Site icon Vistara News

Manisha Koirala: ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದು ಹೇಗೆ? ಅನುಭವ ಹಂಚಿಕೊಂಡ ಮನೀಶಾ ಕೊಯಿರಾಲ

Manisha Koirala

ಕ್ಯಾನ್ಸರ್ (cancer) ವಿರುದ್ಧ ಹೋರಾಡಿದ ಬಾಲಿವುಡ್ ನಟಿ (Bollywood actress) ಮನೀಶಾ ಕೊಯಿರಾಲ (Manisha Koirala) ʼಹೀರಾಮಂಡಿʼ (Heeramandi) ಚಿತ್ರೀಕರಣದ ವೇಳೆ ಅನುಭವಿಸಿದ ಖಿನ್ನತೆ, ಮೂಡ್ ಸ್ವಿಂಗ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ʼಹೀರಾಮಂಡಿʼ ಸರಣಿಯ ಚಿತ್ರೀಕರಣದ ಸಮಯದಲ್ಲಿ ಕ್ಯಾನ್ಸರ್‌ ತಮ್ಮ ಅಭಿನಯ ಮತ್ತು ಆರೋಗ್ಯದ ಬೀರಿದ ಪರಿಣಾಮದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ʼಹೀರಾಮಂಡಿʼ ಸರಣಿಯಲ್ಲಿ ನಟಿ ಮನಿಶಾ ಕೊಯಿರಾಲಾ ಅವರು ವೇಶ್ಯೆಯರ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಸರಣಿಯ ಚಿತ್ರೀಕರಣದ ಸಮಯದಲ್ಲಿ ಖಿನ್ನತೆಯ ವಿರುದ್ಧ ಹೋರಾಡಿದ ಬಗ್ಗೆ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾನ್ಸರ್‌ನಿಂದ ಪ್ರಭಾವಿತರಾಗಿದ್ದ ಅವರು ಮೂಡ್ ಸ್ವಿಂಗ್‌ಗಳಿಂದಾಗಿ ಅಭಿನಯದ ಮೇಲೆ ಅದು ಹೇಗೆ ಪರಿಣಾಮ ಬೀರಿದೆ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮನೀಶಾ, ಕ್ಯಾನ್ಸರ್‌ನಿಂದ ಪ್ರಭಾವಿತನಾಗಿದ್ದ ನನಗೆ ದೇಹ ಮತ್ತು ಮನಸ್ಸು ಹೇಗೆ ಒಂದಕ್ಕೊಂದು ಹೆಣೆದುಕೊಂಡಿದೆ ಎಂಬುದು ತಿಳಿದಿದೆ. ಆದರೆ ಮೇಲೆ ವಿಶ್ವಾಸ ಇಟ್ಟರೆ ಮಾತ್ರ ನಾವು ವಿಜಯಿಯಾಗಬಹುದು. ಈಗಲೂ ಕೆಲವೊಮ್ಮೆ ನಾನು ಖಿನ್ನತೆಯನ್ನು ಅನುಭವಿಸುತ್ತೇನೆ. ʼಹೀರಾಮಂಡಿʼ ಚಿತ್ರೀಕರಣದ ವೇಳೆ ಅದು ನನ್ನನ್ನು ತುಂಬಾ ಕಾಡಿತು. ಪದೇಪದೇ ಮನಸ್ಥಿತಿ ಬದಲಾಗುತ್ತಿದೆ ಎಂದೆನಿಸುತ್ತಿತ್ತು. ಕ್ಯಾನ್ಸರ್ ನಿಂದ ಹೊರ ಬಂದ ಅನಂತರವೂ ಆರೋಗ್ಯದ ಮೇಲೆ ಅದರ ಪರಿಣಾಮವಿರುತ್ತದೆ ಎಂದರು.


2012ರಲ್ಲಿ ಕ್ಯಾನ್ಸರ್ ಪತ್ತೆ

ಮನೀಶಾ ಅವರಿಗೆ 2012ರಲ್ಲಿ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನ್ಯೂಯಾರ್ಕ್‌ನಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಪಡೆದು 2014ರಲ್ಲಿ ಅವರು ಚೇತರಿಸಿಕೊಂಡರು. ಚಿತ್ರೀಕರಣದ ವೇಳೆ ನಾನು ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ನನ್ನ ದೇಹವು ಅದನ್ನು ತೆಗೆದುಕೊಳ್ಳುತ್ತದೆಯೇ ಎಂಬ ಖಚಿತತೆ ನನಗಿರಲಿಲ್ಲ. ಆದರೆ ನಿರ್ದೇಶಕರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರು. 12 ಗಂಟೆಗಳ ಶೂಟಿಂಗ್ ಅನಂತರ ನಾವು ನಿಲ್ಲಿಸುತ್ತಿದ್ದೆವು. ಸಂಜಯ್ ನನ್ನ ಭಯ ಮತ್ತು ಆತಂಕವನ್ನು ಅರ್ಥಮಾಡಿಕೊಂಡರು ಎಂದು ಮನೀಶಾ ತಿಳಿಸಿದ್ದಾರೆ.

ಇದನ್ನೂ ಓದಿ: Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

ಸಮಯದ ಮೌಲ್ಯ ಅರ್ಥವಾಗಿದೆ

ಸಾಮಾಜಿಕ ಮಾಧ್ಯಮದದಲ್ಲಿ ಮನೀಶಾ ಈ ಹಿಂದೆ ತಮ್ಮ ಕ್ಯಾನ್ಸರ್ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ. ಜೀವನದಲ್ಲಿ ನಾನು ಕೃತಜ್ಞಳಾಗಿರಲು ಬಹಳಷ್ಟು ಇದೆ. ವೃತ್ತಿಜೀವನವು ಬಹಳಷ್ಟು ಉನ್ನತ ಕ್ಷಣಗಳು, ಮಹತ್ವದ ಪಾತ್ರಗಳು, ಅತ್ಯುತ್ತಮ ನಿರ್ದೇಶಕರು ಮತ್ತು ಸ್ನೇಹವನ್ನು ನೋಡಿದೆ. ಸಮಯದ ಪರೀಕ್ಷೆಯಲ್ಲಿ ನಿಂತಿದ್ದೇನೆ ಮತ್ತು ದೇವರ ಅನುಗ್ರಹದಿಂದ ನಾನು ಕ್ಯಾನ್ಸರ್ ವಿರುದ್ಧ ಹೋರಾಡಿದ ಎರಡನೇ ಬಾರಿ ಜೀವ ಪಡೆದುಕೊಂಡಿದ್ದೇನೆ. ನಾನು ಜೀವನದಲ್ಲಿ ಅತ್ಯಂತ ಕಡಿಮೆ ಕಷ್ಟಗಳನ್ನು ನೋಡಿದ್ದೇನೆ ಮತ್ತು ಅನೇಕ ತಪ್ಪುಗಳನ್ನೂ ಮಾಡಿದ್ದೇನೆ. ಜೀವನವು ಅದರ ಎಲ್ಲಾ ಉತ್ತುಂಗ ಮತ್ತು ಕೆಳಮಟ್ಟಗಳೊಂದಿಗೆ ಉತ್ತಮ ಶಿಕ್ಷಣ ನೀಡಿದೆ. ಈಗ ನಾನು ಸಮಯದ ಮೌಲ್ಯವನ್ನು ಹೆಚ್ಚು ತೀವ್ರವಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಹೀರಾಮಂಡಿಯಲ್ಲಿ ಮನೀಶಾ ಅವರೊಂದಿಗೆ ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಕೂಡ ನಟಿಸಿದ್ದಾರೆ.

Exit mobile version