಟಿಗೆ ಪಾರ್ಟಿ ಮಾಡಿದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್!

The Kapil Sharma Show ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Kapil Sharma and Sunil Grover
Koo

ಬೆಂಗಳೂರು: ಹಾಸ್ಯ, ಮನರಂಜನೆಯ ರಸದೌತಣ ನೀಡುವ ದಿ ಕಪಿಲ್‌ ಶರ್ಮಾ ಶೋ (The Kapil Sharma Show) ಮೂಲಕ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಹೌದು, ಆರು ವರ್ಷದ ಮುನಿಸು, ವದಂತಿ, ಸ್ಪಷ್ಟನೆ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ ಕಾಮಿಡಿ ಶೋ (Netflix Show) ಪ್ರೋಮೊ ಬಿಡುಗಡೆ ಮಾಡಿರುವ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್‌ ಜತೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಆರು ವರ್ಷದ ಬಳಿಕ ಇಬ್ಬರು ಹಾಸ್ಯ ಕಲಾವಿದರು ಮುನಿಸು ಮರೆತು ಒಂದಾದಂತಾಗಿದೆ. ಕಪಿಲ್ ಮತ್ತು ಸುನೀಲ್ ಇತ್ತೀಚೆಗೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ಪ್ರೋಮೊದಲ್ಲಿ ಮೊದಲು ಕಪಿಲ್‌ ಶರ್ಮಾ ಕಾಣಿಸಿಕೊಂಡಿದ್ದರು. “ಹಾಯ್‌ ಗೆಳೆಯರೆ, ನಾನು ಕಪಿಲ್‌ ಶರ್ಮಾ. ಶೀಘ್ರದಲ್ಲೇ ಹೊಸ ಶೋ ಹೊತ್ತು ನಿಮ್ಮೆದುರು ಬರುತ್ತೇನೆ” ಎಂದು ಕಪಿಲ್‌ ಶರ್ಮಾ ಹೇಳುತ್ತಾರೆ. ಆಗ ಸುನಿಲ್‌ ಗ್ರೋವರ್‌, “ನಾನು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದರು. ಆಗ ಕಪಿಲ್‌ ಶರ್ಮಾ, “ಸರಿ ಹಾಗಾದರೆ, ಇಬ್ಬರೂ ಬರೋಣ, 190ಕ್ಕೂ ಅಧಿಕ ದೇಶಗಳಿಗೆ ಬರೋಣ” ಎಂದಿದ್ದರು. ಹಾಗೆಯೇ ಇಬ್ಬರ ನಡುವಿನ ಸಂಭಾಷಣೆ ಮುಂದುವರಿಯುತ್ತದೆ.

ಇದನ್ನೂ ಓದಿ: Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

ಇದೇ ವೇಳೆ ವಿಡಿಯೊ ಫ್ರೇಮ್‌ನಲ್ಲಿ ಹಾಸ್ಯ ಕಲಾವಿದರಾದ ರಾಜೀವ್‌, ಕಿಕು, ಕೃಷ್ಣಾ ಹಾಗೂ ನಟಿ ಅರ್ಚನಾ ಪೂರನ್‌ ಸಿಂಗ್‌ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌, ದಿ ಕಪಿಲ್‌ ಶರ್ಮಾ ಶೋ ಮೂಲಕವೇ ದೇಶದ ಮನೆಮಾತಾಗಿರುವ ಕಲಾವಿದರು ನೆಟ್‌ಫ್ಲಿಕ್ಸ್‌ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದಿ ಕಪಿಲ್‌ ಶರ್ಮಾ ಶೋನಲ್ಲಿ ಸುನೀಲ್‌ ಗ್ರೋವರ್‌ ಅವರು ಮಾಡುತ್ತಿದ್ದ “ಡಾ ಮಶೂರ್‌ ಗುಲಾಟಿ” ಪಾತ್ರವು ಮನೆಮಾತಾಗಿತ್ತು.

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸುನಿಲ್‌ ಗ್ರೋವರ್‌ ಅವರು ದಿ ಕಪಿಲ್‌ ಶರ್ಮಾ ಶೋ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

Continue Reading

South Cinema

The Nandi Awards: ನಂದಿ ಫಿಲ್ಮ್‌ ಅವಾರ್ಡ್; ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

The Nandi Awards: ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಿನ್ನೆ ಜರುಗಿದೆ.

VISTARANEWS.COM


on

Nandi Film Award Rishabh Shetty
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ʼನಂದಿʼ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಬುಧವಾರ ನಡೆದಿದೆ. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಪ್ರಶಸ್ತಿ ನೀಡಿದೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನು ಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂತಹ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್‌ಮೆಂಟ್‌ ಅವಾರ್ಡ್ ನೀಡಲಾಯ್ತು.

ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.

Nandi Film Award Rishabh Shetty won the best actor and director award

ಇದನ್ನೂ ಓದಿ: Nandi Award: ಕನ್ನಡಕ್ಕೂ ಬಂತು ತೆಲುಗಿನ ‘ನಂದಿ ಫಿಲ್ಮಂ ಅವಾರ್ಡ್‌’; ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದಾರೆ.

ಪ್ರಶಸ್ತಿ ಪಡೆದವರ ಪಟ್ಟಿ

  • ಬೆಸ್ಟ್ ಬಯೋಪಿಕ್ ಅವಾರ್ಡ್: ವಿಜಯಾನಂದ ಫಿಲ್ಮ್
  • ಲೆಜೆಂಡರಿ ಆ್ಯಕ್ಟ್ರೆಸ್ ಅವಾರ್ಡ್‌; ಲೀಲಾವತಿ.
  • ಜೀವಮಾನ ಸಾಧನೆ ಪ್ರಶಸ್ತಿ-ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
  • ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ-ಗಂಧದಗುಡಿ.
  • ಬೆಸ್ಟ್ ಡೆಬ್ಯುಟ್ ಆ್ಯಕ್ಟರ್ ವಿಕ್ರಮ್ ರವಿಚಂದ್ರನ್.
  • ಬೆಸ್ಟ್ ಡೆಬ್ಯುಟ್ ಆ್ಯಕ್ಟ್ರೆಸ್ ರೀಷ್ಮಾ ನಾಣಯ್ಯ.
  • ಬೆಸ್ಟ್ ಕಾಮಿಡಿಯನ್ ರಂಗಾಯಣ ರಘು.
  • ಬೆಸ್ಟ್ ಕಾಮಿಕ್ ರೋಲ್- ಹೇಮಾದತ್.
  • ಬೆಸ್ಟ್ ಸಪೋರ್ಟಿಂಗ್ ರೋಲ್-ವೀಣಾ ಸುಂದರ್.
  • ಬೆಸ್ಟ್ ಕ್ರಿಟಿಕ್ಸ್ ಆ್ಯಕ್ಟರ್-.ಸಂಚಾರಿ ವಿಜಯ್.
  • ಅತ್ಯುತ್ತಮ ಸಂಭಾಷಣೆಕಾರ ಮಾಸ್ತಿ.
  • ಅತ್ಯುತ್ತಮ ಚಿತ್ರ: 777 ಚಾರ್ಲಿ.
  • ʼಅತ್ಯುತ್ತಮ ನಿರ್ದೇಶಕ. ರಿಷಬ್ ಶೆಟ್ಟಿ.
  • ಅತ್ಯುತ್ತಮ ನಟ. ರಿಷಬ್ ಶೆಟ್ಟಿ.
  • ಅತ್ಯುತ್ತಮ ನಟಿ-ಸಪ್ತಮಿ ಗೌಡ
  • ಅತ್ಯುತ್ತಮ ಖಳನಟ-ಡಾಲಿ ಧನಂಜಯ್
  • ಬೆಸ್ಟ್ ಆ್ಯಕ್ಟರ್ ಸಪೋರ್ಟಿಂಗ್ ರೋಲ್-ಲೂಸ್ ಮಾದ ಯೋಗಿ
  • ಬೆಸ್ಟ್ ಕ್ರಿಟಿಕ್ಸ್ ಆ್ಯಕ್ಟರ್ಸ್ಸ್-ಹರಿಪ್ರಿಯಾ-ಅನುಪ್ರಭಾಕರ್
  • ಬೆಸ್ಟ್ ಪ್ರೆಸ್ ಫೋಟೋಗ್ರಾಫರ್-ಕೆ.ಎನ್.ನಾಗೇಶ್ ಕುಮಾರ್
  • ಬೆಸ್ಟ್ ಪಿಆರ್ -ನಾಗೇಂದ್ರ
Continue Reading

South Cinema

Spandana Vijay Raghavendra: ಅತ್ತಿಗೆಯನ್ನು ನೆನೆದು ಭಾವುಕರಾದ ಶ್ರೀ ಮುರುಳಿ!

Spandana Vijay Raghavendra: ʻʻಅತ್ತಿಗೆ ನೀವು ನಮ್ಮಿಂದ ಅಗಲಿ 4 ತಿಂಗಳುಗಳಾಗಿರಬಹುದು… ಆದರೂ ಈ ಸತ್ಯವನ್ನು ಈಗಲು ನಂಬಲು ಹಾಗೂ ಒಪ್ಪಿಕೊಳ್ಳಲು ಇಷ್ಟವಿಲ್ಲʼʼ ಎಂದು ಸ್ಪಂದನಾ ಅವರ ಫೋಟೊ ಹಂಚಿಕೊಂಡು ಕ್ಯಾಪ್ಷನ್‌ ನೀಡಿದ್ದಾರೆ.

VISTARANEWS.COM


on

srii muruli post on Spandana Vijay Raghavendra
Koo

ಬೆಂಗಳೂರು: ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಅವರು ಆಗಸ್ಟ್ 6ರಂದು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಇಂದಿನವರೆಗೂ ದಿನನಿತ್ಯ ವಿಜಯ್‌ ರಾಘವೇಂದ್ರ ಅವರು ಸ್ಪಂದನಾ ಕುರಿತು ಪೋಸ್ಟ್‌ ಹಾಕುತ್ತಲೇ ಇದ್ದಾರೆ. ಇದೀಗ ಶ್ರೀ ಮುರುಳಿ ಅವರು ಅತ್ತಿಗೆ ಸ್ಪಂದನಾ ಅವರನ್ನು ನೆನೆದು ಭಾವುಕರಾಗಿದ್ದಾರೆ.

ʻʻಅತ್ತಿಗೆ ನೀವು ನಮ್ಮಿಂದ ಅಗಲಿ 4 ತಿಂಗಳುಗಳಾಗಿರಬಹುದು… ಆದರೂ ಈ ಸತ್ಯವನ್ನು ಈಗಲೂ ನಂಬಲು ಹಾಗೂ ಒಪ್ಪಿಕೊಳ್ಳಲು ಇಷ್ಟವಿಲ್ಲʼʼ ಎಂದು ಸ್ಪಂದನಾ ಅವರ ಫೋಟೊ ಹಂಚಿಕೊಂಡು ಕ್ಯಾಪ್ಷನ್‌ ನೀಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ  ಎಂದು ಮುರುಳಿ ಅವರ ಫ್ಯಾನ್ಸ್‌ ಕೂಡ ಕಮೆಂಟ್‌ ಮಾಡಿದ್ದಾರೆ. ಈ ಹಿಂದೆ ಶ್ರೀ ಮುರುಳಿ ಅವರು ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಲೇ ಬಂದು ಸುದ್ದಿಯಾಗಿದ್ದರು. ಬೆಂಗಳೂರಿನ ರಾಕ್‌ಲೈನ್ ಸ್ಟೂಡಿಯೋದಲ್ಲಿ ʼಬಘೀರʼ ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸಲಾಗುತ್ತಿತ್ತು. ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶ್ರೀಮುರಳಿ ಅವರ ಮೊಣಕಾಲಿಗೆ ಪೆಟ್ಟಾಗಿತ್ತು. ಅದಾದ ಬಳಿಕ ಚಿಕಿತ್ಸೆಯನ್ನು ನೀಡಲಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು.

ಇದನ್ನೂ ಓದಿ: Spandana Vijay Raghavendra: ʻನಾನೆಂದೂ ನಿನ್ನವ, ಕೇವಲ ನಿನ್ನವ’ ಸ್ಪಂದನಾ ಬಗ್ಗೆ ವಿಜಯ್‌ ಭಾವುಕ ಸಾಲು!

ಡಿ. 17ಕ್ಕೆ ʼಬಘೀರʼ ಸಿನಿಮಾ ಟೀಸರ್‌ ರಿಲೀಸ್‌?

ʼಕೆಜಿಎಫ್ ಚಾಪ್ಟರ್ 2ʼ ಮತ್ತು ʼಕಾಂತಾರʼ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ʼಬಘೀರʼ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ʼಲಕ್ಕಿʼ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಶ್ರೀ ಮುರುಳಿ ಅವರ ಜನುಮದಿನವೇ ʼಬಘೀರʼ ಸಿನಿಮಾ ಟೀಸರ್‌ ಬಿಡುಗಡೆಯಾಗುತ್ತಿದೆ ಎಂದು ವರದಿಯಾಗಿದೆ.

ಸೂರಿ ಅವರು ಯಶ್‌ ಅವರ ʼಲಕ್ಕಿ ʼ ಚಿತ್ರದ ನಂತರ ನಾಲ್ಕು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಬರುತ್ತಿದ್ದಾರೆ. ಮಫ್ತಿ, ಭರಾಟೆ, ರಥಾವರ, ಕಂಠಿ ಚಿತ್ರಗಳಲ್ಲಿ ಅಬ್ಬರಿಸಿದ ಶ್ರೀಮುರುಳಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಕ್ಷಿತ್‌ ಶೆಟ್ಟಿ ನಟನೆಯ ʻಸಪ್ತ ಸಾಗರದಾಚೆ ಎಲ್ಲೋʼ, ಗಣೇಶ್ ನಟನೆಯ “ಬಾನ ದಾರಿಯಲ್ಲಿʼ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ರುಕ್ಮಿಣಿ ವಸಂತ್ ಈಗ “ಬಘೀರʼ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Continue Reading
Advertisement
Madhu Bangarappa in Belagavi Winter Session
ಕರ್ನಾಟಕ12 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ17 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ19 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ19 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ36 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ37 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ46 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್52 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್1 hour ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ12 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌